Question Against HALAL In SC : ಕೆಲವರ ಬೇಡಿಕೆಯಿಂದಾಗಿ, ಇತರರಿಗೆ ದುಬಾರಿ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಖರೀದಿಸಬೇಕಾಗುತ್ತದೆ ! – ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ

ದೇಶದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾರಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ !

ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ

ನವದೆಹಲಿ – ಹಲಾಲ್ ಮಾಂಸ ಇತ್ಯಾದಿಗಳ ಬಗ್ಗೆ ಯಾರಿಗೂ ಯಾವುದೇ ಆಕ್ಷೇಪಣೆಗಳಿಲ್ಲ; ಆದರೆ ‘ಹಲಾಲ್’ ಹೆಸರಿನಲ್ಲಿ ಅವರು ಸೃಷ್ಟಿಸಿರುವ ಪ್ರಾಬಲ್ಯವನ್ನು ನೋಡಿ ನಾನು ದಂಗಾದೆನು. ‘ಸಿಮೆಂಟ್ ಕೂಡ ಹಲಾಲ್ ಪ್ರಮಾಣೀಕರಿಸಲ್ಪಡಬೇಕು. ಕಬ್ಬಿಣದ ಸರಳುಗಳು ಹಲಾಲ್ ಪ್ರಮಾಣೀಕರಿಸಲ್ಪಟ್ಟಿರಬೇಕು. ನಾವು ಪಡೆಯುವ ಬಾಟಲಿ ನೀರು ಹಲಾಲ್ ಪ್ರಮಾಣೀಕರಿಸಲ್ಪಡಬೇಕು ಎಂದು ಈ ಜನರು ಹೇಳುತ್ತಾರೆ. ಹಲಾಲ್ ಪ್ರಮಾಣೀಕರಣ ಸಂಸ್ಥೆಗಳು ಪ್ರಮಾಣೀಕರಣ ಪ್ರಕ್ರಿಯೆಯಿಂದ ಕೆಲವು ಲಕ್ಷ ಕೋಟಿ ರೂಪಾಯಿಗಳನ್ನು ಗಳಿಸಿವೆ. ಗೋಧಿ ಹಿಟ್ಟು ಮತ್ತು ಕಡಲೆ ಹಿಟ್ಟು (ಬೇಸನ್ ) ಕೂಡ ಹಲಾಲ್ ಪ್ರಮಾಣೀಕರಿಸಲ್ಪಡಬೇಕು. ಕಡಲೆ ಹಿಟ್ಟು ಹೇಗೆ ಹಲಾಲ ಅಥವಾ ಹಲಾಲ್‌ಯೇತರ ಇರಲು ಸಾಧ್ಯ? ಎಂದು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಯ ಸಂದರ್ಭದಲ್ಲಿ ಪ್ರಶ್ನಿಸಿದರು. ಉತ್ತರ ಪ್ರದೇಶ ಸರ್ಕಾರ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಮೇಲಿನ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಈ ಪ್ರಶ್ನೆಗಳನ್ನು ಎತ್ತಿದರು. ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳು ದುಬಾರಿಯಾಗಿದ್ದು, ಕೆಲವೇ ಜನರ ಬೇಡಿಕೆಗಾಗಿ ದೇಶಾದ್ಯಂತ ಜನರು ದುಬಾರಿ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಖರೀದಿಸಬೇಕಾಗಿದೆ. ಈ ಅಂಶವನ್ನು ಪರಿಗಣಿಸುವಂತೆ ಅವರು ನ್ಯಾಯಾಲಯವನ್ನು ವಿನಂತಿಸಿದರು.
ಆಲಿಕೆಯ ಸಮಯದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮಾಂಸಾಹಾರಿ ಉತ್ಪನ್ನಗಳನ್ನು ಹೊರತುಪಡಿಸಿ ಇತರ ಉತ್ಪನ್ನಗಳನ್ನು ಹಲಾಲ್ ಪ್ರಮಾಣೀಕೃತ ಎಂದು ಮಾರಾಟ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಇದರ ಮುಂದಿನ ಆಲಿಕೆಯು ಮಾರ್ಚ್ 24 ರಂದು ನಡೆಯಲಿದೆ.

1. ತುಷಾರ್ ಮೆಹ್ತಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವಕೀಲ ಎಂ.ಆರ್. ಶಮಶಾದ, ಕೇಂದ್ರ ಸರಕಾರದ ನೀತಿಯು ಹಲಾಲ್ ಅನ್ನು ವಿಸ್ತಾರವಾಗಿ ವ್ಯಾಖ್ಯಾನಿಸಲಾಗಿದೆ ಮತ್ತು ಹಲಾಲ್ ಪ್ರಮಾಣೀಕರಣವು ಕೇವಲ ಮಾಂಸಾಹಾರಿ ಆಹಾರಕ್ಕೆ ಸಂಬಂಧಿಸಿದ್ದಲ್ಲ. ಇದು ಜೀವನಶೈಲಿಯ ವಿಷಯ ಎಂದು ಕೇಂದ್ರ ಸರ್ಕಾರದ ನೀತಿಯೇ ಹೇಳುತ್ತದೆ, ಎಂದರು.

2. ಅನಂತರ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಶ್ನಿಸುತ್ತಾ, “ದೇಶದ ಇತರ ಭಾಗಗಳಲ್ಲಿ ಅವಿಶ್ವಾಸವಿರುವ (ಹಲಾಲ್ ಸೇವಿಸದ) ಜನರಿಗೆ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳಿಗೆ ಹೆಚ್ಚಿನ ಬೆಲೆಗಳನ್ನು ಏಕೆ ಪಾವತಿಸಬೇಕಾಗುತ್ತದೆ?” ಎಂದು ಕೇಳಿದರು.

3. ಅರ್ಜಿದಾರರ ಪರ ವಕೀಲ ಶಮಶಾದ ಮಾತನಾಡಿ, ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಸೇವಿಸುವುದು ಕಡ್ಡಾಯವಲ್ಲ ಬದಲಾಗಿ, ಅದು ಆಯ್ಕೆಯ ವಿಷಯ ಎಂದು ಹೇಳಿದರು.

ಏನಿದು ಪ್ರಕರಣ ?

ಉತ್ತರ ಪ್ರದೇಶದ ಭಾಜಪ ಸರಕಾರದ ಆಹಾರ ಭದ್ರತೆ ಮತ್ತು ಔಷಧ ಇಲಾಖೆ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಉತ್ಪಾದನೆ ಮಾರಾಟ, ಸಂಗ್ರಹಣೆ ಮತ್ತು ಮಾರಾಟ ಇವುಗಳನ್ನು ನಿರ್ಬಂಧಗಳನ್ನು ಹೇರಿದೆ. ಹಾಗೆಯೇ ಭಾಜಪ ಯುವ ಸಂಘಟನೆಯ ಪ್ರತಿನಿಧಿಯೊಬ್ಬರು ಲಕ್ಷ್ಮಣಪುರಿಯಲ್ಲಿ ದಾಖಲಿಸಿದ್ದ ದೂರನ್ನು ಉಲ್ಲೇಖಿಸಿ ಹಲಾಲ ಪ್ರಮಾಣಿತ ಸಂಸ್ಥೆಗಳು ಮುಸಲ್ಮಾನರಲ್ಲಿ ಮಾರಾಟವನ್ನು ಹೆಚ್ಚಿಸಲು ‘ನಕಲಿ’ ಪ್ರಮಾಣಪತ್ರಗಳನ್ನು ನೀಡುತ್ತಿವೆ ಎಂದು ಆರೋಪಿಸಿ ಸರಕಾರದ ನಿರ್ಧಾರ ಸರಿಯಾಗಿದೆ ಎಂದು ಹೇಳಿದರು. ಮುಖ್ಯವಾಗಿ, ಈ ನಿಷೇಧವು ಉತ್ತರ ಪ್ರದೇಶದಲ್ಲಿ ಮಾರಾಟ, ಉತ್ಪಾದನೆ ಮತ್ತು ಸಂಗ್ರಹಣೆಗೆ ಮಾತ್ರ ಅನ್ವಯಿಸುತ್ತದೆ ಮತ್ತು ರಫ್ತು ಮಾಡಿದ ಉತ್ಪನ್ನಗಳಿಗೆ ಅನ್ವಯಿಸುವುದಿಲ್ಲ.

ಇಸ್ಲಾಂ ಧರ್ಮದ ಅನುಯಾಯಿಗಳಿಗೆ ಉತ್ಪನ್ನವನ್ನು ಸೇವಿಸಲು ಅನುಮತಿಸಲಾಗಿದೆ ಎಂದು ಸೂಚಿಸುವ ಹಲಾಲ್ ಪ್ರಮಾಣಪತ್ರಗಳನ್ನು ಜಮಿಯತ್ ಉಲೇಮಾ-ಎ-ಹಿಂದ್‌ನ ಹಲಾಲ್ ಘಟಕ ಮತ್ತು ಹಲಾಲ್ ಶರಿಯಾ ಇಸ್ಲಾಮಿಕ್ ಕಾನೂನು ಮಂಡಳಿಯಂತಹ ಸಂಸ್ಥೆಗಳು ನೀಡುತ್ತವೆ. ರಾಷ್ಟ್ರೀಯ ಪ್ರಮಾಣೀಕರಣ ಮಂಡಳಿಯಿಂದ ಮಾನ್ಯತೆ ಪಡೆದ ಈ ಸಂಸ್ಥೆಗಳು ಸರಕಾರದ ಈ ನಿಷೇಧ ನಿರ್ಧಾರವನ್ನು ಟೀಕಿಸಿದವು. ಸರಕಾರದ ಈ ನಿರ್ಧಾರದಿಂದಾಗಿ, ‘ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಮತ್ತು ‘ಜಮಿಯಾತ್ ಉಲೇಮಾ-ಎ-ಮಹಾರಾಷ್ಟ್ರ’ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾಂವಿಧಾನಿಕವಾಗಿ ಸವಾಲೊಡ್ಡಿವೆ. ಈ ಅರ್ಜಿದಾರರು ತಮ್ಮ ಅರ್ಜಿಗಳಲ್ಲಿ ನಿಷೇಧವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯವು ಕಾನೂನುರೀತ್ಯ ಹಸ್ತಕ್ಷೇಪ ಮಾಡುವಂತೆ ಕೋರಿದ್ದಾರೆ.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದಲ್ಲಿ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ನಿಷೇಧಿಸಿದಂತೆ ದೇಶಾದ್ಯಂತ ಯಾವಾಗ ನಿಷೇಧಿಸುವಿರಿ ?