‘ಪ್ರಾಣಶಕ್ತಿವಹನ ಉಪಚಾರಪದ್ಧತಿ’ಯಿಂದ ಆಧ್ಯಾತ್ಮಿಕ ಉಪಾಯ ಮಾಡಿದ ನಂತರ ‘ಎಡಕಿವಿ ನೋಯುವುದರ ಮೂಲ ಕಾರಣ, ಕೆಳಗಿನ ದವಡೆಯ ಎಡಬದಿಯ ಮೊದಲ ಉಪದವಡೆಹಲ್ಲು ಆಗಿದೆ’ ಎಂಬುದು ತಿಳಿಯುವುದು

ಸದ್ಗುರು (ಡಾ.) ಮುಕುಲ ಗಾಡಗೀಳ

‘೨೦.೬.೨೦೨೨ ರಂದು ಗೋವಾದ ಸನಾತನದ ರಾಮನಾಥಿ ಆಶ್ರಮದಲ್ಲಿನ ಓರ್ವ ಸಂತರಿಗೆ ತುಂಬಾ ಕಿವಿ ನೋಯುತ್ತಿತ್ತು. ನನಗೆ ಅವರಿಗಾಗಿ ನಾಮಜಪ ಮುಂತಾದ ಉಪಾಯಗಳನ್ನು ಮಾಡಲು ಹೇಳಲಾಗಿತ್ತು. ನಾನು ಉಪಾಯವನ್ನು ಹುಡುಕಿದಾಗ ನನಗೆ ‘ಒಂದು ಕೈಯ ಅಂಗೈಯನ್ನು ಸಹಸ್ರಾರಚಕ್ರದ ಮೇಲೆ ಮತ್ತು ಇನ್ನೊಂದು ಕೈಯ ಅಂಗೈಯನ್ನು ವಿಶುದ್ಧಚಕ್ರದ ಮೇಲೆ ಇಟ್ಟು ‘ಮಹಾಶೂನ್ಯ’ ನಾಮಜಪವನ್ನು ಮಾಡುವ’, ಉಪಾಯ ಸಿಕ್ಕಿತು. ನಾನು ಈ ನಾಮಜಪವನ್ನು ೧ ಗಂಟೆಯ ವರೆಗೆ ಮಾಡಿದ ನಂತರ ನನಗೆ ಸಂತರ ಎರಡೂ ಚಕ್ರಗಳಲ್ಲಿನ ತೊಂದರೆ ಕಡಿಮೆ ಯಾಗಿರುವುದು ಅರಿವಾಯಿತು. ನಾನು ಆ ಸಂತರಿಗಾಗಿ ಪುನಃ ಉಪಾಯವನ್ನು ಹುಡುಕಿದಾಗ ನನಗೆ ‘ತರ್ಜನಿಯ ತುದಿಗೆ ಹೆಬ್ಬರಳಿನ ತುದಿಯನ್ನು ಹಚ್ಚುವುದು’, ಈ ಮುದ್ರೆ ಮತ್ತು ‘ಶ್ರೀ ಹನುಮತೇ ನಮಃ |’ ಈ ನಾಮಜಪ ಸಿಕ್ಕಿತು, ಹಾಗೆಯೇ ಆ ಮುದ್ರೆಯಿಂದ ನ್ಯಾಸವನ್ನು ಮಾಡಲು ಸಹಸ್ರಾರಚಕ್ರದ ಸ್ಥಾನವೇ ಸಿಕ್ಕಿತು; ಆದರೆ ಇನ್ನೊಂದು ಸ್ಥಾನ ಮಾತ್ರ ಕುತ್ತಿಗೆಯ ಮೇಲೆ ವಿಶುದ್ಧಚಕ್ರ ಸಿಗದೇ ವಿಶುದ್ಧಚಕ್ರದ ಎಡಬದಿಗೆ ೨ ಸೆ.ಮೀ. ದೂರದಲ್ಲಿ ಸ್ಥಾನ ಸಿಕ್ಕಿತು. ೫ ನಿಮಿಷಗಳ ವರೆಗೆ ಆ ಸ್ಥಳದ ಮೇಲೆ ನಾಮಜಪ ಮುಂತಾದ ಉಪಾಯ ಮಾಡಿದ ನಂತರ ಪುನಃ ಕುತ್ತಿಗೆಯ ಮೇಲಿನ ತೊಂದರೆಯ ಸ್ಥಾನವು ಬದಲಾಗಿತ್ತು ಮತ್ತು ಅದು ಮೇಲಿನ ದಿಕ್ಕಿಗೆ ಸರಿದು ಗದ್ದದ ಕೆಳಗೆ ಬಂದಿತ್ತು. ನಾನು ಆ ಸ್ಥಾನದ ಮೇಲೆ, ಹಾಗೆಯೇ ಸಹಸ್ರಾರದ ಮೇಲೆ ಈ ಹಿಂದೆ ಮಾಡಿದ ಮುದ್ರೆ ಮತ್ತು ನಾಮಜಪವನ್ನು ಮಾಡಿ ೫ ನಿಮಿಷಗಳವರೆಗೆ ಉಪಾಯ ಮಾಡಿದೆ. ಅನಂತರ ಪುನಃ ಆ ನ್ಯಾಸದ ಸ್ಥಾನವು ಬದಲಾಯಿತು ಮತ್ತು ಅದು ಕೆಳಗಿನ ದವಡೆಯ ಮೇಲೆ ಎಡಬದಿಯ ಮೊದಲನೇ ಉಪದವಡೆಯ ಹಲ್ಲಿನ ಮೇಲೆ (ಕೋರೆಹಲ್ಲಿನ ಬದಿಯ ಉಪದವಡೆ ಹಲ್ಲಿನ ಮೇಲೆ) ಸಿಕ್ಕಿತು.

ಆಗ ನನಗೆ, ‘ಆ ಸಂತರ ಎಡಬದಿಯ ದವಡೆ ಹಲ್ಲು ನೋಯುತ್ತಿದ್ದು, ದವಡೆ ಹಲ್ಲಿನ ನೋವು ಹೆಚ್ಚಾಗಿದ್ದರಿಂದ ಆ ಸಂತರ ಎಡ ಕಿವಿ ನೋಯುತ್ತಿದೆ’, ಎಂಬುದು ಗಮನಕ್ಕೆ ಬಂದಿತು. ಇದರಿಂದ ನನಗೆ ‘ಕಿವಿ ನೋವಿಗೆ ದವಡೆ ಹಲ್ಲಿನ ತೊಂದರೆ ಮೂಲ ಕಾರಣವಾಗಿದೆ’ ಎಂದು ತಿಳಿಯಿತು. ನಾನು ಆ ಸಂತರಿಗೆ ‘ನಿಮ್ಮ ಕೆಳಗಿನ ದವಡೆಯ ಎಡಬದಿಯ ಮೊದಲನೇಯ ಉಪದವಡೆಹಲ್ಲು ನೋಯುತ್ತಿದ್ದೆಯೇ?’, ಎಂದು ಕೇಳಿದೆ. ಅದಕ್ಕೆ ಅವರು ‘ಆ ದವಡೆಹಲ್ಲು ೪ ದಿನಗಳಿಂದ ನೋಯುತ್ತಿದೆ; ಆದರೆ ನನಗೆ ಕೆಲವೊಂದು ಕಾರಣಗಳಿಂದ ಹಲ್ಲಿನ ಡಾಕ್ಟರರ ಬಳಿಗೆ ಹೋಗಲು ಆಗಿಲ್ಲ’, ಎಂದು ಹೇಳಿದರು. ಹಾಗೆಯೇ ಅವರು ‘ದವಡೆಹಲ್ಲು ನೋಯುತ್ತಿದೆಯೆಂದು ನಿಮಗೆ ಹೇಗೆ ತಿಳಿಯಿತು ?’, ಎಂದು ಕೇಳಿ ಆಶ್ಚರ್ಯ ವ್ಯಕ್ತಪಡಿಸಿದರು ! ಇದರಿಂದ ನನಗೆ ‘ಪ್ರಾಣಶಕ್ತಿವಹನ ಉಪಾಯಪದ್ದತಿ’ಯಿಂದ ಯಾವುದಾದರೊಂದು ರೋಗದ ಮೂಲ ಕಾರಣ ಹೇಗೆ ತಿಳಿಯುತ್ತದೆ ?’, ಎಂಬುದು ಗಮನಕ್ಕೆ ಬಂದಿತು. (ಹೆಚ್ಚಿನ ಮಾಹಿತಿಗಾಗಿ ಸನಾತನ ಸಂಸ್ಥೆಯು ಪ್ರಕಟಿಸಿದ ‘ರೋಗ-ನಿರ್ಮೂಲನೆಗಾಗಿ ಪ್ರಾಣಶಕ್ತಿ(ಚೇತನಾ)ವಹನ ಸಂಸ್ಥೆಯಲ್ಲಿನ ಅಡಚಣೆಗಳನ್ನು ಹೇಗೆ ಶೋಧಿಸಬೇಕು ?’ ಮತ್ತು ‘ಪ್ರಾಣಶಕ್ತಿವಹನ ಸಂಸ್ಥೆಯ ಅಡಚಣೆಗಳಿಂದ ಆಗುವ ರೋಗಗಳ ಮೇಲೆ ಮಾಡುವ ಉಪಾಯಗಳು’ ಈ ಗ್ರಂಥವನ್ನು ಓದಿರಿ !) ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆ ಇವರಿಂದ ಈ ಆಧ್ಯಾತ್ಮಿಕ ಸ್ತರದಲ್ಲಿನ ಉಪಾಯ ಮಾಡುವ ಪದ್ಧತಿಯು ಸಾಧಕರಿಗೆ ತಿಳಿಯಿತು. ಇದಕ್ಕಾಗಿ ನಾವೆಲ್ಲ ಸಾಧಕರು ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇವೆ !’

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೬.೭.೨೦೨೨)