ಆಪತ್ಕಾಲದಲ್ಲಿ ಹಿಂದೂಗಳ ರಕ್ಷಣೆ ಮತ್ತು ‘ಹಿಂದೂ ರಾಷ್ಟ್ರ ಸ್ಥಾಪನೆ

೨೩ ಜುಲೈ ೨೦೨೧ ರಲ್ಲಿ ‘ಆನ್‌ಲೈನ್ನಲ್ಲಿ ನಡೆದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಮಾಡಿದ ಮಾರ್ಗದರ್ಶನ

ಪೂ. ರಮಾನಂದ ಗೌಡ

ಜುಲೈ ೨೩ ರಂದು ಗುರುಪೂರ್ಣಿಮೆ ನಿಮಿತ್ತ ಆಯೋಜಿಸಿದ್ದ ‘ಆನ್‌ಲೈನ್ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಪೂ. ರಮಾನಂದ ಗೌಡ ಇವರು ‘ಆಪತ್ಕಾಲದಲ್ಲಿ ಹಿಂದೂಗಳ ರಕ್ಷಣೆ ಮತ್ತು ‘ಹಿಂದೂ ರಾಷ್ಟ್ರ ಸ್ಥಾಪನೆ ! ಈ ವಿಷಯದಲ್ಲಿ ಮಾರ್ಗರ್ಶನ ಮಾಡಿದರು. ‘ಸನಾತನ ಪ್ರಭಾತದ ವಾಚಕರಿಗೆ ಅದು ತಿಳಿಯಬೇಕೆಂದು ಅದನ್ನು ಲೇಖನ ಸ್ವರೂಪದಲ್ಲಿ ಇಲ್ಲಿ ನೀಡುತ್ತಿದ್ದೇವೆ.

ಆಪತ್ಕಾಲದ ವಿಷಯದಲ್ಲಿ ಸಂತರು ಹೇಳಿದ ಭವಿಷ್ಯವಾಣಿಗಳು

ಅನೇಕ ಸಂತರು, ಭವಿಷ್ಯಕಾರರು, ದಾರ್ಶನಿಕರು ವಿದ್ಯಮಾನ ಆಪತ್ಕಾಲದ ವಿಷಯದಲ್ಲಿ ಸಮಾಜವನ್ನು ಜಾಗೃತಗೊಳಿಸಲು ಪ್ರಯತ್ನಿಸಿದ್ದಾರೆ.

೧. ಪ.ಪೂ. ಗಗನಗಿರಿ ಮಹಾರಾಜರು : ಮಹಾರಾಷ್ಟ್ರದಲ್ಲಿ ಆಗಿ ಹೋದ ಶ್ರೇಷ್ಠ ಸಂತರಾದ ಪ.ಪೂ. ಗಗನಗಿರಿ ಮಹಾರಾಜರು ‘ಮುಂದೆ ಬರುವ ಕಾಲವು ಎಷ್ಟೊಂದು ಭಯಾನಕವಾಗಿದೆ ಎಂದರೆ ನಮಗೂ (ಸಂತರಿಗೂ) ಕಣ್ಣುಮುಚ್ಚಿದರೆ ಒಳ್ಳೆಯದಿತ್ತು ಎಂದೆನಿಸುತ್ತದೆ ಎಂದು ಹೇಳಿದ್ದರು.

೨. ಪರಾತ್ಪರ ಗುರು ಡಾ. ಆಠವಲೆ : ಆಪತ್ಕಾಲದ ವಿಷಯದಲ್ಲಿ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಮುಂದಿನಂತೆ ಹೇಳಿದ್ದಾರೆ,  ‘ಮೂರನೆಯ ಮಹಾಯುದ್ಧವು ಅತ್ಯಂತ ಮಹಾಭಯಂಕರವಾಗಿರುವುದು. ಇದರಲ್ಲಿ ಭಾರತವೂ ಸಿಲುಕುವುದು. ಅಣುಬಾಂಬ್‌ಗಳಿಂದ ಬಹಳ ನರಮೇಧವಾಗುವುದು. ಊರಿಗೆ ಊರೇ ಧ್ವಂಸವಾಗಿ ಹೋಗುವುದು. ಮೂರನೆಯ ಮಹಾಯುದ್ಧದಿಂದ ಪೃಥ್ವಿಯ ಮೇಲಿನ ರಜ-ತಮದ ಪ್ರಮಾಣ ಬಹಳ ಹೆಚ್ಚಾಗುವುದು. ಹಾಗಾಗಿ ಮೂರನೆಯ ಮಹಾಯುದ್ಧದ ನಂತರ ಸಂಪೂರ್ಣ ಪೃಥ್ವಿಯ ಸಾತ್ತ್ವಿಕತೆಯನ್ನು ಹೆಚ್ಚಿಸಲು ಪೃಥ್ವಿಯನ್ನು ಶುದ್ಧೀಕರಿಸಬೇಕಾಗುವುದು. ಇದಕ್ಕಾಗಿ ಅನೇಕ ಸಂತರು ತಯಾರಾಗಬೇಕಾಗುವುದು. ಇದಕ್ಕಾಗಿ ಸಾಧಕರು ಈಗಿನಿಂದಲೇ ಸಾಧನೆಯನ್ನು ಹೆಚ್ಚಿಸುವುದು ಅವಶ್ಯವಾಗಿದೆ.

೩. ದಾರ್ಶನಿಕ ನಾಸ್ಟ್ರಡಾಮಸ್ : ೪೦೦ ವರ್ಷಗಳ ಮೊದಲು ಆಗಿಹೋದ ಫ್ರಾನ್ಸ್ ನ ದಾರ್ಶನಿಕ ನಾಸ್ಟ್ರಡಾಮಸ್ ಇವರು  ಮೂರನೆಯ ಮಹಾಯುದ್ಧದ ಬಗ್ಗೆಯೂ ಮುಂದಿನಂತೆ ಹೇಳಿದ್ದಾರೆ. ‘ಈ ಮೂರನೆಯ ಮಹಾಯುದ್ಧವು ಎಷ್ಟು ಭಯಂಕರವಾಗಿರುವುದೆಂದರೆ ಮೊದಲು ನಡೆದ ಎರಡು ಮಹಾಯುದ್ಧಗಳು ಮಕ್ಕಳಾಟದಂತೆ ಅನಿಸುವವು !ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯೊಂದಿಗೆ ಏಕರೂಪವಾಗಿರುವ ಸಂತರ ಆಜ್ಞಾಪಾಲನೆ ಮಾಡುವುದರಲ್ಲಿ ಹಿತವಿದೆ ಭವಿಷ್ಯವನ್ನು ಹೇಳುವಂತಹ ಪ್ರಾಚೀನ ನಾಡಿಪಟ್ಟಿಗಳು, ಪರಂಪರಾಗತ ಹಳ್ಳಿಗಳಲ್ಲಿನ ಭವಿಷ್ಯವಾಣಿಗಳು ಹಾಗೂ ದಾರ್ಶನಿಕ ಸಂತರು ಸಹ ಈ ಭೀಕರ ಆಪತ್ಕಾಲದ ವಿಷಯದಲ್ಲಿ ಉಲ್ಲೇಖಿಸಿದ್ದಾರೆ. ಬೇರೆ ಬೇರೆ ಕಡೆಗಳಲ್ಲಿರುವ ಸಂತರು ಮತ್ತು ದಾರ್ಶನಿಕರು ‘ಸಮಾಜಕ್ಕೆ ಏನು ಮಾರ್ಗದರ್ಶನ ಮಾಡಬೇಕು ಎಂದು ಪರಸ್ಪರರೊಂದಿಗೆ ಮಾತನಾಡಿ ನಿರ್ಧರಿಸುವುದಿಲ್ಲ. ಆದರೂ ಅವರ ಮಾರ್ಗದರ್ಶನದಲ್ಲಿ ಸಮಾನ ಅಂಶಗಳು ಕಾಣಿಸುತ್ತದೆ. ಇದರಿಂದ ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯೊಂದಿಗೆ ಏಕರೂಪವಾಗಿರುವ ಸಂತರು ನಮಗೆ ಏನು ಮಾರ್ಗದರ್ಶನ ಮಾಡುತ್ತಿದ್ದಾರೆ ಅದಕ್ಕನುಸಾರ ಆಚರಣೆಯನ್ನು ಮಾಡುವುದರಲ್ಲಿಯೇ ನಮ್ಮ ಹಿತ ಅಡಗಿದೆ ಎಂಬುದು ಗಮನಕ್ಕೆ ಬರುತ್ತದೆ. – ಪೂ. ರಮಾನಂದ ಗೌಡ

೧. ಕೊರೊನಾ ಆಪತ್ಕಾಲದಲ್ಲಿಯೂ ಗುರುಕೃಪೆಯಿಂದ ಗುರುಪೂರ್ಣಿಮೆ ಆಚರಣೆ ಮಾಡುವ ಅವಕಾಶ ಸಿಕ್ಕಿದ ಬಗ್ಗೆ ಕೃತಜ್ಞತೆಗಳು !

ಕೊರೊನಾ ಮಹಾಮಾರಿ ರೂಪಿ ಆಪತ್ಕಾಲವು ನಡೆಯುತ್ತಿರುವಾಗಲೂ ಶ್ರೀಗುರುಗಳ ಕೃಪೆಯಿಂದ ಕಳೆದ ವರ್ಷದಂತೆಯೇ ಈ ಸಲವೂ ನಮಗೆ ‘ಆನ್‌ಲೈನ್ ಮೂಲಕ ಗುರುಪೂರ್ಣಿಮೆಯನ್ನು ಆಚರಿಸುವ ಅವಕಾಶವು ಸಿಗುತ್ತಿದೆ, ಅದಕ್ಕಾಗಿ ಮೊದಲಿಗೆ ಶ್ರೀಗುರುಗಳ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸೋಣ. ‘ಗುರುಕೃಪಾ ಹಿ ಕೇವಲಮ್ ಶಿಷ್ಯ ಪರಮಮಂಗಲಮ್ ಎಂದು ಹೇಳಲಾಗಿದೆ. ಅಂದರೆ ಶಿಷ್ಯನ ಪರಮಮಂಗಲವು ಅಂದರೆ ಮೋಕ್ಷಪ್ರಾಪ್ತಿಯು ಕೇವಲ ಗುರುಕೃಪೆಯಿಂದಲೇ ಆಗಬಲ್ಲದು. ಗುರುಕೃಪೆಯಾಗಲು ಸತತ ಗುರುತತ್ತ್ವಕ್ಕೆ ಅಪೇಕ್ಷಿತವಿರುವಂತಹ ಸಾಧನೆಯನ್ನು ಮಾಡಬೇಕಾಗುತ್ತದೆ. ಸಾಧನೆ ಎಂದರೇನು ? ಮೋಕ್ಷಪ್ರಾಪ್ತಿಗಾಗಿ ಅಥವಾ ಭಗವತ್‌ಪ್ರಾಪ್ತಿಗಾಗಿ ಪ್ರತಿದಿನ ಮಾಡುವಂತಹ ಪ್ರಯತ್ನಗಳು !

೨. ಆಪತ್ಕಾಲದಲ್ಲಿ ಸ್ವರಕ್ಷಣೆ ಸಹಿತ ಸತ್ತ್ವಗುಣಿ ಹಿಂದೂಗಳ ರಕ್ಷಣೆ ಮಾಡುವುದು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆ ಇವುಗಳಿಗಾಗಿ ಕೃತಿಶೀಲರಾಗುವುದು ಆವಶ್ಯಕ !

ಈ ವರ್ಷ ನಾವು ಗುರುಪೂರ್ಣಿಮೆಗೆ ಗುರುಮಹಿಮೆ, ಸಾಧನೆ, ಅಧ್ಯಾತ್ಮ ಮುಂತಾದ ವಿಷಯಗಳ ಬದಲು ‘ಹಿಂದೂಗಳ ರಕ್ಷಣೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆ ಈ ವಿಷಯದಲ್ಲಿ ಪ್ರವಚನವನ್ನು ಆಯೋಜಿಸಿದ್ದೇವೆ. ತಮ್ಮಲ್ಲಿ ಹೆಚ್ಚಿನವರ ಮನಸ್ಸಿನಲ್ಲಿ ‘ಆಪತ್ಕಾಲ ಎಂದರೇನು ? ಎಂಬ ಪ್ರಶ್ನೆಯು ಉದ್ಭವಿಸಿರಬಹುದು. ಯಾವ ಕಾಲದಲ್ಲಿ ಸಂಕಟಗಳಿಂದ, ಆಪತ್ತುಗಳಿಂದ ದಿನನಿತ್ಯದ ಜೀವನ ಸಾಗಿಸಲು ಕಠಿಣವಾಗುತ್ತದೆಯೋ ಹಾಗೂ ರಾಷ್ಟ್ರೀಯ ಜೀವನವು ಅಸ್ಥಿರವಾಗುತ್ತದೆಯೋ ಆ ಕಾಲವೇ ಆಪತ್ಕಾಲ ! ಆಧ್ಯಾತ್ಮಿಕ ಉನ್ನತಿಗಾಗಿ ಸಾಧನೆಯನ್ನು ಮಾಡಬೇಕು ಎಂಬುದು ಸಾಮಾನ್ಯ ನಿಲುವಾಗಿದೆ. ಆದರೆ ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಆಠವಲೆಯವರು ಭೀಕರ ಆಪತ್ಕಾಲದ ವಿಷಯದಲ್ಲಿ ಜಾಗೃತಿಯನ್ನು ಮೂಡಿಸಿ ‘ಮುಂಬರುವ ಕಾಲದಲ್ಲಿ ಜೀವಂತವಿರಬೇಕಾದರೆ ಸಾಧನೆಯನ್ನು ಮಾಡಿ ಎಂದು ಹೇಳಿದ್ದಾರೆ.

ಕೊರೊನಾ ಮಹಾಮಾರಿಯ ಕಾಲದಲ್ಲಿ ತರಕಾರಿ ಸಿಗಲು ಅಡಚಣೆ, ಔಷಧಿಗಳ ಅಭಾವ, ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆ ವೈದ್ಯಕೀಯ ಶುಶ್ರೂಷೆ ಸಿಗಲು ಸಂಘರ್ಷ ಹೀಗೆ ಎಷ್ಟೊಂದು ವಿಷಯಗಳನ್ನು ತಮ್ಮಲ್ಲಿ ಅನೇಕರು ಅನುಭವಿಸಿರಬಹುದು. ಈ ಒಂದೂವರೆ ವರ್ಷಗಳ ಕಾಲದಲ್ಲಿ ರಾಷ್ಟ್ರವೂ ಚಂಡಮಾರುತ, ಬಿರುಗಾಳಿ, ಅತಿವೃಷ್ಟಿ ಉತ್ತರಾಖಂಡದಲ್ಲಿ ಭೂಕುಸಿತ ಮುಂತಾದ ನೈಸರ್ಗಿಕ ಆಪತ್ತುಗಳಂತಹ ಘಟನೆಗಳನ್ನು ಅನುಭವಿಸಿದೆ. ಇದೇ ಕಾಲದಲ್ಲಿ ದೇಶವು ಕೃಷಿ ಮತ್ತು ಸಿಎಎ ಕಾನೂನುಗಳಿಂದಾದ ದಂಗೆಗಳು, ಚೀನಾವು ಗಲ್ವಾನ ಕಣಿವೆಯಲ್ಲಿ ಮಾಡಿದ ಅತಿಕ್ರಮಣದಿಂದ ಉಂಟಾಗಿರುವ ಯುದ್ಧಜನ್ಯ ಸ್ಥಿತಿ ಮುಂತಾದ ಮಾನವ ನಿರ್ಮಿತ ಸಂಕಟಗಳನ್ನು ಸಹ ಅನುಭವಿಸಿತು. ಮುಂಬರುವ ಕಾಲವಂತೂ ಇದಕ್ಕಿಂತಲೂ ಹೆಚ್ಚು ಭೀಕರವಾಗಿರಲಿದೆ. ಅದರಿಂದ ಪಾರಾಗಲು ಹಣದ ಕೊಪ್ಪರಿಗೆಯಲ್ಲ; ನಮ್ಮ ಸಾಧನೆಯ ಸಂಗ್ರಹವೇ ಉಪಯೋಗಕ್ಕೆ ಬರಲಿದೆ. ಈ ಆಪತ್ಕಾಲದಲ್ಲಿ ಸ್ವಂತದ ಹಾಗೂ ಸತ್ತ್ವಗುಣಿ ಹಿಂದೂಗಳ ರಕ್ಷಣೆ ಮಾಡುವುದು ಮತ್ತು ಈ ಆಪತ್ಕಾಲೀನ ಸಂಕಟಗಳ ನಂತರ ರಾಷ್ಟ್ರೀಯ ಜೀವನವನ್ನು ಸುಸ್ಥಿರಗೊಳಿಸಲು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕೃತಿಶೀಲರಾಗುವುದು ಆವಶ್ಯಕವಾಗಿದೆ.

೩. ಎಲ್ಲ ಸೌಲಭ್ಯಗಳಿದ್ದರೂ ಹತಾಶನಾದ ಮನುಷ್ಯನು ಭೀಕರ ಸಂಕಟಗಳನ್ನು ಹೇಗೆ ಎದುರಿಸುವನು ?

ಒಂದು ಸೂಕ್ಷ್ಮ ವಿಷಾಣುವಿನಿಂದ ಸಂಪೂರ್ಣ ಜಗತ್ತಿನ ಸಂಚಾರಸಾಗಾಟವು ಸ್ತಬ್ಧವಾಗಬಹುದು ಎಂದು ೨ ವರ್ಷಗಳ ಹಿಂದೆ ಯಾರೂ ಕಲ್ಪನೆಯನ್ನು ಸಹ ಮಾಡಿರಲಿಲ್ಲ. ಈ ಕೊರೊನಾ ಮಹಾಮಾರಿ ಎಂದರೆ ಆಪತ್ಕಾಲದ ಒಂದು ಚಿಕ್ಕ ತುಣುಕಾಗಿದೆ. ಮುಂಬರುವ ೨-೩ ವರ್ಷಗಳಲ್ಲಿ ಈ ಆಪತ್ಕಾಲದ ತೀವ್ರತೆಯು ಇನ್ನೂ ಹೆಚ್ಚಾಗಲಿದೆ. ಹಾಗಾಗಿ ಅದನ್ನು ಎದುರಿಸಲು ನಾವು ಸಿದ್ಧರಾಗಬೇಕಾಗಿದೆ. ಕೊರೊನಾ ಮಹಾಮಾರಿಯ ಕಾಲದಲ್ಲಿ ನಮ್ಮಲ್ಲಿ ‘ಮೊಬೈಲ್, ‘ಇಂಟರನೆಟ್, ಟಿ.ವಿ, ಮುಂತಾದ ಸುಖ ಸೌಲಭ್ಯಗಳು ಲಭ್ಯವಿದ್ದವು. ಜೀವನಾವಶ್ಯಕ ವಸ್ತುಗಳ ಸಹ ಸಿಗುತ್ತಿದ್ದವು. ಆದರೂ ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ವಿಗ್ನತೆಯು ಹರಡಿದ್ದು ಕಂಡು ಬಂತು. ಇಷ್ಟಿರುವಾಗಲೇ ಅಸಹಾಯಕ ಸ್ಥಿತಿಯಾಯಿತು, ಮುಂದೆ ಇದಕ್ಕಿಂತಲೂ ಭೀಕರ ಸಂಕಟಗಳನ್ನು ನಾವು ಯಾವ ರೀತಿಯಲ್ಲಿ ಎದುರಿಸುವೆವು ಎಂದು ಪ್ರತಿಯೊಬ್ಬರೂ ವಿಚಾರ ಮಾಡಬೇಕು. ಇದನ್ನು ಹೇಳುವುದರ ಹಿಂದೆ ಯಾರಿಗೂ ಭಯ ಹುಟ್ಟಿಸುವ ಉದ್ದೇಶವಿಲ್ಲ, ಬದಲಾಗಿ ಪ್ರತಿಯೊಬ್ಬರೂ ಜಾಗರೂಕರಾಗಿ ಆಪತ್ಕಾಲವನ್ನು ಎದುರಿಸುವ ಸಿದ್ಧತೆ ಮಾಡಿಕೊಳ್ಳಬೇಕು ಎಂದಾಗಿದೆ.

೪. ವಿಶ್ವಾದ್ಯಂತ ಇರುವ ನೈಸರ್ಗಿಕ ವಿಪತ್ತು ಮತ್ತು ಅದರಿಂದಾದ ಭೀಕರ ಹಾನಿ 

ಕಳೆದ ಕೆಲವು ವರ್ಷಗಳಲ್ಲಿ ನೈಸರ್ಗಿಕ ಆಪತ್ತುಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅತಿವೃಷ್ಟಿ, ನೆರೆ, ಬರಗಾಲ, ಚಂಡ ಮಾರುತ, ಮಿಡತೆಗಳ ದಾಳಿ ಮುಂತಾದ ಸಂಕಟಗಳ ಪುನರಾವರ್ತನೆ ಮತ್ತು ತೀವ್ರತೆಯು ಹೆಚ್ಚಾಗುತ್ತಿದೆ. ಈ ವರ್ಷವಿಡಿಯ ಕಾಲಾವಧಿಯಲ್ಲಿ ನಿಸರ್ಗ, ಅಮ್ಫಾನ, ತೌಕ್ತೆಯಂತಹ ಚಂಡಮಾರುತಗಳು ಭಾರತಕ್ಕೆ ಭಾರಿ ಹೊಡೆತವನ್ನು ನೀಡಿದವು. ಪಂಜಾಬ, ರಾಜಸ್ಥಾನ, ಮಧ್ಯಪ್ರದೇಶ ಮುಂತಾದ ಕ್ಷೇತ್ರಗಳಲ್ಲಿ ಮಿಡತೆಗಳ ಹಾವಳಿಯಿಂದ ಅಗಾಧ ಪ್ರಮಾಣದಲ್ಲಿ ಹಾನಿಯಾಯಿತು. ಕಳೆದ ೬ ತಿಂಗಳುಗಳಲ್ಲಿ ಉತ್ತರಾಖಂಡದಲ್ಲಿ ೨ ಬಾರಿ ಭೂಕುಸಿತವಾಗಿ ೨೫೦ ಕ್ಕಿಂತಲೂ ಹೆಚ್ಚು ಜನರು ಪ್ರಾಣಗಳನ್ನು ಕಳೆದುಕೊಳ್ಳಬೇಕಾಯಿತು. ಇಂತಹ ಘಟನೆಗಳು ಕೇವಲ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಘಟಿಸುತ್ತಿವೆ ಕ್ಯಾಲಿಫೋರ್ನಿಯಾ, ಆಸ್ಟ್ರೇಲಿಯಾಗಳ ಅರಣ್ಯದಲ್ಲಿ ಕಳೆದ ೨ ವರ್ಷಗಳಿಂದ ಭಯಂಕರ ಬೆಂಕಿ ತಗಲಿ ಸಾವಿರಾರು ಏಕರೆ ಭೂಮಿಯ ನೈಸರ್ಗಿಕ ಸಾಧನ ಸಂಪತ್ತುಗಳೆಲ್ಲ ನಾಶವಾಗಿದೆ. ಇತ್ತೀಚೆಗೆ ಅಮೇರಿಕಾದ ಟೆಕ್ಸಾಸ್ ಪ್ರಾಂತ್ಯದಲ್ಲಾದ ಅತಿ ಪ್ರಚಂಡ ಹಿಮಪಾತದಿಂದ ಅಲ್ಲಿ ಸರಕಾರವು ಆಪತ್ಕಾಲೀನ ಸ್ಥಿತಿಯನ್ನು ಘೋಷಿಸಬೇಕಾಯಿತು. ತಂಬಿಗೆಯಷ್ಟು ಬಿಸಿನೀರು ಹಾಗೂ ಬಿಸಿ ಊಟ ಸಿಗಬೇಕಾದರೆ ಜನರು ೪-೪ ಗಂಟೆ ಸರದಿಯ ಸಾಲಿನಲ್ಲಿ ನಿಲ್ಲಬೇಕಾಯಿತು.

ಒಬ್ಬ ಸಂತರು ಸಹ ಮುಂಬರುವ ಕಾಲದಲ್ಲಿ ‘ಪಂಚ ಮಹಾಭೂತಗಳ ತಾಂಡವವಾಗಲಿದೆ ಎಂದಿದ್ದರು. ಮುಂಬರುವ ಕಾಲದಲ್ಲಿ ಪಂಚಮಹಾಭೂತಗಳ ಮೂಲಕ ಪೃಥ್ವಿ ತನ್ನ ಸಮತೋಲನ ಕಾಪಾಡಲಿದೆ. ಅಂದರೆ ಭೂಕಂಪ, ನೆರೆಗಳು ಬರಲಿವೆ.

– ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ.

(ಮುಂದುವರಿಯುವುದು)