ನದಿಗಳನ್ನು ಸಂರಕ್ಷಿಸಲು ಅವುಗಳಿಗೆ ಆಣೆಕಟ್ಟು ಕಟ್ಟುವುದನ್ನು ನಿಲ್ಲಿಸಿ ! – ಶಂಕರಾಚಾರ್ಯ ಸ್ವಾಮಿ ವಾಸುದೇವಾನಂದ ಸರಸ್ವತಿ, ಜ್ಯೋತಿಷ್ಯ ಪೀಠ

ಕುಂಭಕ್ಷೇತ್ರದಲ್ಲಿ ‘ನದಿ ಸಂವಾದ’ ಈ ಕಾರ್ಯಕ್ರಮದ ಆಯೋಜನೆ

ಛಾಯಾಚಿತ್ರ : ವೇದಿಕೆಯ ಮೇಲೆ ವಿರಾಜಮಾನರಾದ ಶಂಕರಾಚಾರ್ಯ ಸ್ವಾಮಿ ವಾಸುದೇವಾನಂದ ಸರಸ್ವತಿ (ಮಧ್ಯಭಾಗದಲ್ಲಿ) ಮತ್ತು ಸದ್ಗುರು ಡಾ. ಚಾರುದತ್ತ ಪಿಂಗಳೆ (ಬಲಬದಿಗೆ), ಹಾಗೆಯೇ (ಎಡಬದಿಯಿಂದ ನಿಂತುಕೊಂಡವರಲ್ಲಿ ಎರಡನೇಯವರು) ಉತ್ತರಪ್ರದೇಶದ ಪೊಲೀಸ್ ಉಪಮಹಾನಿರೀಕ್ಷಕ ಶ್ರೀ. ಜುಗಲ ಕಿಶೋರ ತಿವಾರಿ

ಪ್ರಯಾಗರಾಜ, ೨೧ ಜನವರಿ (ವಾರ್ತಾ.) – ಇಂದಿನವರೆಗೆ ಸರಕಾರಿ ಮತ್ತು ಸಾಮಾಜಿಕ ಸ್ತರಗಳಲ್ಲಿ ಅನೇಕ ಪರಿಹಾರಯೋಜನೆಗಳನ್ನು ಕಂಡು ಹಿಡಿದರೂ ಗಂಗಾ ಮತ್ತು ಇತರ ನದಿಗಳ ಶುದ್ಧಕರಣವಾಗಲಿಲ್ಲ, ಇದು ವಸ್ತುಸ್ಥಿತಿಯಾಗಿದೆ. ಅನೇಕ ಸ್ಥಳಗಳ ತೀರ್ಥಕ್ಷೇತ್ರದಲ್ಲಿರುವ ನದಿಗಳಲ್ಲಿ ನೀರು ಎಷ್ಟು ಕಡಿಮೆ ಇದೆಯೆಂದರೆ ಸಾಧು-ಸಂತರು ಮತ್ತು ಸನ್ಯಾಸಿಗಳಿಗೆ ಸ್ನಾನ-ಸಂಧ್ಯಾವಂದನೆ, ಸಾಧನೆ, ತಪಶ್ಚರ್ಯ, ಧಾರ್ಮಿಕ ವಿಧಿ, ಜಲ ಅನುಷ್ಠಾನ ಇತ್ಯಾದಿ ಮಾಡಲು ಸಾಧ್ಯವಾಗುವುದಿಲ್ಲ. ಗಂಗಾ ಮತ್ತು ಇತರ ಎಲ್ಲ ನದಿಗಳ ಉಳಿವಿಗಾಗಿ ಅವುಗಳ ಪ್ರವಾಹವನ್ನು ನೈಸರ್ಗಿಕ ಮತ್ತು ಶುದ್ಧವಾಗಿಡುವುದು ಅತ್ಯಾವಶ್ಯಕವಾಗಿದೆ, ಇಲ್ಲವಾದರೆ ನದಿಗಳು ಕಲುಷಿತಗೊಳ್ಳುತ್ತವೆ. ಹೀಗಿದ್ದರೂ ನದಿಗಳ ಮೇಲೆ ಆಣೆಕಟ್ಟುಗಳನ್ನು ಕಟ್ಟಲಾಗುತ್ತಿದೆ. ಆದುದರಿಂದ ನದಿಗಳು ಕಲುಷಿತಗೊಳ್ಳಲು ಸರಕಾರ ಮತ್ತು ಸಮಾಜ ಇವೆರಡೂ ಹೊಣೆಗಾರರಾಗಿದ್ದಾರೆ. ಗಂಗಾ ಮತ್ತು ಇತರ ನದಿಗಳನ್ನು ಕಾಪಾಡುವುದಕ್ಕಾಗಿ ಅವುಗಳ ಮೇಲೆ ಸೇತುವೆ ಮತ್ತು ಆಣೆಕಟ್ಟು ಕಟ್ಟುವುದನ್ನು ನಿಲ್ಲಿಸಬೇಕು ಮತ್ತು ಪ್ಲಾಸ್ಟಿಕ್‌ನ ಕೇವಲ ಬಳಕೆ ಮಾತ್ರವಲ್ಲದೇ, ಅದರ ಉತ್ಪಾದನೆಯನ್ನೇ ನಿಷೇಧಿಸಬೇಕು ಎಂದು ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಜಗದ್ಗುರು ಸ್ವಾಮಿ ವಾಸುದೇವಾನಂದ ಸರಸ್ವತಿಯವರು ತಮ್ಮ ಸ್ಪಷ್ಟ ಹೇಳಿಕೆಯನ್ನು ನೀಡಿದರು.

ಕುಂಭಕ್ಷೇತ್ರದಲ್ಲಿ ಜನವರಿ ೨೦ ರಂದು ಆಯೋಜಿಸಲಾದ ‘ನದಿ ಸಂವಾದ’ ಈ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಪ್ರಸಂಗದಲ್ಲಿ ವೇದಿಕೆಯ ಮೇಲೆ ಹಿಂದು ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ, ದೆಹಲಿಯ ಯಮುನಾ ನದಿಯ ಸ್ವಚ್ಛತೆಗಾಗಿ ಕಾರ್ಯನಿರತವಾಗಿರುವ ನಿರಾ ಮಿಶ್ರಾ, ಮಹಾಮಂಡಲೇಶ್ವರ ಮಹಾದೇವ ಬಾಬಾಜಿ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಉತ್ತರಪ್ರದೇಶದ ಪೊಲೀಸ್ ಉಪಮಹಾನಿರೀಕ್ಷಕ ಶ್ರೀ. ಜುಗಲ ಕಿಶೋರ ತಿವಾರಿ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಧರ್ಮಶಿಕ್ಷಣದ ಮೂಲಕ ಹಿಂದೂಗಳ ಮನಸ್ಸಿನ ಮೇಲೆ ನದಿಗಳ ಆಧ್ಯಾತ್ಮಿಕ ಮಹತ್ವವನ್ನು ಬಿಂಬಿಸುವುದು, ಇದೇ ನದಿಗಳನ್ನು ಸಂರಕ್ಷಿಸುವ ಸರ್ವೋತ್ತಮ ಉಪಾಯ ! – ಸದ್ಗುರು ಡಾ. ಚಾರುದತ್ತ ಪಿಂಗಳೆ

ಸದ್ಗುರು (ಡಾ.) ಚಾರುದತ್ತ ಪಿಂಗಳೆ

ಈ ಪ್ರಸಂಗದಲ್ಲಿ ಉಪಸ್ಥಿತರಿಗೆ ಮಾರ್ಗದರ್ಶನ ಮಾಡುವಾಗ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು, “ಗಂಗಾಮಾತೆಯು ಭಾರತದ ಆಧ್ಯಾತ್ಮಿಕ ಮತ್ತು ಭೌತಿಕ ಜೀವನರೇಖೆಯಾಗಿದ್ದಾಳೆ. ಸನಾತನ ಹಿಂದು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಮತ್ತು ಪಾಪಮುಕ್ತ ಮಾಡಿ ಮೋಕ್ಷವನ್ನು ಪ್ರದಾನಿಸುವ ಗಂಗಾನದಿಯ ಅಸ್ತಿತ್ವವು ನಮಗೆಲ್ಲರಿಗಾಗಿ ಯಾವಾಗಲೂ ಅತ್ಯುಚ್ಚವಾಗಿದೆ. ಗಂಗಾ ನದಿಯಷ್ಟೇ ಅಲ್ಲ, ಆದರೆ ಎಲ್ಲ ಸಪ್ತನದಿಗಳನ್ನು ಸಂರಕ್ಷಿಸುವುದು ಆವಶ್ಯಕವಾಗಿದೆ. ಇದನ್ನು ಮನೆ ಮನೆಗಳಿಗೆ ಹೋಗಿ ಸಾಮಾನ್ಯ ಜನರಿಗೆ ಧರ್ಮಶಿಕ್ಷಣದ ಮಾಧ್ಯಮದಿಂದ ಕಲಿಸುವುದು ಆವಶ್ಯಕವಾಗಿದ್ದು ಸರಕಾರವು ಆ ರೀತಿಯ ವ್ಯವಸ್ಥೆ ಕಲ್ಪಿಸಬೇಕು. ಹಿಂದೂಗಳಿಗೆ ಧರ್ಮಶಿಕ್ಷಣ ನೀಡಿ ಗಂಗಾನದಿಯನ್ನು ಸಂರಕ್ಷಿಸಲು ಎಲ್ಲ ರೀತಿಯಿಂದಲೂ ಪ್ರಯತ್ನಿಸುವುದು ಆವಶ್ಯಕವಾಗಿದೆ. ಗಂಗಾ ನದಿಯ ದಡದಲ್ಲಿ ಹಿಂದೂಗಳ ಅನೇಕ ತೀರ್ಥಕ್ಷೇತ್ರಗಳು ಮತ್ತು ದೇವಸ್ಥಾನಗಳಿವೆ. ಆದ್ದರಿಂದ ಪ್ರತಿಯೊಬ್ಬ ಹಿಂದುವಿನ ದೋಷಮುಕ್ತಿಗಾಗಿ, ಸಾಧನೆ ಮತ್ತು ತಪಸ್ಸು ಮಾಡಲು ಗಂಗಾನದಿಯು ಬಹಳ ಮಹತ್ವದ್ದಾಗಿದೆ. ನದಿಗಳ ಆಧ್ಯಾತ್ಮಿಕ ಮಹತ್ವ ಮತ್ತು ಅವುಗಳನ್ನು ರಕ್ಷಿಸುವ ಆವಶ್ಯಕತೆಯನ್ನು ಶಾಲಾ ಜೀವನದಿಂದಲೇ ಕಲಿಸಬೇಕು. ಗಂಗಾ ತೀರವನ್ನು ಮದ್ಯ-ಮಾಂಸ ಮಾರಾಟದಿಂದ ಮುಕ್ತ ಮಾಡುವುದು, ಈ ಪರಿಹಾರ ನದಿಯ ಶುದ್ಧಿಗಾಗಿ ಆವಶ್ಯಕವಾಗಿದೆ. ಸರಕಾರ, ಆಡಳಿತ ಮತ್ತು ಸಮಾಜದ ಪ್ರತಿಯೊಂದು ಘಟಕವು ಇದಕ್ಕಾಗಿ ತನ್ನ ಕೊಡುಗೆಯನ್ನು ನೀಡುವುದೇ ಗಂಗಾನದಿಯನ್ನು ಸಂರಕ್ಷಿಸುವ ಅತ್ಯುತ್ತಮ ಮಾರ್ಗವಾಗಿದೆ. ನಾವೂ ಸ್ವತಃ ನದಿಗಳನ್ನು ಕಲುಷಿತಗೊಳಿಸಬಾರದು ಮತ್ತು ಯಾರಾದರೂ ಮಾಡುತ್ತಿದ್ದರೆ, ಅವರನ್ನು ತಡೆಗಟ್ಟಬೇಕು.”

ಗಮನಾರ್ಹ ಅಂಶಗಳು

ಈ ಕಾರ್ಯಕ್ರಮದ ಆಯೋಜಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರಿಗೆ ಸನಾತನದ ‘ಶ್ರೀ ಗಂಗಾಜಿ ಕಿ ಮಹಿಮಾ’ ಈ ಹಿಂದಿ ಭಾಷೆಯ ಗ್ರಂಥವನ್ನು ವಿತರಿಸಿದರು.