Mahakumbh Benefits : ಮಹಾಕುಂಭದ ಆಧ್ಯಾತ್ಮಿಕ ಲಾಭ ಪಡೆಯಿರಿ ! – ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ, ಪೀಠಾಧೀಶ್ವರ, ಬಾಗೇಶ್ವರಧಾಮ

ಹಿಂದೂಗಳನ್ನು ಜಾಗೃತಗೊಳಿಸುವ ಮೂಲಕ ಭಾರತವನ್ನು ಉಳಿಸುವ ಸಂಕಲ್ಪ

ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ

ಛತ್ತರಪುರ, ಮಧ್ಯಪ್ರದೇಶ – ಮಹಾಕುಂಭವು ಶ್ರದ್ದೇಯ ವಿಷಯವಾಗಿದ್ದು, ಸನಾತನ ಹಿಂದೂ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಆದ್ದರಿಂದ, ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿ ಗಳಿಸಲು ‘ರೀಲ್’ಗಳನ್ನು (ವೀಡಿಯೊಗಳನ್ನು) ಮಾಡುವ ಬದಲು, ಮಹಾಕುಂಭ ಕ್ಷೇತ್ರದ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ ಎಂದು ಬಾಗೇಶ್ವರ ಧಾಮದ ಪೀಠಾಧೀಶ್ವರ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಇವರು ಹೇಳಿದರು.

ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಮಾತು ಮುಂದುವರೆಸಿ,

1. ‘ಸನಾತನ ಧರ್ಮವನ್ನು ಹೇಗೆ ಉಳಿಸಲಾಗುತ್ತದೆ?’, ‘ಹಿಂದುತ್ವವನ್ನು ಹೇಗೆ ಜಾಗೃತಗೊಳಿಸಲಾಗುತ್ತದೆ?’, ‘ಹಿಂದೂ ರಾಷ್ಟ್ರವನ್ನು ಹೇಗೆ ಸ್ಥಾಪಿಸಲಾಗುವುದು?’ ಮತ್ತು ‘ಬೆದರಿಕೆಗಳಿಂದಾಗಿ ಇಸ್ಲಾಂ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಎಲ್ಲಾ ಹಿಂದೂಗಳನ್ನು ಸ್ವ ಧರ್ಮಕ್ಕೆ ಹೇಗೆ ಮರಳಿ ಬರಬಹುದು?’ ಈ ಎಲ್ಲಾ ಪ್ರಶ್ನೆಗಳನ್ನು ಮಹಾಕುಂಭ ಕ್ಷೇತ್ರದಲ್ಲಿ ಚರ್ಚೆಯಾಗಬೇಕು.

2. ನಾವು ಖಂಡಿತವಾಗಿಯೂ ಪ್ರಯಾಗರಾಜ್‌ಗೆ ಹೋಗಿ ಕಾರ್ಯಕ್ರಮ ನಡೆಸಲಿದ್ದೇವೆ. “ಹಿಂದೂಗಳನ್ನು ಜಾಗೃತಗೊಳಿಸಿ, ಹಿಂದೂಸ್ಥಾನವನ್ನು ಉಳಿಸಿ” ಎಂದು ಇದರ ಅಂಕಲ್ಪ ಇರಲಿದೆ.

3. ಜನವರಿ 24 ರಂದು ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಸಂಗಮ ಸ್ನಾನಕ್ಕಾಗಿ ಮಹಾಕುಂಭ ಕ್ಷೇತ್ರವನ್ನು ತಲುಪಲಿದ್ದಾರೆ.

4. ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಲೇಟೆ ಹನುಮಾನ್ ದೇವಾಲಯದ ಮುಂದೆ ದರ್ಬಾರ್ ನಡೆಸಿ 3 ದಿನಗಳ ಕಾಲ ಕಥಾವಾಚನ ಮಾಡಿ, ‘ಹಿಂದೂಗಳನ್ನು ಉಳಿಸಿ, ಹಿಂದೂಸ್ಥಾನವನ್ನು ಉಳಿಸಿ’ ಎಂಬ ಸಂದೇಶವನ್ನು ನೀಡಲಿದ್ದಾರೆ.