ಸಪ್ತರ್ಷಿಗಳ ಆಜ್ಞೆಯಂತೆ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಿಯ ದರ್ಶನ ಪಡೆದಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಬಂದ ಅನುಭೂತಿ !

ಶ್ರೀ ಅನ್ನಪೂರ್ಣೇಶ್ವರಿ ದೇವಿಯಲ್ಲಿ ಪ್ರಾರ್ಥಿಸುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಕಣ್ಣುಗಳಿಂದ ಸತತವಾಗಿ ಭಾವಾಶ್ರುಗಳು ಹರಿಯುತ್ತಿದ್ದವು. ಅವರಿಗೆ ‘ನಾನು ದೇವಿಯ ಒಳಗೆ ಒಳಗೆ ಹೋಗುತ್ತಿದ್ದೇನೆ ಮತ್ತು ದೇವಿಯ ಸ್ಥಾನದಲ್ಲಿ ನಾನೇ ನಿಂತಿದ್ದೇನೆ, ಎಂದು ಅರಿವಾಗುತ್ತಿತ್ತು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಗುಜರಾತದ ಚೊಟಿಲಾದಲ್ಲಿ ಆದಿಶಕ್ತಿಯ ರೂಪವಾಗಿರುವ ಶ್ರೀ ಚಂಡಿ-ಚಾಮುಂಡಾ ದೇವಿಯ ದರ್ಶನ ಪಡೆದ ವಾರ್ತೆ !

‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರಾರ್ಥನೆ ಮಾಡಲು ಬಂದಿದ್ದಾರೆ’, ಎಂದು ತಿಳಿದ ನಂತರ ದೇವಸ್ಥಾನದ ಮುಖ್ಯ ಮಹಂತರಾದ ಸಚಿನ ದೇವಗಿರಿ ಮಹಾರಾಜರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರನ್ನು ಗರ್ಭಗುಡಿಯ ಹತ್ತಿರದಲ್ಲಿರುವ ಕೋಣೆಗೆ ಬರಲು ಹೇಳಿದರು ಮತ್ತು ದೇವಿಯ ಸಂಪೂರ್ಣ ಇತಿಹಾಸವನ್ನು ಹೇಳಿದರು.

ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸಾಧಕ-ಕಲಾವಿದರು ಬಿಡಿಸಿದ ಸಾತ್ತ್ವಿಕ ರಂಗೋಲಿಗಳು, ಸಾತ್ತ್ವಿಕ ಚಿತ್ರಗಳಲ್ಲಿರುವ ಸಕಾರಾತ್ಮಕ ಊರ್ಜೆ’ಯ (ಚೈತನ್ಯದ) ವೈಜ್ಞಾನಿಕ ಪರೀಕ್ಷಣೆ

ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳನ್ನು ಸಾಧಕ-ಚಿತ್ರಕಾರರು ‘ಕಲೆಗಾಗಿ ಕಲೆಯಲ್ಲ, ಆದರೆ ಈಶ್ವರಪ್ರಾಪ್ತಿಗಾಗಿ ಕಲೆ’ ಅಂದರೆ ‘ಸಾಧನೆ’ಯೆಂದು, ಹಾಗೆಯೇ ಸ್ಪಂದನಶಾಸ್ತ್ರದ ಸುಯೋಗ್ಯ ಅಧ್ಯಯನ ಮಾಡಿ ಪರಾತ್ಪರ ಗುರು ಡಾ. ಆಠವಲೆಯವರು ಕಾಲಾನುಸಾರ ಮಾಡಿದ ಮಾರ್ಗದರ್ಶನಕ್ಕನುಸಾರ ಬಿಡಿಸಿದ್ದಾರೆ.

ಮಹಿಳೆಯರೇ, ನವರಾತ್ರಿಯಲ್ಲಿ ವಿವಿಧ ಬಣ್ಣಗಳ ಸೀರೆಗಳನ್ನು ಧರಿಸುವುದರಿಂದಲ್ಲ, ದೇವಿಯ ಬಗೆಗಿನ ಶುದ್ಧ ಸಾತ್ತ್ವಿಕ ಭಾವವನ್ನು ಜಾಗೃತಗೊಳಿಸಿ ಅವಳ ಕೃಪೆ ಸಂಪಾದಿಸಿ !

ದೇವಿ-ದೇವತೆಗಳು ವ್ಯಕ್ತಿಯ ಬಾಹ್ಯ ಬಣ್ಣದಿಂದಲ್ಲ, ಆದರೆ ಅಂತರ್ಮನದಲ್ಲಿನ ಶುದ್ಧ ಸಾತ್ತ್ವಿಕ ಭಕ್ತಿಯಿಂದ ಪ್ರಸನ್ನರಾಗುತ್ತಾರೆ. ದೇವರಿಗೆ ಭಾವವು ಪ್ರಿಯವಾಗಿದೆ.

ರಾಮನಾಥಿ ಆಶ್ರಮದಲ್ಲಿ ಗರಬಾ ನೃತ್ಯದ ವಿಧಗಳನ್ನು ಪ್ರಸ್ತುತ ಪಡಿಸುವಾಗ ಸೌ. ನೀತಾ ಸೊಲಂಕಿ ಇವರಿಗೆ ಬಂದ ಅನುಭೂತಿಗಳು !

ಹಿಂಚ ಈ ನೃತ್ಯವನ್ನು ಮಾಡುವಾಗ ‘ದೇವಿಯ ತತ್ತ್ವವು ಕಾಲುಗಳಿಂದ ನನ್ನ ಶರೀರದೊಳಗೆ ಬರುತ್ತಿದೆ ಮತ್ತು ಕೆಲವು ಕ್ಷಣಗಳು ನನ್ನ ಶರೀರವು ಭರಿತವಾಗಿ ಒಂದು ದೈವೀ ಶಕ್ತಿಯು ನನ್ನ ಶರೀರದಲ್ಲಿ ಪ್ರವೇಶವಾಗಿದೆ’ ಎಂದು ನನಗೆ ಅರಿವಾಯಿತು.

ನವರಾತ್ರಿ ಉತ್ಸವದಲ್ಲಿ ಶ್ರೀ ದುರ್ಗಾದೇವಿ ಮೂರ್ತಿಯ ಎತ್ತರ 4 ಅಡಿಗಳಿಗೆ ಸೀಮಿತವಾಗಿರಬೇಕೆಂಬ ಸರಕಾರದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಒರಿಸ್ಸಾ ಉಚ್ಚ ನ್ಯಾಯಾಲಯದ ನಿರಾಕರಣೆ !

ಶ್ರೀ ದುರ್ಗಾದೇವಿಯ 8 ಅಡಿಯಷ್ಟು ಎತ್ತರದ ಮೂರ್ತಿ ತಯಾರಿಸುವ ಅನುಮತಿ ನೀಡಬೇಕೆಂಬ ಬೇಡಿಕೆಯ ಮನವಿಯನ್ನು ಬಾಲು ಬಾಜಾರ್ ಪೂಜಾ ಕಮಿಟಿಯಿಂದ ನ್ಯಾಯಾಲಯದಲ್ಲಿ ದಾಖಲಿಸಲಾಗಿತ್ತು.

ಕೊರೋನಾ ಮಹಾಮಾರಿಯಿಂದ ಉದ್ಭವಿಸಿರುವ ಸದ್ಯದ ಈ ಆಪತ್ಕಾಲದಲ್ಲಿ ನವರಾತ್ರೋತ್ಸವವನ್ನು ಹೇಗೆ ಆಚರಿಸಬೇಕು ?

ಕರ್ಮಕಾಂಡದ ಸಾಧನೆಗನುಸಾರ ಆಪತ್ಕಾಲದಲ್ಲಿ ಯಾವುದಾದರೊಂದು ವರ್ಷಕುಲಾಚಾರದಂತೆ ವ್ರತ, ಉತ್ಸವ ಅಥವಾ ಧಾರ್ಮಿಕ ಕೃತಿಗಳನ್ನು ಆಚರಿಸಲು ಸಾಧ್ಯವಾಗದಿದ್ದರೆ ಅಥವಾ ಕರ್ಮದಲ್ಲಿ ಏನಾದರೂ ನ್ಯೂನ್ಯತೆಗಳು ಉಳಿದಿದ್ದರೆ, ಮುಂದಿನ ವರ್ಷ ಅಥವಾ ಮುಂದಿನ ಕಾಲದಲ್ಲಿ ಯಾವಾಗ ಸಾಧ್ಯವಿರುತ್ತದೆಯೋ, ಆಗ ಆ ವ್ರತ, ಉತ್ಸವ ಅಥವಾ ಧಾರ್ಮಿಕ ಕೃತಿಗಳನ್ನು ಅಧಿಕ ಉತ್ಸಾಹದಿಂದ ಆಚರಿಸಬೇಕು.

ನವರಾತ್ರೋತ್ಸವ ಆರಂಭ ಆಶ್ವಯುಜ ಶುಕ್ಲ ಪಕ್ಷ ಪ್ರತಿಪದೆ (೧೭.೧೦.೨೦೨೦)

ಪಾತಾಳದಲ್ಲಿ ವಾಸಿಸುವ ಅಸುರಿ ಶಕ್ತಿಯ ಬಲ ಹೆಚ್ಚಾಗಿದ್ದರಿಂದ ಅವುಗಳು ಬ್ರಹ್ಮಾಂಡದಲ್ಲಿರುವ ಪೃಥ್ವಿ, ಸ್ವರ್ಗ ಮತ್ತು ಉಚ್ಚ ಲೋಕಗಳ ಮೇಲೆ ದಂಡೆತ್ತಿ ಹೋಗಿ ಅಲ್ಲಿ ವಾಸಿಸುತ್ತಿದ್ದ ಸಾತ್ತ್ವಿಕ ಜೀವಗಳ ಸಾಧನೆಯಲ್ಲಿ ವಿಘ್ನ ತರಲು ಪ್ರಯತ್ನಿಸಿದವು. ನವರಾತ್ರಿಯ ಅವಧಿಯಲ್ಲಿ ದೇವಿಯ ಸಕಾರಾತ್ಮಕ ಊರ್ಜೆ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ.

ನವದುರ್ಗಾ

ಮಾರ್ಕಂಡೇಯ ಋಷಿಗಳು ಬರೆದಿರುವ ದುರ್ಗಾಸಪ್ತಶತಿ ಎಂಬ ಗ್ರಂಥವು ತಂತ್ರ ಮತ್ತು ಮಂತ್ರ ಈ ಎರಡೂ ಮಾರ್ಗಗಳಲ್ಲಿ ಪ್ರಸಿದ್ಧವಾಗಿದ್ದು ಭಾರತದಲ್ಲಿ ಇಂದು ಲಕ್ಷಾಂತರ ಜನರು ಸಪ್ತಶತಿಯ ಪಠಣ ಮಾಡುತ್ತಿರುವುದು ಕಂಡುಬರುತ್ತದೆ. ಭಗವಾನ ಹಿರಣ್ಯಗರ್ಭಮನಿಗಳು ಮಂತ್ರಯೋಗ ಸಮೀಕ್ಷೆಯಲ್ಲಿ ಹೇಳಿರುವ ಶ್ರೀ ದುರ್ಗಾಸಪ್ತಶತಿಯಲ್ಲಿನ ದೇವಿಯ ಹೆಸರುಗಳ ಶಾಸ್ತ್ರೀಯ ಅರ್ಥ ಮತ್ತು ಇಂದಿನ ಭೌತಿಕ ವಿಜ್ಞಾನವು ಮಾಡಿರುವ ಪ್ರಗತಿಯ ಬಗ್ಗೆ ಇಲ್ಲಿ ನಾವು ವಿಚಾರ ಮಾಡೋಣ.

ದೇವಿಮಾತೆಯ ನಿತ್ಯ ಉಪಾಸನೆ ಹೇಗೆ ಮಾಡಬೇಕು ?

ಕುಂಕುಮಾರ್ಚನೆಯನ್ನು ಮಾಡುವಾಗ ಪ್ರಥಮವಾಗಿ ದೇವಿಯ ಆವಾಹನೆಯನ್ನು ಮಾಡಿ ಪೂಜಿಸುತ್ತಾರೆ. ನಂತರ ದೇವಿಯ ಹೆಸರನ್ನು ಉಚ್ಚರಿಸುತ್ತಾ ದೇವಿಯ ಮೂರ್ತಿಯ ಮೇಲೆ ಕುಂಕುಮವನ್ನು ಅರ್ಪಿಸುತ್ತಾರೆ. ದೇವಿಯ ಚರಣಗಳಿಂದ ಆರಂಭಿಸಿ ಶಿರದವರೆಗೆ ಏರಿಸಿ, ಅವರನ್ನು ಕುಂಕುಮದಿಂದ ಆಚ್ಛಾದಿಸುತ್ತಾರೆ. ಕುಂಕುಮಾರ್ಚನೆಯು ಪೂರ್ಣವಾದ ನಂತರ ದೇವಿಗೆ ಆರತಿಯನ್ನು ಬೆಳಗುತ್ತಾರೆ.