ಪಾಕಿಸ್ತಾನ ಸರಕಾರವು ಹಿಂದೂಗಳ ದೇವಸ್ಥಾನಕ್ಕೆ ಬೆಂಕಿ ಹಚ್ಚಿದ ೩೫೦ ಜನರ ಮೇಲಿನ ಅಪರಾಧವನ್ನು ಹಿಂಪಡೆಯಲಿದೆ !

ಹಿಂದೂಗಳು ಆರೋಪಿಗಳನ್ನು ಕ್ಷಮಿಸಿದ್ದಾರೆ ಎಂದು ಸರಕಾರದ ಹೇಳಿಕೆ !

* ಇದರಿಂದ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಅನ್ಯಾಯದ ವಿರುದ್ಧ ನಡೆಸುವ ಕಾರ್ಯಾಚರಣೆಗಳು ಕೇವಲ ತೋರಿಕೆಗಾಗಿ ಇರುತ್ತದೆ, ಎಂಬುದು ಸಾಬೀತಾಗುತ್ತದೆ ! ಭಾರತವು ಇದನ್ನು ಖಂಡಿಸಿ ಪಾಕಿಸ್ತಾನವು ಅಪರಾಧಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಬೇಕು, ಆಗಲೇ ಅಲ್ಲಿಯ ಹಿಂದೂಗಳಿಗೆ ಭಾರತದ ಆಧಾರವೆನಿಸಬಹುದು !

* ಇಸ್ಲಾಮಿ ದೇಶ ಪಾಕಿಸ್ತಾನದಲ್ಲಿ ಹೀಗಾಗುವುದರಲ್ಲಿ ಆಶ್ವರ್ಯವೇನಿಲ್ಲ !ಈಗ ಈ ಬಗ್ಗೆ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ, ಭಾರತದಲ್ಲಿನ ಜಾತ್ಯತೀತವಾದಿ ಹಾಗೂ ಪ್ರಗತಿ(ಅಧೋಗತಿ)ಪರರು ಏನೂ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಪೇಶಾವರ (ಪಾಕಿಸ್ತಾನ) – ಕಳೆದ ವರ್ಷ ಇಲ್ಲಿ ಒಂದು ಹಿಂದೂಗಳ ದೇವಸ್ಥಾನಕ್ಕೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪಾಕಿಸ್ತಾನ ಖೈಬರ ಪಖ್ತುಲ್ ಪ್ರದೇಶದ ೩೫೦ ಆರೋಪಿಗಳ ಅಪರಾಧವನ್ನು ಹಿಂಪಡೆಯುವ ನಿರ್ಧಾರವನ್ನು ಸರಕಾರವು ಕೈಗೊಂಡಿದೆ. ಸರಕಾರವು, ‘ಸ್ಥಳೀಯ ಹಿಂದೂಗಳು ಈ ಆರೋಪಿಗಳನ್ನು ಕ್ಷಮಿಸಿದ್ದರಿಂದ ಅವರ ಮೇಲಿನ ಅಪರಾಧವನ್ನು ಹಿಂಪಡೆಯಲಾಗಿದೆ.’ ಎಂದು ಹೇಳಿಕೊಂಡಿದೆ. ಪ್ರಾಂತ್ಯದ ಆಂತರಿಕ ವಿಭಾಗದ ಮೂಲಗಳ ಪ್ರಕಾರ, ಈ ಪ್ರಕರಣವನ್ನು ಬಗೆಹರಿಸಲು ಸರಕಾರದಿಂದ ಆಯೋಜಿಸಲಾಗಿದ್ದ ಒಂದು ಸಭೆಯಲ್ಲಿ ಹಿಂದೂಗಳು ಆರೋಪಿಗಳಿಗೆ ಕ್ಷಮೆ ನೀಡುವ ನಿರ್ಧಾರವನ್ನು ತೆಗೆದುಕೊಂಡಿದೆ. ಸರಕಾರದ ಆಶ್ವಾಸನೆಯ ನಂತರವೂ ಕೂಡ ದೇವಸ್ಥಾನದ ಪುನಃ ನಿರ್ಮಾಣಕ್ಕೆ ತಡವಾಗುತ್ತಿದೆ. ಆದ್ದರಿಂದ ಹಿಂದೂಗಳಲ್ಲಿ ಅಸಮಾಧಾನವಿದೆ ಎಂದು ಹಿಂದೂಗಳು ಹೇಳಿದ್ದಾರೆ.

೧. ಇಲ್ಲಿನ ಮಾನವಹಕ್ಕುಗಳ ಕಾರ್ಯಕರ್ತ ಹಾರುನ ಸರಾಬ ದಿಯಾಲ ಅವರು, ನಾವು ಶಾಂತಿಯ ವಿರುದ್ಧ ಇಲ್ಲ; ಆದರೆ ಅಪರಾಧವನ್ನು ಹಿಂಪಡೆಯುವ ಬಗ್ಗೆ ಮಾಡಲಾದ ಪ್ರಯತ್ನವು ಅಯೋಗ್ಯವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಪಾಕಿಸ್ತಾನ ಹಿಂದೂ ಕೌನ್ಸಿಲ್’ನ ಅಧ್ಯಕ್ಷ ಡಾ. ರಮೇಶ ವಾಂಕವಾಣಿಯವರನ್ನು ಹೊರತು ಪಡಿಸಿ ಇತರ ಹಿಂದೂಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಹೇಳಿದ್ದಾರೆ.

. ಟೆರಿ ಕಾರಕ ಜಿಲ್ಲೆಯ ಪರಮಹಂಸ ಇವರ ಸಮಾಧಿ ಮತ್ತು ದೇವಸ್ಥಾನಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೩೫೦ ಜನರ ಮೇಲೆ ಅಪರಾಧ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ೯೨ ಪೊಲೀಸರನ್ನು ಅಮಾನತು ಮಾಡಲಾಗಿತ್ತು.