ಭಯೋತ್ಪಾದಕ ದಾಳಿಯ ಸಂಚು ವಿಫಲಗೊಳಿಸಿದ ಅಸ್ಸಾಂ ಪೊಲೀಸರು : ಮದರಸಾ ಚಾಲಕನ ಬಂಧನ

ತನಿಖೆಗಾಗಿ ಮದರಸಾದ ೮ ಮೌಲ್ವಿಗಳು ವಶಕ್ಕೆ !

ಗೌಹಾಟಿ (ಅಸ್ಸಾಂ) – ರಾಜ್ಯದಲ್ಲಿ ದೊಡ್ಡ ಭಯೋತ್ಪಾದಕ ದಾಳಿ ನಡೆಸಲು ಮದರಸಾದಲ್ಲಿ ರೂಪಿಸಲಾಗಿದ್ದ ಸಂಚನ್ನು ಅಸ್ಸಾಂ ಪೊಲೀಸರು ವಿಫಲಗೊಳಿಸಿದರು. ಮೊರಿಗಾಂವ್‌ನ ಮೊಯಿರಾಬಾರಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಜುಲೈ ೨೭ ರಂದು ಮದರಸಾ ನಡೆಸುತ್ತಿದ್ದ ಮುಫ್ತಿ ಮುಸ್ತಫಾ ಎಂಬ ಜಿಹಾದಿಯನ್ನು ಬಂಧಿಸಿದರು. ಈ ವೇಳೆ ಮದರಸಾ ಹಾಗೂ ಕೆಲ ನಿವಾಸಗಳಲ್ಲಿ ದಾಳಿ ನಡೆಸಲಾಗಿದ್ದು, ಮದರಸಾಕ್ಕೆ ಬೀಗ ಜಡಿಯಲಾಗಿದೆ.

ಮುಫ್ತಿ ಮುಸ್ತಫಾ ಈ ಭಯೋತ್ಪಾದಕ ಗುಂಪಿನ ಪ್ರಮುಖ ಸಂಚಾಲಕ ಎಂದು ಹೇಳಲಾಗುತ್ತಿದೆ. ಆತ ಮೊಯಿರಾಬಾರಿಯಲ್ಲಿ ೨೦೧೮ ರಿಂದ ‘ಜಾಮಿ-ಉಲ್-ಹುದಾ’ ಎಂಬ ಮದಸರಾ ನಡೆಸುತ್ತಿದ್ದಾನೆ. ಪೊಲೀಸರು ಮುಸ್ತಫಾನಿಂದ ಮೊಬೈಲ್ ಫೋನ್, ಬ್ಯಾಂಕ್ ಪಾಸ್‌ಬುಕ್ ಮತ್ತು ಅನೇಕ ಅಕ್ಷೆಪಾರ್ಹ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಮದರಸಾದಿಂದ ೮ ಮೌಲ್ವಿಗಳನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ನೆರೆಯ ಬಾಂಗ್ಲಾದೇಶ ಹಾಗೂ ಇತರ ಅನೇಕ ದೇಶಗಳಿಂದ ಈ ಮದರಸಾಕ್ಕೆ ಹಣ ಸರಬರಾಜು ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.

ಬಾಂಗ್ಲಾದೇಶದ ಮೂಲಕ ಭಯೋತ್ಪಾದಕರ ಒಳನುಸುಳುವಿಕೆ ! – ಪೊಲೀಸ್ ಅಧೀಕ್ಷಕರು

ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸ್ ಅಧೀಕ್ಷಕರಾದ ಭಾಸ್ಕರ್ ಜ್ಯೋತಿ ಮಹಂತ್ ಅವರು, ಭಯೋತ್ಪಾದಕ ಸಂಘಟನೆಗಳು ಅಸ್ಸಾಂ ಅನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿವೆ. ಅವರು ಬಾಂಗ್ಲಾದೇಶದ ಮೂಲಕ ರಾಜ್ಯಕ್ಕೆ ನುಸುಳಿ ಮುಸ್ಲಿಂ ಯುವಕರಿಗೆ ‘ಹದೀಸ್’ ಕಲಿಸಿ ಕೆರಳಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇದುವರೆಗೆ ಹಲವು ಮದರಸಾಗಳನ್ನು ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ನಡೆಸುವುದಕ್ಕೆ ಬಳಸಿರುವುದು ಬೆಳಕಿಗೆ ಬಂದಿದ್ದರೂ ಸರಕಾರ ಏಕೆ ಅಂತಹ ಮದರಸಾಗಳನ್ನು ನಿಷೇಧಿಸುತ್ತಿಲ್ಲ ?