ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿನಿತ ಜಿಂದಾಲ ಇವರ ಶಿರಚ್ಛೇದ ಮಾಡುವ ಬೆದರಿಕೆ!

ಅಜಮೇರ ದರ್ಗಾದ ಕರ್ಮಚಾರಿ ಆದಿಲ ಚಿಶ್ತಿ ಇವನ ವಿರುದ್ಧ ದೂರು ನೀಡಿದ್ದರು.

ಹೊಸ ದೆಹಲಿ – ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿನೀತ ಜಿಂದಲ ಇವರಿಗೆ ಅಜ್ಞಾತರಿಂದ ಪತ್ರ ಬಂದಿದ್ದು ಶಿರಚ್ಛೇದದ ಬೆದರಿಕೆ ನೀಡಲಾಗಿದೆ. ಜಿಂದಲ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬೆದರಿಕೆಯ ತನಿಖೆ ನಡೆಸುತ್ತಿದ್ದಾರೆ. ಜಿಂದಾಲ್ ಇವರು ಟ್ವೀಟ್ ಮೂಲಕ ಮಾಹಿತಿ ನೀಡಿದರು. ಮೊದಲು ದೇಶದ ಮತ್ತು ನಂತರ ವಿದೇಶಿ ಸಂಪರ್ಕ ಕ್ರಮಾಂಕದಿಂದ ಬೆದರಿಕೆ ನೀಡಲಾಗಿತ್ತು. ಜಿಂದಲ ಅವರು ಕೆಲವು ದಿನಗಳ ಹಿಂದೆ ಅಜ್ಮೀರ್ ದರ್ಗಾದ ಕರ್ಮಚಾರಿ ಆದಿಲ್ ಚಿಶ್ತಿಯ ವಿರುದ್ಧ ದೆಹಲಿ ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಆದ್ದರಿಂದ ಅವರಿಗೆ ಬೆದರಿಕೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಜಿಂದಾಲ್ ಇವರಿಗೆ ಈ ಮೊದಲೇ ಪೊಲೀಸ ರಕ್ಷಣೆ ನೀಡಲಾಗಿದೆ. (ಹಿಂದುತ್ವನಿಷ್ಠರಿಗೆ ಬೆದರಿಕೆ ನೀಡಿದ ನಂತರ ಪೊಲೀಸ ಸಂಬಂಧಿತರಿಗೆ ರಕ್ಷಣೆ ನೀಡುತ್ತಾರೆ, ಹೀಗೆ ರಕ್ಷಣೆ ನೀಡುವುದರ ಜೊತೆಗೆ ಬೆದರಿಕೆ ನೀಡುವವರಿಗೆ ಭಯ ಹುಟ್ಟುವ ಹಾಗೆ ಕ್ರಮ ಕೈಗೊಂಡರೆ ಹಿಂದೂಗಳಿಗೆ ಬೆದರಿಕೆ ನೀಡುವುದು ಇರಲಿ ಅವರ ಕಡೆಗೆ ಕಣ್ಣೆತ್ತಿ ನೋಡುವ ಧೈರ್ಯ ಕೂಡ ಮತಾಂಧರಿಗೆ ಆಗುವುದಿಲ್ಲ ! – ಸಂಪಾದಕರು)