ಆಝಮಗಡ್ ಜೈಲಿನಲ್ಲಿ ಬಂದಿಗಳ ಕೈಯಲ್ಲಿ ಮೊಬೈಲ್ ಮತ್ತು ಗಾಂಜಾ : ಕಾರಾಗೃಹ ಅಧೀಕ್ಷಕರು ಸೇರಿ ನಾಲ್ವರು ಅಮಾನತ್ತು

ಆಝಮಗಡ (ಉತ್ತರಪ್ರದೇಶ) – ಇಲ್ಲಿಯ ಸೆರೆಮನೆಯ ಬಂದಿತರಿಗೆ ಸಂಚಾರಿವಾಣಿ, ದೂರದರ್ಶನ, ಮತ್ತು ಗಾಂಜಾ ಪೂರೈಸಿರುವ ಪ್ರಕರಣದಲ್ಲಿ ಕಾರಾಗೃಹ ಅಧೀಕ್ಷಕರು ಸೇರಿ ನಾಲ್ವರನ್ನು ಅಮಾನತ್ತುಗೊಳಿಸಲಾಗಿದೆ. ರವೀಂದ್ರ ಸರೋಜ, ಶ್ರೀಧರ ಯಾದವ, ಅಜಯ ವರ್ಮಾ ಮತ್ತು ಆಶುತೋಷ ಸಿಂಹ ಎಂಬವರು ಅಮಾನತ್ತುಗೊಂಡವರು.

ಕಾರಾಗೃಹದ ಮಹಾನಿರ್ದೇಶಕರು ಆನಂದಕುಮಾರ ಇವರು, ಜುಲೈ ೨೬ ರಂದು ಆಝಮಗಡ್ ಜಿಲ್ಲಾಧಿಕಾರಿ ವಿಶಾಲ ಭಾರದ್ವಾಜ ಮತ್ತು ಪೊಲೀಸ ಅಧೀಕ್ಷಕರಾದ ಅನುರಾಗ ಆರ್ಯ ಇವರು ಕಾರಾಗೃಹದ ಮೇಲೆ ದಾಳಿ ನಡೆಸಿದರು. ಆ ಸಮಯದಲ್ಲಿ ಬಂದಿಗಳ ಬ್ಯಾರಕ್ ನಲ್ಲಿ ೧೨ ಸಂಚಾರಿವಾಣಿ, ಚಾರ್ಜರ್ ಮತ್ತು ಕೆಲವು ಆಕ್ಷೇಪಾರ್ಯ ವಸ್ತುಗಳು ಕಂಡು ಬಂದವು. ಈ ಸಂದರ್ಭದಲ್ಲಿ ಕಾರಾಗೃಹದ ಅಧಿಕಾರಿಗಳ ವಿಚಾರಣೆ ನಡೆಸಿದಾಗ ಅವರು ಸಮಾಧಾನಕಾರಕ ಉತ್ತರ ನೀಡುವಲ್ಲಿ ವಿಫಲರಾದರು, ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಂತಹ ಭ್ರಷ್ಟರನ್ನು ಕೆಲಸದಿಂದ ತೆಗೆದು ಹಾಕಿ ಅವರನ್ನು ಅದೇ ಸೆರೆಮನೆಯಲ್ಲಿ ಶಿಕ್ಷೆ ಅನುಭವಿಸುವಂತೆ ಶಿಕ್ಷಿಸಬೇಕು. ಇಂತಹವರಿಂದ ಅಪರಾಧಿಗಳಿಗೆ ಶಿಕ್ಷೆ ಇದು ಶಿಕ್ಷೆಯಾಗಿ ಅನಿಸುವುದಿಲ್ಲ. ಇಂತಹ ಸ್ಥಿತಿ ಹೆಚ್ಚು ಕಡಿಮೆ ಪ್ರಮಾಣದಲ್ಲಿ ದೇಶದ ಸುಮಾರು ಎಲ್ಲಾ ಸೆರೆಮನೆಗಳಲ್ಲಿ ಇರುವುದು, ಇದರಲ್ಲಿ ಅನುಮಾನವಿಲ್ಲ.