ಕುಂಭ ಕ್ಷೇತ್ರಕ್ಕೆ ಭೇಟಿ ನೀಡಿದ ಉದ್ಯಮಿ ಗೌತಮ ಅದಾನಿ

ಪ್ರಯಾಗರಾಜ (ಉತ್ತರ ಪ್ರದೇಶ) – ಅದಾನಿ ಗ್ರೂಪ್ ಅಧ್ಯಕ್ಷ ಮತ್ತು ಬಿಲಿಯನೇರ್ ಗೌತಮ ಅದಾನಿ ಕುಂಭ ಕ್ಷೇತ್ರಕ್ಕೆ ಭೇಟಿ ನೀಡಿದರು. ಅವರು ಪವಿತ್ರ ತ್ರಿವೇಣಿ ಸಂಗಮಕ್ಕೆ ಹೋಗಿ ಪೂಜೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸಿದರು. ನಂತರ, ಅವರು ಪ್ರಸಿದ್ಧ ಶ್ರೀ ಬಡೇ ಹನುಮಾನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು. ಅವರು ‘ಇಸ್ಕಾನ್’ ಡೇರೆಗೆ ಹೋಗಿ ಭಕ್ತರಿಗೆ ಪ್ರಸಾದ ವಿತರಿಸಿದರು. ಈ ಸಂದರ್ಭದಲ್ಲಿ ಅವರ ಪತ್ನಿ ಪ್ರೀತಿ ಅದಾನಿ ಅವರೊಂದಿಗೆ ಇದ್ದರು.

ಕುಂಭಮೇಳದ ವ್ಯವಸ್ಥಾಪನೆ ಇದು ವ್ಯವಸ್ಥಪಾನೆ ಸಂಸ್ಥೆಗಳಿಗೆ ಸಂಶೋಧನಾ ವಿಷಯವಾಗಿದೆ ! – ಅದಾನಿ

ಈ ಸಂದರ್ಭದಲ್ಲಿ ಅದಾನಿ ಅವರು ಮಾತನಾಡಿ, ‘ಪ್ರಯಾಗರಾಜದ ಮಹಾಕುಂಭದ ನನ್ನ ಅನುಭವ ಅವಿಸ್ಮರಣೀಯವಾಗಿತ್ತು’. ಇಲ್ಲಿ ವ್ಯವಸ್ಥಾಪನೆ ಇದು ವ್ಯವಸ್ಥಪಾನೆ ಸಂಸ್ಥೆಗಳಿಗೆ ಸಂಶೋಧನಾ ವಿಷಯವಾಗಿದೆ. ಗಂಗಾ ಮಾತೆಯ ಆಶೀರ್ವಾದಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ’ ಎಂದು ಹೇಳಿದರು.