ಲೂಧಿಯಾನ (ಪಂಜಾಬ) – ಇಲ್ಲಿಯ ನ್ಯಾಯಾಲಯದಲ್ಲಾಗಿದ್ದ ಬಾಂಬ್ ಸ್ಫೋಟವನ್ನು ಗಗನದೀಪ ಸಿಂಗ ಇವನಿಂದಾಗಿದೆ ಮತ್ತು ಅದರಲ್ಲಿ ಅವನು ಸಾವನ್ನಪ್ಪಿದ್ದಾನೆ, ಎಂಬ ಮಾಹಿತಿಯನ್ನು ಪಂಜಾಬ್ ಪೊಲೀಸರು ನೀಡಿದ್ದಾರೆ. ಗಗನದೀಪ ಇವರು ಮಾಜಿ ಪೊಲೀಸ್ ಹವಾಲ್ದಾರ್ ಆಗಿದ್ದು ಅವರನ್ನು ಮಾದಕ ವಸ್ತುಗಳ ಕಳ್ಳಸಾಗಾಣಿಕೆಯ ಕಾರಣದಿಂದ ಪೋಲಿಸ ದಳದಿಂದ ಅಮಾನತುಗೊಳಿಸಲಾಗಿತ್ತು. ಅವರಿಗೆ ಎರಡು ವರ್ಷ ಕಾರಾಗೃಹ ಶಿಕ್ಷೆಯನ್ನೂ ನೀಡಲಾಗಿತ್ತು. ಇದೇ ವರುಷ ಸೆಪ್ಟೆಂಬರನಲ್ಲಿ ಅವರು ಕಾರಾಗೃಹದಿಂದ ಮುಕ್ತರಾಗಿದ್ದರು, ಈ ಸ್ಫೋಟದಲ್ಲಿ ಎರಡು ಕಿಲೋ ಆರ್ಡಿಎಕ್ಸ್ ಈ ಸ್ಫೋಟಕವನ್ನು ಉಪಯೋಗಿಸಲಾಗಿತ್ತು ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.
Ludhiana court blast: Bomber, who died during the attack, was an ex-cop, was identified by his phone and religious tattoo on his bodyhttps://t.co/OQqb07NvC4
— OpIndia.com (@OpIndia_com) December 25, 2021
ಗಗನದೀಪ ಇವನು ಈ ಸ್ಫೋಟ ಯಾಕೆ ನಡೆಸಿದನು, ಅವನಿಗೆ ಅದರ ಪ್ರಶಿಕ್ಷಣ ನೀಡಿದವರು ಯಾರು, ಇದರ ಹಿಂದೆ ಯಾರ ಕೈವಾಡವಿದೆ, ಇದರ ಸವಿಸ್ತಾರ ಅನ್ವೇಷಣೆ ನಡೆಸಲಾಗುವುದು. ಗಗನದೀಪ ಇವರಿಗೆ ಬಾಂಬ್ ಹೇಗೆ ಜೋಡಿಸುವುದು, ಈ ವಿಷಯವಾಗಿ ಸಂಚಾರ ವಾಣಿಯ ಮೂಲಕ ಯಾರೋ ಮಾರ್ಗದರ್ಶನ ನೀಡುತ್ತಿದ್ದರು ಮತ್ತು ಅದೇ ಸಮಯದಲ್ಲಿ ಅವರಿಂದ ಬಾಂಬ್ ಸ್ಫೋಟ ನಡೆದಿದೆ ಮತ್ತು ಅವರ ಮೃತ್ಯು ಆಗಿದೆ. ಈ ಸ್ಫೋಟದಲ್ಲಿ ಇತರ ೫ ಜನರು ಗಾಯಗೊಂಡಿದ್ದಾರೆ, ಅವರಿಗೆ ಮೂರು ಬೇರೆಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಎಲ್ಲರ ಆರೋಗ್ಯ ಸ್ಥಿರವಾಗಿರುವ ಮಾಹಿತಿ ನೀಡಲಾಗಿದೆ.