ಲುಧಿಯಾನಾ (ಪಂಜಾಬ) ಇಲ್ಲಿಯ ನ್ಯಾಯಾಲಯದಲ್ಲಿ ನಡೆದ ಸ್ಫೋಟದಲ್ಲಿ ಒಬ್ಬನ ಸಾವು !

  • ಅನೇಕರಿಗೆ ಗಾಯ

  • ಸ್ಫೋಟದ ಕಾರಣ ಇಲ್ಲಿವರೆಗೂ ಅಸ್ಪಷ್ಟ

ಲುಧಿಯಾನಾ (ಪಂಜಾಬ) – ಇಲ್ಲಿಯ ನ್ಯಾಯಾಲಯದ ಆವರಣದಲ್ಲಿ ನಡೆದಿರುವ ಸ್ಫೋಟದಲ್ಲಿ ಒಬ್ಬನು ಸಾವನ್ನಪ್ಪಿದ್ದಾನೆ ಹಾಗೂ ಅನೇಕರು ಗಾಯಗೊಂಡಿದ್ದಾರೆ. ಈ ಸ್ಫೋಟ ನ್ಯಾಯಾಲಯದ ಎರಡನೇ ಮಹಡಿಯಲ್ಲಿ ೯ ಸಂಖ್ಯೆಯ ನ್ಯಾಯಾಲಯದಲ್ಲಿ ಆಗಿದೆ ಎಂದು ಹೇಳಲಾಗುತ್ತಿದೆ. ಈ ಸ್ಫೋಟದಿಂದ ಅಲ್ಲಿಯ ಗೋಡೆ ಕುಸಿದು ಅದರ ಕೆಳಗಡೆ ಕೆಲವರು ಸಿಲುಕಿದ್ದಾರೆ, ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದಿದೆ. ಈ ಸ್ಫೋಟದಿಂದ ಆವರಣದಲ್ಲಿನ ವಾಹನಗಳಿಗೆ ಹಾನಿಯಾಗಿದೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಈ ಸ್ಫೋಟ ಬಾಂಬನಿಂದ ಆಗಿದೆ ಎಂದು ಹೇಳಲಾಗುತ್ತಿದೆ. ಆದರೂ ಇದು ವರೆಗೂ ಅಧಿಕೃತವಾಗಿ ಏನನ್ನೂ ಹೇಳಲಾಗಲಿಲ್ಲ. ಸ್ಫೋಟದ ನಂತರ ನ್ಯಾಯಾಲಯದ ಆವರಣದಲ್ಲಿ ನೂಕುನುಗ್ಗಲು ಉಂಟಾಗಿದೆ.

ಒಬ್ಬ ಪ್ರತ್ಯಕ್ಷದರ್ಶಿಯ ಹೇಳಿಕೆಯ ಪ್ರಕಾರ ಈ ಸ್ಫೋಟ ನ್ಯಾಯಾಲಯದ ಶೌಚಾಲಯದಲ್ಲಿ ನಡೆದಿದೆ. ಯಾರಾದರು ಬಂದು ಈ ಸ್ಫೋಟ ಮಾಡಿರುವುದು ಎಂದು ಪ್ರತ್ಯಕ್ಷದರ್ಶಿಗಳ ದಾವೆ ಮಾಡುತ್ತಿದ್ದಾರೆ. ಇದೇ ತಿಂಗಳಲ್ಲಿ ರಾಜ್ಯದ ಪಾಕಿಸ್ತಾನ ಗಡಿಗೆ ಅಂಟಿಕೊಂಡಿರುವ ಗುರುದಾಸಪುರ ಜಿಲ್ಲೆಯಲ್ಲಿನ ಸಲೇಮಪೂರ ಅರೈಯನ ಊರಿನಿಂದ ೪ ನಾಡ್‌ಬಾಂಬ್ ಮತ್ತು ಟಿಫಿನ್ ಬಾಂಬ್ (ತಿಂಡಿಯ ಡಬ್ಬಿಯಲ್ಲಿ ಇಟ್ಟಿರುವ ಬಾಂಬ್) ಸಿಕ್ಕಿತ್ತು. ಇದರ ೨ ದಿನಗಳ ಮೊದಲು ಪೊಲೀಸರಿಗೆ ರಾಜ್ಯದಲ್ಲಿನ ದಿನಾನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಆರ್ಡಿಎಕ್ಸ್ ಸ್ಫೋಟಕ ವಶಪಡಿಸಿಕೊಳ್ಳಲಾಗಿತ್ತು.

ಬಾಂಬ್ ಜೋಡಿಸುವಾಗ ಸ್ಪೋಟ ನಡೆದಿರುವ ಸಾಧ್ಯತೆಯ

ತನಿಖಾ ದಳದ ಮೂಲಗಳು ನೀಡಿರುವ ಮಾಹಿತಿಗನುಸಾರ ಬಾಂಬ್ ಇಡಲು ಆತ ಶೌಚಾಲಯದಲ್ಲಿ ಜೋಡಣೆ ಮಾಡುತ್ತಿರುವಾಗ ಸ್ಫೋಟಗೊಂಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇದರಲ್ಲಿ ಬಾಂಬ್ ಜೋಡಿಸುವ ವ್ಯಕ್ತಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಹೇಳಿದೆ.