ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation

ಕಾಶ್ಮೀರದಲ್ಲಿ ಹವಾಲ್ದಾರ್ ನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣ

ಶ್ರೀನಗರ (ಜಮ್ಮು-ಕಾಶ್ಮೀರ) – ಅನಂತನಾಗ್‌ನಲ್ಲಿ ಆಡಳಿತವು ಭಯೋತ್ಪಾದನೆಯ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಂಡಿದೆ. ಅನಂತನಾಗ್‌ನ ಲಾಲ್‌ಚೌಕ್‌ನಲ್ಲಿ ಜುಲೈ ೨೨ ರಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಹವಾಲ್ದಾರ್ ಆಶಿಕ್ ಹುಸೇನ್ ಕುರೇಶಿ ಅವರ ಮೇಲೆ ಜಿಹಾದಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಈ ದಾಳಿಯಲ್ಲಿ ಭಾಗಿಯಾಗಿದ್ದ ‘ಲಷ್ಕರ್-ಎ-ತೊಯ್ಬಾ’ದ ಇಬ್ಬರು ಭಯೋತ್ಪಾದಕರ ಮನೆಗಳನ್ನು ಆಡಳಿತವು ಬುಲ್ಡೋಜರ್ ಮೂಲಕ ಸಂಪೂರ್ಣವಾಗಿ ನೆಲಸಮ ಗೊಳಿಸಿದೆ. ಆದಿಲ್ ಠೋಕರ್ (ಬಿಜ್‌ಬೆಹಾರ ನಿವಾಸಿ) ಮತ್ತು ಹಾರೂನ್ ಗನಿ (ಹಸನ್‌ಪೋರಾ) ಎಂದು ಅವರ ಹೆಸರುಗಳಿವೆ.