ರೋಗಗಳನ್ನು ಗುಣಪಡಿಸಲು ಆವಶ್ಯಕವಾದ ದೇವತಾತತ್ತ್ವಗಳ ನಾಮಜಪಗಳು

‘ರೋಗಗಳಿಗೆ ನಾಮಜಪದ ಉಪಾಯ’ ಇದರ ಬಗ್ಗೆ ಸಂಶೋಧನೆಯನ್ನು ಮಾಡಬೇಕು’, ಎಂಬ ವಿಚಾರವು ಮನಸ್ಸಿನಲ್ಲಿ ಬಂದ ನಂತರ ಎರಡು ದಿನಗಳ ನಂತರ ಸದ್ಗುರು ಡಾ. ಗಾಡಗೀಳ ಇವರ ಅದೇ ವಿಷಯದಲ್ಲಿನ ಲೇಖನವನ್ನು ಓದಿ ಪರಾತ್ಪರ ಗುರು ಡಾ. ಆಠವಲೆಯವರ ಮನಸ್ಸಿನಲ್ಲಿ ಸದ್ಗುರು ಡಾ. ಮುಕುಲ ಗಾಡಗೀಳ ಇವರ ಬಗ್ಗೆ ಶಬ್ದಾತೀತ ಕೃತಜ್ಞತೆ ಜಾಗೃತವಾಗುವುದು

‘ಸದ್ಗುರು ಡಾ. ಮುಕುಲ ಗಾಡಗೀಳ ಇವರು ಬರೆದ ‘ರೋಗಗಳು ದೂರವಾಗಲು ಆವಶ್ಯಕವಾಗಿರುವ ದೇವತೆಗಳ ತತ್ತ್ವಕ್ಕನುಸಾರ ಕೊಟ್ಟಿದ ಕೆಲವು ರೋಗಗಳಿಗೆ ನಾಮಜಪ’ ಎಂಬ ಲೇಖನವನ್ನು ದಿನಾಂಕ ೨೭.೧೨.೨೦೨೦ ರಂದು ದೈನಿಕ ‘ಸನಾತನ ಪ್ರಭಾತ’ದಲ್ಲಿ ಮುದ್ರಿಸಲಾಯಿತು. ಅದನ್ನು ಓದಿದ ನಂತರ ನನಗೆ, ಎರಡು ದಿನಗಳ ಹಿಂದೆ ನನ್ನ ಮನಸ್ಸಿನಲ್ಲಿ, ‘ನಾವು ಈ ರೀತಿ ಸಂಶೋಧನೆಯನ್ನು ಮಾಡಬೇಕು’; ಇದರಿಂದ ಅನೇಕ ಜನರಿಗೆ ಅದರ ಲಾಭವಾಗುವುದು, ವಿಶೇಷವಾಗಿ ಮೂರನೇ ಮಹಾಯುದ್ಧದ ಕಾಲದಲ್ಲಿ ಯಾವಾಗ ಔಷಧಿಗಳು ಇರುವುದಿಲ್ಲವೋ, ಆಗ ಎಲ್ಲರಿಗೂ ತುಂಬ ಲಾಭವಾಗುವುದು’, ಎಂಬ ವಿಚಾರ ಬಂದದ್ದು ನೆನಪಾಯಿತು. ನನ್ನ ಮನಸ್ಸಿನಲ್ಲಿರುವ ವಿಚಾರಗಳನ್ನು ಸದ್ಗುರು ಡಾ. ಮುಕುಲ ಗಾಡಗೀಳ ಇವರ ಮನಸ್ಸಿನಲ್ಲಿ ದೇವರು ಈ ಮೊದಲೇ ಸೂಚಿಸಿದನು ಮತ್ತು ಆವಶ್ಯಕವಾಗಿರುವ ಲೇಖನವನ್ನು ಪೂರ್ಣಗೊಳಿಸಿದನು; ಆದುದರಿಂದ ನನ್ನ ಮನಸ್ಸಿನಲ್ಲಿ ಸದ್ಗುರು ಡಾ. ಮುಕುಲ ಗಾಡಗೀಳ ಇವರ ಬಗ್ಗೆ ಶಬ್ದಾತೀತ ಕೃತಜ್ಞತೆ ಜಾಗೃತವಾಯಿತು ಮತ್ತು ಅವರಿಗೆ ಆ ವಿಚಾರವನ್ನು ಕೊಟ್ಟಿರುವುದರಿಂದ ದೇವತೆಗಳ ಬಗ್ಗೆ ಭಾವ ಜಾಗೃತವಾಯಿತು. – (ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ

 

ನಾಮಜಪ ಹುಡುಕುತ್ತಿರುವ ಸದ್ಗುರು ಡಾ. ಗಾಡಗೀಳ

‘ಯಾವುದಾದರೊಂದು ರೋಗವನ್ನು ಗುಣಪಡಿಸಲು ದುರ್ಗಾದೇವಿ, ರಾಮ, ಕೃಷ್ಣ, ದತ್ತ, ಗಣಪತಿ, ಮಾರುತಿ ಮತ್ತು ಶಿವ ಈ ೭ ಮುಖ್ಯ ದೇವತೆಗಳ ಪೈಕಿ ಯಾವ ದೇವತೆಗಳ ತತ್ತ್ವವು ಎಷ್ಟು ಪ್ರಮಾಣದಲ್ಲಿ ಆವಶ್ಯಕವಾಗಿದೆ ?’, ಎಂದು ಧ್ಯಾನದಲ್ಲಿ ಕಂಡು ಹಿಡಿದು ನಾನು ಕೆಲವು ರೋಗ ನಿವಾರಣೆಗಾಗಿ ಜಪವನ್ನು ತಯಾರಿಸಿದೆನು. ‘ಕೊರೊನಾ ವಿಷಾಣು’ವಿನ ಬಾಧೆಯನ್ನು ದೂರಗೊಳಿಸಲು ನಾನು ಮೊದಲಬಾರಿ ಇಂತಹ ಜಪವನ್ನು ಕಂಡು ಹಿಡಿದಿದ್ದೆನು. ಅದು ಪರಿಣಾಮಕಾರಿ ಆಗಿದೆ ಎಂದು ಗಮನಕ್ಕೆ ಬಂದಾಗ ನನಗೆ ಇತರ ರೋಗಗಳಿಗಾಗಿಯೂ ಜಪವನ್ನು ಕಂಡು ಹಿಡಿಯಲು ಸ್ಫೂರ್ತಿ ಸಿಕ್ಕಿತು. ಈ ಜಪ ಎಂದರೆ ಆವಶ್ಯಕವಾಗಿರುವ ಆ ವಿವಿಧ ದೇವತೆಗಳ ಒಟ್ಟುಗೂಡಿಸಿದ ಜಪವಾಗಿದೆ. ಈ ಜಪಗಳನ್ನು ಸಾಧಕರಿಗೆ ಅವರ ರೋಗಗಳಿಗಾಗಿ ನೀಡುತ್ತಿದ್ದೇನೆ. ‘ಆ ಜಪಗಳಿಂದ ಅವರಿಗೆ ಒಳ್ಳೆಯ ಲಾಭವಾಗುತ್ತಿದೆ’ ಎಂದು ಅವರು ಹೇಳಿದರು. ಕೆಲವು ತಿಂಗಳುಗಳ ಹಿಂದೆ ಕೆಲವು ರೋಗಗಳು, ಅವುಗಳಿಗಾಗಿ ಜಪ ಮತ್ತು ಸಾಧಕರು ಆ ಜಪವನ್ನು ಮಾಡಿದ ನಂತರ ಬಂದ ಅನುಭೂತಿಗಳನ್ನು ‘ಸನಾತನ ಪ್ರಭಾತ’ದಲ್ಲಿ ಮುದ್ರಿಸಲಾಗಿತ್ತು. ಇಂದು ಇನ್ನು ಕೆಲವು ರೋಗಗಳು ಮತ್ತು ಅವುಗಳಿಗೆ ಜಪಗಳನ್ನು ಇಲ್ಲಿ ನೀಡಲಾಗಿದೆ. ಈ ನಾಮಜಪಗಳನ್ನು ಕೆಲವು ಸಾಧಕರಿಗೆ ನೀಡಿದ್ದೇನೆ. ಸಾಧಕರು ತಮಗಾದ ಅನುಭೂತಿಯನ್ನು ಆದಷ್ಟು ಬೇಗನೆ ಬರೆದು ಈ ಲೇಖನದಲ್ಲಿ ನೀಡಲಾದ ವಿ-ಅಂಚೆ ವಿಳಾಸಕ್ಕೆ ಅಥವಾ ಅಂಚೆ ವಿಳಾಸಕ್ಕೆ ಕಳುಹಿಸಬೇಕು.

ಟಿಪ್ಪಣಿ – ಯಾವುದಾದರೂ ರೋಗಕ್ಕಾಗಿ ನೀಡಿದ ನಾಮಜಪವನ್ನು ಆ ಕ್ರಮದಿಂದ ಹೇಳಿದರೆ, ಅದು ಒಂದು ನಾಮಜಪವಾಗುತ್ತದೆ. ಈ ರೀತಿಯಲ್ಲಿ ಅದನ್ನು ನಿಯೋಜಿತ ಕಾಲಾವಧಿಯವರೆಗೆ ಪುನಃ ಪುನಃ ಮಾಡಬೇಕು.

 

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಮುಂಬರುವ ಆಪತ್ಕಾಲದಲ್ಲಿ ಆಧುನಿಕ ವೈದ್ಯರು ಮತ್ತು ಅವರ ಔಷಧಿಗಳು ಸಿಗಲಾರವು. ಆಗ ‘ಯಾವ ರೋಗಕ್ಕಾಗಿ ಯಾವ ಚಿಕಿತ್ಸೆ ಮಾಡಬೇಕು’, ಎಂದು ತಿಳಿಯುವುದು ಕಠಿಣವಾಗುತ್ತದೆ. ಆಗ ಅದು ತಿಳಿಯಲೆಂದು ಸಾಧಕರು ಈ ಲೇಖನವನ್ನು ಸಂಗ್ರಹದಲ್ಲಿಡಬೇಕು ಮತ್ತು ಅದರಲ್ಲಿ ನೀಡಿದಂತೆ ನಾಮಜಪವನ್ನು ಮಾಡಬೇಕು. ಇದರಿಂದ ಅನಾರೋಗ್ಯ ಕಡಿಮೆಯಾಗಲು ಸಹಾಯವಾಗುವುದು.

– (ಪರಾತ್ಪರ ಗುರು) ಡಾ. ಆಠವಲೆ (೩೦.೬.೨೦೨೨)

ಸಾಧಕರಿಗೆ ಸೂಚನೆ ಮತ್ತು ವಾಚಕರಿಗೆ ವಿನಂತಿ

ಸಾಧಕರಿಗೆ ಇಲ್ಲಿ ನಮೂದಿಸಲಾದ ರೋಗಗಳ ಪೈಕಿ ಯಾವುದಾದರೊಂದು ರೋಗವಿದ್ದರೆ ಅದನ್ನು ದೂರ ಮಾಡಲು ‘ಆ ಸಂದರ್ಭದಲ್ಲಿ ನೀಡಿದ ನಾಮಜಪವನ್ನು ಮಾಡಿ ನೋಡಬೇಕು’, ಎಂದೆನಿಸಿದರೆ ಅವರು ಆ ನಾಮಜಪವನ್ನು ೧ ತಿಂಗಳು ಪ್ರತಿ ದಿನ ೧ ಗಂಟೆ ಪ್ರಯೋಗವೆಂದು ಮಾಡಿ ನೋಡಬೇಕು. ಈ ನಾಮಜಪಗಳಿಗೆ ಸಂಬಂಧಿಸಿದಂತೆ ಬರುವ ಅನುಭೂತಿಗಳನ್ನು ಸಾಧಕರು [email protected] ಈ ವಿ-ಅಂಚೆ ವಿಳಾಸಕ್ಕೆ ಅಥವಾ ಮುಂದಿನ ಅಂಚೆ ವಿಳಾಸಕ್ಕೆ ಕಳುಹಿಸಬೇಕು. ಸಾಧಕರ ಈ ಅನುಭೂತಿಗಳು ಗ್ರಂಥಗಳಲ್ಲಿ ತೆಗೆದುಕೊಳ್ಳುವ ದೃಷ್ಟಿಯಿಂದ, ಹಾಗೆಯೇ ನಾಮಜಪದ ಯೋಗ್ಯತೆ ಸಿದ್ಧವಾಗಲು ಸಹ ಉಪಯುಕ್ತವಾಗುವುದು.

ಅಂಚೆ ವಿಳಾಸ : ಸನಾತನ ಆಶ್ರಮ, ೨೪/ಬಿ ರಾಮನಾಥಿ, ಬಾಂದೋಡಾ, ಫೋಂಡಾ, ಗೋವಾ. ಪಿನ್‌ಕೋಡ್ ೪೦೩೪೦೧.

೧. ಈ ಜಪದಿಂದ ಸಾಧಕರಿಗೆ ಬಂದ ಅನುಭೂತಿಗಳು

೧ ಅ. ಮೂತ್ರದಿಂದ ಪ್ರೊಟೀನ್ಸ್ ಹೋಗುವುದು (ನೆಫ್ರಾಟಿಕ್ ಸಿಂಡ್ರೋಮ್) : ಇದು ಮೂತ್ರಪಿಂಡದ (‘ಕಿಡ್ನಿ’ಯ) ರೋಗವಾಗಿದೆ. ಇದರಲ್ಲಿ ಮೂತ್ರದ ಮೂಲಕ ಹೆಚ್ಚು ಪ್ರಮಾಣದಲ್ಲಿ ಪ್ರೊಟೀನ್ಸ ಹೋಗುತ್ತವೆ. ಓರ್ವ ಸಾಧಕಿಯ ೯ ವರ್ಷದ ಹುಡುಗನಿಗೆ ೨೦೧೫ ರಿಂದ ಈ ಕಾಯಿಲೆಯಾಗಿತ್ತು. ಈ ಕಾಯಿಲೆಯು ಅವನಿಗೆ ೩-೪ ತಿಂಗಳಿಗೊಮ್ಮೆ ಆಗುತ್ತಿತ್ತು. ಆಗ ಅವನಿಗೆ ‘ಸ್ಟಿರೈಡ್’ ಕೊಡ ಬೇಕಾಗುತ್ತಿತ್ತು. ‘ಸ್ಟಿರೈಡ್’ನಿಂದ ಆ ಹುಡುಗನಿಗೆ ಶರೀರದಲ್ಲಿ ಬಾವು ಬರುತ್ತಿತ್ತು. ಅವನ ಈ ಕಾಯಿಲೆಗಾಗಿ ನಾನು ೨೧ ಡಿಸೆಂಬರ್ ೨೦೨೧ ರಂದು ನಾಮಜಪವನ್ನು ಕೊಟ್ಟೆನು. ಆ ಜಪವನ್ನು ಸಾಧಕಿಯು ಹುಡುಗನಿಗಾಗಿ ಪ್ರತಿದಿನ ೧ ಗಂಟೆ ಮಾಡಿದಳು. ಜಪ ಮಾಡಲು ಆರಂಭಿಸಿದ ನಂತರ ೭ ದಿನಗಳಲ್ಲಿ ಹುಡುಗನಿಗೆ ಮೂತ್ರದ ಮೂಲಕ ಪ್ರೋಟಿನ್ಸ್ ಹೋಗುವುದು ನಿಂತಿತು. ಹುಡುಗನಿಗೆ ಪ್ರತಿ ೩-೪ ತಿಂಗಳಿಗೊಮ್ಮೆ ಬರವ ಈ ಕಾಯಿಲೆಯು ನಾಮಜಪದಿಂದ ಸಂಪೂರ್ಣ ನಿಂತಿತು, ಆದರೂ ಹುಡುಗನ ತಾಯಿಯು ಇಂದಿಗೂ ಮಗನಿಗಾಗಿ ನಾಮಜಪವನ್ನು ಮಾಡುವುದು ಮುಂದುವರೆಸಿದ್ದಾಳೆ.

೧ ಆ. ಸಲಿಂಗದ ಆಕರ್ಷಣೆಯಾಗುವುದು : ಓರ್ವ ಜಿಜ್ಞಾಸುವಿಗೆ ಸಲಿಂಗದ ಆಕರ್ಷಣೆಯ ತೊಂದರೆಯಾಗುತ್ತಿತ್ತು. ಅವನು ಮನ ಮುಕ್ತವಾಗಿ ಈ ಸಮಸ್ಯೆಯನ್ನು ಮಂಡಿಸಿದ ನಂತರ ಅವನಿಗೆ ಈ ಕಾಯಿಲೆ ಹೋಗಲು ನಾನು ನಾಮಜಪ ಹೇಳಿದೆನು. ಅವನು ಈ ನಾಮಜಪವನ್ನು ಪ್ರತಿದಿನ ೧ ಗಂಟೆ ಮಾಡತೊಡಗಿದ ನಂತರ ಆ ತೊಂದರೆಯು ೨೦ ದಿನಗಳಲ್ಲಿ ತುಂಬಾ ಕಡಿಮೆಯಾಯಿತು.

೧ ಇ. ಯುವಾವಸ್ಥೆಯಲ್ಲಿ ಲೈಂಗಿಕ ವಿಚಾರವು ಹೆಚ್ಚು ಪ್ರಮಾಣದಲ್ಲಿ ಬರುವುದು : ಓರ್ವ ಯುವ ಜಿಜ್ಞಾಸುವಿಗೆ ಸ್ತ್ರೀಯರ ಬಗ್ಗೆ ತೀವ್ರ ಪ್ರಮಾಣದಲ್ಲಿ ಲೈಂಗಿಕ ಆಕರ್ಷಣೆಯಾಗುವುದು ಮತ್ತು ಸತತ ವಿಚಾರಗಳು ಬರುತ್ತಿದ್ದವು. ಆದುದರಿಂದ ಅವನಿಗೆ ಸಾಧನೆಯಲ್ಲಿ ಅಡಚಣೆ ಬರುತ್ತಿದ್ದವು. ಅವನು ಆ ಕುರಿತು ಕೇಳಿದಾಗ ನಾಮಜಪ ಕೊಡಲಾಯಿತು. ಅವನು ಆ ಜಪವನ್ನು ೧೫ ದಿನ ಮಾಡಿದ ನಂತರ ಅವನ ಆ ತೊಂದರೆಯು ಬಹಳ ಕಡಿಮೆಯಾಯಿತು.

೧ ಈ. ಶರೀರದಲ್ಲಿ ‘ಇನ್ಸುಲಿನ್’ ತಯಾರಾಗದಿರುವುದು (ಡೈಬಟೀಸ್) : ಓರ್ವ ಸಾಧಕ ಡಾಕ್ಟರರ ೧೬ ವರ್ಷದ ಮಗನಿಗೆ ಶರೀರದಲ್ಲಿ ‘ಇನ್ಸುಲಿನ್’ ತಯಾರಾಗುತ್ತಿರಲೇ ಇಲ್ಲ. ಇಂತಹವರು ಲಕ್ಷದಲ್ಲಿ ಒಬ್ಬರ ಸಂದರ್ಭದಲ್ಲಿ ಘಟಿಸುತ್ತದೆ. ಆದುದರಿಂದ ಇಂತಹ ವ್ಯಕ್ತಿಗೆ ಮೂರು ತಿಂಗಳಿಗೊಮ್ಮೆ ‘ರಕ್ತದಲ್ಲಿನ ‘ಇನ್ಸುಲಿನ್ನ ಪ್ರಮಾಣವು ಎಷ್ಟಿದೆ ?’, ಎಂಬುದನ್ನು ಪರಿಶೀಲಿಸಿ ಅದರಂತೆ ಚಿಕಿತ್ಸೆ ಮಾಡಬೇಕಾಗುತ್ತದೆ. ಈ ಸಾಧಕನ ಮಗನಿಗೆ ನಾನು ಈ ಕಾಯಿಲೆಗಾಗಿ ಜನವರಿ ೨೦೨೨ ರಲ್ಲಿ ನಾಮ ಜಪ ಕೊಟ್ಟೆನು. ಅವನು ಕಳೆದ ೪ ತಿಂಗಳಿಂದ ಪ್ರತಿದಿನ ೧ ಗಂಟೆ ಆ ನಾಮಜಪವನ್ನು ಮಾಡುತ್ತಿರುವುದರಿಂದ ಅವನ ರಕ್ತದಲ್ಲಿನ ‘ಇನ್ಸುಲಿನ್’ನ ಪ್ರಮಾಣವು ಕಡಿಮೆಯಾಗದೇ ಅದು ೧ ನ್ಯಾನೋಗ್ರಾಮ್/೧ ಮಿಲಿಲೀಟರ್ ಅಷ್ಟು ಉಳಿಯಿತು. ರಕ್ತದಲ್ಲಿನ ‘ಇನ್ಸುಲಿನ್’ನ ಸಾಮಾನ್ಯ ಮಟ್ಟವು ೨ ನ್ಯುನೋಗ್ರಾಮ್/೧ ಮಿಲಿ ಲೀಟರ್ ಇರುತ್ತದೆ. ಆದುದರಿಂದ ಈಗ ಅವನಿಗೆ ನಾಮಜಪವನ್ನು ಪ್ರತಿದಿನ ೨ ಗಂಟೆ ಮಾಡಲು ಹೇಳಿದ್ದೇನೆ.

೧ ಉ. ಶರೀರದಲ್ಲಿ ಸ್ನಾಯುಗಳು ಗಂಟಾಗುವುದು : ೨೦೨೨ ರಲ್ಲಿ ಓರ್ವ ಸಾಧಕಿಯ ಅತ್ತಿಗೆಯ ಹೊಟ್ಟೆಯಲ್ಲಿ ಸ್ನಾಯುವಿನ ಗಂಟು ನಿರ್ಮಾಣವಾಗಿತ್ತು. ಅವಳಿಗೆ ನಾನು ಈ ಕಾಯಿಲೆಗಾಗಿ ನಾಮಜಪವನ್ನು ಕೊಟ್ಟೆನು. ಅವಳು ಅದನ್ನು ೧ ತಿಂಗಳು ಪ್ರತಿ ದಿನ ೧ ಗಂಟೆ ಮಾಡಿದಳು. ನಂತರ ಅವಳಿಗೆ ‘ಆ ಗಂಟು ಚಪ್ಪಟೆಯಾಗಿದೆ’, ಎಂದರಿವಾಯಿತು. ಅವಳು ಡಾಕ್ಟರರ ಬಳಿಗೆ ಪರಿಶೀಲಿಸಲು ಹೋದಾಗ ಡಾಕ್ಟರರು ‘ಸ್ಕ್ಯಾನಿಂಗ್’ ಮಾಡಿದ ನಂತರ ಅವರಿಗೆ, ‘ಆ ಗಂಟು ವಿಘಟನೆಯಾಗಿದೆ ಎಂದು ಕಂಡು ಬಂದಿತು’, ಡಾಕ್ಟರರು ಆ ಸಾಧಕಿಗೆ, “ಸ್ನಾಯುಗಳ ಗಂಟು ಈ ರೀತಿ ವಿಘಟನೆಯಾಗಿರುವುದು ನಾನು ಮೊದಲ ಸಲ ನೋಡುತ್ತಿದ್ದೇನೆ. ಹೀಗೆ ಆಗಲು ಸಾಧ್ಯವೇ ಇಲ್ಲ. ಗಂಟು ಕಣ್ಮರೆಯಾಗುವ ಪ್ರಕ್ರಿಯೆಯಲ್ಲಿ ಇದು ಉತ್ತಮ ಲಕ್ಷಣವಾಗಿದೆ” ಎಂದರು.

೧ ಊ. ‘ಮೈಸ್ಥೇನಿಯಾ ಗ್ರ್ಯಾವಿಸ್ (ಮೆದುಳಿನಿಂದ ವಿಶಿಷ್ಟ ಸ್ನಾಯುಗಳಿಗೆ ಸಂಬಂಧಿತ ನರತಂತುಗಳವರೆಗೆ ಬಂದಿರುವ ಸಂವೇದನೆಯು ಆ ಸ್ನಾಯುವಿನಲ್ಲಿ ಹೋಗಲು ನಿರ್ಬಂಧವಾಗಿರುವುದರಿಂದ ಆ ಸ್ನಾಯು ಕಾರ್ಯವು ಮಾಡದಿರುವುದು : ಇದೊಂದು ಗಂಭೀರ ಸ್ವರೂಪದ ರೋಗವಾಗಿದ್ದು ಅದು ನರತಂತು ಮತ್ತು ಸ್ನಾಯುಗಳ ಕೀಲುಸ್ಥಾನಗಳೊಂದಿಗೆ (ನ್ಯುರೋಮಸ್ಕ್ಯೂಲರ್ ಜಂಕ್ಶನ್ ದೊಂದಿಗೆ) ಸಂಬಂಧಪಟ್ಟಿದೆ. ಈ ರೋಗವು ‘ಆಟೋಇಮ್ಯೂನ್ ಡಿಸಾರ್ಡರ್ (ತನ್ನಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯು ತನ್ನ ಶರೀರದ ಮೇಲೆಯೇ ಅಥವಾ ಶರೀರದ ಘಟಕಗಳ ಮೇಲೆ ಆಕ್ರಮಣ ಮಾಡುವುದು) ಈ ರೀತಿಯ ರೋಗಗಳ ವರ್ಗಕ್ಕೆ ಸೇರುತ್ತದೆ. ‘ಮೈಸ್ಥೇನಿಯಾ ಗ್ರ್ಯಾವಿಸ್ನಲ್ಲಿ ಮೂಳೆಗಳಿಗೆ ಅಂಟಿಕೊಂಡಿರುವ ಸ್ನಾಯುಗಳು ರೋಗಗ್ರಸ್ತವಾಗುತ್ತವೆ. ಇದರಿಂದ ಅವಯವಗಳ ಚಲನೆಗೆ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಸ್ನಾಯುಗಳಿರುತ್ತವೆ, ಅವು ಈ ಕಾಯಿಲೆಯಲ್ಲಿ ದುರ್ಬಲವಾಗುತ್ತವೆ. ಓರ್ವ ಸಾಧಕಿಗೆ ಈ ರೋಗವಾಗಿತ್ತು. ಆದುದರಿಂದ ಅವಳಿಗೆ ಯಾವುದೇ ಕೆಲಸ ಮಾಡಲು, ಉದಾ. ಬೆರಳುಗಳಿಂದ ಸಾದಾ ಪೆನ್ನು ಹಿಡಿಯಲು ಆಗುತ್ತಿರಲಿಲ್ಲ. ಅವಳು ದಣಿಯುತ್ತಿದ್ದಳು. ಆದುದರಿಂದ ಅವಳಿಗೆ ಮಲಗಿಯೇ ಇರಬೇಕಾಗುತ್ತಿತ್ತು. ಇದಕ್ಕೆ ‘ಸ್ಟಿರೈಡನ್ನು ಔಷಧಿ ರೂಪದಲ್ಲಿ  ತೆಗೆದುಕೊಳ್ಳಬೇಕಾಗುತ್ತದೆ; ಆದರೆ ಅದರಿಂದಲೂ ಬಾವು ಬರುವಂತಹ ದುಷ್ಪರಿಣಾಮವಾಗುತ್ತದೆ. ನಾನು ಅವಳಿಗೆ ಈ ರೋಗಕ್ಕೆ ಫೆಬ್ರವರಿ ೨೦೨೨ ರಲ್ಲಿ ನಾಮಜಪವನ್ನು ಹುಡುಕಿ ಕೊಟ್ಟೆನು. ಅವಳು ಈ ನಾಮಜಪವನ್ನು ಪ್ರತಿದಿನ ೨ ಗಂಟೆ ಮಾಡ ತೊಡಗಿದಳು. ಅವಳಿಗೆ ಒಂದೇ ತಿಂಗಳಿನಲ್ಲಿ ಈ ನಾಮಜಪ ದಿಂದ ಒಳ್ಳೆಯ ಲಾಭವಾಯಿತು. ಅವಳು ದೈನಂದಿನ ಕೆಲಸಗಳನ್ನು ಮಾಡತೊಡಗಿದಳು. ‘ಅವಳಿಗೆ ಡಾಕ್ಟರರು, ‘ಇದರಲ್ಲಿ ಒಳ್ಳೆಯ ಬದಲಾವಣೆಯಾಗಿದೆ ಮತ್ತು ರೋಗವು ನಿಯಂತ್ರಣದಲ್ಲಿದೆ, ಎಂದು ಹೇಳಿ ಅವಳ ‘ಸ್ಟಿರೈಡ್ ಔಷಧಗಳ ಪ್ರಮಾಣವನ್ನೂ ಕಡಿಮೆ ಮಾಡಿದರು. ಹಾಗೆಯೇ ಡಾಕ್ಟರರು, “ಈ ರೋಗವು ಉಸಿರಾಟದ ಮೇಲೆ ಪರಿಣಾಮ ಬೀರಲಿಲ್ಲ”, ಇದು ಮಹತ್ವದ್ದಾಗಿದೆ ಎಂದರು.

೧ಐ. ‘ಅಡ್ರಿನೊಕಾರ್ಟಿಕೊಟ್ರೊಪಿಕ್ ಹಾರ್ಮೊನ್’ನ ಪ್ರಮಾಣವು ಹೆಚ್ಚಳವಾಗುವುದು : ಫೆಬ್ರುವರಿ ೨೦೨೨ ರಲ್ಲಿ ಓರ್ವ ಸಾಧಕಿಯ ಶರೀರದಲ್ಲಿನ ‘ಅಡ್ರಿನೊಕಾರ್ಟಿಕೊಟ್ರೊಪಿಕ್ ಹಾರ್ಮೊನ್ನ ಹಾರ್ಮೋನುಗಳ ಪ್ರಮಾಣವು ಹೆಚ್ಚಾಗಿರುವುದು ಕಂಡುಬಂದಿತು. ರಕ್ತದೊತ್ತಡವು ಕಡಿಮೆ ಇರುತ್ತಿತ್ತು. (ರಕ್ತದಲ್ಲಿನ ‘ಕ್ಯಾರ್ಟಿಸಾಲ್ ಈ ಹಾರ್ಮೋನಿನ ಪ್ರಮಾಣ ಕಡಿಮೆಯಾದಾಗ ‘ಅಡ್ರಿನೊ ಕಾರ್ಟಿಕೊಟ್ರೊಪಿಕ್ ಹಾರ್ಮೊನ್’ನ ಪ್ರಮಾಣವು ಹೆಚ್ಚಾಗುತ್ತದೆ. ರಕ್ತದೊತ್ತಡ ಕಡಿಮೆಯಾಗಲು ‘ಕಾರ್ಟಿಸಾಲ್’ ಎಂಬ ಹಾರ್ಮೊನಿನ ಪ್ರಮಾಣವು ಕಡಿಮೆಯಾಗುವುದೇ, ಕಾರಣವಾಗಿದೆ.) ಅವಳಿಗೆ ದಣಿವು ಇರುತ್ತಿತ್ತು, ಹಾಗೆಯೇ ಅವಳ ಚಯಾಪಚಯ (ಮೆಟಾಬೊಲಿಝಮ್) ಕೃತಿಯ ಮೇಲೆಯೂ ಪರಿಣಾಮವಾಗಿತ್ತು. ಇದರಿಂದ ಅವಳ ಶರೀರದ ರೋಗನಿರೋಧಕ ಕ್ಷಮತೆಯೂ ಕಡಿಮೆಯಾಗಿತ್ತು. ಅವಳ ಈ ರೋಗಕ್ಕೆ ನಾನು ಅವಳಿಗೆ ಮಾರ್ಚ ೨೦೨೨ ರಲ್ಲಿ ನಾಮಜಪ ಕೊಟ್ಟು ಅದನ್ನು ಪ್ರತಿದಿನ ೧ ಗಂಟೆ ಮಾಡಲು ಹೇಳಿದೆನು. ಅವಳು ಅದನ್ನು ೩ ತಿಂಗಳು ಮಾಡಿದಳು. ಅವಳು ಈ ರೋಗಕ್ಕೆ ಡಾಕ್ಟರರು ಹೇಳಿದಂತೆ ೧ ತಿಂಗಳು ‘ಸ್ಟಿರೈಡ್’ ತೆಗೆದುಕೊಂಡಳು. ಜೂನ್ ೨೦೨೨ ರಲ್ಲಿ ಅವಳ ಶಾರೀರಿಕ ಸ್ಥಿತಿಯು ಸ್ವಲ್ಪ ಸುಧಾರಿಸಿತು. ಅವಳಿಗೆ ದಣಿವಿನ ಪ್ರಮಾಣವು ಕಡಿಮೆಯಾಯಿತು, ಈ ಮೊದಲು ಕಡಿಮೆಯಾಗಿರುವ ರಕ್ತದೊತ್ತಡ ಹೆಚ್ಚಿತು, ಹಾಗೆಯೇ ಅವಳಿಗೆ ಆಹಾರವು ಪಚನವಾಗತೊಡಗಿತು. ಅವಳಲ್ಲಿನ ‘ಅಡ್ರಿನೊ ಕಾರ್ಟಿಕೊಟ್ರೊಪಿಕ್ ಹಾರ್ಮೊನ್’ನ ಪ್ರಮಾಣವು ಈ ಮೊದಲು ೭೨.೬ ಪಿಕೋಗ್ರಾಮ್/೧ ಮಿಲಿಲೀಟರ್ ಇತ್ತು, ಅದು ಈಗ ೬೪.೧ ಪಿಕೋಗ್ರಾಮ್/೧ ಮಿಲಿಲಿಟರ್ ಆಯಿತು. (‘ಅಡ್ರಿನೊಕಾರ್ಟಿಕೊಟ್ರೊಪಿಕ್ ಹಾರ್ಮೊನ್’ನ ಸಾಮಾನ್ಯ ಪ್ರಮಾಣ ೪೬ ಪಿಕೋಗ್ರಾಮ್/೧ ಮಿಲಿಲೀಟರ್‌ಗಿಂತ ಕೆಳಗಿರಬೇಕು.

೨. ಜಪಗಳ ಮಹತ್ವ

ಆಪತ್ಕಾಲದಲ್ಲಿ ಔಷಧಿಗಳು, ಡಾಕ್ಟರರ ಅಭಾವದ ಅರಿವಾದಾಗ ಈ ಜಪಗಳು ಉತ್ತಮವಾಗಿ ಉಪಯೋಗವಾಗುವುವು.

೩. ಕೃತಜ್ಞತೆಗಳು

ಪರಾತ್ಪರ ಗುರು ಡಾಕ್ಟರರ ಕೃಪೆಯಿಂದ ನಾನು ಈ ಜಪವನ್ನು ಕಂಡು ಹಿಡಿಯಲು ಸಾಧ್ಯವಾಯಿತು ಮತ್ತು ಆ ಜಪಗಳ ಉತ್ತಮ ಪರಿಣಾಮವೂ ಗಮನಕ್ಕೆ ಬಂದಿತು. ಇದಕ್ಕಾಗಿ ನಾನು ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞನಾಗಿದ್ದೇನೆ.

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್‌ಡಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೩.೭.೨೦೨೨)