ನೃತ್ಯದ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
ಸೌ. ನೀತಾ ಮನೋಜ ಸೊಲಂಕಿ ಇವರು ೨೫.೯.೨೦೨೦ ರಿಂದ ೧೦.೧೦.೨೦೨೦ ಈ ಅವಧಿಯಲ್ಲಿ ರಾಮನಾಥಿ ಆಶ್ರಮದಲ್ಲಿ ವಾಸ್ತವ್ಯದಲ್ಲಿದ್ದರು. ಆ ಕಾಲಾವಧಿಯಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಪಾರಂಪರಿಕ ಗರಬಾದಲ್ಲಿನ ವಿವಿಧ ನೃತ್ಯದ ವಿಧಗಳ ಸಂಶೋಧನೆ ಮಾಡಲಾಯಿತು. ಗರಬಾದಲ್ಲಿನ ವಿಧಗಳನ್ನು ಮಾಡುವಾಗ ಮತ್ತು ಸಂತರ ಮುಂದೆ ನೃತ್ಯವನ್ನು ಮಾಡುವಾಗ ಸೌ. ನೀತಾ ಸೊಲಂಕಿ ಇವರಿಗೆ ಬಂದಿರುವ ಅನುಭೂತಿಗಳನ್ನು ಇಲ್ಲಿ ಕೊಡಲಾಗಿದೆ.
೧. ಗರಬಾ ನೃತ್ಯದ ವಿವಿಧ ವಿಧಗಳನ್ನು ಮಾಡುವಾಗ ಬಂದ ಅನುಭೂತಿಗಳು
೧ ಅ. ದೇವಿಯ ಅವಾಹನೆ ಮಾಡುವುದು : ನವರಾತ್ರಿಯ ಮೊದಲನೆ ದಿನದಂದು ಗರಬಾ ನೃತ್ಯವನ್ನು ಮಾಡುವ ಮೊದಲು ದೇವಿಯನ್ನು ಅವಾಹನೆ ಮಾಡಲಾಗುತ್ತದೆ. ಈ ನೃತ್ಯದ ಆರಂಭದಲ್ಲಿ ಕಾಲುಗಳಲ್ಲಿನ ಮೊದಲ ೩ ಚಲನವಲನಗಳಿಗೆ ವಿಶೇಷ ಮಹತ್ವ ಇರುತ್ತದೆ. ಈ ನೃತ್ಯವನ್ನು ಮಾಡುವಾಗ ಗರಬಾದಲ್ಲಿನ ‘ಏಕತಾಲಿ’ ಎಂಬ ವಿಧವನ್ನು ಮಾಡಲಾಗುತ್ತದೆ.
೧ ಅ ೧. ನೃತ್ಯವನ್ನು ಪ್ರಸ್ತುತ ಪಡಿಸುವ ಮೊದಲೇ ಮನಸ್ಸಿಗೆ ಪ್ರಸನ್ನತೆಯ ಅರಿವಾಗುವುದು, ಸೂಕ್ಷ್ಮದಲ್ಲಿ ಕಾಣಿಸಿದ ಪ್ರತಿಮೆಯಂತೆಯೇ ಕಳಸದ ಜಾಗದಲ್ಲಿ ಅಂಬಾದೇವಿಯ ಚಿತ್ರವನ್ನು ಇಟ್ಟಿರುವುದು ಕಾಣಿಸುವುದು ಮತ್ತು ನೃತ್ಯ ಮಾಡುವಾಗ ತನ್ನ ಅಸ್ತಿತ್ವದ ಅರಿವಾಗದೇ ‘ಆ ಜಾಗದಲ್ಲಿ ಬೇರೆ ಯಾರೋ ನೃತ್ಯವನ್ನು ಮಾಡುತ್ತಿದ್ದಾರೆ’ ಎಂದು ಅರಿವಾಗುವುದು : ‘೨೬.೯.೨೦೨೦ ರಂದು ‘ದೇವಿಯ ಅವಾಹನೆ ಎಂಬ ನೃತ್ಯವನ್ನು ಪ್ರಸ್ತುತಪಡಿಸುವ ಮೊದಲೇ ನನಗೆ ತುಂಬಾ ಪ್ರಸನ್ನತೆಯ ಅರಿವಾಗುತ್ತಿತ್ತು. ನನಗೆ ಬೇರೆಯೇ ಆನಂದದ ಅರಿವಾಗುತ್ತಿತ್ತು. ದೇವಿಯ ಕಲಶದ ಸಿದ್ಧತೆಯಾದ ನಂತರ ಅಲ್ಲಿ ದೇವಿಯ ಚಿತ್ರವಿಲ್ಲದಿರುವುದು ನನ್ನ ಗಮನಕ್ಕೆ ಬಂದಿತು. ಆ ಸಮಯದಲ್ಲಿ ನನ್ನ ಕಣ್ಮುಂದೆ ದೇವಿಯ ಒಂದು ಪ್ರತಿಮೆ ಬಂದಿತು. ನನಗೆ ಕಾಣಿಸಿದ ದೇವಿಯ ಪ್ರತಿಮೆ ಮತ್ತು ಕಲಶದ ಜಾಗದಲ್ಲಿ ನಂತರ ಸಾಧಕರು ಇಟ್ಟಿರುವ ದೇವಿಯ ಚಿತ್ರವು ಒಂದೇ ರೀತಿಯದ್ದಾಗಿತ್ತು. ಅನಂತರ ನೃತ್ಯವನ್ನು ಮಾಡುವಾಗ ನನಗೆ ನನ್ನ ಅಸ್ತಿತ್ವದ ಅರಿವಾಗದೇ ‘ನನ್ನ ಜಾಗದಲ್ಲಿ ಬೇರೆ ಯಾರೋ ಇದ್ದಾರೆ’ ಎಂದು ಅರಿವಾಗುತ್ತಿತ್ತು. ನನಗೆ ನೃತ್ಯವನ್ನು ಮಾಡುವಾಗ ಆನಂದವಾಗುತ್ತಿತ್ತು.
೧ ಆ. ಕಲಶ ನೃತ್ಯ : ಈ ನೃತ್ಯದ ವಿಧದಲ್ಲಿ ಕೈಯಲ್ಲಿ ಒಂದು ಕಲಶವನ್ನು ಹಿಡಿದು ಅದನ್ನು ತಲೆಯ ಮೇಲೆ, ಕೆಲವೊಮ್ಮೆ ಸೊಂಟದ ಮೇಲೆ, ಕೆಲವೊಮ್ಮೆ ಕಲಶವನ್ನು ಹಿಡಿಯುತ್ತ (ಕಲಶವನ್ನು ಎತ್ತರಕ್ಕೆ ಎಸೆದು ಪುನಃ ಕೈಯಲ್ಲಿ ಹಿಡಿಯುವುದು), ಕೆಲವೊಮ್ಮೆ ‘ನಾವು ಗೋಪಿಯರಿದ್ದೇವೆ’ ಎಂಬ ಭಾವವನ್ನಿಟ್ಟು ನೃತ್ಯವನ್ನು ಮಾಡಲಾಗುತ್ತದೆ.
೧ ಆ ೧. ಕಲಶನೃತ್ಯವನ್ನು ಮಾಡುವಾಗ ಭಾವಜಾಗೃತಿಯಾಗುವುದು ಮತ್ತು ಕೊನೆಗೆ ಕೈಯಲ್ಲಿನ ಕಲಶದಲ್ಲಿ ಬಾಲಕೃಷ್ಣನ ದರ್ಶನವಾಗುವುದು : ೨೭.೯.೨೦೨೦ ರಂದು ಕಲಶನೃತ್ಯವನ್ನು ಮಾಡುವಾಗ ‘ನಾನು ಪ್ರತ್ಯಕ್ಷ ಶ್ರೀಕೃಷ್ಣನೊಂದಿಗೆ ನೃತ್ಯವನ್ನು ಮಾಡುತ್ತಿದ್ದೇನೆ. ಶ್ರೀಕೃಷ್ಣನು ನನ್ನ ಜೊತೆಗೆ ಲೀಲೆ ಮಾಡುತ್ತಿದ್ದಾನೆ’ ಎಂದು ಅರಿವಾಗಿ ನನ್ನ ಭಾವಜಾಗೃತವಾಯಿತು. ನೃತ್ಯದ ಕೊನೆಗೆ ಕೈಯಲ್ಲಿ ಹಿಡಿದಿರುವ ಕಲಶದಲ್ಲಿ ನನಗೆ ಬಾಲಕೃಷ್ಣನ ದರ್ಶನವಾಯಿತು.
೧ ಇ. ದೀಪ ನೃತ್ಯ : ಈ ವಿಧದಲ್ಲಿ ಎರಡು ಕೈಗಳಲ್ಲಿ ದೀಪಗಳನ್ನು ಹಿಡಿದು ನೃತ್ಯವನ್ನು ಮಾಡಲಾಗುತ್ತದೆ. ಕೆಲವರು ಹಣೆಯ ಮೇಲೆ ದೀಪವನ್ನಿಟ್ಟು ಸಹ ಈ ನೃತ್ಯವನ್ನು ಮಾಡುತ್ತಾರೆ.
೧ ಇ ೧. ಯಜ್ಞದ ಸಮಯದಲ್ಲಿ ಬರುವ ಸುಗಂಧದಂತೆ ದೀಪ ನೃತ್ಯದ ಸಮಯದಲ್ಲಿ ದೈವೀ ಸುಗಂಧ ಬರುವುದು : ೩೦.೯.೨೦೨೦ ರಂದು ‘ದೀಪವನ್ನು ಹಿಡಿದು ನೃತ್ಯ ಮಾಡಲು ನಾನು ಸಾಯಂಕಾಲ ಸುಮಾರು ೬.೩೦ ಗಂಟೆಗೆ ನೃತ್ಯದ ಸ್ಥಳಕ್ಕೆ ಬಂದ ನಂತರ ನನಗೆ ಯಜ್ಞದ ಸಮಯದಲ್ಲಿ ಬರುತ್ತಿರುವ ಸುಗಂಧದಂತೆ ದೈವೀ ಸುಗಂಧವು ಬರುತ್ತಿತ್ತು. ‘ಈ ನೃತ್ಯದ ಸಮಯದಲ್ಲಿ ದೇವಿಯು ನನಗೆ ಸುಗಂಧದ ಅನುಭೂತಿಯನ್ನು ನೀಡಿದಳು, ಎಂದು ಅರಿವಾಯಿತು.
೧ ಈ. ಹಿಂಚ ನೃತ್ಯ : ಈ ನೃತ್ಯದ ವಿಧದಲ್ಲಿ ‘ದೋ ತಾಲಿ’ ಎಂದು ಮಾಡುತ್ತಾರೆ. ಅನಂತರ ಕೈಯಲ್ಲಿನ ನಾಲ್ಕು ಬೆರಳುಗಳನ್ನು ಅಂಗೈಗೆ ಹಚ್ಚಿ ಮುದ್ರೆ ಮಾಡಿ ಹೆಬ್ಬೆರಳನ್ನು ಭುಜಗಳ ಮೇಲೆ ಇಡುತ್ತಾರೆ. ಇದೇ ಸಮಯದಲ್ಲಿ ಬಲಗಾಲನ್ನು, ಎಡಗಾಲಿನ ಹಿಂದೆ ಹೆಜ್ಜೆ ಇಡುತ್ತ ಈ ನೃತ್ಯವನ್ನು ಮಾಡುತ್ತಾರೆ.
೧ ಈ ೧. ಹಿಂಚ ಈ ನೃತ್ಯವನ್ನು ಮಾಡುವಾಗ ದೇವಿಯ ಸಂಚಾರವಾಗುತ್ತಿರುವ ಅರಿವಾಗುವುದು : ‘ಹಿಂಚ ಈ ನೃತ್ಯವನ್ನು ಮಾಡುವಾಗ ‘ನನ್ನ ಶರೀರದಲ್ಲಿ ದೇವಿಯ ಸಂಚಾರವಾಗಿದೆ’ ಎಂದು ಅರಿವಾಯಿತು. ಅನಂತರ ‘ದೇವಿಯ ತತ್ತ್ವವು ಕಾಲುಗಳಿಂದ ನನ್ನ ಶರೀರದೊಳಗೆ ಬರುತ್ತಿದೆ ಮತ್ತು ಕೆಲವು ಕ್ಷಣಗಳು ನನ್ನ ಶರೀರವು ಭರಿತವಾಗಿ ಒಂದು ದೈವೀ ಶಕ್ತಿಯು ನನ್ನ ಶರೀರದಲ್ಲಿ ಪ್ರವೇಶವಾಗಿದೆ’ ಎಂದು ನನಗೆ ಅರಿವಾಯಿತು. ಆ ಶಕ್ತಿಯು ನನ್ನ ಶರೀರದಲ್ಲಿ ಪ್ರವೇಶವಾಗುವ ಮೊದಲು ನನಗೆ ಕುಂಕುಮದ ದೈವೀ ಸುಗಂಧ ಬಂದಿತು. ಈ ಸಮಯದಲ್ಲಿ ನನಗೆ ಸುತ್ತಮುತ್ತಲಿನ ಅರಿವು ಇರಲಿಲ್ಲ ಮತ್ತು ‘ಗರಬಾ ಆಡುತ್ತಲೇ ಇರಬೇಕು’ ಎಂದು ಎನಿಸುತ್ತಿತ್ತು. ಆಗ ‘ದೇವಿಯೇ ನನ್ನ ಮಾಧ್ಯಮದಿಂದ ಆಡುತ್ತಿದ್ದಾಳೆ’ ಎಂದು ಎನಿಸಿತು. ಇದಕ್ಕೆ ‘ಸಂಚಾರ’ ಎನ್ನಲಾಗುತ್ತದೆ. (ವ್ಯಕ್ತಿಯಲ್ಲಿ ದೇವಿಯ ಸಂಚಾರವಾದ ನಂತರ ಸಾಮಾನ್ಯ ವ್ಯಕ್ತಿಗೆ ದೈವೀ ಶಕ್ತಿಯನ್ನು ಸಹಿಸಲು ಆಗದಿರುವುದರಿಂದ ಅವನ ಶರೀರವು ನಡುಗುತ್ತದೆ, ಹಾಗೆಯೇ ಅವನಿಗೆ ತಲೆ ಸುತ್ತಿದಂತಾಗುತ್ತದೆ. ಆ ದೈವೀ ಶಕ್ತಿಯನ್ನು ಸಹಿಸಲು ಹಾಗೂ ಅದನ್ನು ಗ್ರಹಿಸಲು ಆ ಜೀವಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಆ ದೈವೀ ಶಕ್ತಿಯನ್ನು ಕೇವಲ ದೇವಿಯ ಕೃಪೆಯಿಂದ ಸಹಿಸಲು ಸಾಧ್ಯವಾಗುತ್ತದೆ. ಇಂತಹ ಸಮಯದಲ್ಲಿ ‘ಆ ವ್ಯಕ್ತಿಯು ಕೆಳಗೆ ಬೀಳದಂತೆ ಅಥವಾ ಅವಳಿಗೆ ಏನೂ ಗಾಯವಾಗಬಾರದು’ ಎಂಬ ದೃಷ್ಟಿಯಿಂದ ದೇವಿಯೇ ಆ ಜೀವದ ರಕ್ಷಣೆ ಮಾಡುತ್ತಾಳೆ.)
೧ ಉ. ರಾಂದಲ್ ಮಾ : ಗರಬಾದಲ್ಲಿನ ಈ ವಿಧದಲ್ಲಿ ಎರಡು ಕಾಲುಗಳಿಂದ ಒಂದೇ ಸಮಯಕ್ಕೆ ಜಿಗಿಯುತ್ತ ಕೈಯಿಂದ ಚಪ್ಪಾಳೆ ತಟ್ಟುತ್ತ ನೃತ್ಯವನ್ನು ಮಾಡಲಾಗುತ್ತದೆ. ರಾಂದಲ್ ಮಾತೆ (ದೇವಿ) ಕುದುರೆಯ ಮೇಲೆ ಸವಾರಿ ಮಾಡುತ್ತ ಬರುತ್ತಾಳೆ; ಆದುದರಿಂದ ಈ ಕೃತಿಗೆ ‘ಘೋಡಾ ಖುಂದನಾ’ ಎಂದು ಕರೆಯುತ್ತಾರೆ. ಈ ವಿಧವನ್ನು ಮಾಡಲು ತುಂಬಾ ಶಕ್ತಿಯು ಬೇಕಾಗುತ್ತದೆ.
೧ ಉ ೧. ‘ರಾಂದಲ್ ಮಾ’ ಈ ನೃತ್ಯವನ್ನು ಮಾಡುವಾಗ ನನಗೆ ‘ನನ್ನಲ್ಲಿ ದೇವಿಯ ತುಂಬಾ ಶಕ್ತಿ ಮತ್ತು ಬೇರೆಯೇ ಊರ್ಜೆ ನಿರ್ಮಾಣವಾಗಿದೆ’ ಎಂದು ಅರಿವಾಯಿತು.
೧ ಊ. ಟಿಪ್ಪಣಿ : ಈ ವಿಧದಲ್ಲಿ ನೃತ್ಯ ಮಾಡುವವರು ಒಂದು ಕೋಲಿನ ಮೇಲಿನ ತುದಿಗೆ ೩ ಗೆಜ್ಜೆಗಳನ್ನು ಕಟ್ಟಿ ಆ ಕೋಲು ಹಿಡಿದು ದೇವಿಯ ಸುತ್ತಲೂ ಪ್ರದಕ್ಷಿಣೆ ಹಾಕುತ್ತ ನೃತ್ಯವನ್ನು ಮಾಡುತ್ತಾರೆ.
೧ ಊ ೧. ಈ ನೃತ್ಯವನ್ನು ಮಾಡುವಾಗ ನನಗೆ ಆನಂದವಾಗುತ್ತಿತ್ತು. ನನಗೆ ದೇವಿಯ ಬಗ್ಗೆ ತುಂಬಾ ಭಾವಜಾಗೃತವಾಗುತ್ತಿತ್ತು.
೧ ಎ. ತೀನತಾಲಿ : ತಾಲಿ ನೃತ್ಯದ ವಿಧದಲ್ಲಿ ಒಂದು ಉಪವಿಧವಿದೆ. ಈ ವಿಧದಲ್ಲಿ ಕೈಯಿಂದ ವಿಶಿಷ್ಟ ವಿಧದಿಂದ ೩ ಬಾರಿ ಚಪ್ಪಾಳೆ ತಟ್ಟುತ್ತ ಗೀತೆಯೊಂದಿಗೆ ನೃತ್ಯವನ್ನು ಮಾಡಲಾಗುತ್ತದೆ.
೧ ಎ ೧. ತೀನತಾಲಿ ಎಂಬ ನೃತ್ಯವನ್ನು ಮಾಡುವಾಗ ವಿವಿಧ ದೈವೀ ಸುಗಂಧ ಬರುವುದು ಮತ್ತು ನನ್ನಲ್ಲಿ ದೈವೀ ಊರ್ಜೆ ಇರುವುದರ ಅರಿವಾಗುವುದು : ೨೬.೯.೨೦೨೦ ರಂದು ‘ತೀನತಾಲಿ’ ಎಂಬ ನೃತ್ಯವನ್ನು ಮಾಡುವಾಗ ಮೊದಲು ನನಗೆ ಬೇರೆಯೇ ಸುಗಂಧ ಬಂದಿತು. ಆ ಸಮಯದಲ್ಲಿ ನನಗೆ ‘ಸೂಕ್ಷ್ಮದಲ್ಲಿ ಅಲ್ಲಿ ಅನೇಕ ಕಮಲದ ಹೂವುಗಳಿವೆ’ ಎಂದು ಅರಿವಾಯಿತು. ಸ್ವಲ್ಪ ಸಮಯದ ನಂತರ ಪಾರಿಜಾತದ ಹೂವುಗಳ ಸುಗಂಧ ಬಂದಿತು. ಸ್ವಲ್ಪ ಸಮಯದ ನಂತರ ವಿಭೂತಿ ಮತ್ತು ಚಂದನ ಇವುಗಳ ಸುಗಂಧ ಬಂದಿತು. ಅನಂತರ ನನಗೆ ‘ನಾನು ಎಲ್ಲಿದ್ದೇನೆ ?’ ಎಂಬುದು ತಿಳಿಯಲೇ ಇಲ್ಲ. ನಂತರ ನನಗೆ ನನ್ನಲ್ಲಿ ಒಂದು ಬೇರೆಯೇ ದೈವೀ ಊರ್ಜೆಯ ಅರಿವಾಗುತ್ತಿತ್ತು.
೧ ಐ. ದೇವಿಯ ಆರತಿ : ಗರಬಾ ಆಡಿದ ನಂತರ ಅದರ ಸಮಾರೋಪವನ್ನು ಗರಬಾ ನೃತ್ಯವನ್ನು ಮಾಡುತ್ತ ‘ದೇವಿಯ ಆರತಿ’ಯನ್ನು ಮಾಡಲಾಗುತ್ತದೆ.
೧ ಐ ೧. ನೃತ್ಯದ ಸ್ಥಳದಲ್ಲಿ ನೀಲಿ ಬಣ್ಣ ಕಾಣಿಸುವುದು, ಅದನ್ನು ನೋಡುವಾಗ ಉತ್ಸಾಹವೆನಿಸುವುದು ಮತ್ತು ದೇವಿಯ ಆರತಿಯೊಂದಿಗೆ ಮಾನಸ ನೃತ್ಯವನ್ನು ಮಾಡುವಾಗ ದೇವಿಯ ದರ್ಶನವಾಗುವುದು : ೧.೧೦.೨೦೨೦ ರಂದು ದೇವಿಯ ಆರತಿ ಮಾಡಲು ನಾನು ಆಯೋಜನೆ ಮಾಡಿದ ಸ್ಥಳಕ್ಕೆ ಬಂದೆನು. ಆಗ ನನಗೆ ಎಲ್ಲ ಕಡೆಗೆ ನೀಲಿ ಬಣ್ಣ ಕಾಣಿಸಿತು. ಆ ಬಣ್ಣವನ್ನು ನೋಡುವಾಗ ನನ್ನ ಕಾಲುಗಳಲ್ಲಿ ಒಳ್ಳೆಯ ಸ್ಪಂದನಗಳ ಅರಿವಾಗಿ ನನ್ನಲ್ಲಿ ಉತ್ಸಾಹ ಮೂಡಿತು. ಆರತಿಯ ತಟ್ಟೆಯನ್ನು ಹಿಡಿದು ನಾನು ‘ಮೈ ತೋ ಆರತಿ ಉತಾರು ರೇ ಸಂತೋಷಿಮಾತಾಕೀ….’ ಎಂಬ ದೇವಿಯ ಆರತಿಯೊಂದಿಗೆ ನೃತ್ಯವನ್ನು ಮಾಡುತ್ತಿರುವಾಗ ನನಗೆ ದೇವಿಯ ದರ್ಶನವಾಯಿತು. ಅಲ್ಲಿರುವ ದೇವಿಯ ಚಿತ್ರವೂ ಜಾಗೃತವಾಗಿರುವುದು ಅರಿವಾಗಿ ನನ್ನ ಭಾವಜಾಗೃತವಾಯಿತು. ಆರತಿ ಮಾಡಿದ ನಂತರ ನನಗೆ ನನ್ನಲ್ಲಿ ಆಕಸ್ಮಿಕ ದೈವೀ ಸಂಚಾರ ಆಗಿರುವುದರ ಅರಿವಾಗಿ ಸ್ವಲ್ಪ ಹೊತ್ತಿನ ನಂತರ ತಲೆಸುತ್ತಿತು. ಅನಂತರ ಸ್ವಲ್ಪ ಹೊತ್ತಿನ ನಂತರ ನಾನು ಸ್ಥಿರವಾದೆನು.
– ಸೌ. ನೀತಾ ಮನೋಜ ಸೊಲಂಕಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೧೦.೨೦೨೦)
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.
* ಅನುಭೂತಿ : ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು |