ಆಡಳಿತಾರೂಢ ಜಾರ್ಖಂಡ ಮುಕ್ತಿ ಮೋರ್ಚಾದ ಸ್ಥಳೀಯ ನಾಯಕ ಅಕ್ಬರ್ ಖಾನ್‌ನಿಂದ ಶಾಲೆಗೆ ನುಗ್ಗಿ ಹಿಂದೂ ಶಿಕ್ಷಕರಿಗೆ ಥಳಿತ !
ಪೊಲೀಸರಿಂದ ಅಪರಾಧ ದಾಖಲಿಸ ನಿರಾಕರಣೆ ಹಾಗೂ ನಂತರ ನಮಾಜ್‌ನ ಬಗ್ಗೆ ಉಲ್ಲೇಖಿಸದೇ ಅಪರಾಧ ದಾಖಲು !
ಸಿಂಹಭೂಮ್ (ಜಾರ್ಖಂಡ್) – ಇಲ್ಲಿಯ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಸ್ಥಳೀಯ ನಾಯಕ ಅಕ್ಬರ್ ಖಾನ್‌ನು ಶುಕ್ರವಾರ ಗೋಯಿಲ್ಕೆರಾ ಪ್ರದೇಶದ ಸರಕಾರಿ ಶಾಲೆಗೆ ನುಗ್ಗಿ ವಿದ್ಯಾರ್ಥಿಗಳನ್ನು ಹೋಗಲು ಬಿಡಲಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳ ಎದುರೇ ಶಿಕ್ಷಕ ರಾಮೇಂದ್ರ ದುಬೆಗೆ ಥಳಿಸಿದ್ದಾನೆ. ಈ ಬಗ್ಗೆ ದುಬೆ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದಾಗ ಪೊಲೀಸರು ಅಕ್ಬರ್ ಖಾನ್ ಅವರು ಆಡಳಿತ ಪಕ್ಷದ ನಾಯಕರಾಗಿದ್ದರಿಂದ ಅವರ ವಿರುದ್ಧ ದೂರು ದಾಖಲಿಸಲು ನಿರಾಕರಿಸಿದರು; ಆದರೆ ಮರುದಿನ ಅಪರಾಧ ದಾಖಲಿಸಿದ್ದಾರೆ. ಅಪರಾಧವನ್ನು ದಾಖಲಿಸಲು, ಪೊಲೀಸರು ದುಬೆಯಿಂದ ಎರಡನೆ ಬರಿ ದೂರನ್ನು ದಾಖಲಿಸಿಕೊಂಡರು ಮತ್ತು ಅದರಿಂದ ನಮಾಜ್‌ನ ಉಲ್ಲೇಖವನ್ನು ತೆಗೆದುಹಾಕಿದರು. ದುಬೆಯವರು ಅಕ್ಬರ್ ಖಾನ್ ನಿಂದಾಗಿ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿ ರಕ್ಷಣೆ ಕೋರಿದ್ದಾರೆ. ಖಾನ್ ಅವರು ರಾಜ್ಯ ಸಚಿವ ಜೋಬಾ ಮಾಂಝಿ ಅವರಿಗೆ ಆಪ್ತರು ಎಂದು ದುಬೆಯವರು ಹೇಳಿದ್ದಾರೆ
೧. ನಾನು ಯಾವತ್ತೂ ಮಕ್ಕಳನ್ನು ನಮಾಜ್‌ಗೆ ಹೋಗದಂತೆ ಒತ್ತಡ ಹೇರಿಲ್ಲ; ಆದರೆ ಇನ್ನೂ ನಮಾಜ್‌ಗೆ ಹೋಗಲು ಬಿಡಲಿಲ್ಲ ಎಂದು ಹುಡುಗರು ಹೇಳಿದ್ದರು ಎಂದು ಅಕ್ಬರ್ ಖಾನ್ ಹೇಳಿದ್ದಾರೆಂದು ದುಬೆಯವರು ತಿಳಿಸಿದ್ದಾರೆ
೨. ಅಕ್ಬರ್ ಖಾನ್ ಈ ಕುರಿತು, ಥಳಿಸಿದ ಘಟನೆ ನಡೆದಿಲ್ಲ. ರಾಜಕೀಯ ಪಿತೂರಿಯಿಂದ ನನ್ನನ್ನು ಸಿಲುಕಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಆಡಳಿತ ಪಕ್ಷದ ನಾಯಕರ ಗೂಂಡಾಗಿರಿ ! ಓರ್ವ ಶಿಕ್ಷಕರಿಗೆ ಶಾಲೆಗೆ ನುಗ್ಗಿ ವಿದ್ಯಾರ್ಥಿಗಳ ಮುಂದೆ ಥಳಿಸಲು ಇಷ್ಟು ಧೈರ್ಯ ಹೇಗೆ ಬರುತ್ತದೆ ? ಈ ಬಗ್ಗೆ ಜಾತ್ಯತೀತ ಸಂಘಟನೆಗಳು, ಪಕ್ಷಗಳು ಬಾಯಿ ತೆರೆಯುತ್ತವೆಯೇ ? |