
ಪ್ರಯಾಗರಾಜ, ೨೦ ಜನವರಿ (ವಾರ್ತೆ.) – ಜನವರಿ ೧೯ ರಂದು ಕುಂಭಮೇಳದಲ್ಲಿ ಗೀತಾಪ್ರೆಸ್‌ನ ೨೦೦ ಡೇರೆಗಳಿಗೆ ಬೆಂಕಿ ತಗಲಿ ಅವು ಸುಟ್ಟು ಬೂದಿಯಾದವು. ಬೆಂಕಿಯಲ್ಲಿ ಭಸ್ಮವಾದ ಡೇರೆಗಳ ಸ್ಥಳದಲ್ಲಿ ಸರಕಾರ ಪುನಃ ಹೊಸದಾಗಿ ಡೇರೆಗಳನ್ನು ನಿರ್ಮಿಸಲಿದೆ, ಎಂಬ ಮಾಹಿತಿಯನ್ನು ಗೀತಾಭವನದ ವ್ಯವಸ್ಥಾಪಕ ಶ್ರೀ. ಗೌರಿಶಂಕರ ಮೊಹತಾ ಇವರು ‘ಸನಾತನ ಪ್ರಭಾತ’ ದಿನಪತ್ರಿಕೆಯ ಪ್ರತಿನಿಧಿಗೆ ನೀಡಿದರು. ಜನವರಿ ೨೦ ರಂದು ಬೆಳಗ್ಗೆಯಿಂದ ಬೆಂಕಿಯಲ್ಲಿ ಅರ್ಧದಷ್ಟು ಸುಟ್ಟ ವಸ್ತುಗಳು, ಬೂದಿ ಇತ್ಯಾದಿ ತೆಗೆಯುವ ಕೆಲಸ ಆರಂಭಿಸಲಾಗಿದೆ. ಇದರ ನಂತರ ಈ ಜಾಗದಲ್ಲಿ ಮೊದಲಿನಂತೆ ಡೇರೆಗಳನ್ನು ನಿರ್ಮಿಸುವ ಕೆಲಸ ಆರಂಭಿಸಲಾಗುವುದು.
ಈ ಬಗ್ಗೆ ‘ಸನಾತನ ಪ್ರಭಾತ’ ದಿನಪತ್ರಿಕೆಯ ಪ್ರತಿನಿಧಿಗೆ ಮಾಹಿತಿಯನ್ನು ನೀಡುವಾಗ ಶ್ರೀ. ಗೌರಿಶಂಕರ ಮೊಹತಾ ಇವರು, ‘ದುರ್ಘಟನೆಯ ನಂತರವೂ ಗೀತಾಪ್ರೆಸ್ ಮೂಲಕ ನಡೆಸಲಾಗುವ ನಿತ್ಯದ ದಿನಚರಿ ಮುಂದುವರೆದಿದೆ. ಡೇರೆ ಸುಟ್ಟು ಭಸ್ಮವಾದುದರಿಂದ ಇಲ್ಲಿ ಇರುತ್ತಿದ್ದ ನಮ್ಮ ಸದಸ್ಯರನ್ನು ತಾತ್ಕಾಲಿಕವಾಗಿ ಅಕ್ಕಪಕ್ಕದ ಆಖಾಡಗಳು ಮತ್ತು ಡೇರೆಗಳಲ್ಲಿ ಸ್ಥಳಾಂತರಿಸಲಾಗಿದೆ. ಸರಕಾರ ಎಲ್ಲ ರೀತಿಯಿಂದಲೂ ಸಹಾಯ ಮಾಡುತ್ತಿದೆ. ಬೆಂಕಿಯಲ್ಲಿ ಸುಟ್ಟ ಜಾಗದ ಸ್ವಚ್ಛತೆ ಪೂರ್ಣಗೊಂಡ ನಂತರ ಇಲ್ಲಿ ಪುನಃ ಹೊಸ ಡೇರೆಗಳನ್ನು ನಿರ್ಮಿಸುವ ಕೆಲಸ ಆರಂಭಿಸಲಾಗುವುದು’, ಎಂದು ಹೇಳಿದರು.
ಭಕ್ತರು, ಸಂತರಿಗೆ ಪ್ರಸಾದ ನೀಡುವ ಕಾರ್ಯ ಮುಂದುವರೆದಿದೆ !

ಒಂದು ಕಡೆಗೆ ಸುಟ್ಟ ಡೇರೆಗಳ ಸ್ಥಳದಲ್ಲಿ ಸ್ವಚ್ಛತೆಯ ಕೆಲಸ ನಡೆದಿರುವಾಗ, ಸದಸ್ಯರು ಸ್ಥಳಾಂತರಗೊಳ್ಳುತ್ತಿದ್ದರೂ ಗೀತಾಪ್ರೆಸ್ ವತಿಯಿಂದ ಸಾಧು, ಸಂತರು ಮತ್ತು ಭಕ್ತರಿಗೆ ನಿಯಮಿತವಾಗಿ ಪ್ರಸಾದ ನೀಡುವ ಕಾರ್ಯ ಬೆಳಗ್ಗೆಯಿಂದಲೇ ಆರಂಭಿಸಲಾಯಿತು. ಜನವರಿ ೨೦ ರಂದು ಬೆಳಗ್ಗೆ ನೂರಾರು ಸಾಧುಗಳು ಗೀತಾಪ್ರೆಸ್‌ನ ಶಿಬಿರದಲ್ಲಿ ಪ್ರಸಾದವನ್ನು ಸೇವಿಸಿದರು.