ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಉಗುರುಗಳು ಹಳದಿಯಾಗುವುದು, ಅವರ ಉಗುರುಗಳು ನಮ್ಯವಾಗುವುದು

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಉಗುರುಗಳಲ್ಲಾಗಿರುವ ಬುದ್ದಿ ಗಮ್ಯ ಬದಲಾವಣೆ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಸಾಧನೆಯಿಂದ ಆಧ್ಯಾತ್ಮಿಕ ಉನ್ನತಿಯಾಗತೊಡಗಿದಾಗ ವ್ಯಕ್ತಿಯ ದೇಹ ಮತ್ತು ಅವನು ಉಪಯೋಗಿಸುವ ವಸ್ತುಗಳಲ್ಲಿಯೂ ದೈವೀ ಪರಿವರ್ತನೆ ಕಂಡು ಬರುತ್ತದೆ. ಅವುಗಳ ಮೇಲೆ ಮೂಡಿದ ಶುಭಚಿಹ್ನೆಗಳು ವ್ಯಕ್ತಿಯಲ್ಲಿ ಹೆಚ್ಚಾಗುತ್ತಿರುವ ದೇವತ್ವದ ಅನುಭೂತಿಯನ್ನು ನೀಡುತ್ತದೆ. ಸನಾತನದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರ ಕೈಗಳ ಉಗುರುಗಳಲ್ಲಿ ಬುದ್ಧಿಗೆ ಮಿರಿದ ದೈವೀ ಪರಿವರ್ತನೆಯ ಶಾಸ್ತ್ರವನ್ನು ಲೇಖನದ ಮೂಲಕ ನೋಡೋಣ.

ಸದ್ಗುರು (ಡಾ.) ಮುಕುಲ ಗಾಡಗೀಳ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಲ್ಲಿನ ವಾಯುತತ್ತ್ವದಿಂದ ಅವರ ಉಗುರುಗಳಿಗೆ ಬಹಳ ನಮ್ಯತೆ ಬಂದಿರುವುದು

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ತರ್ಜನಿ ಬೆರಳುಗಳ ಎರಡು ಛಾಯಾಚಿತ್ರಗಳನ್ನು ನೀಡಲಾಗಿದೆ. ಮೊದಲ ಛಾಯಾಚಿತ್ರದಲ್ಲಿ ಅವರು ತಮ್ಮ ತರ್ಜನಿಯ ಬೆಳೆದ ಉಗುರನ್ನು ಕೆಳಗೆ ತಾಗಿಸಿದ್ದಾರೆ ಮತ್ತು ಎರಡನೇಯ ಛಾಯಾಚಿತ್ರದಲ್ಲಿ ತರ್ಜನಿಯ ಬೆಳೆದ ಉಗುರು ಸಹಜವಾಗಿ ಮಡಚಿರುವುದು ಕಾಣಿಸುತ್ತದೆ.

ಈ ಛಾಯಾಚಿತ್ರಗಳಿಂದ, ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ’ರ ಉಗುರುಗಳಿಗೆ ಕೋಮಲತೆ ಬಂದಿದೆ ಎಂದು ಗಮನಕ್ಕೆ ಬರುತ್ತದೆ. ಅವರಲ್ಲಿನ ವಾಯುತತ್ತ್ವದಿಂದ ಅವುಗಳಿಗೆ ನಮ್ಯತೆ ಬಂದಿದೆ. ಅಧ್ಯಾತ್ಮದಲ್ಲಿ ನಮ್ಮ ಪ್ರಗತಿಯಾದ ಹಾಗೆ, ನಮ್ಮಲ್ಲಿ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳ ಪೈಕಿ ಹೆಚ್ಚೆಚ್ಚು ಉಚ್ಚ ತತ್ತ್ವಗಳ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ. ಅದರಂತೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರಲ್ಲಿ ವಾಯುತತ್ತ್ವವು ಹೆಚ್ಚಾಗಿದೆ. ಶರೀರದಲ್ಲಿ ವಾಯುತತ್ತ್ವವು ಹೆಚ್ಚಾಗುವುದರಿಂದ ಆಗುವ ಇನ್ನೊಂದು ಪರಿವರ್ತನೆ ಎಂದರೆ ಚರ್ಮವು ಮೃದುವಾಗುತ್ತದೆ, ಹಾಗೆಯೇ ಆನಂದ ಮತ್ತು ಪ್ರೀತಿ ಹೆಚ್ಚಾಗುವುದರಿಂದ ಉಗುರು ಮತ್ತು ಚರ್ಮ ಗುಲಾಬಿಯಾಗುತ್ತವೆ.

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿ.ಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ.

ತಜ್ಞರು, ಅಧ್ಯಯನಕಾರರು ಮತ್ತು ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡುವವರಿಗೆ ವಿನಂತಿ !

‘ಸಂತರ ದೇಹ ಮತ್ತು ಅವರ ಬಳಕೆಯಲ್ಲಿನ ವಸ್ತುಗಳಲ್ಲಿ ಬುದ್ಧಿಗೆ ಮೀರಿದ ಪರಿವರ್ತನೆಗಳ ಬಗ್ಗೆ ಸಂಶೋಧನೆಯನ್ನು ಮಾಡಿ ಅವುಗಳ ಕಾರ್ಯಕಾರಣಭಾವವನ್ನು ಕಂಡು ಹಿಡಿಯಲು ಸಾಧಕರು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ

೧. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಬಲ ಮತ್ತು ಎಡ ಕೈಗಳ ಉಗುರುಗಳ ಬಣ್ಣ ತಿಳಿಹಳದಿಯಾಗುವ ಹಿಂದಿನ  ಕಾರಣವೇನು ?

೨. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಉಗುರುಗಳಿಗೆ ಬಹಳ ನಮ್ಯತೆ ಬಂದಿರುವ ಹಿಂದಿನ ಕಾರಣವೇನು ?

ಈ ಬಗ್ಗೆ ತಜ್ಞರು, ಅಧ್ಯಯನಕಾರರು, ಈ ಬಗೆಗಿನ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಮತ್ತು ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆಯನ್ನು ಮಾಡುವವರ ಸಹಾಯ ನಮಗೆ ಲಭಿಸಿದರೆ ನಾವು ಕೃತಜ್ಞರಾಗಿರುವೆವು.

– ವ್ಯವಸ್ಥಾಪಕರು, ಸನಾತನ ಆಶ್ರಮ, ರಾಮನಾಥಿ, ಗೋವಾ.

ಸಂಪರ್ಕ : ಶ್ರೀ. ರೂಪೇಶ ರೆಡಕರ,

ವಿ ಅಂಚೆ : [email protected]