ಗುರುಪೂರ್ಣಿಮೆಯ ಮಂಗಳದಿನದಂದು ಪ್ರಕಾಶನಗೊಂಡ ಸನಾತನದ ಗ್ರಂಥಗಳು ಹಾಗೂ ಮೊದಲ ‘ಇ-ಬುಕ್ !

ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ ಗುರುಪೂರ್ಣಿಮಾ ಮಹೋತ್ಸವಗಳಲ್ಲಿ ಸನಾತನದ ವಿವಿಧ ಭಾಷೆಗಳ ಗ್ರಂಥಗಳನ್ನು ಸನಾತನದ ಸಂತರ ಶುಭಹಸ್ತದಿಂದ ಪ್ರಕಾಶನಗೊಳಿಸಲಾಯಿತು. ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ, ಆಧ್ಯಾತ್ಮಿಕ ತೊಂದರೆಗಳು ಮತ್ತು ಆಪತ್ಕಾಲದ ಪರಿಸ್ಥಿತಿಗಳ ಪರಿಹಾರ ಈ ವಿಷಯದ ಕುರಿತು ಹಿಂದಿ, ಕನ್ನಡ ಮತ್ತು ಆಂಗ್ಲ ಭಾಷೆಗಳ ಗ್ರಂಥಗಳನ್ನು ಪ್ರಕಾಶಿಸಲಾಯಿತು.

‘ಧರ್ಮಕಾರ್ಯ ಹೇತು ವಿಜ್ಞಾಪನ ಆದಿ ಅರ್ಪಣ ಪ್ರಾಪ್ತ ಕರನಾ ಸಮಷ್ಟಿ ಸಾಧನಾ ಹೆ ! ಈ ಹಿಂದಿ ಗ್ರಂಥದ ಪ್ರಕಾಶನವನ್ನು ಮಾಡುತ್ತಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ
‘ಆಧ್ಯಾತ್ಮಿಕ ತೊಂದರೆಗಳನ್ನು ಜಯಿಸಲು ಉಪಯುಕ್ತ ದೃಷ್ಟಿಕೋನ ! ಕನ್ನಡ ಭಾಷೆಯ ಗ್ರಂಥದ ಪ್ರಕಾಶನವನ್ನು ಮಾಡುತ್ತಿರುವ ಪೂ. ರಮಾನಂದ ಗೌಡ

ಇದರಿಂದ ಇಲ್ಲಿಯವರಿಗೂ ಸನಾತನದ ಹಿಂದಿ ಭಾಷೆಯಲ್ಲಿ ಒಟ್ಟು ೧೮೩ ಗ್ರಂಥ, ಕನ್ನಡ ಭಾಷೆಯಲ್ಲಿ ೧೮೧ ಗ್ರಂಥಗಳು ಹಾಗೂ ಆಂಗ್ಲದಲ್ಲಿ ೨೦೪ ಗ್ರಂಥಗಳು ಪ್ರಕಾಶಿಸಲಾಗಿದೆ. ಗ್ರಂಥದ ಪ್ರಕಾಶನದ ವಿವರಗಳನ್ನು ಇಲ್ಲಿ ಕೆಲವು ಛಾಯಾಚಿತ್ರಗಳ ಸಹಿತ ನೀಡಲಾಗಿದೆ.

ಮೇಲಿನ ಗ್ರಂಥಗಳ ಪ್ರಕಾಶನದ ಜೊತೆಗೆ ಜಿಜ್ಞಾಸುಗಳಿಗೆ ಸನಾತನದ ಇತರ ಕೆಲವು ಹೊಸ ಗ್ರಂಥಗಳ ಬಗ್ಗೆಯೂ ಮಾಹಿತಿ ನೀಡಲಾಯಿತು. ಇದರಲ್ಲಿ ಪರಾತ್ಪರ ಗುರು ಡಾ. ಆಠವಲೆ ಅವರ ಅಭ್ಯಾಸವರ್ಗಗಳೊಂದಿಗೆ ಸಂಬಂಧಿಸಿದ ಗ್ರಂಥ, ಅದೇರೀತಿ ಆಧ್ಯಾತ್ಮಿಕ ತೊಂದರೆ ಮತ್ತು ಆಪತ್ಕಾಲದಿಂದ ರಕ್ಷಣೆಯಾಗಲು ಪರಿಹಾರಗಳು, ಆಯುರ್ವೇದ ಔಷಧ ಇತ್ಯಾದಿ ವಿಷಯಗಳ ಮರಾಠಿ, ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿನ ಗ್ರಂಥಗಳಿವೆ.

 

ಸನಾತನ ಗ್ರಂಥ ಈಗ ಇ-ಬುಕ್ ಸ್ವರೂಪದಲ್ಲಿ ಲಭ್ಯ !

‘ತ್ಯೋಹಾರ ಮನಾನೆ ಕಿ ಉಚಿತ ಪದ್ದತಿಯಾ ಏವಂ ಅಧ್ಯಾತ್ಮಶಾಸ್ತ್ರ ಈ ಹಿಂದಿ ಭಾಷೆಯ ಮೊದಲ ‘ಇ-ಪುಸ್ತಕವನ್ನು ಪ್ರಕಾಶಿಸುತ್ತಿರುವ ಪೂ. ಪೃಥ್ವಿರಾಜ ಹಜಾರೆ

ಸನಾತನ ಸಂಸ್ಥೆಯ ಗ್ರಂಥಗಳು ಈಗ ‘ಇ-ಬುಕ್ (ಇ-ಪುಸ್ತಕ ಅಂದರೆ ಒಂದು ಪುಸ್ತಕದ ಡಿಜಿಟಲ್ ಅಥವಾ ಎಲೆಕ್ಟ್ರಾನಿಕ್‌ನಲ್ಲಿನ ರೂಪಾಂತರವಾಗಿದೆ. ಇಂಟರನೆಟ್ ಇರುವ ಗಣಕಯಂತ್ರ ಅಥವಾ ‘ಸ್ಮಾರ್ಟ್‌ಫೋನ್ನ ಸಹಾಯದಿಂದ ಈ ಪುಸ್ತಕವನ್ನು ‘ಡೌನ್‌ಲೋಡ್ ಮಾಡಿ ಓದಬಹುದು) ಸ್ವರೂಪದಲ್ಲಿ ‘ಅಮೆಜಾನ್ ಕಿಂಡಲ್ನಲ್ಲಿಯೂ ಲಭ್ಯವಿದೆ. ಅವುಗಳಲ್ಲಿ ‘ತ್ಯೋಹಾರ ಮನಾನೆ ಕಿ ಉಚಿತ ಪದ್ದತಿಯಾ ಏವಂ ಅಧ್ಯಾತ್ಮಶಾಸ್ತ್ರ ಎಂಬ ಹಿಂದಿ ಭಾಷೆಯ ಮೊದಲ ಇ-ಬುಕ್‌ನ ಪ್ರಕಾಶನ ವನ್ನು ‘ಸನಾತನ ಪ್ರಭಾತ ನಿಯತಕಾಲಿಕೆ ಸಮೂಹದ ಮಾಜಿ ಸಮೂಹ ಸಂಪಾದಕ ಪೂ. ಪೃಥ್ವಿರಾಜ ಹಜಾರೆ ಇವರ ಶುಭಹಸ್ತದಿಂದ ಮಾಡಲಾಯಿತು.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.