ಶ್ರೀನಗರದಲ್ಲಿ ೩ ಭಯೋತ್ಪಾದಕರ ಸಾವು

ಶ್ರೀನಗರದ ಹೊರಗೆ ಪಂಥಾಚೌಕ ಪ್ರದೇಶದಲ್ಲಿ ಭದ್ರತಾಪಡೆಯು ಒಂದು ಚಕಮಕಿಯಲ್ಲಿ ೩ ಭಯೋತ್ಪಾದಕರನ್ನು ಸಾಯಿಸಿದೆ.

ಖಜುರಾಹೋ (ಮಧ್ಯಪ್ರದೇಶ) ದಿಂದ ಛತ್ತೀಸಗಢ ಪೊಲೀಸರಿಂದ ಕಾಲೀಚರಣ ಮಹಾರಾಜರ ಬಂಧನ !

ಧರ್ಮಸಂಸತ್ತಿನಲ್ಲಿ ಮೋಹನದಾಸ ಗಾಂಧಿಯವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಲಾಗಿದೆ ಎನ್ನಲಾಗುವ ಪ್ರಕರಣದಲ್ಲಿ ಛತ್ತೀಸಗಢದ ಪೊಲೀಸರು ಮಧ್ಯಪ್ರದೇಶದ ಖಜುರಾಹೋದಿಂದ ಕಾಲೀಚರಣ ಮಹಾರಾಜರನ್ನು ಬಂಧಿಸಿದ್ದಾರೆ.

ಕಾಶ್ಮೀರದಲ್ಲಿ ೬ ಭಯೋತ್ಪಾದಕರ ಸಾವು

ಜಮ್ಮು-ಕಾಶ್ಮೀರದ ಕುಲಗಾಮ್ ಮತ್ತು ಅನಂತನಾಗ ಈ ಜಿಲ್ಲೆಗಳಲ್ಲಿ ನಡೆದಿರುವ ಬೇರೆಬೇರೆ ಚಕಮಕಿಗಳಲ್ಲಿ ಭದ್ರತಾಪಡೆಯು ೬ ಭಯೋತ್ಪಾದಕರನ್ನು ಸಾಯಿಸಿದೆ. ಈ ಚಕಮಕಿಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾನೆ.

ಬಿಜನೌರ (ಉತ್ತರಪ್ರದೇಶ) ಇಲ್ಲಿ ಇಬ್ಬರೂ ಗೂಂಡಾಗಳಿಂದ ಪೋಲಿಸ ಸಿಬ್ಬಂದಿಗೆ ಥಳಿತ !

ಇಬ್ಬರು ಗೂಂಡಾಗಳು ಪೊಲೀಸ್ ಸಿಬ್ಬಂದಿಗೆ ಥಳಿಸಿ ಅವರಿಂದ ರೈಫಲ್ ದೋಚಿದ್ದಾರೆ. ಭೂತಪುರಿ ತಿರಾಹಾ ಪೊಲೀಸ್ ಠಾಣೆಯಲ್ಲಿನ ಲಲಿತ್ ಕುಮಾರ ಇವರು ಥಳಿತಕ್ಕೊಳಗಾದ ಪೊಲೀಸ್ ಸಿಬ್ಬಂದಿಯಾಗಿದ್ದಾರೆ.

ಎರ್ನಾಕುಲಂ (ಕೇರಳ) ಇಲ್ಲಿ ಪ್ರವಾಸಿ ಕಾರ್ಮಿಕರಿಂದ ಪೊಲೀಸರ ಮೇಲೆ ಹಲ್ಲೆ

ಎರ್ನಾಕುಲಂ ಜಿಲ್ಲೆಯಲ್ಲಿ ಕಿಝಕ್ಕಂಬಲಂ ಇಲ್ಲಿ ‘ಕಿಟೆಕ್ಸ್ ಕಂಪನಿಯ ಕಾರ್ಮಿಕರ ಶಿಬಿರದ ಪರಿಸರದಲ್ಲಿ ಕ್ರಿಸ್‌ಮಸ್ ಆಚರಿಸಲಾಗುತ್ತಿರುವಾಗ ನಾಗಾಲ್ಯಾಂಡ್ ಮತ್ತು ಮಣಿಪುರ್ ಇಲ್ಲಿಯ ಮದ್ಯಪಾನ ಮಾಡಿರುವ ಪ್ರವಾಸಿಗರು ಪೊಲೀಸರ ಮೇಲೆ ಹಲ್ಲೆ ನಡೆಸಿ ಹಿಂಸಾಚಾರ ನಡೆಸಿದ್ದಾರೆ.

ಪಂಜಾಬ ಪೋಲೀಸ ದಳದ ಅಮಾನತು ಗೊಳಿಸಲಾಗಿರುವ  ಹವಾಲ್ದಾರ್ ಗಗನದೀಪ ಸಿಂಗ ಇವನಿಂದಲೇ ಲೂಧಿಯಾನಾದಲ್ಲಿನ ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟವಾಗಿದೆ ಎಂದು ಬಹಿರಂಗವಾಗಿದೆ

ಲೂಧಿಯಾನ ನ್ಯಾಯಾಲಯದಲ್ಲಾಗಿದ್ದ ಬಾಂಬ್ ಸ್ಫೋಟವನ್ನು ಗಗನದೀಪ ಸಿಂಗ ಇವನಿಂದಾಗಿದೆ ಮತ್ತು ಅದರಲ್ಲಿ ಅವನು ಸಾವನ್ನಪ್ಪಿದ್ದಾನೆ, ಎಂಬ ಮಾಹಿತಿಯನ್ನು ಪಂಜಾಬ್ ಪೊಲೀಸರು ನೀಡಿದ್ದಾರೆ.

ಅಮೃತಸರ (ಪಂಜಾಬ್)ದಲ್ಲಿ ಅಜ್ಞಾತರಿಂದ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ವಿಗ್ರಹಗಳ ಧ್ವಂಸ ಮತ್ತು ಕಳ್ಳತನ

ಅಜನಾಲಾ ಪ್ರದೇಶದಲ್ಲಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಅಜ್ಞಾತರು ಅರ್ಚಕನನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ ದೇವಸ್ಥಾನದ ಎರಡು ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸಿದರು ಮತ್ತು ಅಲ್ಲಿಯ ಬೆಲೆಬಾಳುವ ಆಭರಣಗಳು ಮತ್ತು ದ್ವಿಚಕ್ರ ವಾಹನದೊಂದಿಗೆ ಪರಾರಿಯಾಗಿದ್ದಾರೆ.

ಲುಧಿಯಾನಾ (ಪಂಜಾಬ) ಇಲ್ಲಿಯ ನ್ಯಾಯಾಲಯದಲ್ಲಿ ನಡೆದ ಸ್ಫೋಟದಲ್ಲಿ ಒಬ್ಬನ ಸಾವು !

ನ್ಯಾಯಾಲಯದ ಆವರಣದಲ್ಲಿ ನಡೆದಿರುವ ಸ್ಫೋಟದಲ್ಲಿ ಒಬ್ಬನು ಸಾವನ್ನಪ್ಪಿದ್ದಾನೆ ಹಾಗೂ ಅನೇಕರು ಗಾಯಗೊಂಡಿದ್ದಾರೆ. ಈ ಸ್ಫೋಟ ನ್ಯಾಯಾಲಯದ ಎರಡನೇ ಮಹಡಿಯಲ್ಲಿ ೯ ಸಂಖ್ಯೆಯ ನ್ಯಾಯಾಲಯದಲ್ಲಿ ಆಗಿದೆ ಎಂದು ಹೇಳಲಾಗುತ್ತಿದೆ.

ಕೇರಳದಲ್ಲಿ ಭಾಜಪ ಮುಖಂಡ ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಡಿ.ಪಿ.ಐ.ಯ 5 ಕಾರ್ಯಕರ್ತರ ಬಂಧನ

ಭಾಜಪದ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್ ಅವರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಪಕ್ಷವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ಯ ಐವರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಕೇರಳದಲ್ಲಿ ಮತಾಂಧ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಪದಾಧಿಕಾರಿಯ ಹತ್ಯೆಯ ಪ್ರಕರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಇಬ್ಬರ ಬಂಧನ !

ಡಿಸೆಂಬರ್ ೧೮ ರಂದು ರಾತ್ರಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್. ಡಿ. ಪಿ. ಐ.)ದ ರಾಜ್ಯ ಸಚಿವರಾದ ಕೆ.ಎಸ್. ಶಾನರವರ ಹತ್ಯೆಯ ಪ್ರಕರಣದಲ್ಲಿ ಕೇರಳ ಪೊಲೀಸರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಸಾದ ಮತ್ತು ರಥೀಶ ಎಂಬ ಇಬ್ಬರು ಸ್ವಯಂಸೇವಕರನ್ನು ಬಂಧಿಸಿದ್ದಾರೆ.