ಅಮೃತಸರ (ಪಂಜಾಬ್)ದಲ್ಲಿ ಅಜ್ಞಾತರಿಂದ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ವಿಗ್ರಹಗಳ ಧ್ವಂಸ ಮತ್ತು ಕಳ್ಳತನ

ಕಾಂಗ್ರೆಸ್‍ನ ರಾಜ್ಯದಲ್ಲಿ ಅಸುರಕ್ಷಿತ ಹಿಂದೂ ದೇವಸ್ಥಾನಗಳು !

ಅಮೃತಸರ (ಪಂಜಾಬ್) – ಇಲ್ಲಿಯ ಅಜನಾಲಾ ಪ್ರದೇಶದಲ್ಲಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಅಜ್ಞಾತರು ಅರ್ಚಕನನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ ದೇವಸ್ಥಾನದ ಎರಡು ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸಿದರು ಮತ್ತು ಅಲ್ಲಿಯ ಬೆಲೆಬಾಳುವ ಆಭರಣಗಳು ಮತ್ತು ದ್ವಿಚಕ್ರ ವಾಹನದೊಂದಿಗೆ ಪರಾರಿಯಾಗಿದ್ದಾರೆ. ಈ ಘಟನೆಯ ತನಿಖೆಗೆ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಇಲ್ಲಿನ ಗೋಶಾಲೆಯ ಸಂಚಾಲಕರು ಹಾಗೂ ಹಿಂದುತ್ವನಿಷ್ಠ ಶ್ರೀ. ಅಶ್ವನಿಕುಮಾರ ಇವರು, ಇನ್ನೆರಡು ದಿನದೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಇಡೀ ಅಜನಾಲಾವನ್ನೇ ಮುಚ್ಚಲಾಗುವುದು ಮತ್ತು ನಾನು ಆತ್ಮದಹನ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.