ಹರಿಯಾಣಾದ ಶಾಸಕರಿಗೆ ಸುಲಿಗೆಗಾಗಿ ಬೆದರಿಕೆ ಒಡ್ಡಿದ ೬ ಅಪರಾಧಿಗಳ ಬಂಧನ

ಸುಲಿಗೆಗಾಗಿ ಶಾಸಕರಿಗೆ ಕೊಲೆ ಬೆದರಿಕೆ ನೀಡಿದ ಪ್ರಕಾರದಲ್ಲಿ ಹರಿಯಾಣಾದ ಪೊಲೀಸರ ವಿಶೇಷ ಕಾರ್ಯ ದಳದ ಪೊಲೀಸರು ೬ ಜನರನ್ನು ಬಂಧಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಶುಕ್ರವಾರದ ನಮಾಜ್‌ಗೆ ಹೋಗಲು ಅವಕಾಶ ನೀಡುತ್ತಿಲ್ಲ ಎಂದು ಕಲ್ಪಿತ ಆರೋಪ

ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಸ್ಥಳೀಯ ನಾಯಕ ಅಕ್ಬರ್ ಖಾನ್‌ನು ಶುಕ್ರವಾರ ಗೋಯಿಲ್ಕೆರಾ ಪ್ರದೇಶದ ಸರಕಾರಿ ಶಾಲೆಗೆ ನುಗ್ಗಿ ವಿದ್ಯಾರ್ಥಿಗಳನ್ನು ಹೋಗಲು ಬಿಡಲಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳ ಎದುರೇ ಶಿಕ್ಷಕ ರಾಮೇಂದ್ರ ದುಬೆಗೆ ಥಳಿಸಿದ್ದಾನೆ.

ದೆಹಲಿಯಲ್ಲಿ ಪಿ.ಎಫ್.ಐ. ಕಾರ್ಯಕ್ರಮಕ್ಕೆ ಪೊಲೀಸರಿಂದ ತಡೆ

ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಜುಲೈ ೩೦ ರಂದು ಇಲ್ಲಿನ ಝಂಡೆವಾಲನ್ ಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಿತ್ತು; ಆದರೆ ದೆಹಲಿ ಪೊಲೀಸರು ಇದಕ್ಕೆ ತಡೆ ಒಡ್ಡಿರುವುದರಿಂದ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.

ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ ‘ಎನ್.ಐ.ಎ.’ಗೆ !

ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಜುಲೈ ೨೯ ರಂದು ಸಂಜೆ ಮಾಧ್ಯಮಗಳಿಗೆ ತಿಳಿಸಿದರು.

ಒಂದು ಚಪಾತಿಗಾಗಿ ಹಿಂದೂ ರಿಕ್ಷಾಚಾಲಕನನ್ನು ಹತ್ಯೆಗೈದ ಫಿರೋಜ ಖಾನ್ !

ಕರೋಲಬಾಗ ಪ್ರದೇಶದಲ್ಲಿ ಫಿರೋಜ ಖಾನ ಅಲಿಯಾಸ್ ಮನ್ನೂ ಎಂಬವನು ರಿಕ್ಷಾಚಾಲಕ ಮುನ್ನಾ (40 ವರ್ಷ ವಯಸ್ಸು) ಎಂಬವರನ್ನು ಹೊಟ್ಟೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದನು.

ಆಝಮಗಡ್ ಜೈಲಿನಲ್ಲಿ ಬಂದಿಗಳ ಕೈಯಲ್ಲಿ ಮೊಬೈಲ್ ಮತ್ತು ಗಾಂಜಾ : ಕಾರಾಗೃಹ ಅಧೀಕ್ಷಕರು ಸೇರಿ ನಾಲ್ವರು ಅಮಾನತ್ತು

ಇಲ್ಲಿಯ ಸೆರೆಮನೆಯ ಬಂದಿತರಿಗೆ ಸಂಚಾರಿವಾಣಿ, ದೂರದರ್ಶನ, ಮತ್ತು ಗಾಂಜಾ ಪೂರೈಸಿರುವ ಪ್ರಕರಣದಲ್ಲಿ ಕಾರಾಗೃಹ ಅಧೀಕ್ಷಕರು ಸೇರಿ ನಾಲ್ವರನ್ನು ಅಮಾನತ್ತುಗೊಳಿಸಲಾಗಿದೆ. ರವೀಂದ್ರ ಸರೋಜ, ಶ್ರೀಧರ ಯಾದವ, ಅಜಯ ವರ್ಮಾ ಮತ್ತು ಆಶುತೋಷ ಸಿಂಹ ಎಂಬವರು ಅಮಾನತ್ತುಗೊಂಡವರು.

ಭಯೋತ್ಪಾದಕ ದಾಳಿಯ ಸಂಚು ವಿಫಲಗೊಳಿಸಿದ ಅಸ್ಸಾಂ ಪೊಲೀಸರು : ಮದರಸಾ ಚಾಲಕನ ಬಂಧನ

ರಾಜ್ಯದಲ್ಲಿ ದೊಡ್ಡ ಭಯೋತ್ಪಾದಕ ದಾಳಿ ನಡೆಸಲು ಮದರಸಾದಲ್ಲಿ ರೂಪಿಸಲಾಗಿದ್ದ ಸಂಚನ್ನು ಅಸ್ಸಾಂ ಪೊಲೀಸರು ವಿಫಲಗೊಳಿಸಿದರು. ಮೊರಿಗಾಂವ್‌ನ ಮೊಯಿರಾಬಾರಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಜುಲೈ ೨೭ ರಂದು ಮದರಸಾ ನಡೆಸುತ್ತಿದ್ದ ಮುಫ್ತಿ ಮುಸ್ತಫಾ ಎಂಬ ಜಿಹಾದಿಯನ್ನು ಬಂಧಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಭಾಜಪ ಮುಖಂಡನ ಬರ್ಬರ ಹತ್ಯೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಭಾಜಪದ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಪ್ರವೀಣ ನೆಟ್ಟಾರು ಅವರನ್ನು ಅಜ್ಞಾತ ದುಷ್ಕರ್ಮಿಗಳು ಕೊಡಲಿ ಮತ್ತು ಕತ್ತಿಯಿಂದ ಹಲ್ಲೆ ಮಾಡಿ ಕೊಂದಿದ್ದಾರೆ. ಈ ಹತ್ಯೆಯ ಹಿಂದೆ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರ ಕೈವಾಡವಿದೆ ಎನ್ನಲಾಗಿದೆ.

ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿನಿತ ಜಿಂದಾಲ ಇವರ ಶಿರಚ್ಛೇದ ಮಾಡುವ ಬೆದರಿಕೆ!

ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿನೀತ ಜಿಂದಲ ಇವರಿಗೆ ಅಜ್ಞಾತರಿಂದ ಪತ್ರ ಬಂದಿದ್ದು ಶಿರಚ್ಛೇದದ ಬೆದರಿಕೆ ನೀಡಲಾಗಿದೆ. ಜಿಂದಲ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬೆದರಿಕೆಯ ತನಿಖೆ ನಡೆಸುತ್ತಿದ್ದಾರೆ. ಜಿಂದಾಲ್ ಇವರು ಟ್ವೀಟ್ ಮೂಲಕ ಮಾಹಿತಿ ನೀಡಿದರು.

ಮಧ್ಯಪ್ರದೇಶದ ಹಿಂದೂ ವಿದ್ಯಾರ್ಥಿಯ ದೇಹ ಎರಡು ಭಾಗವಾಗಿ ತುಂಢರಿಸಿದ ದೇಹ ಪತ್ತೆ !

ಮಧ್ಯಪ್ರದೇಶದ ರಾಯಸೇನಾ ಜಿಲ್ಲೆಯಲ್ಲಿ ಜುಲೈ ೨೪ ರ ಸಂಜೆ ನಿಶಂಕ ರಾಠೋರ ಇಂಜಿನಿಯರ್ ಶಾಖೆಯ ಒಬ್ಬ ವಿದ್ಯಾರ್ಥಿಯ ಮೃತ ದೇಹ ರೈಲ್ವೆ ಹಳಿಯ ಮೇಲೆ ಸೊಂಟದಿಂದ ಮೇಲೆ ಮತ್ತು ಕೆಳಗೆ ಈ ರೀತಿ ಎರಡು ಭಾಗಗಳಲ್ಲಿ ತುಂಢರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.