‘ಮನುಷ್ಯನು ಎಷ್ಟೇ ಕಲಿತಿದ್ದರೂ ಮತ್ತು ಅವನು ಎಷ್ಟೇ ಜ್ಞಾನವನ್ನು ಪಡೆದಿದ್ದರೂ, ‘ಯಾವುದಾದರೊಂದು ಪ್ರಸಂಗದಲ್ಲಿ ಯಾವ ಜ್ಞಾನ ಉಪಯೋಗಿಸಬೇಕು ?’,ಎಂದು ಬುದ್ಧಿಯಿಂದ ನಿಶ್ಚಯಿಸುವುದು ತುಂಬಾ ಕಠಿಣವಾಗಿರುತ್ತದೆ. ಅದಕ್ಕಾಗಿ ಅವನಿಗೆ ಪುನಃ ಆವಿಷಯದ ಪುಸ್ತಕಗಳನ್ನು ತಿರುಗಿಸಬೇಕಾಗುತ್ತದೆ. ಆದರೆ ಜ್ಞಾನಿ ಎಂದು ಸಾಧನೆಯನ್ನು ಮಾಡುತ್ತಿದ್ದರೆ ಮತ್ತು ಅವನ ಮನೋಲಯ ಮತ್ತು ಬುದ್ಧಿಲಯವಾಗಿದ್ದರೆ, ಅವನಿಗೆ ಭಗವಂತನೇ ‘ಯಾವ ಜ್ಞಾನವನ್ನು ಉಪಯೋಗಿಸಬಹುದೆಂದು’ ಸೂಚಿಸುತ್ತಾನೆ ಹಾಗೆ ‘ಯಾವುದಾದರೊಂದು ಪ್ರಸಂಗದಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಕು ?’, ಎಂಬುದನ್ನೂ ಭಗವಂತನೇ ಸೂಚಿಸುತ್ತಾನೆ. ಅವನಿಗೆ ಬುದ್ಧಿಯಿಂದ ವಿಚಾರ ಮಾಡಬೇಕಾಗುವುದಿಲ್ಲ. ಹೆಚ್ಚೆಂದರೆ ಅವನು ‘ದೇವರು ಸೂಚಿಸಿದ ಉಪಾಯ ಯೋಗ್ಯವಾಗಿದೆಯೇ ?’,ಎಂಬುದನ್ನು ಪರಿಶೀಲಿಸಬಹುದು. ನಿಜ ಹೇಳುವುದಾದರೆ ಅಧ್ಯಾತ್ಮದಲ್ಲಿನ ಅಧಿಕಾರಿ ವ್ಯಕ್ತಿಗಳು ಕಲಿಯದಿದ್ದರೂ, ಅವರಿಗೆ ಎಲ್ಲ ವಿಷಯಗಳ ಜ್ಞಾನವನ್ನು ದೇವರು ನೀಡುತ್ತಿರುವುದರಿಂದ ಸರ್ವಜ್ಞರಾಗಿರುತ್ತಾರೆ !’
– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿ.ಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩೦.೪.೨೦೨೨)