ತಾಲಿಬಾನ್‍ಗೆ ಪಾಕಿಸ್ತಾನದ ವಾಯುದಳದ ಬೆಂಬಲ ! – ಅಫ್ಘಾನಿಸ್ತಾನದ ಆರೋಪ

ಅಮರುಲ್ಲಾಹ ಸಾಹೆಲ ಇವರು ಟ್ವೀಟ್ ಮಾಡುತ್ತಾ, ಪಾಕಿಸ್ತಾನದ ವಾಯುದಳವು ಅಫ್ಘಾನಿಸ್ತಾನದ ಸೈನ್ಯದಳ ಮತ್ತು ವಾಯುದಳಕ್ಕೆ ಅಧಿಕೃತವಾಗಿ ಎಚ್ಚರಿಕೆಯನ್ನು ನೀಡಿ, ಸ್ಪಿನ ಬುಲ್ದಕ ಕ್ಷೇತ್ರದಿಂದ ತಾಲಿಬಾನನ್ನು ಹೊರಹಾಕಲು ಮಾಡುವ ಯಾವುದೇ ಪ್ರಯತ್ನದ ವಿರುದ್ಧ ಪ್ರತ್ಯುತ್ತರ ನೀಡಲಾಗುವುದು ಎಂದಿದ್ದಾರೆ.

ಸೈನ್ಯದ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಪೊಖರಣ(ರಾಜಸ್ಥಾನ)ನ ಸೈನ್ಯನೆಲೆಗೆ ತರಕಾರಿ ಪೂರೈಸುವ ಮತಾಂಧನ ಬಂಧನ !

ಸೈನ್ಯ ನೆಲೆಗೆ ತರಕಾರಿಯನ್ನು ಪೂರೈಕೆ ಮಾಡುತ್ತಿದ್ದ ಹಬಿಬುರ್ರಹಮಾನ ಖಾನ ಎಂಬ ೩೪ ವರ್ಷದ ವ್ಯಕ್ತಿಯನ್ನು ಗೂಢಚಾರಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಪಾಕಿಸ್ತಾನ ಸರಕಾರವು ಹಿಂದೂಗಳ ದೇವಸ್ಥಾನಕ್ಕೆ ಬೆಂಕಿ ಹಚ್ಚಿದ ೩೫೦ ಜನರ ಮೇಲಿನ ಅಪರಾಧವನ್ನು ಹಿಂಪಡೆಯಲಿದೆ !

ಇದರಿಂದ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಅನ್ಯಾಯದ ವಿರುದ್ಧ ನಡೆಸುವ ಕಾರ್ಯಾಚರಣೆಗಳು ಕೇವಲ ತೋರಿಕೆಗಾಗಿ ಇರುತ್ತದೆ, ಎಂಬುದು ಸಾಬೀತಾಗುತ್ತದೆ ! ಭಾರತವು ಇದನ್ನು ಖಂಡಿಸಿ ಪಾಕಿಸ್ತಾನವು ಅಪರಾಧಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಬೇಕು, ಆಗಲೇ ಅಲ್ಲಿಯ ಹಿಂದೂಗಳಿಗೆ ಭಾರತದ ಆಧಾರವೆನಿಸಬಹುದು !

ಪಾಕಿಸ್ತಾನದಲ್ಲಿ ಚೀನಿ ಅಭಿಯಂತರು ಮತ್ತು ಕಾರ್ಮಿಕರಿದ್ದ ಬಸ್ಸಿನ ಮೇಲಾದ ಆಕ್ರಮಣದಲ್ಲಿ ೧೦ ಜನರ ದುರ್ಮರಣ.

ಚೀನಿ ಅಭಿಯಂತರನ್ನು ಕರೆದೊಯ್ಯುತ್ತಿದ್ದ ಬಸ್ಸನ್ನು ರಸ್ತೆಯ ಪಕ್ಕದಲ್ಲಿ ಮುಚ್ಚಿಡಲಾಗಿದ್ದ ಸ್ಫೋಟಕದಿಂದ ಉಡಾಯಿಸಿದ ಘಟನೆ ಪಾಕಿಸ್ತಾನದ ಕೊಹಿಸ್ತಾನದಲ್ಲಿ ಘಟಿಸಿದೆ. ಇದರಲ್ಲಿ ಕಡಿಮೆಪಕ್ಷ ೧೦ ಜನರು ಮರಣ ಹೊಂದಿರುವರೆಂದು ಹೇಳಲಾಗುತ್ತಿದೆ.

ಪಾಕಿಸ್ತಾನದಲ್ಲಾದ ಭಯೋತ್ಪಾದಕ ದಾಳಿಯಲ್ಲಿ ೧೧ ಸೈನಿಕರ ಸಾವು

ಪಾಕಿಸ್ತಾನದ ಖೈಬರ್ ಪಖ್ತುನಖ್ವಾ ಪ್ರಾಂತ್ಯದ ಕುರ್ರಮ್ ಜಿಲ್ಲೆಯಲ್ಲಿ ಜುಲೈ ೧೩ ರಂದಾದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ ೧೧ ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ಮಾತ್ರ ಇದರಲ್ಲಿ ಕೇವಲ ಕ್ಯಾಪ್ಟನ್ ಅಬ್ದುಲ್ ಬಾಸಿತ್ ಮತ್ತು ಸಿಪಾಯಿ ಹಜರತ್ ಬಿಲಾಲ್ ಇವರು ಮಾತ್ರ ಮೃತಪಟ್ಟಿದ್ದಾರೆ ಎಂದು ಹೇಳಿಕೊಂಡಿದೆ.

ಪಾಕಿಸ್ತಾನದಲ್ಲಿ ಬಲವಂತವಾಗಿ ೬೦ ಹಿಂದೂಗಳ ಮತಾಂತರ !

ಕಳೆದ ೭೪ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಈ ರೀತಿಯಲ್ಲಿ ಸಾವಿರಾರು ಹಿಂದೂಗಳು ಮತಾಂತರಗೊಂಡಿದ್ದಾರೆ. ಆದ್ದರಿಂದಲೇ ಅಲ್ಲಿಯ ಹಿಂದೂಗಳ ಜನಸಂಖ್ಯೆ ಈಗ ಶೇ. ೨ ರಷ್ಟು ಉಳಿದಿದೆ ಹಾಗೂ ಭಾರತದಲ್ಲಿ ಕಳೆದ ೭೪ ವರ್ಷಗಳಲ್ಲಿ ಮುಸಲ್ಮಾನರ ಜನಸಂಖ್ಯೆ ಶೇ. ೩ ರಷ್ಟರಿಂದ ೧೪ ರಷ್ಟು ಆಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಐಎಸ್‌ಐಗೆ ಗೌಪ್ಯ ದಾಖಲೆಗಳನ್ನು ಒದಗಿಸಿದ್ದಕ್ಕಾಗಿ ಭಾರತೀಯ ಸೇನೆಯ ಇಬ್ಬರು ಸೈನಿಕರ ಬಂಧನ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಭಾರತೀಯ ಸೇನೆಯ ಬಗ್ಗೆ ಸೂಕ್ಷ್ಮ ಮಾಹಿತಿ ನೀಡಿದ್ದ ಆರೋಪದ ಮೇಲೆ ಪಂಜಾಬ್ ಪೊಲೀಸರು ಸೇನೆಯ ಹರಪ್ರೀತ್ ಸಿಂಗ್ (೨೩) ಮತ್ತು ಗುರ್ಭೇಜ್ ಸಿಂಗ್ (೨೩) ಇವರಿಬ್ಬರನ್ನು ಬಂಧಿಸಿದ್ದಾರೆ.

ಜಿಹಾದಿ ಭಯೋತ್ಪಾದಕ ಹಫೀಜ್ ಸಯೀದ್ ಮನೆಯ ಹತ್ತಿರ ನಡೆದ ಸ್ಪೋಟದ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕ್‍ನ ಆರೋಪ !

ಇದನ್ನೆ ‘ಕಳ್ಳನಿಗೊಂದು ಪಿಳ್ಳೆನೆವ’ ಎನ್ನುತ್ತಾರೆ ! ತಲೆನೋವಾಗಿ ಪರಿಣಮಿಸಿದ ಭಯೋತ್ಪಾದಕರನ್ನು ನಿಯಂತ್ರಿಸಲು ಪಾಕಿಸ್ತಾನವೇ ಸ್ಪೋಟವನ್ನು ನಡೆಸಿ ಅದನ್ನು ಭಾರತ ಮಾಡಿದೆ ಎಂದು ಆರೋಪ ಹೊರಿಸುವ ಪ್ರಯತ್ನ ಹಾಸ್ಯಾಸ್ಪದವಾಗಿದೆ, ಇದು ಎಲ್ಲರಿಗೆ ತಿಳಿದ ವಿಷಯವಾಗಿದೆ !

ಉಯಿಘರ್ ಮುಸಲ್ಮಾನರ ವಿರುದ್ಧ ಚೀನಾದಿಂದಾಗುತ್ತಿರುವ ದಮನಕ್ಕೆ ಪಾಕಿಸ್ತಾನದ ಬೆಂಬಲ !

ಚೀನಾವು ತನ್ನ ಕ್ಸಿನ್‍ಜಿಯಾಂಗ್ ಪ್ರಾಂತ್ಯದಲ್ಲಿನ ಉಯಿಘರ್ ಮುಸಲ್ಮಾನರನ್ನು ದಮನಿಸುತ್ತಿದೆ. ಇದನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿಸಿದ್ದಾರೆ. ಚೀನಾದ ಮಾಧ್ಯಮಗಳೊಂದಿಗೆ ಮಾತನಾಡುವಾಗ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.

ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೇಲೆ ಕಂಡು ಬಂದ ಡ್ರೋನ್

‘ಭಯೋತ್ಪಾದಕರಿಂದ ಡ್ರೋನ ಬಳಕೆಯಾಗುತ್ತಿರುವುದು ಅತ್ಯಂತ ಚಿಂತೆಯ ವಿಷಯವಾಗಿದೆ. ಒಂದು ವೇಳೆ ಈ ಸಂದರ್ಭದಲ್ಲಿ ಯಾವುದೇ ನಿರ್ದಿಷ್ಟ ಕ್ರಮಗಳನ್ನು ಕೈಕೊಳ್ಳದಿದ್ದರೆ ಭಯೋತ್ಪಾದಕ ವಿರುದ್ಧದ ಹೋರಾಟದಲ್ಲಿ ಗೆಲ್ಲುವುದು ಅತ್ಯಂತ ಕಠಿಣವಾಗಲಿದೆ’ ಎಂದು ಭಾರತವು ತಿಳಿಸಿದೆ.