ನವರಾತ್ರಿ ಉತ್ಸವದಲ್ಲಿ ಶ್ರೀ ದುರ್ಗಾದೇವಿ ಮೂರ್ತಿಯ ಎತ್ತರ 4 ಅಡಿಗಳಿಗೆ ಸೀಮಿತವಾಗಿರಬೇಕೆಂಬ ಸರಕಾರದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಒರಿಸ್ಸಾ ಉಚ್ಚ ನ್ಯಾಯಾಲಯದ ನಿರಾಕರಣೆ !

ಭುವನೇಶ್ವರ(ಓರಿಸ್ಸಾ) – ನವರಾತ್ರಿ ಉತ್ಸವದಲ್ಲಿ ಶ್ರೀದುರ್ಗಾದೇವಿ ಮೂರ್ತಿಯ ಎತ್ತರವು ನಾಲ್ಕು ಅಡಿಗೆ ಸೀಮಿತವಾಗಿರಬೇಕೆಂಬ ರಾಜ್ಯ ಸರಕಾರದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಒರಿಸ್ಸಾದ ಉಚ್ಚ ನ್ಯಾಯಾಲಯವು ನಿರಾಕರಿಸಿದೆ. ಶ್ರೀ ದುರ್ಗಾದೇವಿಯ 8 ಅಡಿಯಷ್ಟು ಎತ್ತರದ ಮೂರ್ತಿ ತಯಾರಿಸುವ ಅನುಮತಿ ನೀಡಬೇಕೆಂಬ ಬೇಡಿಕೆಯ ಮನವಿಯನ್ನು ಬಾಲು ಬಾಜಾರ್ ಪೂಜಾ ಕಮಿಟಿಯಿಂದ ನ್ಯಾಯಾಲಯದಲ್ಲಿ ದಾಖಲಿಸಲಾಗಿತ್ತು. ಅದರ ವಿಚಾರಣೆಯಲ್ಲಿ ನ್ಯಾಯಾಲಯವು ಈ ನಿರ್ಣಯವನ್ನು ನೀಡಿದೆ.

ನ್ಯಾಯಾಲಯವು, ಕಳೆದ ವರ್ಷ ರಾಜ್ಯ ಸರಕಾರವು ಮೂರ್ತಿಯ ಎತ್ತರವನ್ನು ನಿಗದಿ ಪಡಿಸಿರುವ ಆದೇಶವನ್ನು ತಡವಾಗಿ ಜಾರಿಮಾಡಿತ್ತು. ಅಲ್ಲಿಯವರೆಗೆ ಅನೇಕ ಪೂಜಾ ಸಮಿತಿಗಳಿಂದ ಮೂರ್ತಿ ತಯಾರಿಸಿ ಆಗಿತ್ತು. ಆದ್ದರಿಂದ 4 ಅಡಿಗಿಂತ ಎತ್ತರದ ಮೂರ್ತಿಗಳಿಗೆ ಅನುಮತಿ ನೀಡಲಾಗಿತ್ತು. ಈ ವರ್ಷ ಮಾತ್ರ ಸರಕಾರ ಆಗಸ್ಟ್ ತಿಂಗಳಿನಲ್ಲಿಯೇ ಆದೇಶವನ್ನು ಹೊರಡಿಸಿದೆ, ಆದ್ದರಿಂದ ಇದರಲ್ಲಿ ಸವಲತ್ತು ಕೊಡಲಾಗುವುದಿಲ್ಲ ಎಂದು ಹೇಳಿದೆ.