ಭಾರತದ ವತಿಯಿಂದ ತೀವ್ರ ನಿಷೇಧ!
* ಡ್ರೋನ್ ಒಂದು ವೇಳೆ ಭಾರತೀಯ ರಾಯಭಾರ ಕಚೇರಿ ಮೇಲೆ ಬಾಂಬ್ ಸ್ಫೋಟ ನಡೆಸಿದ್ದರೆ, ಭಾರತವು ಕೇವಲ ನಿಷೇಧವನ್ನಷ್ಟೇ ವ್ಯಕ್ತಪಡಿಸುತ್ತಿತ್ತೇನು? ಎನ್ನುವ ಪ್ರಶ್ನೆಯೇಳುತ್ತದೆ. * ಸರಕಾರವು ಪಾಕಿಸ್ತಾನದೊಂದಿಗೆ ಚರ್ಚಿಸುವುದಿಲ್ಲ; ಆದರೆ ಅಲ್ಲಿ ಭಾರತೀಯ ರಾಯಭಾರ ಕಚೇರಿಯನ್ನು ಮಾತ್ರ ತೆರೆದಿಡುತ್ತದೆ. ಅಲ್ಲದೇ ಭಾರತದಲ್ಲಿಯೂ ಪಾಕಿಸ್ತಾನದ ರಾಯಭಾರ ಕಚೇರಿಗೆ ಮಾನ್ಯತೆಯನ್ನು ನೀಡುತ್ತದೆ! * ಸ್ವಾತಂತ್ರ್ಯದ ಬಳಿಕದ ೭೪ ವರ್ಷದಲ್ಲಿ ಇಲ್ಲಿಯವರೆಗೆ ಎಲ್ಲ ಆಡಳಿತಾಧಿಕಾರಿಗಳು ಇದನ್ನೇ ಮಾಡಿದರು! ನಾಯಿಯ ಬಾಲ ಯಾವತ್ತಿಗೂ ಡೊಂಕೇ ಇರುತ್ತದೆಯೆಂದು ಅವರಿಗೆ ಯಾಕೆ ಅರ್ಥವಾಗುವುದಿಲ್ಲ? ಇಂತಹ ರಾಯಭಾರ ಕಚೇರಿಯಿಂದ ಏನು ಪ್ರಯೋಜನವಿದೆ? ಇಲ್ಲಿಯವರೆಗೆ ಸರಕಾರವು ಇಂತಹ ಬೆರಳು ಚೀಪುವ ಧೋರಣೆಯಿಂದಲೇ ಪಾಕಿಸ್ತಾನ ತಲೆಮೇಲೆ ಏರಿ ಕುಳಿತಿದೆ. ಸರಕಾರವು ಈಗಲಾದರೂ ಪಾಕಿಸ್ತಾನದೊಂದಿಗೆ ಎಲ್ಲ ರೀತಿಯ ಸಂಬಂಧಗಳನ್ನು ತೊರೆದು ಅದನ್ನು ನಾಶಪಡಿಸಿ ಎಲ್ಲ ಸಮಸ್ಯೆಗಳನ್ನು ನಿವಾರಿಸಬೇಕು ಎನ್ನುವುದೇ ಜನತೆಯ ಅಪೇಕ್ಷೆಯಾಗಿದೆ. |
ಇಸ್ಲಾಮಾಬಾದ್- ಜಮ್ಮೂವಿನಲ್ಲಿ ವಿವಿಧ ಸ್ಥಳಗಳಲ್ಲಿ ಪಾಕಿಸ್ತಾನದ ಡ್ರೋನ್ ಕಂಡು ಬಂದ ಬಳಿಕ, ಈಗ ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪರಿಸರದಲ್ಲಿ ಡ್ರೋನ್ ಕಂಡು ಬಂದಿತು. ಮೊದಲ ಬಾರಿಗೆ ಭಾರತೀಯ ರಾಯಭಾರಿ ಕಚೇರಿ ಮತ್ತು ಅಧಿಕಾರಿಗಳ ನಿವಾಸದ ಮೇಲೆ ಡ್ರೋನ್ ಕಂಡು ಬಂದಿತು. ಇಸ್ಲಾಮಾಬಾದನಲ್ಲಿರುವ ಈ ಪರಿಸರವನ್ನು ಅತ್ಯಂತ ಸುರಕ್ಷಿತವೆಂದು ತಿಳಿಯಲಾಗುತ್ತದೆ. ಈ ಪರಿಸರದಲ್ಲಿ ಈ ಘಟನೆ ಕಂಡು ಬಂದಿರುವುದರಿಂದ ಭಾರತೀಯ ಅಧಿಕಾರಿಗಳು ಚಿಂತೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ ಭಾರತದಿಂದ ಈ ಘಟನೆಯ ಕುರಿತು ಪಾಕಿಸ್ತಾನಕ್ಕೆ ತೀವ್ರ ಶಬ್ದಗಳಲ್ಲಿ ನಿಷೇಧವನ್ನು ವ್ಯಕ್ತಪಡಿಸಲಾಗಿದೆ.
ಇಸ್ಲಾಮಾಬಾದ್ನ ಭಾರತೀಯ ಹೈಕಮಿಷನ್ ಕಚೇರಿ ಬಳಿಯೂ ಡ್ರೋನ್ ಪ್ರತ್ಯಕ್ಷ: ಭಾರತದ ಪ್ರತಿಭಟನೆ
#Pakistan https://t.co/sipJnoJBpC— vijaykarnataka (@Vijaykarnataka) July 2, 2021
ಮಾಹಿತಿಗಳನುಸಾರ ಡ್ರೋನ್ ಅಲ್ಲಿಯೇ ಸುತ್ತುತ್ತಿರುವಾಗಿನ ಸಿಸಿಟಿವ್ಹಿ ಫೂಟೇಜ್‍ಗಳ ತಪಾಸಣೆ ನಡೆಸಲಾಗುತ್ತಿದೆ. ಡ್ರೋನ್ ಆಕ್ರಮಣದ ವಿಷಯಗಳನ್ನು ಭಾರತವು ಕೆಲವು ದಿವಸಗಳ ಮೊದಲು ಸಂಯುಕ್ತ ರಾಷ್ಟ್ರದ ಮುಂದೆ ಮಂಡಿಸಿತ್ತು. ‘ಭಯೋತ್ಪಾದಕರಿಂದ ಡ್ರೋನ ಬಳಕೆಯಾಗುತ್ತಿರುವುದು ಅತ್ಯಂತ ಚಿಂತೆಯ ವಿಷಯವಾಗಿದೆ. ಒಂದು ವೇಳೆ ಈ ಸಂದರ್ಭದಲ್ಲಿ ಯಾವುದೇ ನಿರ್ದಿಷ್ಟ ಕ್ರಮಗಳನ್ನು ಕೈಕೊಳ್ಳದಿದ್ದರೆ ಭಯೋತ್ಪಾದಕ ವಿರುದ್ಧದ ಹೋರಾಟದಲ್ಲಿ ಗೆಲ್ಲುವುದು ಅತ್ಯಂತ ಕಠಿಣವಾಗಲಿದೆ’ ಎಂದು ಭಾರತವು ತಿಳಿಸಿದೆ.
ಭಾರತದ ನಿಷೇಧವನ್ನು ಪಾಕಿಸ್ತಾನ ಮೂಲೆ ಗುಂಪು ಮಾಡಿದೆ!
ಈ ಘಟನೆಯ ಬಗ್ಗೆ ಭಾರತವು ಪಾಕಿಸ್ತಾನಕ್ಕೆ ತೀವ್ರ ನಿಷೇಧವನ್ನು ವ್ಯಕ್ತಪಡಿಸಿದ್ದರೂ, ಪಾಕಿಸ್ತಾನವು ಈ ಬಗ್ಗೆ ಒಂದು ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸದೇ ಇರುವುದು ಕಂಡು ಬಂದಿದೆ. ಪಾಕಿಸ್ತಾನದ ಸರಕಾರದ ಮಟ್ಟದ ಒಬ್ಬ ಜವಾಬ್ದಾರಿ ಅಧಿಕಾರಿಯೂ ಭಾರತಕ್ಕೆ ಈ ವಿಷಯದಲ್ಲಿ ಏನೂ ಉತ್ತರ ನೀಡಿಲ್ಲ.
ಜಮ್ಮೂ-ಕಾಶ್ಮೀರದಲ್ಲಿ ಪಾಕಿಸ್ತಾನದ ಒಂದು ಡ್ರೋನ ಅನ್ನು ಹೊಡೆದುರುಳಿಸಿದ ಭಾರತ
ಇನ್ನೊಂದೆಡೆ ಜಮ್ಮೂ-ಕಾಶ್ಮೀದಲ್ಲಿರುವ ಆರ್ನಿಯಾ ಸೆಕ್ಟರ್‍ನ ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಭಾರತೀಯ ಗಡಿಯಲ್ಲಿ ನುಸುಳಿದ ಒಂದು ಪಾಕಿಸ್ತಾನಿ ಡ್ರೋನ ಮೇಲೆ ಭಾರತೀಯ ಸೈನಿಕರು ಗುಂಡು ಹಾರಿಸಿ ಅದನ್ನು ಹೊಡೆದುರುಳಿಸಿದ್ದಾರೆ. ಕಳೇದ ಕೆಲವು ದಿನಗಳಲ್ಲಿ ೧೦ ಸಲ ಡ್ರೋನ್ ಹಾರುತ್ತಿರುವುದು ಕಂಡು ಬಂದಿದೆ.