ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮೇಲೆ ಅನುಮಾನ !
ಬೆಳ್ಳಾರೆ – ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಭಾಜಪದ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಪ್ರವೀಣ ನೆಟ್ಟಾರು ಅವರನ್ನು ಅಜ್ಞಾತ ದುಷ್ಕರ್ಮಿಗಳು ಕೊಡಲಿ ಮತ್ತು ಕತ್ತಿಯಿಂದ ಹಲ್ಲೆ ಮಾಡಿ ಕೊಂದಿದ್ದಾರೆ. ಈ ಹತ್ಯೆಯ ಹಿಂದೆ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರ ಕೈವಾಡವಿದೆ ಎನ್ನಲಾಗಿದೆ. ಪ್ರವೀಣ ನೆಟ್ಟಾರು ಇವರ ಹತ್ಯೆ ಖಂಡಿಸಿ ಭಾಜಪದ ಅನೇಕ ಕಾರ್ಯಕರ್ತರು ರಾತ್ರಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಈ ಕೊಲೆ ಪ್ರಕರಣದಲ್ಲಿ ‘ನಮಗೆ ನ್ಯಾಯ ಬೇಕು’ ಎಂಬ ಘೋಷಣೆಗಳನ್ನು ನೀಡಿದರು. ವಿಶ್ವ ಹಿಂದೂ ಪರಿಷದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ, ಪುತ್ತೂರು, ಸುಳ್ಯ, ಕಡಬಾದಲ್ಲಿ ಬಂದ್‌ಗೆ ಕರೆ ನೀಡಿತ್ತು. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು ಹತ್ಯೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ಖಂಡನೀಯ. ಇಂಥ ಹೇಯಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನಿನ ಅಡಿಯಲ್ಲಿ ಶಿಕ್ಷಿಸಲಾಗುವುದು.
ಪ್ರವೀಣ ಆತ್ಮಕ್ಕೆ ಶಾಂತಿ ಸಿಗಲಿ, ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ಕರುಣಿಸಲಿ. ಓಂ ಶಾಂತಿಃ” ಎಂದು ಟ್ವೀಟ್ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ಖಂಡನೀಯ. ಇಂಥ ಹೇಯಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನಿನ ಅಡಿಯಲ್ಲಿ ಶಿಕ್ಷಿಸಲಾಗುವುದು.
ಪ್ರವೀಣ ಆತ್ಮಕ್ಕೆ ಶಾಂತಿ ಸಿಗಲಿ, ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ಕರುಣಿಸಲಿ. ಓಂ ಶಾಂತಿಃ pic.twitter.com/kCk3W6hVc5— Basavaraj S Bommai (@BSBommai) July 26, 2022
೧. ಜುಲೈ ೨೬ರ ರಾತ್ರಿ ಪ್ರವೀಣ ಇವರು ಅಂಗಡಿ ಮುಚ್ಚುತ್ತಿರುವಾಗ ಅಲ್ಲಗೆ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ಹಂತಕರು ದಾಳಿ ನಡೆಸಿದ್ದಾರೆ. ಇದರಲ್ಲಿ ಪ್ರವೀಣ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗದಲ್ಲೇ ಮೃತಪಟ್ಟಿದ್ದಾರೆ.
೨. ಪ್ರವೀಣ್ ನೆಟ್ಟಾರು ಅವರ ಪಾರ್ಥಿವ ಶರೀರವನ್ನು ಭಾರೀ ಪೊಲೀಸ್ ಭದ್ರತೆಯಲ್ಲಿ ಸುಳ್ಯದ ಅವರ ಮನೆಗೆ ಕೊಂಡೊಯ್ಯಲಾಯಿತು. ಬಳಿಕ ಅಲ್ಲಿಂದ ಅವರ ಅಂತ್ಯಯಾತ್ರೆ ನಡೆಸಲಾಯಿತು. ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಜಪ ಕಾರ್ಯಕರ್ತರು ಹಾಗೂ ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
೩. ಮಾಧ್ಯಮಗಳು ಪ್ರಕಾಶಿಸಿದ ಕೆಲವು ವರದಿಗಳ ಪ್ರಕಾರ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ಇವರು ಪ್ರವೀಣ್‌ನನ್ನು ಕೊಂದಿರುವ ಸಾಧ್ಯತೆ ಇದೆ ಎಂದು ಪೊಲೀಸರಿಗೆ ಅನುಮಾನವಿದೆ. ಈ ಹತ್ಯೆಯು ಕೆಲ ದಿನಗಳ ಹಿಂದೆ ಬೆಳ್ಳಾರೆಯಲ್ಲಿ ಮುಸ್ಲಿಂ ಯುವಕ ಮಸೂದ್ ಹತ್ಯೆಯ ಸೇಡು ತೀರಿಸಿಕೊಳ್ಳಲು ಮಾಡಲಾಗಿದೆ ಎಂದು ಶಂಕಿಸಲಾಗಿದೆ. ತನಿಖೆಗಾಗಿ ಪೊಲೀಸರು ೫ ವಿಶೇಷ ತಂಡಗಳನ್ನು ರಚಿಸಿದ್ದಾರೆ. ರಾಜ್ಯದ ಮಡಿಕೇರಿ, ಹಾಸನದಲ್ಲಿ ತಂಡಗಳು ತನಿಖೆ ನಡೆಸುತ್ತಿದ್ದು, ತಂಡವೊಂದು ಕೇರಳಕ್ಕೆ ತೆರಳಿದೆ.
೪. ಕೇಂದ್ರ ಸಚಿವ ಮತ್ತು ಭಾಜಪದ ನಾಯಕ ಪ್ರಹ್ಲಾದ ಜೋಶಿಯವರು, ಆರಂಭಿಕ ವರದಿಗಳು ಮತ್ತು ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಪಿಎಫ್‌ಐ ಮತ್ತು ಎಸ್‌ಡಿಪಿಐ ಕಡೆಗೆ ಬೆರಳು ತೋರಿಸಲಾಗುತ್ತಿದೆ. ಕೇರಳದಲ್ಲಿ ಈ ಸಂಘಟನೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರೋತ್ಸಾಹ ನೀಡುತ್ತಿದೆ. ರಾಜ್ಯದಲ್ಲಿ ನಮ್ಮ ಸರಕಾರ ಕ್ರಮ ಕೈಗೊಂಡು ತಪ್ಪಿತಸ್ಥರನ್ನು ಶಿಕ್ಷಿಸಲಿದೆ ಎಂದು ಹೇಳಿದರು.
Breaking: ಪ್ರವೀಣ್ ಕೊಲೆ: ಎಸ್‌ಡಿಪಿಐ, ಪಿಎಫ್‌ಐ ನಂಟು- ಪ್ರಲ್ಹಾದ್ ಜೋಶಿ#BreakingNews #NewDelhi #UnionMinister #PralhadJoshi #BJP #PraveenNettar #ಒನ್ಇಂಡಿಯಾಕನ್ನಡಸುದ್ದಿhttps://t.co/CFD5jekN4y
— oneindiakannada (@OneindiaKannada) July 27, 2022
ಕನ್ಹೈಯ್ಯಾಲಾಲ್ ಅವರನ್ನು ಬೆಂಬಲಿಸಿದ್ದರು !
ಜೂನ್ ೨೯ ರಂದು, ಉದಯಪುರದ ಟೈಲರ್ ಕನ್ಹೈಯ್ಯಾಲಾಲ್ ಅವರನ್ನು ಮತಾಂಧರು ಹತ್ಯೆ ಮಾಡಿದ ವಿರುದ್ಧ ಪ್ರವೀಣ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಅದರಲ್ಲಿ ಒಂದು ಚಿತ್ರವನ್ನೂ ಹಂಚಿಕೊಂಡಿದ್ದರು. ಈ ಪೋಸ್ಟ್‌ನಲ್ಲಿ ಅವರು, ಕೇವಲ ರಾಷ್ಟ್ರವಾದಿ ಸಿದ್ಧಾಂತವನ್ನು ಬೆಂಬಲಿಸಿದ್ದಕ್ಕಾಗಿ ಟೈಲರ್‌ನ ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿತ್ತು ಮತ್ತು ಆ ಘಟನೆಯ ವೀಡಿಯೊವನ್ನು ಮಾಡಲಾಗಿತ್ತು. ಎಂದು ಹೇಳಿದ್ದರು.
ಸಂಪಾದಕೀಯ ನಿಲುವುಈ ಕೊಲೆಗಳನ್ನು ಮತಾಂಧರು ಮಾಡಿದ್ದಾರೆ ಎಂಬುವುದರಲ್ಲಿ ಯಾರಿಗೂ ಅನುಮಾನವಿಲ್ಲ. ನೂಪುರ ಶರ್ಮಾ ಪ್ರಕರಣದ ನಂತರ, ಮತಾಂಧರು ದೇಶದಲ್ಲಿ ಹಿಂದೂಗಳ ವಿರುದ್ಧ ಧರ್ಮಯುದ್ಧವನ್ನು ಪ್ರಾರಂಭಿಸಿದ್ದಾರೆ. ಹೀಗಿರುವಾಗ ಕೇಂದ್ರ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಇದರ ಹಿಂದಿರುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ! ಜನಸಮೂಹವು ಅಖಲಾಕನನ್ನು ಕೊಂದ ನಂತರ ದೇಶಾದ್ಯಂತ ಚೀರಾಡುತ್ತಿದ್ದ ಜಾತ್ಯತೀತವಾದಿ ಮತ್ತು ಪ್ರಗತಿ(ಅಧೋಗತಿ)ಪರ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಇಂತಹ ಘಟನೆಗಳ ಬಗ್ಗೆ ಅನುಕೂಲಕರ ಮೌನ ವಹಿಸುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! |