Terrorist Arrest Assam : ಪರಾರಿಯಾಗಿದ್ದ ಜಿಹಾದಿ ಭಯೋತ್ಪಾದಕ ಜಹೀರ್ ಅಲಿಯನ್ನು ಅಸ್ಸಾಂನಿಂದ ಬಂಧನ

‘ಅನ್ಸಾರುಲ್ಲಾ ಬಾಂಗ್ಲಾ ಟೀಂ’ ಎಂಬ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ

ಧುಬರಿ (ಅಸ್ಸಾಂ) – ಅಸ್ಸಾಂ ಪೊಲೀಸರ ವಿಶೇಷ ಕಾರ್ಯಪಡೆಯು ಇಲ್ಲಿಂದ ಪರಾರಿಯಾಗಿದ್ದ ಜಹೀರ್ ಅಲಿ ಎಂಬ ಭಯೋತ್ಪಾದಕನನ್ನು ಬಂಧಿಸಿದೆ. ಭಯೋತ್ಪಾದಕ ಸಂಘಟನೆಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಅಸ್ಸಾಂ ಪೊಲೀಸರು ಜಹೀರ್‌ನನ್ನು ಬಂಧಿಸಿದರು. ಅವನು ಧುಬರಿ ಜಿಲ್ಲೆಯ ಖುಟಿಗಾಂವ್ ಗ್ರಾಮದ ನಿವಾಸಿಯಾಗಿದ್ದಾನೆ. ಜಹೀರ್ ‘ಅನ್ಸಾರುಲ್ಲಾ ಬಾಂಗ್ಲಾ ಟೀಂ’ ಎಂಬ ಜಿಹಾದಿ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾನೆ. ಈ ಸಂಘಟನೆ ಅಲ್-ಖೈದಾದ ಅಂಗಸಂಸ್ಥೆಯಾಗಿದೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಜಹೀರ್ ಅಲಿ ಅನ್ಸಾರುಲ್ಲಾ ಬಾಂಗ್ಲಾ ಟೀಂನ ಮುಖ್ಯಸ್ಥ ಜಸಿಮುದ್ದೀನ್ ರಹಮಾನಿಯ ಆಪ್ತ ಸಹಚರ ಮೊಹಮ್ಮದ್ ಫರ್ಹಾನ್ ಇಸ್ರಾಕ್ ಗ್ಯಾಂಗ್‌ನಲ್ಲಿ ಕೆಲಸ ಮಾಡುತ್ತಿದ್ದ.

ಅಸ್ಸಾಂ ಪೊಲೀಸ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೀವ್ ಸೈಕಿಯಾ ಇವರು, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಇದುವರೆಗೆ 21 ಜನರನ್ನು ಬಂಧಿಸಲಾಗಿದೆ, ಇದರಲ್ಲಿ ಹಲವಾರು ಬಾಂಗ್ಲಾದೇಶಿ ಪ್ರಜೆಗಳು ಸೇರಿದ್ದಾರೆ. ಈ 21 ಜನರಲ್ಲಿ, ಬಾಂಗ್ಲಾದೇಶದ ಮೊಹಮ್ಮದ್ ಸಾದ್ ರಾದಿನನ್ನು ಭಾರತದಲ್ಲಿ ಕಟ್ಟರವಾದಿ ಸಿದ್ಧಾಂತವನ್ನು ಹರಡಲು ಕಳುಹಿಸಲಾಗಿತ್ತು. ಈ ಕಾರ್ಯಾಚರಣೆಯಡಿಯಲ್ಲಿ, ವಿಶೇಷ ಕಾರ್ಯ ಪಡೆ ಇದುವರೆಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಸ್ಫೋಟಕಗಳು, ಕ್ರಿಮಿನಲ್ ದಾಖಲೆಗಳು ಮತ್ತು ಮೊಬೈಲ್ ಫೋನ್ ಸೆಟ್‌ಗಳನ್ನು ವಶಪಡಿಸಿಕೊಂಡಿದೆ.

ಸಂಪಾದಕೀಯ ನಿಲುವು

ಅಂತಹ ಭಯೋತ್ಪಾದಕರಿಗೆ ಸಾಕುವ ಬದಲು, ಅವರಿಗೆ ಗಲ್ಲು ಶಿಕ್ಷೆಯಾಗಲು ಪ್ರಯತ್ನಿಸಬೇಕು !