ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿದ ನಂತರವೇ ಭಾರತದಲ್ಲಿರುವ ಹಿಂದೂಗಳು ಸುರಕ್ಷಿತವಾಗಿರುತ್ತಾರೆ ! – ಸಂತ ಶ್ರೀ ಬಾಲಕ ಯೋಗೇಶ್ವರ್ ದಾಸ್ ಮಹಾರಾಜ್, ದಿಗಂಬರ ಅಖಾಡ

ಶ್ರೀ. ಸಾಗರ ಗರುಡ್, ಪ್ರತಿನಿಧಿ

ಪ್ರಯಾಗರಾಜ್, ಜನವರಿ 20, (ಸುದ್ದಿ.) – ನಾನು ಸೇರಿದಂತೆ ಎಲ್ಲಾ ಭಾರತೀಯರು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕೆಂದು ಬಯಸುತ್ತೇವೆ. ಹಿಂದೂ ರಾಷ್ಟ್ರವಾದರೆ ಯಾವುದೇ ಹಾನಿಯಾಗುವುದಿಲ್ಲ. ಭಾರತವನ್ನು ಹಿಂದೂ ರಾಷ್ಟ್ರವೆಂದು ಸಾಂವಿಧಾನಿಕವಾಗಿ ಘೋಷಿಸಲು ಅಗತ್ಯವಾದ ನಿಯಮಗಳನ್ನು ಸಿದ್ಧಪಡಿಸುವುದು ಅವಶ್ಯಕವಾಗಿದೆ. ಹಿಂದೂಗಳಿಗೆ ಭಾರತ ಬಿಟ್ಟರೆ ಬೇರೆ ದೇಶವಿಲ್ಲ. ಭಾರತದಲ್ಲಿ ಹಿಂದೂಗಳನ್ನು ಎಲ್ಲಾ ಕಡೆಯಿಂದಲೂ ದುರ್ಬಲ ಮಾಡಿದರೆ, ಹಿಂದೂ ಸಮಾಜ ನಾಶವಾಗುತ್ತದೆ ಮತ್ತು ಅವರ ಕಥೆಗಳು ಮಾತ್ರ ಉಳಿಯುತ್ತವೆ. ಆದ್ದರಿಂದ, ಎಲ್ಲಾ ಸಾಧು-ಸಂತರು ಮತ್ತು ಹಿಂದೂ ಸಮಾಜವು ತಮ್ಮನ್ನು ತಾವು ಬಲಪಡಿಸಿಕೊಳ್ಳಲು ಹಿಂದೂ ರಾಷ್ಟ್ರವನ್ನು ಒತ್ತಾಯಿಸುತ್ತಿದ್ದರೆ, ಅದರಲ್ಲಿ ಯಾವುದೇ ತಪ್ಪಿಲ್ಲ. ಹಿಂದೂ ರಾಷ್ಟ್ರ ಘೋಷಣೆಯ ನಂತರವೇ ಭಾರತದಲ್ಲಿ ಹಿಂದೂಗಳು ಸುರಕ್ಷಿತವಾಗಿರುತ್ತಾರೆ ಎಂದು ದಿಗಂಬರ ಅಖಾರದ ಸಂತಶ್ರೀ ಬಾಲಕ ಯೋಗೇಶ್ವರದಾಸ್ ಮಹಾರಾಜ್ ಅವರು ಹೇಳಿದ್ದಾರೆ. ಮಹಾಕುಂಭಮೇಳದ ಸಮಯದಲ್ಲಿ ದೈನಿಕ ‘ಸನಾತನ ಪ್ರಭಾತ’ ನ ಪ್ರತಿನಿಧಿಗಳು ಸಂತ ಶ್ರೀ ಬಾಲಕ ಯೋಗೇಶ್ವರ ದಾಸ್ ಮಹಾರಾಜರನ್ನು ಅವರ ಆಶ್ರಮದಲ್ಲಿ ಭೇಟಿ ಮಾಡಿದರು.

ಈ ಸಂದರ್ಭದಲ್ಲಿ, ಸನಾತನ ಪ್ರಭಾತಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಸಂತಶ್ರೀ ಬಾಲಕ ಯೋಗೇಶ್ವರ ದಾಸ್ ಮಹಾರಾಜ್ ಅವರು ಧರ್ಮ ಸಂಸತ್ತಿನಲ್ಲಿ ಹಿಂದೂ ಹಿತಾಸಕ್ತಿಗಳನ್ನು ಚರ್ಚಿಸುವುದು, ವಕ್ಫ್ ಕಾಯ್ದೆಯನ್ನು ರದ್ದುಗೊಳಿಸುವುದು ಮತ್ತು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. “ಮಹಾಕುಂಭ ಕ್ಷೇತ್ರದಲ್ಲಿ ಆಯೋಜಿಸಲಾದ ಧರ್ಮ ಸಂಸತ್ತಿನಲ್ಲಿ, ಎಲ್ಲಾ ಸಂತರು ಮತ್ತು ಮಹಂತರು ಸನಾತನ ಹಿಂದೂ ಧರ್ಮ ಮತ್ತು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲಿದ್ದಾರೆ.” “ಈ ನಿಟ್ಟಿನಲ್ಲಿ ಸರಕಾರಕ್ಕೆ ಅಗತ್ಯ ಬೇಡಿಕೆಗಳನ್ನು ಸಹ ಸಲ್ಲಿಸಲಾಗುವುದು” ಎಂದು ಸಂತ ಶ್ರೀ ಬಾಲಕ ಯೋಗೇಶ್ವರ ದಾಸ್ ಮಹಾರಾಜ್ ಹೇಳಿದರು.

ಹುತಾತ್ಮರಾದ ಸೈನಿಕರಿಗೆ ಅತಿವಿಷ್ಣು ಮಹಾಯಜ್ಞ !

ಸಂತಶ್ರೀ ಬಾಲಕ ಯೋಗೇಶ್ವರ್ ದಾಸ್ ಮಹಾರಾಜ

ಭಾರತದ ಗಡಿಗಳನ್ನು ಬಲಪಡಿಸಲು, ಗಡಿಯಲ್ಲಿರುವ ಭಾರತೀಯ ಪಡೆಗಳನ್ನು ರಕ್ಷಿಸಲು ಮತ್ತು ಅವರಿಗೆ ಶಕ್ತಿ ಸಿಗಲು ಸಂತ ಶ್ರೀ ಬಾಲಕ ಯೋಗೇಶ್ವರ ದಾಸ್ ಮಹಾರಾಜ್ ಇವರು ಅತಿವಿಷ್ಣು ಯಾಗವನ್ನು ಆಯೋಜಿಸಿದ್ದಾರೆ. ಇಲ್ಲಿ, ಹುತಾತ್ಮರಾದ ಸೈನಿಕರಿಗಾಗಿ 108 ಯಜ್ಞ ಕುಂಡಗಳಲ್ಲಿ ನಿಯಮಿತವಾಗಿ ಆಹುತಿಗಳನ್ನು ನೀಡಲಾಗುತ್ತಿದೆ. ಇಲ್ಲಿ, ದೇಶ ಮತ್ತು ವಿದೇಶಗಳ ಭಕ್ತರು ಸೈನಿಕರಿಗೆ ಗೌರವದ ಸಂಕೇತವಾಗಿ ಆಹುತಿಗಳನ್ನು ಅರ್ಪಿಸಲು ಒತ್ತಾಯಿಸಲಾಗುತ್ತದೆ. ಇಲ್ಲಿ, ಹುತಾತ್ಮರಾದ ಸೈನಿಕರ ಛಾಯಾಚಿತ್ರಗಳನ್ನು ಯಜ್ಞಶಾಲೆಯ ಎಲ್ಲಾ ಬದಿಗಳಲ್ಲಿ ಇರಿಸಲಾಗಿದೆ. ಶಿಬಿರದ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ. ಕಳೆದ 22 ವರ್ಷಗಳಿಂದ ಸಂತ ಶ್ರೀ ಬಾಲಕ ಯೋಗೇಶ್ವರ ದಾಸ್ ಮಹಾರಾಜ್ ಅವರು ಹುತಾತ್ಮ ಸೈನಿಕರಿಗಾಗಿ ಯಜ್ಞ ಯಾಗವನ್ನು ನಡೆಸುತ್ತಿದ್ದಾರೆ. ಇದು ಅವರ 43ನೇ ಮಹಾಯಜ್ಞವಾಗಿದೆ. ಹುತಾತ್ಮ ಸೈನಿಕರ ಕುಟುಂಬಗಳು ಸಹ ಈ ಯಜ್ಞಶಾಲೆಗೆ ಭೇಟಿ ನೀಡಿ ಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಭಾರತೀಯ ಸೇನೆಗೆ ಸಂತ ಶ್ರೀ ಬಾಲಕ ಯೋಗೇಶ್ವರ್ ದಾಸ್ ಮಹಾರಾಜರ ಕಾರ್ಯ !

ಸಂತ ಶ್ರೀ ಬಾಲಕ ಯೋಗೇಶ್ವರ ದಾಸ್ ಮಹಾರಾಜರು ದೇಶದ ಗಡಿಗೆ ಹೋಗಿ ಸೈನಿಕರನ್ನು ಭೇಟಿ ಮಾಡಿ ಅವರ ಮನೋಸ್ಥೈರ್ಯವನ್ನು ಹೆಚ್ಚಿಸಲು ಹೋಗುತ್ತಾರೆ. ಅವರು ದೇಶದ ಎಲ್ಲಾ ಗಡಿಗಳಲ್ಲಿ ಹುತಾತ್ಮರಾದ ಸೈನಿಕರಿಗಾಗಿ ಮಹಾಯಜ್ಞವನ್ನು ಮಾಡಿದ್ದಾರೆ. ೨೦೦೬ ರಲ್ಲಿ, ಕಾರ್ಗಿಲ್‌ನಲ್ಲಿ ಹುತಾತ್ಮರಾದ ಸೈನಿಕರಿಗಾಗಿ ೭೫೦ ವಿದ್ವಾಂಸರೊಂದಿಗೆ ೧೦೮ ಕುಂಡಿ ಯಜ್ಞವನ್ನು ನಮಾಡಿದ್ದರು. ಈ ಸಂದರ್ಭದಲ್ಲಿ ಹುತಾತ್ಮ ಸೈನಿಕರ ಕುಟುಂಬಸ್ಥರು ಉಪಸ್ಥಿತರಿದ್ದರು.

ಸ್ವತಂತ್ರ ಪಾಕಿಸ್ತಾನ ರಚನೆಯಾದ ನಂತರ ವಕ್ಫ್ ಕಾಯ್ದೆಯ ಅಗತ್ಯವೇನು ?

ವಕ್ಫ್ ಬೋರ್ಡ್‌ನ ಬಗ್ಗೆ ಬಾಲಕ ಯೋಗೇಶ್ವರ್ ದಾಸ್ ಮಹಾರಾಜ್ ಇವರು, “ಭಾರತ ವಿಭಜನೆಯಾಗಿ ಪಾಕಿಸ್ತಾನ ಸೃಷ್ಟಿಯಾದಾಗ, ಎಲ್ಲಾ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗುವುದು ನಿರೀಕ್ಷಿಸಲಾಗಿತ್ತು”. ಮುಸ್ಲಿಮರಿಗೆ ಪ್ರತ್ಯೇಕ ಪ್ರಾಂತ್ಯ ನೀಡಿದ ನಂತರ, ಮುಸ್ಲಿಮರಿಗೆ ಭಾರತದಲ್ಲಿ ಯಾವುದೇ ಭೂಮಿಯ ಮೇಲೆ ಹಕ್ಕು ಸಾಧಿಸುವ ಹಕ್ಕಿಲ್ಲ. ವಿಭಜನೆಯ ನಂತರ ಭಾರತದಲ್ಲಿ ಉಳಿದುಕೊಂಡ ಮುಸ್ಲಿಮರ ಕಲ್ಯಾಣಕ್ಕಾಗಿ ವಕ್ಫ್ ಬೋರ್ಡ್‌ಅನ್ನು ಸ್ಥಾಪಿಸಲಾಯಿತು” ಎಂದು ಹೇಳಿದರು.