ಪಾಕಿಸ್ತಾನದಲ್ಲಾದ ಭಯೋತ್ಪಾದಕ ದಾಳಿಯಲ್ಲಿ ೧೧ ಸೈನಿಕರ ಸಾವು

‘ಮಾಡಿದ್ದುಣ್ಣೋ ಮಹಾರಾಯಾ’, ಇದೇ ನ್ಯಾಯದಿಂದ ಪಾಕಿಸ್ತಾನದ ಸೈನ್ಯಕ್ಕೆ ಹಾನಿಯಾಗುತ್ತಿದೆ, ಇದರಲ್ಲಿ ಆಶ್ಚರ್ಯವೇನು?

ಪಾಕಿಸ್ತಾನದ ಸೈನಿಕ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಖೈಬರ್ ಪಖ್ತುನಖ್ವಾ ಪ್ರಾಂತ್ಯದ ಕುರ್ರಮ್ ಜಿಲ್ಲೆಯಲ್ಲಿ ಜುಲೈ ೧೩ ರಂದಾದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ ೧೧ ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ಮಾತ್ರ ಇದರಲ್ಲಿ ಕೇವಲ ಕ್ಯಾಪ್ಟನ್ ಅಬ್ದುಲ್ ಬಾಸಿತ್ ಮತ್ತು ಸಿಪಾಯಿ ಹಜರತ್ ಬಿಲಾಲ್ ಇವರು ಮಾತ್ರ ಮೃತಪಟ್ಟಿದ್ದಾರೆ ಎಂದು ಹೇಳಿಕೊಂಡಿದೆ. ‘ತೆಹ್ರೀಕ್-ಎ-ತಾಲಿಬಾನ್ ಈ ಭಯೋತ್ಪಾದಕ ಸಂಘಟನೆಯು ಈ ದಾಳಿ ನಡೆಸಿದೆ ಎನ್ನಲಾಗಿದೆ. ಪಾಕಿಸ್ತಾನದ ಸೈನಿಕರು ಸೇರಿದಂತೆ ಕೆಲವು ಜನರನ್ನು ಭಯೋತ್ಪಾದಕರು ಅಪಹರಿಸಿದ್ದಾರೆ. ಕಳೆದ ತಿಂಗಳು ಇದೇ ಪ್ರಾಂತ್ಯದ ಹೋಶಾಬ್ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಓರ್ವ ಸೈನಿಕನು ಸಾವನ್ನಪ್ಪಿದ್ದಾನೆ. ಇದಕ್ಕೂ ಮೊದಲು ಬಲೂಚಿಸ್ತಾನದಲ್ಲಿ ಸಿಬಿ ಮೇಲೆ ನಡೆದ ದಾಳಿಯಲ್ಲಿ ಐವರು ಸೈನಿಕರು ಸಾವನ್ನಪ್ಪಿದ್ದರು.