ಜಿಹಾದಿ ಭಯೋತ್ಪಾದಕ ಹಫೀಜ್ ಸಯೀದ್ ಮನೆಯ ಹತ್ತಿರ ನಡೆದ ಸ್ಪೋಟದ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕ್‍ನ ಆರೋಪ !

ಇದನ್ನೆ ‘ಕಳ್ಳನಿಗೊಂದು ಪಿಳ್ಳೆನೆವ’ ಎನ್ನುತ್ತಾರೆ ! ತಲೆನೋವಾಗಿ ಪರಿಣಮಿಸಿದ ಭಯೋತ್ಪಾದಕರನ್ನು ನಿಯಂತ್ರಿಸಲು ಪಾಕಿಸ್ತಾನವೇ ಸ್ಪೋಟವನ್ನು ನಡೆಸಿ ಅದನ್ನು ಭಾರತ ಮಾಡಿದೆ ಎಂದು ಆರೋಪ ಹೊರಿಸುವ ಪ್ರಯತ್ನ ಹಾಸ್ಯಾಸ್ಪದವಾಗಿದೆ, ಇದು ಎಲ್ಲರಿಗೆ ತಿಳಿದ ವಿಷಯವಾಗಿದೆ !

ಇಸ್ಲಾಮಾಬಾದ (ಪಾಕಿಸ್ತಾನ) – ಮುಂಬಯಿ ಮೇಲಿನ ಭಯೋತ್ಪಾದನಾ ದಾಳಿಯ ಮುಖ್ಯ ಸೂತ್ರದಾರ ಹಫೀಜ್ ಸಯೀದ್ ಮನೆಯ ಹತ್ತಿರ ಆಗಿದ್ದ ಬಾಂಬ್ ಸ್ಪೋಟದ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದರು. ‘ಈ ದಾಳಿಯ ಸಂಪೂರ್ಣ ಆಯೋಜನೆ ಮತ್ತು ಆಥೀಕ ಸಹಾಯವನ್ನು ಭಾರತದಿಂದ ಮಾಡಲಾಗಿದೆ. ಆದ್ದರಿಂದ ಈ ನಡುವಳಿಕೆಯ ವಿರುದ್ಧ ಅಂತರರಾಷ್ಟ್ರೀಯ ಸಮುದಾಯವು ಕಠಿಣ ಕ್ರಮ ಕೈಗೊಳ್ಳಬೇಕು’, ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡುವ ಮೂಲಕ ಒತ್ತಾಯಿಸಿದ್ದಾರೆ.

ಇನ್ನೊಂದು ಕಡೆ ‘ಭಾರತೀಯ ಗೂಢಾಚಾರ ಇಲಾಖೆ ‘ರಾ’ನ ಎಂಜೆಂಟ್‍ರು ಈ ದಾಳಿಯ ಸೂತ್ರದಾರರಾಗಿದ್ದಾರೆ’, ಎಂದು ಪಾಕಿಸ್ತಾನದ ರಾಷ್ಟ್ರಪತಿಯ ಸಲಹೆಗಾರ ಮೊಯಿದ್ ಯುಸುಫ್ ಹೇಳಿದ್ದಾರೆ. ‘ಜೂನ್ ೨೩ ರಂದು ನಡೆದ ದಾಳಿಯ ಜೊತೆ ಅನೇಕ ಸೈಬರ್ ದಾಳಿಯನ್ನೂ ಮಾಡಲಾಗಿತ್ತು. ತನಿಖೆಯಲ್ಲಿ ಅಡಚಣೆ ಮತ್ತು ಸಾಕ್ಷ ನಾಶಪಡೊಸಲು ಈ ದಾಳಿ ನಡೆಸಲಾಯಿತು’, ಎಂದೂ ಕೂಡ ಹೇಳಿದರು. ಹಫೀಜ್ ಸಯೀದ್ ಮನೆಯ ಹತ್ತಿರ ನಡೆದ ಸ್ಪೋಟದಲ್ಲಿ ೩ ಜನರು ಸಾವಿಗೀಡಾಗಿದ್ದರು ಮತ್ತು ೧೭ ಜನರು ಗಾಯಗೊಂಡಿದ್ದರು.