ಸಾಧಕರ ಮೇಲೆ ಬಂದಿರುವ ಕೆಟ್ಟ ಶಕ್ತಿಗಳ ಆವರಣ ತೆಗೆಯುವ ಲಾಭದಾಯಕ ಪದ್ಧತಿ !

ಆಧುನಿಕ ಪಶು ವೈದ್ಯ ಅಜಯ ಜೋಶಿ

ಕೆಟ್ಟ (ಅನಿಷ್ಟ) ಶಕ್ತಿಗಳ ತೊಂದರೆಯಿಂದ ಸಾಧಕರ ಮೇಲೆ ತುಂಬಾ ತೊಂದರೆದಾಯಕ ಆವರಣ ಬರುತ್ತದೆ. ಅದನ್ನು ನಿಯಮಿತವಾಗಿ ತೆಗೆಯುವುದು ಆವಶ್ಯಕವಾಗಿರುತ್ತದೆ. ಆವರಣವನ್ನು ತೆಗೆಯುವುದರಿಂದ ಸಾಧಕರಿಗಾಗುವ ಆಧ್ಯಾತ್ಮಿಕ ತೊಂದರೆಗಳು ಕೆಲವೊಂದು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಮಿರಜ್ ಆಶ್ರಮದಲ್ಲಿನ ಸೌ. ಅಂಜಲೀ ಅಜಯ ಜೋಶಿ (೫೯ ವರ್ಷ) ಇವರು ಕಳೆದ ೨ ವರ್ಷಗಳಿಂದ ಸನಾತನದ ಸಾತ್ತ್ವಿಕ ಊದುಬತ್ತಿಯಿಂದ ತಮ್ಮ ಮೇಲಿನ ತೊಂದರೆದಾಯಕ ಶಕ್ತಿಗಳ ಆವರಣವನ್ನು ತೆಗೆಯುತ್ತಿದ್ದಾರೆ. ಅದರಿಂದ ಅವರಿಗೆ ಒಳ್ಳೆಯ ಲಾಭವಾಗುತ್ತಿದೆ. ಈ ಪದ್ಧತಿಯ ಬಗ್ಗೆ ಅವರು ಸದ್ಗುರು ಡಾ. ಮುಕುಲ ಗಾಡಗೀಳರಲ್ಲಿ ವಿಚಾರಿಸಿದರು. ಅದರಲ್ಲಿ ಅವರು ಕೆಲವೊಂದು ಬದಲಾವಣೆಗಳನ್ನು ಹೇಳಿದರು. ಅದರಂತೆ ಸಾಧಕರಿಗೆ `ಊದುಬತ್ತಿಯಿಂದ ಆವರಣವನ್ನು ತೆಗೆಯುವ’ ಪದ್ಧತಿಯನ್ನು ಇಲ್ಲಿ ಕೊಡಲಾಗಿದೆ.

೧. ಊದುಬತ್ತಿಯನ್ನು ಹೇಗೆ ತಿರುಗಿಸಬೇಕು ?

ಆವರಣವನ್ನು ತೆಗೆಯಲು ಉರಿಸದಿರುವ ಸನಾತನದ ಸಾತ್ತ್ವಿಕ ಊದುಬತ್ತಿಯನ್ನು ಉಪಯೋಗಿಸಬೇಕು. ಅದನ್ನು ಯಾವ ಚಕ್ರದ ಮೇಲಿನ ಆವರಣ ತೆಗೆಯಲಿಕ್ಕಿದೆಯೊ, ಅದರ ಮೇಲಿನಿಂದ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಹಾಗೂ ಗಡಿಯಾರದ ಮುಳ್ಳುಗಳು ತಿರುಗುವ ವಿರುದ್ಧ ದಿಕ್ಕಿನಲ್ಲಿ ಹೀಗೆ ಎರಡೂ ದಿಕ್ಕುಗಳಲ್ಲಿ ೩ ಬಾರಿ ತಿರುಗಿಸಬೇಕು. ಆವರಣವನ್ನು ತೆಗೆಯಲು ಊದುಬತ್ತಿಯನ್ನು ಶರೀರದ ಚಕ್ರಗಳ ಸ್ಥಳಗಳಿಂದ ೩ ರಿಂದ ೪ ಸೆಂ.ಮೀ. ಅಂತರದಲ್ಲಿ ಹಿಡಿಯಬೇಕು ಹಾಗೂ ಅದನ್ನು ನೇರವಾಗಿ ಅಥವಾ ಅಡ್ಡ, ಹೇಗೆ ಸಹಜ ಸಾಧ್ಯವಿದೆಯೋ, ಹಾಗೆ ಹಿಡಿದು ತಿರುಗಿಸಬೇಕು.

೨. ಆವರಣ ತೆಗೆಯುವ ಚಕ್ರ ಮತ್ತು ಆ ಸಮಯದಲ್ಲಿ ಮಾಡಬೇಕಾದ ನಾಮಜಪ

ಟಿಪ್ಪಣಿ ೧ – ಆಜ್ಞಾಚಕ್ರದ ಮೇಲಿನ ಆವರಣವನ್ನು ತೆಗೆಯುವಾಗ ಎರಡೂ ಕಣ್ಣುಗಳ ಒಳಗಿನ ಆವರಣವೂ ಹೋಗಬೇಕೆಂದು ಕಣ್ಣುಗಳನ್ನು ತೆರೆದಿಡಬೇಕು.

ಟಿಪ್ಪಣಿ ೨ – ಅನಾಹತಚಕ್ರದ ಮೇಲೆ ಊದುಬತ್ತಿಯನ್ನು ತಿರುಗಿಸಿದ ನಂತರ ಹೊಟ್ಟೆಯ ಮೇಲಿನಿಂದ `ಶ್ರೀ ಪಂಚ ಮಹಾಭೂತೇಭ್ಯೊ ನಮಃ |’ ಈ ನಾಮಜಪವನ್ನು ಮಾಡುತ್ತಾ (ವಿಷಯ ೧ ರಲ್ಲಿ ಹೇಳಿದ ಹಾಗೆ) ಊದುಬತ್ತಿಯನ್ನು ತಿರುಗಿಸಬೇಕು. ಅನಂತರ ಸಂಪರ‍್ಣ ಶರೀರದ, ಅಂದರೆ ತಲೆಯಿಂದ ಕಾಲುಗಳ ವರೆಗಿನ ಆವರಣವನ್ನು ಮೂರು ಬಾರಿ ತೆಗೆಯಬೇಕು. ಆಗ ಊದುಬತ್ತಿಯನ್ನು ತಲೆಯಿಂದ ಕಾಲುಗಳ ವರೆಗೆ ನೇರ ರೇಖೆಯಲ್ಲಿ ಮೂರು ಬಾರಿ ತಿರುಗಿಸಬೇಕು ಹಾಗೂ ಆಗ `ಸಚ್ಚಿದಾನಂದ ಪರಬ್ರಹ್ಮ’, ಎಂದು ಹೇಳಬೇಕು.

೩. ಆವರಣವನ್ನು ತೆಗೆಯುವುದರಿಂದ ಆಗಿರುವ ಲಾಭ

ಈ ಪದ್ಧತಿಯಯಿಂದ ಆವರಣವನ್ನು ತೆಗೆಯಲು ಕೇವಲ ೨ ರಿಂದ ೩ ನಿಮಿಷಗಳೇ ಬೇಕಾಗುತ್ತವೆ. ಈ ಪದ್ದತಿಯಿಂದ ಸಾಧಕರ ಮೇಲಾಗಿರುವ ಪರಿಣಾಮವನ್ನು ನೋಡಿದಾಗ ಅನೇಕ ಸಾಧಕರ ಆವರಣ ಕೂಡಲೇ ದೂರವಾಗಿರುವುದು ಗಮನಕ್ಕೆ ಬಂದಿದೆ. ಸಾಧಕರಿಗೆ ಹಗುರೆನಿಸಿ ಉತ್ಸಾಹದ ಅರಿವಾಯಿತು ಹಾಗೂ ಆನಂದವೂ ಸಿಕ್ಕಿತು. ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಒಬ್ಬ ಸಾಧಕನ ತೊಂದರೆ ಕಡಿಮೆಯಾಗಿದೆ. ಆದ್ದರಿಂದ ಆವರಣ ತೆಗೆಯುವ ಈ ಪದ್ಧತಿಯು ಉತ್ತಮವಾಗಿದೆ.

೪. ಬೇರೆಯವರ ಮೇಲಿನ ಆವರಣವನ್ನೂ ತೆಗೆಯಬಹುದು

ಯಾವ ರೀತಿ ನಾವು ಬೇರೆಯರಿಗೆ ಉಪಾಯ ಮಾಡುತ್ತೇವೆಯೋ, ಅದೇ ರೀತಿ ಬೇರೆ ಸಾಧಕರ ಮೇಲಿನ ಆವರಣವನ್ನೂ ಈ ಪದ್ಧತಿಯಿಂದ ತೆಗೆಯಬಹುದು. ಸಾಧಕ ಇಲ್ಲದಿರುವಾಗ ಆ ಸಾಧಕನ ಸ್ಮರಣೆಯನ್ನು ಮಾಡಿ ಅವನ ಚಕ್ರಗಳ ಬದಲು ನಮ್ಮ ಚಕ್ರಗಳ ಮೇಲಿನ ಆವರಣವನ್ನು ಊದುಬತ್ತಿಯಿಂದ ತೆಗೆಯಬೇಕು.

೫. ಆವರಣ ತೆಗೆಯುವಾಗ ತೆಗೆದುಕೊಳ್ಳಬೇಕಾದ ಕಾಳಜಿ

ಅ. ಆವರಣವನ್ನು ಭಾವಪರ‍್ಣವಾಗಿ ತೆಗೆಯಬೇಕು.

ಆ. ಊದುಬತ್ತಿಯನ್ನು ಉಪಯೋಗಿಸಿದ ನಂತರ ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಸನಾತನದ ಪುಸ್ತಕದಲ್ಲಿಡಬೇಕು, ಅದರಿಂದ ಅದು ಚರ‍್ಜ್ ಆಗುವುದು.

ಇ. ಊದುಬತ್ತಿಯನ್ನು ಅವಶ್ಯಕತೆಗನುಸಾರ ಬದಲಾಯಿಸಬೇಕು.

ಈ. ತೊಂದರೆಯ ತೀವ್ರತೆಗನುಸಾರ ಗಂಟೆಗೊಮ್ಮೆ ಅಥವಾ ಅವಶ್ಯಕತೆಯಂತೆ ಈ ಪದ್ಧತಿಯಿಂದ ಆವರಣವನ್ನು ತೆಗೆಯಬೇಕು.

೬. ಉರಿಸಿದ ಊದುಬತ್ತಿಯಿಂದ ಆವರಣ ತೆಗೆಯುವುದಕ್ಕಿಂತ ಉರಿಸದಿರುವ

ಊದುಬತ್ತಿಯಿಂದ ಆವರಣ ತೆಗೆಯುವುದು ಹೆಚ್ಚು ಪ್ರಭಾವಶಾಲಿಯಾಗಿದೆ ಎಂಬುದು ಗಮನಕ್ಕೆ ಬರುವುದು ಸೌ. ಅಂಜಲಿ ಜೋಶಿ (ಪತ್ನಿ) ಎರಡು ಅಕ್ಷರಗಳಿಂದ ಉರಿಸಿದ ಊದುಬತ್ತಿಯಿಂದ ಈ ಪದ್ಧತಿಯಿಂದ ಆವರಣವನ್ನು ತೆಗೆಯುತ್ತಿದ್ದಳು. ಈ ಪದ್ಧತಿಯನ್ನು ನಾನು ಕೆಲವು ತೀವ್ರ ತೊಂದರೆಯಿರುವ ಸಾಧಕರಿಗೆ ಹೇಳಿದಾಗ ಅವರ ಆವರಣ ಕೇವಲ ಶೇ. ೨೦ ರಿಂದ ೩೦ ರಷ್ಟು ಕಡಿಮೆಯಾಗುತ್ತಿತ್ತು. ನಾನು ಈ ಪದ್ಧತಿಯನ್ನು ಸದ್ಗುರು ಮುಕುಲ ಗಾಡಗೀಳರಿಗೆ ಹೇಳಿದಾಗ ಅವರು ಉರಿಸದ ಊದುಬತ್ತಿಯಿಂದ ಆವರಣ ತೆಗೆಯುವ ಪ್ರಯೋಗವನ್ನು ಮಾಡಲು ಹೇಳಿದರು. ತೀವ್ರ ತೊಂದರೆಯಿರುವ ಒಬ್ಬ ಸಾಧಕನು ಉರಿಸಿದ ಊದುಬತ್ತಿಯಿಂದ ಆವರಣ ತೆಗೆದಾಗ ಶೇ. ೩೦ ರಷ್ಟು ಆವರಣ ಹೋಗುತ್ತಿತ್ತು. ಅವನು ಉರಿಸದಿರುವ ಊದುಬತ್ತಿಯಿಂದ ಆವರಣ ತೆಗೆದಾಗ ಅದರಿಂದ ಶೇ. ೩೫ ರಷ್ಟು ಆವರಣ ಕಡಿಮೆಯಾಗಿರುವುದು ಅವನಿಗೆ ಅರಿವಾಯಿತು. ಹಾಗೆಯೇ ಉರಿಸದಿರುವ ಊದುಬತ್ತಿಯಿಂದ ಆವರಣ ತೆಗೆದಾಗ ಕೆಲವು ಸಾಧಕರಿಗೆ ಆಜ್ಞಾಚಕ್ರದಲ್ಲಿ ಒಳ್ಳೆಯ ಸಂವೇದನೆಗಳ ಅರಿವಾಯಿತು. `ಉರಿಸದಿರುವ ಊದುಬತ್ತಿಯು ನರ‍್ಗುಣ ಸ್ತರದಲ್ಲಿ ಕರ‍್ಯವನ್ನು ಮಾಡುವುದರಿಂದ ಅದರಿಂದ ಆವರಣ ತೆಗೆದರೆ ಶೇ. ೫ ರಷ್ಟು ಹೆಚ್ಚು ಪ್ರಮಾಣದಲ್ಲಿ ಆವರಣ ಹೋಗುತ್ತದೆ’, ಎಂಬುದು ನನಗೆ ಅರಿವಾಯಿತು. ಇದರಿಂದ, ಸಾಧಕರು `ಸಾಧನೆಯ ಯಾವುದಾದರೊಂದು ಹೊಸ ಪದ್ದತಿಯನ್ನು ಕಂಡು ಹಿಡಿದರೂ ಅದನ್ನು ಒಮ್ಮೆ ಉನ್ನತರಿಗೆ ತೋರಿಸಿದರೆ ಅದರಿಂದ ಹೆಚ್ಚು ಲಾಭವಾಗುತ್ತದೆ’, ಎಂಬುದು ನನಗೆ ಕಲಿಯಲು ಸಿಕ್ಕಿತು.

ಶ್ರೀಗುರುಗಳೇ ನಮ್ಮಿಂದ ಆವರಣವನ್ನು ತೆಗೆಯುವ ಒಂದು ಹೊಸ ಪ್ರಯತ್ನವನ್ನು ಮಾಡಿಸಿಕೊಂಡರು. ಸಮಷ್ಟಿಗೆ ಅದರ ಲಾಭವಾಗುವ ಉದ್ದೇಶದಿಂದ ಅವರು ನನಗೆ `ಅಧ್ಯಯನವನ್ನು ಹೇಗೆ ಮಾಡಬೇಕು ?’, ಎಂಬುದನ್ನು ಕಲಿಸಿದರು. ಅವರ ಕೃಪೆ ಯಿಂದಲೇ ನನಗೆ ಈ ಲೇಖನವನ್ನು ಮಾಡಲು ಸಾಧ್ಯವಾಯಿತು. ಅದಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.’

– ಆಧುನಿಕ ಪಶುವೈದ್ಯ ಅಜಯ ಜೋಶಿ (ಆಧ್ಯಾತ್ಮಿಕ ಮಟ್ಟ ಶೇ. ೬೮, ವಯಸ್ಸು ೬೬ ರ‍್ಷ), ಗೋವಾ. (೧೯.೬.೨೦೨೨)

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.