ಮುಂಬಯಿ – ಮೂಲತಃ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಓಝರಮ್ ಎಂಬ ಗ್ರಾಮದ ಮತ್ತು ಸದ್ಯ ಠಾಣೆಯಲ್ಲಿ ನೆಲೆಸಿದ್ದ ಸನಾತನದ ಸಂತರಾದ ಪೂ. ರಘುನಾಥ ವಾಮನ ರಾಣೆ (ಪೂ. ರಘುನಾಥ ಅಜ್ಜನವರು) (೮೨ ವರ್ಷ) ಇವರು ೧೧ ಜುಲೈ ೨೦೨೧ ರಂದು ಉತ್ತರರಾತ್ರಿ ೨ ಗಂಟೆಗೆ ಮುಂಬಯಿಯ ಆಸ್ಪತ್ರೆಯಲ್ಲಿ ದೇಹತ್ಯಾಗ ಮಾಡಿದರು. ಪತ್ನಿ, ಇಬ್ಬರು ಮಗ, ಒಬ್ಬಳು ಮಗಳು, ಒಬ್ಬ ಸೊಸೆ, ಅಳಿಯ ಮತ್ತು ಮೊಮ್ಮಕ್ಕಳು ಹೀಗೆ ಅವರ ಪರಿವಾರವಿದೆ. ಜುಲೈ ೧೨ ರಂದು ಅವರ ಪಾರ್ಥಿವದ ಮೇಲೆ ಠಾಣೆಯ ಬಾಳಕುಮ್‌ನಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.
ಪೂ. ರಾಣೆ ಅಜ್ಜನವರು ೧೯೯೯ ರಲ್ಲಿ ಅಂದರೆ ೬೦ ನೇ ವಯಸ್ಸಿನಲ್ಲಿ ಸನಾತನದ ಮಾರ್ಗದರ್ಶನದಲ್ಲಿ ಸಾಧನೆಗೆ ಪ್ರಾರಂಭ ಮಾಡಿದರು. ಕೇವಲ ೧೬ ವರ್ಷಗಳಲ್ಲಿ ತಳಮಳದಿಂದ ಸಾಧನೆ ಮಾಡಿ ಅವರು ಸಂತ ಪದವಿಯನ್ನು ತಲುಪಿದರು. ೧೫.೩.೨೦೧೫ ರಂದು ಅವರಿಗೆ ‘ಸನಾತನದ ೪೭ ನೇ ಸಂತರರತ್ನ ಎಂದು ಘೋಷಿಸಲಾಯಿತು. ಅವರು ೨೦೧೧ ರಿಂದ ೨೦೧೫ ಈ ಕಾಲಾವಧಿಯಲ್ಲಿ ರತ್ನಾಗಿರಿ ಜಿಲ್ಲೆಯ ಖೇಡ ತಾಲೂಕಿನಲ್ಲಿರುವ ಐನಿ-ಮೇಟೆ ಇಲ್ಲಿಯ ತಪೋಧಾಮದಲ್ಲಿ ಸೇವೆಯನ್ನು ಸಲ್ಲಿಸಿದ್ದರು.
ಪರಾತ್ಪರ ಗುರು ಡಾ. ಆಠವಲೆಯವರು ಪೂ. ರಾಣೆ ಅಜ್ಜನವರ ಬಗ್ಗೆ ತೆಗೆದ ಗೌರವೋದ್ಗಾರ !‘ಸರ್ವಸ್ವದ ತ್ಯಾಗ, ಅಖಂಡ ಸೇವೆ, ಎಲ್ಲರ ಬಗ್ಗೆ ಪ್ರೀತಿ, ಯಾವುದೇ ವಿಷಯದಲ್ಲಿ ಎಂದಿಗೂ ದೂರು ಇಲ್ಲದಿರುವುದು ಇತ್ಯಾದಿ ಅನೇಕ ಗುಣವೈಶಿಷ್ಟ್ಯಗಳನ್ನು ಹೊಂದಿದ ಪೂ. ರಾಣೆ ಅಜ್ಜನವರು ಸಾಧಕರ ಎದುರಿಗೆ ಅಷ್ಟೇ ಅಲ್ಲ, ಅನೇಕ ಸಂತರ ಮುಂದೆಯೂ ಆದರ್ಶ ಸಂತರ ಉದಾಹರಣೆಯಾಗಿದ್ದಾರೆ. – (ಪರಾತ್ಪರ ಗುರು) ಡಾ. ಆಠವಲೆ |