ಸಾಧಕರ ಮೇಲೆ ಬಂದಿರುವ ಕೆಟ್ಟ ಶಕ್ತಿಗಳ ಆವರಣ ತೆಗೆಯುವ ಲಾಭದಾಯಕ ಪದ್ಧತಿ !

ಕೆಟ್ಟ (ಅನಿಷ್ಟ) ಶಕ್ತಿಗಳ ತೊಂದರೆಯಿಂದ ಸಾಧಕರ ಮೇಲೆ ತುಂಬಾ ತೊಂದರೆದಾಯಕ ಆವರಣ ಬರುತ್ತದೆ. ಅದನ್ನು ನಿಯಮಿತವಾಗಿ ತೆಗೆಯುವುದು ಆವಶ್ಯಕವಾಗಿರುತ್ತದೆ. ಆವರಣವನ್ನು ತೆಗೆಯುವುದರಿಂದ ಸಾಧಕರಿಗಾಗುವ ಆಧ್ಯಾತ್ಮಿಕ ತೊಂದರೆಗಳು ಕೆಲವೊಂದು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.

ರೋಗಗಳನ್ನು ಗುಣಪಡಿಸಲು ಆವಶ್ಯಕವಾದ ದೇವತಾತತ್ತ್ವಗಳ ನಾಮಜಪಗಳು

‘ಯಾವುದಾದರೊಂದು ರೋಗವನ್ನು ಗುಣಪಡಿಸಲು ದುರ್ಗಾದೇವಿ, ರಾಮ, ಕೃಷ್ಣ, ದತ್ತ, ಗಣಪತಿ, ಮಾರುತಿ ಮತ್ತು ಶಿವ ಈ ೭ ಮುಖ್ಯ ದೇವತೆಗಳ ಪೈಕಿ ಯಾವ ದೇವತೆಗಳ ತತ್ತ್ವವು ಎಷ್ಟು ಪ್ರಮಾಣದಲ್ಲಿ ಆವಶ್ಯಕವಾಗಿದೆ ?’, ಎಂದು ಧ್ಯಾನದಲ್ಲಿ ಕಂಡು ಹಿಡಿದು ನಾನು ಕೆಲವು ರೋಗ ನಿವಾರಣೆಗಾಗಿ ಜಪವನ್ನು ತಯಾರಿಸಿದೆನು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಮತ್ತು ಮಲ್ಲಿಗೆ ಹೂವುಗಳ ದೈವೀ ಸಂಬಂಧ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಆಶ್ರಮಕ್ಕೆ ಹಿಂತಿರುಗುವ ಸಮಯದಲ್ಲಿಯೇ ಅಲ್ಲಿನ ಮಲ್ಲಿಗೆಯ ಗಿಡದಲ್ಲಿ ಅಪಾರ ಹೂವುಗಳು ಅರಳುವುದು

ಮಹರ್ಷಿಗಳು ನಾಡಿಪಟ್ಟಿಯಲ್ಲಿ ಹೇಳಿದಂತೆ ‘೨೦೧೫ ರಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಭಾರತದಲ್ಲೆಲ್ಲ ಪ್ರವಾಸ ಮಾಡುತ್ತಿದ್ದಾರೆ. ಅವರು ಮಹರ್ಷಿಗಳು ಆಜ್ಞೆಯನ್ನು ನೀಡಿದ ನಂತರ ೫-೬ ತಿಂಗಳ ನಂತರ ೧೦-೧೨ ದಿನಗಳಿಗಾಗಿ ಗೋವಾದ ರಾಮನಾಥಿ ಆಶ್ರಮಕ್ಕೆ ಬರುತ್ತಾರೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಉಗುರುಗಳು ಹಳದಿಯಾಗುವುದು, ಅವರ ಉಗುರುಗಳು ನಮ್ಯವಾಗುವುದು

ಅಧ್ಯಾತ್ಮದಲ್ಲಿ ನಮ್ಮ ಪ್ರಗತಿಯಾದ ಹಾಗೆ, ನಮ್ಮಲ್ಲಿ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳ ಪೈಕಿ ಹೆಚ್ಚೆಚ್ಚು ಉಚ್ಚ ತತ್ತ್ವಗಳ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ. ಅದರಂತೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರಲ್ಲಿ ವಾಯುತತ್ತ್ವವು ಹೆಚ್ಚಾಗಿದೆ.

ದ್ರಷ್ಟಾರ ಸಂತರಾದ ಪರಾತ್ಪರ ಗುರು ಡಾ. ಆಠವಲೆಯವರು ಕೇವಲ ‘ಹಿಂದೂ ರಾಷ್ಟ್ರ ಬರುವುದು ಎಂದು ಹೇಳುವುದಿಲ್ಲ, ಅದಕ್ಕಾಗಿ ಪ್ರಯತ್ನವನ್ನೂ ಮಾಡುತ್ತಾರೆ !

‘ಹಿಂದೂ ರಾಷ್ಟ್ರವೆಂದರೆ ಕೇವಲ ಹಿಂದೂಗಳ ರಾಷ್ಟ್ರವಲ್ಲ, ‘ಧರ್ಮಾಚರಣಿ, ನೀತಿವಂತ ಮತ್ತು ರಾಷ್ಟ್ರಹಿತದಕ್ಷ ಪ್ರಜೆಗಳು ಮತ್ತು ರಾಷ್ಟ್ರಹಿತ ದಕ್ಷ ರಾಜಕಾರಣಿಗಳು ಇರುವ ರಾಜ್ಯ’, ಎಂಬ ಪರಿಕಲ್ಪನೆಯನ್ನು ಮಂಡಿಸಿದ್ದಾರೆ.

ಮನುಷ್ಯನಿಗೆ ಎಷ್ಟೇ ಜ್ಞಾನವಿದ್ದರೂ, ‘ಆ ಜ್ಞಾನವನ್ನು ಹೇಗೆ ಉಪಯೋಗಿಸಬೇಕು ?’, ಎಂಬುದನ್ನು ಅಧ್ಯಾತ್ಮವೇ ಕಲಿಸುತ್ತದೆ !

ಮನೋಲಯ ಮತ್ತು ಬುದ್ಧಿಲಯವಾಗಿದ್ದರೆ, ಅವನಿಗೆ ಭಗವಂತನೇ ‘ಯಾವ ಜ್ಞಾನವನ್ನು ಉಪಯೋಗಿಸಬಹುದೆಂದು’ ಸೂಚಿಸುತ್ತಾನೆ ಹಾಗೆ ‘ಯಾವುದಾದರೊಂದು ಪ್ರಸಂಗದಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಕು ?’, ಎಂಬುದನ್ನೂ ಭಗವಂತನೇ ಸೂಚಿಸುತ್ತಾನೆ.

ಮನುಷ್ಯ ಜನ್ಮದ ಮಹತ್ವವನ್ನು ತಿಳಿದು ಮನಃಶಾಂತಿ ಪಡೆಯಿರಿ !

೮೪ ಲಕ್ಷ ಯೋನಿಗಳಿಂದ ತಿರುಗಿದ ನಂತರ ಯಾವುದಾದರೊಂದು ಜೀವಕ್ಕೆ ಮನುಷ್ಯಜನ್ಮವು ದೊರಕುತ್ತದೆ. ಇದರ ಅರ್ಥವು ಲಕ್ಷಗಟ್ಟಲೆ ವರ್ಷಗಳು ಕಳೆದ ನಂತರ ಒಳ್ಳೆಯ ಕರ್ಮವನ್ನು ಮಾಡಲು, ಅಂದರೆ ಸತ್ಕರ್ಮಕ್ಕಾಗಿ ಮತ್ತು ಮೋಕ್ಷಪ್ರಾಪ್ತಿಗಾಗಿ ದುರ್ಲಭವಾಗಿರುವ ಮನುಷ್ಯ ಜನ್ಮವು ದೊರಕಿರುತ್ತದೆ.

ಯದ್ಧಕಾಲದಲ್ಲಿ ನೆರವಾಗುವ ಹಾಗೂ ಆಪತ್ಕಾಲದಿಂದ ಬದುಕುಳಿಸುವ ಈ ಕೃತಿಯನ್ನು ಈಗಿನಿಂದಲೇ ಮಾಡಿರಿ !

‘ರಷ್ಯಾ-ಉಕ್ರೇನ್ ನಡುವೆ ಯುದ್ಧ ಆರಂಭವಾಗಿದೆ. ಉಕ್ರೇನ್‌ನ್ನಿನ ಜನರು ‘ಯುದ್ಧದ ಬೇಗೆ ಹೇಗಿರುತ್ತದೆ ?, ಎಂಬುದು ಅನುಭವಿಸುತ್ತಿರುವ ಬಗ್ಗೆ ನಾವು ಪ್ರತಿದಿನ ಬರುವ ವಾರ್ತೆಗಳಲ್ಲಿ ಓದುತ್ತಿದ್ದೇವೆ. ಮುಂದೆ ಈ ಯುದ್ಧದಲ್ಲಿ ಇತರ ದೇಶಗಳೂ ಸೇರಿಕೊಂಡರೆ ಮೂರನೇ ಮಹಾಯುದ್ಧ ಆರಂಭವಾಗಲು ಹೆಚ್ಚು ಸಮಯ ತಗಲುವುದಿಲ್ಲ.

ವ್ಯಕ್ತಿಗಾಗುವ ಆಧ್ಯಾತ್ಮಿಕ ತೊಂದರೆ ದೂರವಾಗಲು ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಮಾಡುವುದು ಆವಶ್ಯಕ !

ಮನುಷ್ಯನ ಜೀವನದಲ್ಲಿ ಬರುವ ಶೇ. ೮೦ ರಷ್ಟು ಸಮಸ್ಯೆಗಳು ಆಧ್ಯಾತ್ಮಿಕ ಕಾರಣಗಳಿಂದ ಬಂದಿರುತ್ತವೆ. ಈ ಸಮಸ್ಯೆಗಳಲ್ಲಿ ಶಾರೀರಿಕ ಮತ್ತು ಮಾನಸಿಕ ರೋಗಗಳೂ ಬರುತ್ತವೆ. ಈ ರೋಗಗಳ ಕಾರಣ ಶೇ. ೮೦ ರಷ್ಟು ಆಧ್ಯಾತ್ಮಿಕವಾಗಿರುವುದರಿಂದ ಈ ರೋಗಗಳು ಮುಖ್ಯವಾಗಿ ಆಧ್ಯಾತ್ಮಿಕ ಸ್ತರದ ಉಪಾಯಗಳಿಂದಲೇ ಗುಣವಾಗಬಹುದಾಗಿರುತ್ತವೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಉಪಯೋಗಿಸುತ್ತಿರುವ ‘ಲ್ಯಾಪಟಾಪ್’ನ ‘ಸ್ಟಿಕ್ಕರ್’ನ ಮೇಲೆ ಬಿದ್ದ ಪ್ರಕಾಶದಿಂದ ‘ಓಂ’ನ ಪ್ರತಿಬಿಂಬ ಪ್ರತಿಫಲಿಸುವುದು

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಈಶ್ವರನ ಜ್ಞಾನವನ್ನು ಗ್ರಹಿಸುವ ಸೇವೆಯನ್ನು ದೀರ್ಘಕಾಲದಿಂದ ಮಾಡುತ್ತಿರುವುದರಿಂದ ಆ ‘ಲ್ಯಾಪ್‌ಟಾಪ್’ನಲ್ಲಿ ‘’ ತತ್ತ್ವ ಬಂದಿದೆ. ಈಶ್ವರೀ ಜ್ಞಾನ ಗ್ರಹಿಸುವುದು, ಇದು ಶಬ್ದಬ್ರಹ್ಮದ ಸಾಧನೆಯಾಗಿದೆ. ಶಬ್ದಗಳೂ ಕೊನೆಯಲ್ಲಿ ‘ಓಂ’ ಕಾರದಲ್ಲಿ ವಿಲೀನವಾಗುತ್ತವೆ.