– ಶ್ರೀ. ಸಾಗರ ಗರುಡ, ಪ್ರತಿನಿಧಿ, ಪ್ರಯಾಗರಾಜ

ಪ್ರಯಾಗರಾಜ, ಜನವರಿ ೨೧ (ಸುದ್ಧಿ.) – ಮಹಾಕುಂಭದಲ್ಲಿ ಹಿಂದೂ ಜನಾಗೃತಿ ಸಮಿತಿಯ ವತಿಯಿಂದ ಸೆಕ್ಟರ್ ೬ ರಲ್ಲಿ ಹಿಂದೂ ರಾಷ್ಟ್ರ ಪ್ರದರ್ಶನವನ್ನು ಆಯೋಜಿಸಲಾಗಿದೆ. ಇಲ್ಲಿ, ದೇಶ-ವಿದೇಶಗಳಲ್ಲಿ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯಗಳು, ಲವ್ ಜಿಹಾದ್, ಹಲಾಲ್ ಜಿಹಾದ್, ಭೂಮಿ ಜಿಹಾದ್, ಗೋ ರಕ್ಷಣೆ ಮತ್ತು ಗೋ ಸಾಕಣೆ, ಹಿಂದೂಗಳ ಸಂಘಟನೆ ಮತ್ತು ಹಿಂದೂಗಳಿಗೆ ಧರ್ಮಶಿಕ್ಷಣ ಏಕೆ ಬೇಕು ? ಮತ್ತು ಹಿಂದೂ ರಾಷ್ಟ್ರದ ಅಗತ್ಯ ಇದರ ಬಗ್ಗೆ ಜಾಗೃತಿ ಮೂಡಿಸಲು ಫಲಕಗಳನ್ನು ಹಾಕಲಾಗಿದೆ. ಹಿಂದೂಗಳ ಧರ್ಮಾಚರಣೆಯ ಬಗ್ಗೆ ಜ್ಞಾನವನ್ನು ಹೆಚ್ಚಿಸುವ ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ಜಾಗೃತಿ ಮೂಡಿಸುವ ಗ್ರಂಥ ಪ್ರದರ್ಶನವೂ ಇದೆ.
೧. ಹಿಂದೂ ಧರ್ಮದ ಮೇಲಿನ ದಾಳಿಗಳು, ದೇವಾಲಯ ಸಂಸ್ಕೃತಿಯ ರಕ್ಷಣೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಗಳಂತಹ ಅನೇಕ ವೀಡಿಯೊಗಳನ್ನು ಇಲ್ಲಿನ ವೀಡಿಯೊ ಕಕ್ಷೆಯಲ್ಲಿ ತೋರಿಸಲಾಗುತ್ತಿದೆ. ಈ ಪ್ರದರ್ಶನಕ್ಕೆ ಯುವಕರು-ಯುವತಿಯರು, ಭಕ್ತರು ಮತ್ತು ಆಧ್ಯಾತ್ಮಿಕ ಸಂಸ್ಥೆಗಳ ಪ್ರತಿನಿಧಿಗಳಿಂದ ಉತ್ಸಾಹಭರಿತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
೨. ‘ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿದರೆ ಮಾತ್ರ ಹಿಂದೂಗಳು ಸುರಕ್ಷಿತವಾಗಿರುತ್ತಾರೆ’, ಎಂದು ಅನೇಕ ಭಕ್ತರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಯುವಕರು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದಲ್ಲಿ ಸಹಭಾಗಿಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ಕ್ಷಣಚಿತ್ರಗಳು
ಸಮಿತಿಯ ಶಿಬಿರದ ಹೊರಗೆ ಹಾಕಿದ ಭಗವಾನ್ ಶ್ರೀಕೃಷ್ಣ, ಆದಿ ಶಂಕರಾಚಾರ್ಯ, ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ ಪ್ರತಾಪ ಮತ್ತು ಸ್ವಾಮಿ ವಿವೇಕಾನಂದರ ಛಾಯಾಚಿತ್ರದೊಂದಿಗೆ ’ಜಯತು ಜಯತು ಹಿಂದೂ ರಾಷ್ಟ್ರ’ ಮತ್ತು ’ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ಜಾಗೃತಿ ಮೂಡಿಸುವ ಗ್ರಂಥ ಪ್ರದರ್ಶನ’ ಎಂಬ ಫಲಕಗಳೆಡೆ ಆಕರ್ಷಿತರಾಗಿ ಹೆಚ್ಚಿನ ಸಂಖ್ಯೆಯ ಭಕ್ತರು ಪ್ರದರ್ಶನವನ್ನು ನೋಡಲು ಬರುತ್ತಿದ್ದಾರೆ.