೧. ಆಪತ್ಕಾಲವೆಂದರೆ ಹಿಂದೂ ರಾಷ್ಟ್ರದ ಸ್ಥಾಪನೆಗಿಂತ ಮೊದಲಿನ ಶುದ್ಧಿಯ ಕಾಲ !
ಈಗಿನ ಆಪತ್ಕಾಲವು ಕೇವಲ ಆಪತ್ಕಾಲವಾಗಿರದೇ ಧರ್ಮ ಸಂಸ್ಥಾಪನೆಯ ಕಾಲವಾಗಿದೆ. ನಮಗೆ ಇದು ಆಪತ್ಕಾಲದ ಹಾಗೆ ಕಾಣಿಸುತ್ತಿದ್ದರೂ, ಇದು ಹಿಂದೂ ರಾಷ್ಟ್ರದ ಸ್ಥಾಪನೆಯ ಮೊದಲಿನ ಶುದ್ಧಿಯ ಕಾಲವಾಗಿದೆ. ವಿವಿಧ ಆಪತ್ತುಗಳ ಮಾಧ್ಯಮದಿಂದ ಸಂಪೂರ್ಣ ಪೃಥ್ವಿಯ ಶುದ್ಧಿಯೇ ಆಗುತ್ತಿದೆ ಮತ್ತು ಮುಂದೆ ಗುರುದೇವರ ಸಂಕಲ್ಪದ ‘ಹಿಂದೂ ರಾಷ್ಟ್ರ ಪ್ರತ್ಯಕ್ಷ ಅವತರಿಸಲಿದೆ. ಈಗ ಉದ್ಭವಿಸಿರುವ ಆಪತ್ಕಾಲದ ಸ್ಥಿತಿಯಿಂದ ದ್ವಾಪರಯುಗದಲ್ಲಿನ ಮಹಾಭಾರತದ ಯುದ್ಧ ನೆನಪಾಗುತ್ತದೆ.
೨. ಗುರುದೇವರು ಶ್ರೀವಿಷ್ಣುವಿನ ಅವತಾರವಾಗಿರುವುದರಿಂದ ಸಾಧಕರು ‘ನಾವು ಪ್ರತ್ಯಕ್ಷ ಧರ್ಮಸೇವೆಯನ್ನೇ ಮಾಡುತ್ತಿದ್ದೇವೆ, ಎಂಬ ಭಾವದಿಂದ ಪ್ರತಿಯೊಂದು ಸೇವೆಯನ್ನು ಮಾಡುವುದು ಆವಶ್ಯಕವಾಗಿದೆ !
ದ್ವಾಪರಯುಗದಲ್ಲಿ ಶ್ರೀಕೃಷ್ಣನು ಐದು ಜನ ಪಾಂಡವರೊಂದಿಗೆ ಅರ್ಜುನನ ಮಾಧ್ಯಮದಿಂದ ಧರ್ಮಕಾರ್ಯವನ್ನು ಮಾಡಿಸಿ ಕೊಂಡನು. ಧರ್ಮಕ್ಕೆ ವಿಜಯವನ್ನು ಪ್ರಾಪ್ತಮಾಡಿಕೊಟ್ಟು ಧರ್ಮದ ಸಂಸ್ಥಾಪನೆಯನ್ನು ಮಾಡಿದನು. ಈ ಧರ್ಮಸಂಸ್ಥಾಪನೆಯನ್ನು ಮಾಡಲು ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನು ಅವತರಿಸಿದ್ದನು. ಅದರಂತೆ ಈ ಕಲಿಯುಗದಲ್ಲಿ ಪರಾತ್ಪರ ಗುರುದೇವರು, ಅಂದರೆ ಶ್ರೀವಿಷ್ಣುವಿನ ಸಾಕ್ಷಾತ್ ‘ಶ್ರೀಜಯಂತಾವತಾರ ಅವತರಿಸಿದೆ. ಅವರು ನಮ್ಮೆಲ್ಲರನ್ನೂ ಅವರ ಈ ದಿವ್ಯ ಅವತಾರಿ ಕಾರ್ಯದಲ್ಲಿ ಸಹಭಾಗಿಗಳನ್ನಾಗಿ ಮಾಡಿಕೊಂಡು, ನಮ್ಮ ಕ್ಷಮತೆಗನುಸಾರ ಗುರುಸೇವೆಯ ಅವಕಾಶವನ್ನು ಮಾಡಿ ಕೊಟ್ಟಿದ್ದಾರೆ. ‘ಗುರುಸೇವೆ ಎಂದರೆ ಪ್ರತ್ಯಕ್ಷ ಧರ್ಮಸೇವೆಯೇ ಆಗಿದೆ, ಎಂಬ ಭಾವದಿಂದ ನಾವು ನಮಗೆ ದೊರಕಿದ ಪ್ರತಿಯೊಂದು ಸೇವೆಯನ್ನು ಮಾಡಬೇಕು.
೩. ‘ನಮ್ಮ ಗುರುಗಳು ಈಶ್ವರನೇ ಆಗಿದ್ದಾರೆ, ಎನ್ನುವ ಅರಿವನ್ನು ಇಟ್ಟುಕೊಂಡು ಪ್ರಯತ್ನಿಸೋಣ !
ದ್ವಾಪರಯುಗದಲ್ಲಿ ಶ್ರೀಕೃಷ್ಣನ ಕಡೆಗೆ ಯಾರೂ ಭಗವಂತ ನೆಂದು ನೋಡಲಿಲ್ಲ; ಶ್ರೀಕೃಷ್ಣನ ಅವತಾರ ಸಮಾಪ್ತವಾದ ಬಳಿಕ ಎಲ್ಲರಿಗೂ ಅದರ ಅರಿವಾಯಿತು. ಈಗ ಸಪ್ತರ್ಷಿಗಳು ನಮಗೆ ನಮ್ಮ ಗುರುಗಳಲ್ಲಿರುವ ಅವತಾರತ್ವವನ್ನು ಅರಿತುಕೊಳ್ಳುವ ಮತ್ತು ಅನುಭವಿಸುವ ದೃಷ್ಟಿಯನ್ನು ನೀಡುತ್ತಿದ್ದಾರೆ. ಗುರುದೇವರ ಪ್ರತಿಯೊಂದು ಕಾರ್ಯವನ್ನು ನೋಡಿದರೆ, ಅದರಲ್ಲಿ ಶ್ರೀಕೃಷ್ಣ ಮತ್ತು ಶ್ರೀರಾಮನ ಅವತಾರಿ ಕಾರ್ಯದ ಮಾದರಿ ಕಂಡು ಬರುತ್ತದೆ. ಅವರ ಅವತಾರದ ಲಕ್ಷಣಗಳು ನಮಗೆ ಅನುಭವಿಸಲು ಸಿಗುತ್ತವೆ. ‘ನಮ್ಮ ಗುರುಗಳು ಈಶ್ವರರಾಗಿದ್ದಾರೆ, ಎನ್ನುವ ಅರಿವನ್ನಿಟ್ಟುಕೊಂಡು ಪ್ರಯತ್ನಿಸೋಣ.
೪. ಗುರುಕೃಪೆಯ ಕವಚವಿರುವುದರಿಂದ ಸಾಧಕರಿಗೆ ಧರ್ಮಕಾರ್ಯದಲ್ಲಿ ವಿಜಯ ಪ್ರಾಪ್ತವಾಗುವುದು
ಗುರುಗಳು ಕಾನೂನುಗಳಿಗೆ ಸಂಬಂಧಿಸಿದ ಸೇವೆಗಳನ್ನು ಮಾಡಲು ಸಾಧಕ ನ್ಯಾಯವಾದಿಗಳನ್ನು ಗುರುಕಾರ್ಯದಲ್ಲಿ ಸಹಭಾಗಿಗಳನ್ನಾಗಿ ಮಾಡಿಕೊಂಡಿದ್ದಾರೆ. ಮಹಾಭಾರತದಲ್ಲಿ ಹೇಗೆ ಶ್ರೀಕೃಷ್ಣನ ಮಾರ್ಗದರ್ಶನದಂತೆ ಪಾಂಡವರು ಧರ್ಮಯುದ್ಧವನ್ನು ಗೆದ್ದರು ಮತ್ತು ಧರ್ಮಕ್ಕೆ ನ್ಯಾಯವನ್ನು ದೊರಕಿಸಿಕೊಟ್ಟರು, ಅದರಂತೆಯೇ ಈ ಕಲಿಯುಗದಲ್ಲಿ ಯಾವ ಧರ್ಮಯುದ್ಧವು ನಡೆದಿದೆ, ಅದರಲ್ಲಿ ಧರ್ಮಕ್ಕೆ ನ್ಯಾಯವನ್ನು ಒದಗಿಸಿಕೊಡಲು ಗುರುಗಳ ಪ್ರೇರಣೆಯಿಂದ ‘ಹಿಂದೂ ವಿಧಿಜ್ಞ ಪರಿಷತ್ತು ಸ್ಥಾಪನೆಗೊಂಡಿದೆ. ದೇವಸ್ಥಾನಗಳ ಸರಕಾರಿಕರಣ, ಈ ಧರ್ಮದ ಮೇಲೆ ಆಗಿರುವ ಆಘಾತದ ಮಾಧ್ಯಮದಿಂದ ಸೂಕ್ಷ್ಮದಲ್ಲಿನ ಅನಿಷ್ಟ ಶಕ್ತಿಗಳು ಚೈತನ್ಯದ ಸ್ರೋತಗಳ ಮೇಲೆಯೇ ಹಲ್ಲೆಗಳನ್ನು ಮಾಡುತ್ತಿವೆ. ಅದಕ್ಕಾಗಿ ನಾವು ದಾಖಲಿಸುವ ಅರ್ಜಿಗಳಿಗೆ, ಅವುಗಳ ವಿರುದ್ಧದ ಅಭಿಯಾನಗಳಿಗೆ, ಆಂದೋಲನಗಳಿಗೆ ಗುರುಕೃಪೆಯಿಂದ ಯಶಸ್ಸು ಸಿಗುತ್ತಿದೆ. ಈ ಘೋರ ಕಲಿಯುಗದಲ್ಲಿ ಚಿಕ್ಕ ಯಶಸ್ಸು ಕೂಡ ದೊಡ್ಡದೇ ಆಗಿರುತ್ತದೆ. ಸಮಾಜದಲ್ಲಿ ಅನೇಕ ಜನರು ಧರ್ಮಕಾರ್ಯವನ್ನು ಮಾಡುತ್ತಿದ್ದಾರೆ; ಆದರೆ ಅವರಿಗೆ ಸರಿಯಾದ ಮಾರ್ಗ ಗೊತ್ತಿಲ್ಲ. ಆದುದರಿಂದ ಜನರು ಅವರಿಗೆ ತೊಂದರೆಗಳನ್ನು ಕೊಡುತ್ತಾರೆ. ಸಾಧಕರ ಸುತ್ತಲೂ ಗುರುಕೃಪೆಯ ಕವಚ ಇರುವುದರಿಂದ ಸಾಧಕರಿಗೆ ಧರ್ಮಕಾರ್ಯದಲ್ಲಿ ಯಶಸ್ಸು ದೊರಕುತ್ತಿದೆ.
೫. ಮನಸ್ಸಿನಲ್ಲಿರುವ ಸಂಶಯ-ಕುಸಂಶಯಗಳನ್ನು ತ್ಯಜಿಸಿ ಶ್ರೀಕೃಷ್ಣಸ್ವರೂಪ ಗುರುಗಳ ಚರಣಗಳಲ್ಲಿ ಶರಣಾಗಬೇಕು !
ಮಹಾಭಾರತದ ಸಮಯದಲ್ಲಿ ‘ಕುರುಕ್ಷೇತ್ರವು ಯುದ್ಧಭೂಮಿಯಾಗಿತ್ತು. ಆದರೆ ಇಂದು ಸಂಪೂರ್ಣ ಪೃಥ್ವಿಯೇ ‘ಕುರುಕ್ಷೇತ್ರ, ಅಂದರೆ ಯುದ್ಧಭೂಮಿಯಾಗಿದೆ. ಇಂತಹ ಸ್ಥಿತಿಯಲ್ಲಿ ಧರ್ಮಯುದ್ಧವನ್ನು ಮಾಡಲು ಕಾರ್ಯನಿರತರಾಗಿರುವ ನ್ಯಾಯವಾದಿಗಳು ಧರ್ಮದ ಪರವಾಗಿ ನ್ಯಾಯವನ್ನು ದೊರಕಿಸಿಕೊಡಲು ಹೋರಾಡುವ ‘ಧರ್ಮಯೋಧರೇ ಆಗಿದ್ದಾರೆ. ಧರ್ಮದ ಬದಿಯಿಂದ ಹೋರಾಡುವ ಅರ್ಜುನನ ರಥದ ಸಾರಥ್ಯವನ್ನು ಸಾಕ್ಷಾತ್ ಶ್ರೀಕೃಷ್ಣನೇ ವಹಿಸಿದ್ದನು. ಅವನಿಗೆ ಯೋಗ್ಯ ಮಾರ್ಗವನ್ನು (ದಿಶೆಯನ್ನು) ತೋರಿಸಿದನು ಇಷ್ಟೇ ಅಲ್ಲ, ಯಾವಾಗ ಅರ್ಜುನನ ಮನಸ್ಸು ಅಸಂಖ್ಯಾತ ವಿಚಾರಗಳಿಂದ ತುಂಬಿಕೊಂಡಿತ್ತೋ, ಆಗ ಪ್ರತ್ಯಕ್ಷ ಗೀತೋಪದೇಶವನ್ನು ಮಾಡಿ ಶ್ರೀಕೃಷ್ಣನು ಅವನಿಗೆ ಧರ್ಮಯುದ್ಧ ಮಾಡಲು ಪ್ರವೃತ್ತಗೊಳಿಸಿದನು. ತನ್ನ ವಿಶ್ವರೂಪ ದರ್ಶನದಿಂದ ಅವನ ಎಲ್ಲ ಸಂಶಯಗಳನ್ನು ನಿವಾರಿಸಿದನು. ‘ನೀನು ಏನೂ ಮಾಡಬೇಕಾಗಿಲ್ಲ, ನಾನು ಮೊದಲೇ ಎಲ್ಲವನ್ನೂ ಮಾಡಿದ್ದೇನೆ, ಎಂದು ಹೇಳಿ ಕೇವಲ ಕರ್ಮವನ್ನು ಮಾಡಲು ಹೇಳಿದನು. ಅದರಂತೆ ಈ ಘೋರ ಕಲಿಯುಗದಲ್ಲಿ ಶ್ರೀಕೃಷ್ಣಸ್ವರೂಪ ಗುರುದೇವರು ಆಗಾಗ ಮಾರ್ಗದರ್ಶನ ಮಾಡಿ ನಮ್ಮ ಮನಸ್ಸಿನಲ್ಲಿರುವ ಎಲ್ಲ ಭ್ರಮೆ, ಸಂಶಯಗಳನ್ನು ದೂರಗೊಳಿಸಿ ನಮ್ಮನ್ನು ಮುಂದಕ್ಕೆ ಕರೆದೊಯ್ಯುತ್ತಿದ್ದಾರೆ.
೬. ಪಾಂಡವರಂತೆ ಸಾಧಕರು ತಮ್ಮನ್ನು ಧರ್ಮಸೇವೆಯಲ್ಲಿ ಸಮರ್ಪಿಸಿಕೊಳ್ಳಬೇಕು !
ಕೇವಲ ಅರ್ಜುನನ ರಥದ ಲಗಾಮು ಮಾತ್ರವಲ್ಲ, ಸಂಪೂರ್ಣ ಯುದ್ಧದ ಲಗಾಮು ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನ ಕೈಯಲ್ಲಿತ್ತು. ಅದರಂತೆ ನಾವೆಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕಾಗಿ ರುವುದೇನೆಂದರೆ, ಕಲಿಯುಗದ ಆಪತ್ಕಾಲದ, ಈ ಧರ್ಮಯುದ್ಧದ ಲಗಾಮು ಸಾಕ್ಷಾತ್ ಶ್ರೀಕೃಷ್ಣಸ್ವರೂಪ ಗುರುದೇವರ ಕೈಯಲ್ಲಿದೆ. ನಾವು ಕೇವಲ ನಿಮಿತ್ತ ಮಾತ್ರವಾಗಿದ್ದೇವೆ. ಮಾಡುವವರು ಮತ್ತು ಮಾಡಿಸಿಕೊಳ್ಳುವರು ಗುರುದೇವರೇ ಆಗಿದ್ದಾರೆ. ಗುರುಗಳ ಹೆಸರನ್ನು ಉಚ್ಚರಿಸಿದ ಕೂಡಲೇ ಅವರ ತತ್ತ್ವವು ಕಾರ್ಯನಿರತವಾಗಿ ಅದು ಎಲ್ಲರಿಗೂ ದೊರಕುತ್ತದೆ. ಆದುದರಿಂದ ಚಿಂತೆಯನ್ನು ಮಾಡದೇ ಮನಸ್ಸಿನಲ್ಲಿರುವ ಸಂಶಯ-ಕುಸಂಶಯಗಳನ್ನು ತ್ಯಜಿಸಿ ಅರ್ಜುನನಂತೆ ಶ್ರೀಕೃಷ್ಣಸ್ವರೂಪ ಗುರುದೇವರ ಚರಣಗಳಲ್ಲಿ ಶರಣಾಗಬೇಕು. ಈ ಕಲಿಯುಗದಲ್ಲಿ ಗುರುಗಳ ಕೃಪೆಯಿಂದ ನಡೆಯುತ್ತಿರುವ ಧರ್ಮಯುದ್ಧಕ್ಕೆ ನಾವು ಸಾಕ್ಷೀದಾರ ಜೀವಗಳಾಗಿದ್ದೇವೆ. ಪಾಂಡವರಂತೆ ನಾವು ಈ ಧರ್ಮಸೇವೆಯಲ್ಲಿ ನಮ್ಮನ್ನು ಸಮರ್ಪಿಸಿಕೊಳ್ಳೋಣ.
೭. ಗುರುದೇವರು ನಮ್ಮ ಜೀವನದ ಲಗಾಮನ್ನು ಸತತವಾಗಿ ತಮ್ಮ ಕೈಯಲ್ಲಿ ಹಿಡಿದುಕೊಂಡು ನಮ್ಮ ಜೀವನರಥವನ್ನು ಮುನ್ನಡೆಸಬೇಕು ಎಂದು ಅವರಿಗೆ ಶರಣಾಗೋಣ !
ಭಗವಂತನ ಕೈಯಿಂದ ನಮ್ಮ ಜೀವನದ ಲಗಾಮು ಬಿಟ್ಟುಹೋದರೆ, ನಮ್ಮ ಜೀವನ ಹುಚ್ಚರಂತೆ ಆಗಬಹುದು. ನಮಗೆ ಮಾರ್ಗ ಸಿಗದೇ ನಾವು ಅಧೋಗತಿಯ ಕಡೆಗೆ ಹೋಗಬಹುದು. ಆದುದರಿಂದ ನಮ್ಮ ಜೀವನದ ಮೇಲಿನ ಭಗವಂತನ ಲಗಾಮನ್ನು ಜಾರಲು ಬಿಡಬಾರದು. ಭಗವಂತನು, ಅಂದರೆ ಗುರುದೇವರು ನಮ್ಮ ಜೀವನದ ಲಗಾಮನ್ನು ಸತತವಾಗಿ ತಮ್ಮ ಕೈಯಲ್ಲಿ ಹಿಡಿದುಕೊಂಡು ನಮ್ಮ ಜೀವನರಥವನ್ನು ಮುನ್ನಡೆಸಬೇಕು, ಅದಕ್ಕಾಗಿ ನಾವು ಅರ್ಜುನನಂತೆ ಯಾವಾಗಲೂ ಶ್ರೀಕೃಷ್ಣಸ್ವರೂಪ ಗುರುದೇವರಿಗೆ ಶರಣಾಗೋಣ.
೮. ಸಂಪೂರ್ಣ ಸಮರ್ಪಿತ ಸಾಧನೆಯಾಗಲು ಜವಾಬ್ದಾರ ಸಾಧಕರಿಂದ ಮನಸ್ಸಿನಲ್ಲಿರುವ ಸಂಶಯಗಳನ್ನು ನಿವಾರಿಸಿಕೊಳ್ಳುವುದು ಆವಶ್ಯಕ !
ಯುದ್ಧ ಪ್ರಾರಂಭವಾಗುವ ಮೊದಲು ಅರ್ಜುನನು ತನ್ನ ಮನಸ್ಸಿನಲ್ಲಿರುವ ಸಂಶಯಗಳನ್ನು ಶ್ರೀಕೃಷ್ಣನಿಗೆ ಆತ್ಮನಿವೇದನೆಯ ಸ್ವರೂಪದಲ್ಲಿ ಹೇಳಿದನು. ಧರ್ಮಯುದ್ಧವನ್ನು ಗೆಲ್ಲುವ ಮೊದಲು ಮನಸ್ಸಿನ ಯುದ್ಧವನ್ನು ಗೆಲ್ಲುವುದು ಮಹತ್ವದ್ದಾಗಿದೆ. ಆದುದರಿಂದ ಅರ್ಜುನನಂತೆ ಮನಸ್ಸಿನಲ್ಲಿನ ವಿಚಾರಗಳನ್ನು, ಸಂಶಯಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಳ್ಳದೇ ಆಗಾಗ ಜವಾಬ್ದಾರ ಸಾಧಕರಿಂದ ಅವುಗಳನ್ನು ನಿವಾರಿಸಿಕೊಳ್ಳೋಣ. ಮನಸ್ಸಿನಲ್ಲಿ ಸಂಶಯ ಮತ್ತು ವಿಚಾರಗಳನ್ನು ಇಟ್ಟುಕೊಂಡು ಸಾಧನೆ ಮತ್ತು ಸೇವೆಯನ್ನು ಮಾಡಿದರೆ, ನಮಗೆ ನಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡು ಸೇವೆಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಸಾಧನೆಯ ಪೂರ್ಣ ಲಾಭವೂ ಆಗುವುದಿಲ್ಲ. ಆ ಸಂಶಯಗಳನ್ನು ನಾವು ಜವಾಬ್ದಾರ ಸಾಧಕರಿಗೆ ಕೇಳಿದರೆ, ಅವರ ಮಾಧ್ಯಮದಿಂದ ಜ್ಞಾನದಾತಾ ಶ್ರೀಕೃಷ್ಣನ ತತ್ತ್ವ, ಅಂದರೆ ಗುರುತತ್ತ್ವ ನಮಗಾಗಿ ಕಾರ್ಯನಿರತವಾಗಿ ನಮಗೆ ಮಾರ್ಗದರ್ಶನ ದೊರಕುವುದು.
೯. ಗುರುಗಳೇ ಎಲ್ಲವನ್ನೂ ಮಾಡುವವರಿದ್ದಾರೆ, ಆದುದರಿಂದ ಕರ್ತೃತ್ವವನ್ನು ತ್ಯಜಿಸಿ ಅವರ ಚರಣಗಳಲ್ಲಿ ಸಂಪೂರ್ಣ ಸಮರ್ಪಿಸಿಕೊಳ್ಳೋಣ !
ಧರ್ಮಯುದ್ಧವು ಶ್ರೀಕೃಷ್ಣಸ್ವರೂಪ ಗುರುದೇವರ ಕೈಯಲ್ಲಿಯೇ ಇದೆ. ಆದುದರಿಂದ ಎಲ್ಲವನ್ನೂ ಅವರೇ ಮಾಡುವವರಿದ್ದಾರೆ. ನಮ್ಮ ಗುರುಗಳ ವಿಶಾಲ ಧರ್ಮಕಾರ್ಯದಲ್ಲಿ ಸಂಪೂರ್ಣ ಸಮರ್ಪಿತಗೊಂಡು ಕಾರ್ಯವನ್ನು ಮಾಡುವಷ್ಟು ನಮ್ಮಲ್ಲಿ ಸಾಮರ್ಥ್ಯವಿಲ್ಲ. ಆದುದರಿಂದ ನಮ್ಮ ಕರ್ತೃತ್ವವನ್ನು ಸಂಪೂರ್ಣ ತ್ಯಾಗ ಮಾಡೋಣ. ‘ಮೋಕ್ಷಗುರುಗಳು ಎಲ್ಲರ ಪ್ರಗತಿಯನ್ನು ಮಾಡಿಸಿಕೊಳ್ಳುವವರೇ ಇದ್ದಾರೆ, ಎನ್ನುವ ಶ್ರದ್ಧೆಯನ್ನು ಜಾಗೃತವಾಗಿಡೋಣ. ಸಾಮರ್ಥ್ಯಶಾಲಿ ಗುರುಗಳ ಚರಣಗಳಲ್ಲಿ ಸಂಪೂರ್ಣ ಶರಣಾಗಿ ಸಮರ್ಪಿಸಿಕೊಳ್ಳೋಣ. ಬಳಿಕ ‘ಗುರುದೇವರು ನಮ್ಮ ಭಾರವನ್ನು ಹೇಗೆ ನಿಭಾಯಿಸುತ್ತಾರೆ ?, ‘ನಮ್ಮ ಜೀವನರಥ ಮತ್ತು ಸಾಧನಾರಥವನ್ನು ಹೇಗೆ ನಡೆಸುತ್ತಾರೆ ?, ‘ಅವರು ಈ ಅತ್ಯಂತ ಕಠಿಣ ಭಗಸಾಗರದಿಂದ ಮತ್ತು ಆಪತ್ಕಾಲದಿಂದ ನಮ್ಮನ್ನು ಹೇಗೆ ತೇಲಿಸಿಕೊಂಡು ಹೋಗುತ್ತಾರೆ ?, ಎನ್ನುವುದರ ಪ್ರತ್ಯಕ್ಷ ಅನುಭೂತಿಯನ್ನು ನಾವು ಪಡೆಯಬಹುದು.