ನವರಾತ್ರೋತ್ಸವ ಆರಂಭ ಆಶ್ವಯುಜ ಶುಕ್ಲ ಪಕ್ಷ ಪ್ರತಿಪದೆ (೧೭.೧೦.೨೦೨೦)

ನವರಾತ್ರಿಯಲ್ಲಿ ಆಚರಿಸುವ ಕೃತಿಯ  ಹಿಂದಿನ ಶಾಸ್ತ್ರ ಮತ್ತು ಅದರ ಆಧ್ಯಾತ್ಮಿಕ ಮಹತ್ವ

೧. ನವರಾತ್ರಿಯ ತಿಥಿ

‘ಆಶ್ವಯುಜ ಶುಕ್ಲ ಪ್ರತಿಪದೆಯಿಂದ ನವಮಿಯವರೆಗಿನ ಅವಧಿಯನ್ನು ‘ನವರಾತ್ರಿ ಎಂದು ಕರೆಯುತ್ತಾರೆ. ಈ ಅವಧಿಯಲ್ಲಿ ದೇವಿಯ ಭಕ್ತರು ಮತ್ತು ಉಪಾಸಕರು ದೇವಿಯ ಉತ್ಸವವನ್ನು ಆಚರಿಸುತ್ತಾರೆ.

ಆಧ್ಯಾತ್ಮಿಕ ಮಹತ್ವ : ಆಶ್ವಯುಜ ಶುಕ್ಲ ಪ್ರತಿಪದೆಯಿಂದ ನವಮಿಯವರೆಗೆ ಬ್ರಹ್ಮಾಂಡದ ದೇವಿಲೋಕದಿಂದ ದೇವಿಯ ತತ್ತ್ವಗಳು ಪೃಥ್ವಿಯ ಮೇಲೆ ಒಂದು ಸಾವಿರ ಪಟ್ಟ ಹೆಚ್ಚು ಪ್ರಕ್ಷೇಪಿತಗೊಳ್ಳುತ್ತಿರುತ್ತದೆ. ಈ ಕಾಲಾವಧಿಯಲ್ಲಿ ಮಾಡಿದ ದೇವಿಯ ಉಪಾಸನೆಯಿಂದ ದೇವಿಯ ತತ್ತ್ವವನ್ನು ಉಪಾಸಕನಿಗೆ ಗ್ರಹಿಸಲು ಸಾಧ್ಯವಾಗುತ್ತದೆ.

೨. ನವರಾತ್ರಿಯ ಇತಿಹಾಸ

೨ ಅ. ಶ್ರೀರಾಮನು ನವರಾತ್ರಿಯ ವ್ರತ ಮಾಡಿದ ಬಳಿಕ ರಾವಣನನ್ನು ವಧಿಸುವುದು : ‘ಶ್ರೀರಾಮನ ಕೈಯಿಂದ ರಾವಣನ ವಧೆಯಾಗಬೇಕು ಎನ್ನುವ ಉದ್ದೇಶದಿಂದ ನಾರದನು ಶ್ರೀ ರಾಮನಿಗೆ ನವರಾತ್ರಿಯ ವ್ರತ ಮಾಡಲು ಹೇಳಿದನು. ಈ ವ್ರತ ಪೂರ್ಣಗೊಂಡ ನಂತರ ಶ್ರೀರಾಮನು ಲಂಕೆಗೆ ದಂಡೆತ್ತಿ ಹೋಗಿ ರಾವಣನನ್ನು ವಧಿಸಿದನು.

೨ ಆ. ದೇವಿಯು ಮಹಿಷಾಸುರನೊಂದಿಗೆ ಯುದ್ಧ ಮಾಡಿ ಅವನನ್ನು ನಾಶಗೊಳಿಸುವುದು : ಮಹಿಷಾಸುರ ಎಂಬ ಅಸುರನೊಂದಿಗೆ ಪ್ರತಿಪದೆಯಿಂದ ನವಮಿಯವರೆಗೆ ಎಂದರೆ ಒಂಬತ್ತು ದಿನಗಳವರೆಗೆ ಯುದ್ಧ ಮಾಡಿ ನವಮಿಯ ರಾತ್ರಿ ದೇವಿಯು ಅಸುರನನ್ನು ವಧಿಸಿದಳು. ಆಗಿನಿಂದ ಅವಳನ್ನು ‘ಮಹಿಷಾಸುರಮರ್ದಿನಿ ಎಂದು ಕರೆಯುತ್ತಾರೆ.

ಆಧ್ಯಾತ್ಮಿಕ ಮಹತ್ವ : ಪಾತಾಳದಲ್ಲಿ ವಾಸಿಸುವ ಅಸುರಿ ಶಕ್ತಿಯ ಬಲ ಹೆಚ್ಚಾಗಿದ್ದರಿಂದ ಅವುಗಳು ಬ್ರಹ್ಮಾಂಡದಲ್ಲಿರುವ ಪೃಥ್ವಿ, ಸ್ವರ್ಗ ಮತ್ತು ಉಚ್ಚ ಲೋಕಗಳ ಮೇಲೆ ದಂಡೆತ್ತಿ ಹೋಗಿ ಅಲ್ಲಿ ವಾಸಿಸುತ್ತಿದ್ದ ಸಾತ್ತ್ವಿಕ ಜೀವಗಳ ಸಾಧನೆಯಲ್ಲಿ ವಿಘ್ನ ತರಲು ಪ್ರಯತ್ನಿಸಿದವು. ನವರಾತ್ರಿಯ ಅವಧಿಯಲ್ಲಿ ದೇವಿಯ ಸಕಾರಾತ್ಮಕ ಊರ್ಜೆ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಈ ನಿರ್ಗುಣ ಸ್ತರದ ದೈವೀ ಶಕ್ತಿಯು ಪ್ರಭು ಶ್ರೀರಾಮ ಮತ್ತು ಮಹಿಷಾಸುರಮರ್ದಿನಿಯ ರೂಪದಿಂದ ಸಗುಣದಲ್ಲಿ ಪ್ರಕಟಗೊಂಡಿತು ಮತ್ತು ಅವಳು ತಮಪ್ರಧಾನ ಆಸುರಿ ಶಕ್ತಿಯನ್ನು ಸಂಹರಿಸಿತು. ಪ್ರಭು ಶ್ರೀರಾಮ ಮತ್ತು ಮಹಿಷಾಸುರ ಮರ್ದಿನಿಯ ಉದಾಹರಣೆಯಿಂದ ನಮಗೆ ದೈವೀ ಶಕ್ತಿಯು ಆಯಾ ಸಮಯಕ್ಕೆ ಸಗುಣದಿಂದ ಅವತಾರ ಧಾರಣೆ ಮಾಡುತ್ತದೆ ಎಂದು ಗಮನಕ್ಕೆ ಬರುತ್ತದೆ.

೩. ನವರಾತ್ರಿಯ ಮಹತ್ವ

೩ ಅ. ಧರ್ಮಸಂಸ್ಥಾಪನೆಗಾಗಿ ದೇವಿಯು ಪುನಃ ಪುನಃ ಅವತರಿಸುವುದು : ಜಗತ್ತಿನಲ್ಲಿ ತಾಮಸ, ಆಸುರಿ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ, ಆಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತರಿಸುತ್ತಾಳೆ. ಇದು ಆ ದೇವಿಯ ವ್ರತವಾಗಿದೆ.

ಆಧ್ಯಾತ್ಮಿಕ ಮಹತ್ವ : ನವರಾತ್ರಿಯ ಅವಧಿಯಲ್ಲಿ ಕಾರ್ಯನಿರತವಾಗಿರುವ ದೇವಿತತ್ತ್ವದ ಸ್ಪಂದನಗಳಿಂದ ಪ್ರಕ್ಷೇಪಿತವಾಗುವ ಸತ್ತ್ವಪ್ರಧಾನ ಶಕ್ತಿಯ ಲಹರಿಗಳಿಂದ ವಾತಾವರಣದಲ್ಲಿರುವ ತಮಪ್ರಧಾನ ಅಸುರಿಶಕ್ತಿಯು ಲಯಗೊಳ್ಳುತ್ತದೆ. ಇದು ದೈವೀ ಶಕ್ತಿಯು ಅಸುರಿ ಶಕ್ತಿಯ ಮೇಲೆ ವಿಜಯವನ್ನು ಸಾಧಿಸುವ ಅವಧಿಯಾಗಿದೆ.

೩ ಆ. ದೇವಿಯ ನಾಮಜಪದ ಮಹತ್ವ : ನವರಾತ್ರಿಯಲ್ಲಿ ದೇವಿತತ್ತ್ವ ಎಂದಿಗಿಂತ ೧೦೦೦ ಪಟ್ಟುಗಳಷ್ಟು ಹೆಚ್ಚು ಕಾರ್ಯ ನಿರತವಾಗಿರುತ್ತದೆ. ದೇವಿತತ್ತ್ವದ ಹೆಚ್ಚೆಚ್ಚು ಲಾಭ ಪಡೆಯಲು ನವರಾತ್ರಿಯ ಸಮಯದಲ್ಲಿ ‘ಶ್ರೀ ದುರ್ಗಾದೇವ್ಯೈ ನಮಃ | ಈ ನಾಮಜಪವನ್ನು ಹೆಚ್ಚೆಚ್ಚು ಮಾಡಬೇಕು.

ಆಧ್ಯಾತ್ಮಿಕ ಮಹತ್ವ : ದೇವಿಯ ನಾಮಜಪ ಮಾಡುವುದರಿಂದ ಉಪಾಸಕನ ಮನಸ್ಸು ಮತ್ತು ಬುದ್ಧಿಯು ಶುದ್ಧಿವಾಗಿ ಅವನಲ್ಲಿ ದೇವಿಯ ತತ್ತ್ವದ  ಸ್ಪಂದನಗಳನ್ನು ಗ್ರಹಿಸುವ ಕ್ಷಮತೆಯು ಉತ್ಪನ್ನವಾಗುತ್ತದೆ. ಇದರಿಂದ ನವರಾತ್ರಿಯಲ್ಲಿ ದೇವಿಯ ನಾಮಜಪವನ್ನು ಹೆಚ್ಚೆಚ್ಚು ಮಾಡುವುದರಿಂದ ಉಪಾಸಕನೆಡೆಗೆ ಬ್ರಹ್ಮಾಂಡದಲ್ಲಿ ಕಾರ್ಯನಿರತವಾಗಿರುವ ದೇವಿತತ್ತ್ವವು ಶೀಘ್ರವಾಗಿ ಆಕರ್ಷಿಸಲ್ಪಟ್ಟು ಉಪಾಸಕನಿಗೆ ದೇವಿ ತತ್ತ್ವದ ಲಾಭವಾಗುತ್ತದೆ.

೩ ಇ. ನವರಾತ್ರಿಯಲ್ಲಿ ಶ್ರೀ ದುರ್ಗಾದೇವಿಯ ಒಂಬತ್ತು  ಕಾರ್ಯನಿರತ ರೂಪಗಳು

೪. ವ್ರತ ಪಾಲಿಸುವ ಪದ್ಧತಿ

ಈ ವ್ರತವನ್ನು ಅನೇಕ ಮನೆತನಗಳಲ್ಲಿ ಕುಲಾಚಾರದ ಸ್ವರೂಪದಲ್ಲಿರುತ್ತದೆ. ಆಶ್ವಯುಜ ಶುಕ್ಲ ಪ್ರತಿಪದೆಯಂದು ಈ ವ್ರತ ಪ್ರಾರಂಭವಾಗುತ್ತದೆ.

೪ ಅ. ಪೀಠವನ್ನು ಸಿದ್ಧಗೊಳಿಸಿ ಸಿಂಹಾರೂಢ ಅಷ್ಟಭುಜವುಳ್ಳ ದೇವಿಯ ಮತ್ತು ನವಾರ್ಣಯಂತ್ರವನ್ನು ಸ್ಥಾಪಿಸುವುದು : ಮನೆಯಲ್ಲಿ ಪವಿತ್ರ ಜಾಗದಲ್ಲಿ ಒಂದು ಪೀಠವನ್ನು (ಮಣ್ಣಿನಿಂದ ಸಮತಟ್ಟಾಗಿ ಮಾಡಿರುವ ಪದರು) ಸಿದ್ಧಗೊಳಿಸಿ ಅದರ ಮೇಲೆ ಸಿಂಹಾರೂಢ ಅಷ್ಟಭುಜ ದೇವಿಯ ಮತ್ತು ನವಾರ್ಣಯಂತ್ರವನ್ನು ಸ್ಥಾಪಿಸಬೇಕು. ಯಂತ್ರದ ಪಕ್ಕದಲ್ಲಿ ಕಲಶವನ್ನು ಸ್ಥಾಪಿಸಿ ಅದನ್ನು ಮತ್ತು ದೇವಿಯನ್ನು ಯಥಾವಿಧಿ ಪೂಜಿಸಬೇಕು.

ಆಧ್ಯಾತ್ಮಿಕ ಮಹತ್ವ : ಮಣ್ಣಿನಲ್ಲಿ ಪೃಥ್ವಿತತ್ತ್ವ ಮತ್ತು ಭೂದೇವಿಯ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ನವರಾತ್ರಿಯಲ್ಲಿ ಕಾರ್ಯನಿರತವಾಗಿರುವ ದೇವಿತತ್ತ್ವದ ಸೂಕ್ಷ್ಮಾತಿಸೂಕ್ಷ್ಮ ಸ್ಪಂದನಗಳು ಮಣ್ಣಿನಲ್ಲಿರುವ ಭೂಮಿತತ್ತ್ವದೆಡೆಗೆ ಶೀಘ್ರವಾಗಿ ಆಕರ್ಷಿಸಲ್ಪಡುವುದರಿಂದ ಮಣ್ಣಿನ ಪೀಠವನ್ನು ಸಿದ್ಧಗೊಳಿಸಲು ಹೇಳಲಾಗಿದೆ. ಈ ಪೀಠದಲ್ಲಿ ಆಕರ್ಷಿಸಲ್ಪಡುವ ದೇವಿತತ್ತ್ವದ ಸ್ಪಂದನಗಳು ಪೀಠದ ಮೇಲೆ ಸ್ಥಾಪಿಸಲ್ಪಟ್ಟಿರುವ ಅಷ್ಟಭುಜ ದೇವಿಯ ಪ್ರತಿಮೆಯಲ್ಲಿ ಮತ್ತು ನವಾರ್ಣಯಂತ್ರದಲ್ಲಿ ಶೇಖರಿಸಲ್ಪಟ್ಟು ದೇವಿಯ ಪ್ರತಿಮೆ ಮತ್ತು ನವಾರ್ಣಯಂತ್ರವು ದೇವಿತತ್ತ್ವದಿಂದ ತುಂಬಿಕೊಳ್ಳುತ್ತದೆ.

೪ ಆ. ಘಟಸ್ಥಾಪನೆ ಮತ್ತು ಮಾಲಾಬಂಧನ ಮಾಡಿ ಮಣ್ಣಿನಲ್ಲಿ ಏಳು ತರಹದ ಧಾನ್ಯಗಳನ್ನು ಬಿತ್ತುವುದು : ನವರಾತ್ರಿ ಉತ್ಸವದ ಕುಲಾಚಾರದಂತೆ ಘಟಸ್ಥಾಪನೆ ಮತ್ತು ಮಾಲಾಬಂಧನ ಮಾಡಬೇಕು. ಹೊಲದ ಮಣ್ಣನ್ನು ತಂದು ಅದನ್ನು ಭೂಮಿಯ ಮೇಲೆ ಪೂರ್ವದಿಂದ ಪಶ್ಚಿಮ ದಿಕ್ಕಿನಲ್ಲಿ ಎರಡು ಬೆರಳುಗಳಷ್ಟು ದಪ್ಪವಾದ ಚೌಕಾಕಾರದ ಪದರನ್ನು ಮಾಡಬೇಕು ಮತ್ತು ಅದರಲ್ಲಿ ಜೋಳ, ಗೋಧಿ, ಎಳ್ಳು, ಹೆಸರು, ನವಣೆ, ಸಾವಿಕಾಳು ಮತ್ತು ಕಡಲೆ ಈ ಸಪ್ತಧಾನ್ಯಗಳನ್ನು ಹಾಕಬೇಕು.

ಆಧ್ಯಾತ್ಮಿಕ ಮಹತ್ವ : ಕಲಶದಲ್ಲಿ ಪೃಥ್ವಿತತ್ತ್ವದ ಲಹರಿಗಳು ಕಾರ್ಯನಿರತವಾಗಿರುವುದರಿಂದ ಕಳಶದಲ್ಲಿ ದೇವಿತತ್ತ್ವದ ಶಕ್ತಿಲಹರಿಗಳು ಆಕರ್ಷಿತವಾಗುತ್ತವೆ. ಕಳಶದ ಒಳಗಿನ ಟೊಳ್ಳಿನಲ್ಲಿ ದೇವಿ ತತ್ತ್ವವಿರುವ ನಿರ್ಗುಣ ಚೈತನ್ಯ ಲಹರಿಗಳು ಆಕರ್ಷಿಸಲ್ಪಡುತ್ತವೆ. ಹೊಲದ ಮಣ್ಣಿನಲ್ಲಿ ಭೂಮಿತತ್ತ್ವದೊಂದಿಗೆ ಎತ್ತಿನ ಶಕ್ತಿ ಮತ್ತು ಧರ್ಮತತ್ತ್ವ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯ ನಿರತವಾಗಿರುತ್ತದೆ. ಹೊಲದಲ್ಲಿರುವ ಮಣ್ಣನ್ನು ತಂದು ಅದರಲ್ಲಿ ಸಪ್ತಧಾನ್ಯ ಬಿತ್ತುವುದರಿಂದ ಧರ್ಮಸಂಸ್ಥಾಪನೆಗಾಗಿ ಕಾರ್ಯನಿರತವಾಗಿರುವ ದೇವಿತತ್ತ್ವದ ಧರ್ಮಶಕ್ತಿಯುಳ್ಳ ಲಹರಿಗಳು ಆಕರ್ಷಿಸಲ್ಪಟ್ಟು ಆ ಧಾನ್ಯದಿಂದ ಹೊರಬರುವ ಮೊಳಕೆಯ ಮುಖಾಂತರ ವಾತಾವರಣದಲ್ಲಿ ಪ್ರಕ್ಷೇಪಿಸಲ್ಪಡುತ್ತವೆ.

೪ ಇ. ಧಾನ್ಯ ಮತ್ತು ಕಾರ್ಯನಿರತ ದೇವಿಯ ತತ್ತ್ವಗಳು

೪ ಇ. ಕಲಶದಲ್ಲಿ ವಿವಿಧ ವಸ್ತುಗಳನ್ನು ಹಾಕುವುದು : ಮಣ್ಣಿನ ಅಥವಾ ತಾಮ್ರದ ಕಲಶದಲ್ಲಿ ನೀರು, ಗಂಧ, ಹೂವು, ಗರಿಕೆ, ಅಕ್ಷತೆ, ಅಡಿಕೆ, ಪಂಚಪಲ್ಲವ, ಪಂಚರತ್ನ ಅಥವಾ ನಾಣ್ಯ ಮುಂತಾದ ವಸ್ತುಗಳನ್ನು ಹಾಕಬೇಕು.

೪ ಈ ೧. ವಸ್ತು, ಕಾರ್ಯನಿರತ ಪಂಚಮಹಾಭೂತ ಮತ್ತು ಕಾರ್ಯನಿರತ ದೇವತಾತತ್ತ್ವ

ಟಿಪ್ಪಣಿ ೧ : ಪಂಚಪಲ್ಲವ : ಐದು ತರಹದ ಗಿಡಗಳ ಎಲೆಗಳು. ಒಂದು ಅಭಿಪ್ರಾಯದಂತೆ ಮಾವು, ಆಲ, ನೇರಳೆ ಮತ್ತು ಅರಳಿ, ಔದುಂಬರ ಇವುಗಳ ಎಲೆ.

ಟಿಪ್ಪಣಿ ೨ : ಪಂಚರತ್ನ : ಒಂದು ಅಭಿಪ್ರಾಯದಂತೆ ಬಂಗಾರ, ಬೆಳ್ಳಿ,  ವಜ್ರ, ಮುತ್ತು, ರತ್ನ ಮತ್ತು ಹವಳ ಇನ್ನೊಂದು ಅಭಿಪ್ರಾಯದಂತೆ, ಬಂಗಾರ, ಮಾಣಿಕ್ಯ, ನೀಲಮಣಿ, ಪದ್ಮರಾಗ(ಪಚ್ಚೆ) ಮತ್ತು ಮುತ್ತು.

೪ ಇ ೨. ಸಪ್ತಧಾನ್ಯ ಮತ್ತು ಕಲಶ ಸ್ಥಾಪಿಸುವುದು : ಸಪ್ತಧಾನ್ಯಗಳು ಮತ್ತು ಕಲಶ(ವರುಣ) ಸ್ಥಾಪಿಸುವ ವೈದಿಕ ಮಂತ್ರಗಳು ಗೊತ್ತಿಲ್ಲದಿದ್ದರೆ, ಪುರಾಣೋಕ್ತ ಮಂತ್ರಗಳನ್ನು ಹೇಳಬೇಕು. ಅದೂ ಬರದಿದ್ದರೆ ಆಯಾ ವಸ್ತುಗಳ ಹೆಸರನ್ನು ಉಚ್ಚರಿಸಿ ‘ಸಮರ್ಪಯಾಮಿ ಎಂದು ನಾಮಮಂತ್ರದ ಉಪಯೋಗಿಸಬೇಕು. ಕಲಶದ ಮೇಲೆ ಅಡ್ಡವಾಗಿ ದಾರವನ್ನು ಕಟ್ಟಿ ಒಂದು ಸಾಲಿನಲ್ಲಿ ಲಂಬವಾಗಿವಾಗಿ ಮಾಲೆಯನ್ನು ತೂಗಾಡಿಸಬೇಕು. ಅದರಲ್ಲಿನ ಮಾಲೆ ಕಲಶದಲ್ಲಿ ಮುಟ್ಟುವಂತೆ ಕಟ್ಟಬೇಕು.

ಆಧ್ಯಾತ್ಮಿಕ ಮಹತ್ವ : ಸಪ್ತಧಾನ್ಯಗಳು ಮತ್ತು ಕಲಶಗಳನ್ನು ಸ್ಥಾಪಿಸುವುದರಿಂದ ಇತರ ದೇವತೆಗಳ ಸ್ವಲ್ಪ ಅಂಶ ಮತ್ತು ದೇವಿಯ ಪೂರ್ಣಾಂಶ ಘಟದಲ್ಲಿ ಆಕರ್ಷಿಸಲ್ಪಡುತ್ತದೆ. ಕಲಶದ ಮೇಲೆ ಕಟ್ಟಿರುವ ಪುಷ್ಪಮಾಲೆಯ ಪುಷ್ಪದಿಂದ ಪ್ರಕ್ಷೇಪಿತವಾಗುವ ಗಂಧಮಯ ಲಹರಿಯೆಡೆಗೆ ಭೂದೇವಿ ಮತ್ತು ಶ್ರೀದೇವಿಯವರ ಸ್ಪಂದನಗಳು ಆಕರ್ಷಿಸಲ್ಪಡುತ್ತವೆ. ಈ ಮಾಲೆಯು ಕಲಶದಲ್ಲಿ ತಲುಪುವಂತೆ ಕಟ್ಟಿರುವುದರಿಂದ ಮಾಲೆಗೆ ಕಲಶದ ಅಂದರೆ ಘಟದ ಸ್ಪರ್ಶವಾಗಿ ಘಟದಲ್ಲಿರುವ ದೇವಿತತ್ತ್ವ ಮತ್ತು ಮಾಲೆಯಲ್ಲಿರುವ ಗಂಧಮಯ ಲಹರಿಗಳ ಸಂಯೋಗವಾಗಿ ಗಂಧಮಯ ದೇವಿತತ್ತ್ವದ ಶಕ್ತಿ ಮತ್ತು ಚೈತನ್ಯ ಲಹರಿ ವಾತಾವರಣದಲ್ಲಿ ಪ್ರಕ್ಷೇಪಿತಗೊಳ್ಳುತ್ತವೆ. ಇದರಿಂದ ‘ಘಟಸ್ಥಾಪನೆಯ ಬಳಿಕ ವಾತಾವರಣವು ಆನಂದಮಯ ಮತ್ತು ಉತ್ಸಾಹವರ್ಧಕವಾಗಿದೆ, ಎಂದು ಬಹಳಷ್ಟು ಉಪಾಸಕರಿಗೆ ಅನುಭೂತಿ ಬರುತ್ತದೆ.

೪ ಉ. ಕುಮಾರಿ ಪೂಜೆ ಮಾಡುವುದು : ಒಂಭತ್ತು ದಿನಗಳ ವರೆಗೆ ಪ್ರತಿದಿನ ಕುಮಾರಿಯ ಪೂಜೆ ಮಾಡಿ ಅವಳಿಗೆ ಭೋಜನ ನೀಡಬೇಕು. ಮುತ್ತೈದೆ ಎಂದರೆ ಪ್ರಕಟ ಶಕ್ತಿ, ಕುಮಾರಿ ಎಂದರೆ ಅಪ್ರಕಟ ಶಕ್ತಿ. ಮುತ್ತೈದೆಯಲ್ಲಿ ಪ್ರಕಟಶಕ್ತಿಯು ಸ್ವಲ್ಪ ಅಪವ್ಯಯವಾಗುವುದರಿಂದ ಅವಳಿಗಿಂತ ಕುಮಾರಿಯಲ್ಲಿ ಶಕ್ತಿಯ ಪ್ರಮಾಣವು ಜಾಸ್ತಿಯಿರುತ್ತದೆ.

ಆಧ್ಯಾತ್ಮಿಕ ಮಹತ್ವ : ಒಂಭತ್ತು ದಿನ ಪ್ರತಿದಿನ ಕುಮಾರಿರೂಪಿ ದೇವಿಯ ಬಾಲರೂಪವನ್ನು ಪೂಜಿಸುವುದರಿಂದ ನಿರ್ಗುಣ ಸ್ತರದಲ್ಲಿ ಕಾರ್ಯನಿರತವಾಗಿರುವ ದೇವಿಯ ಶಕ್ತಿ ಉಪಾಸಕನಿಗೆ ಪ್ರಾಪ್ತವಾಗುತ್ತದೆ.

೪ ಊ. ಕರ್ಮಕಾಂಡಕ್ಕನುಸಾರ ಮಾಡಬೇಕಾಗಿರುವ ವಿವಿಧ ಕೃತಿಗಳು : ಅಖಂಡ ದೀಪಪ್ರಜ್ವಲನೆ, ಆ ದೇವತೆಯ ಮಹಾತ್ಮೆಯ ಪಠಣ (ಚಂಡಿಪಾಠ), ಸಪ್ತಶತಿಪಾಠ, ದೇವಿಭಾಗವತ, ಬ್ರಹ್ಮಾಂಡಪುರಾಣದ ಲಲಿತೋಪಾಖ್ಯಾನವನ್ನು ಕೇಳುವುದು, ಲಲಿತಾಪೂಜೆ, ಸರಸ್ವತಿಪೂಜೆ, ಉಪವಾಸ, ಜಾಗರಣೆ ಇತ್ಯಾದಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅವರವರ ಶಕ್ತಿ ಮತ್ತು ಸಾಮರ್ಥ್ಯಕ್ಕನುಸಾರ ನವರಾತ್ರಿ ಉತ್ಸವವನ್ನು ಆಚರಿಸಬೇಕು.

ಆಧ್ಯಾತ್ಮಿಕ ಮಹತ್ವ : ದೀಪದ ಜ್ಯೋತಿಯೊಂದಿಗೆ ಎಲ್ಲೆಡೆ ಸಾತ್ತ್ವಿಕ ತೇಜೋಲಹರಿಗಳೂ ಪ್ರಕ್ಷೇಪಿಸಲ್ಪಟ್ಟು ವಾತಾವರಣದ ಶುದ್ಧಿಯಾಗುತ್ತದೆ. ದೀಪದ ತೇಜದೆಡೆಗೆ ದೇವಿತತ್ತ್ವದ ತೇಜೋಲಹರಿಗಳು ಆಕರ್ಷಿಸಲ್ಪಟ್ಟು ಆ ದೀಪದ ಪ್ರಕಾಶದಿಂದ ಇಡೀ ವಾತಾವರಣದಲ್ಲಿ ಪ್ರಕ್ಷೇಪಿತಗೊಳ್ಳುತ್ತದೆ. ಇದಕ್ಕಾಗಿ ನವರಾತ್ರಿಯಲ್ಲಿ ಅಖಂಡ ದೀಪಪ್ರಜ್ವಲನೆ ಮಾಡಲು ಹೇಳಲಾಗಿದೆ. ಕರ್ಮಕಾಂಡಕ್ಕನುಸಾರ ದೇವಿಗೆ ಸಂಬಂಧಿಸಿದಂತೆ ವಿವಿಧ ಧರ್ಮಗ್ರಂಥಗಳಲ್ಲಿರುವ ಬರವಣಿಗೆಗಳನ್ನು ಪಠಿಸುವುದರಿಂದ ವಾತಾವರಣದಲ್ಲಿ ದೇವಿತತ್ತ್ವದ ನಾದಲಹರಿಗಳು ಮತ್ತು ಆಕಾಶತತ್ತ್ವಕ್ಕೆ ಸಂಬಂಧಿಸಿರುವ ಶಕ್ತಿಯ ಸ್ಪಂದನಗಳು ಪ್ರಕ್ಷೇಪಿಸಲ್ಪಡುತ್ತವೆ. ಉಪವಾಸ ಮತ್ತು ಜಾಗರಣೆ ಮಾಡುವುದರಿಂದ ಉಪಾಸಕನ ಸಾತ್ತ್ವಿಕತೆ ವೃದ್ಧಿಸಿ ಅವನಿಗೆ ವಾತಾವರಣದಲ್ಲಿ ಕಾರ್ಯನಿರತವಾಗಿರುವ ದೇವಿತತ್ತ್ವದ ಲಹರಿಗಳನ್ನು ಸಹಜವಾಗಿ ಗ್ರಹಿಸಲು ಸಾಧ್ಯವಾಗುತ್ತದೆ.

೪ ಎ. ದೇವಿಗೆ ನೈವೇದ್ಯ ತೋರಿಸುವುದು : ಭಕ್ತನು ವ್ರತದಲ್ಲಿದ್ದರೂ, ದೇವತೆಗೆ ಎಂದಿನಂತೆ ಆಹಾರ ಪದಾರ್ಥಗಳ ನೈವೇದ್ಯ ತೋರಿಸಬೇಕಾಗುತ್ತದೆ.

ಆಧ್ಯಾತ್ಮಿಕ ಮಹತ್ವ : ಘಟ ಅಥವಾ ದೇವಿಯ ಮೂರ್ತಿಯ ರೂಪದಲ್ಲಿ ಮನೆಯಲ್ಲಿ ದೇವಿತತ್ತ್ವ ಸಗುಣದಿಂದ ಸಾಕಾರ ವಾಗಿರುವುದರಿಂದ ದೇವಿಯ ಆದರ-ಸತ್ಕಾರ ಮಾಡಲು ಅವಳಿಗೆ ನೈವೇದ್ಯವನ್ನು ಅರ್ಪಿಸಬೇಕಾಗುತ್ತದೆ. ನೈವೇದ್ಯದ ಪದಾರ್ಥಗಳಿಂದ ಪ್ರಕ್ಷೇಪಿಸಲ್ಪಡುವ ಗಂಧ ಲಹರಿ ಮತ್ತು ಸೂಕ್ಷ್ಮತರ ಸ್ತರದಲ್ಲಿ ಆಪ ಮತ್ತು ತೇಜ ತತ್ತ್ವದ ಲಹರಿಗಳೂ ದೇವಿತತ್ತ್ವದ ಮೂಲಕ ಗ್ರಹಿಸಲ್ಪಡುತ್ತದೆ. ದೇವಿಗೆ ನೈವೇದ್ಯದ ಪದಾರ್ಥಗಳಿಗಿಂತ ಪ್ರಿಯವಾಗಿರದೇ ಅದನ್ನು ಅರ್ಪಿಸುವ ಉಪಾಸಕನ ಸಮರ್ಪಿತ ಭಾವವು ಅಧಿಕ ಪ್ರಿಯವಾಗಿರುತ್ತದೆ.

೪ ಏ. ನವರಾತ್ರಿಯಲ್ಲಿ ಪಾಲಿಸಬೇಕಾದ ವಿವಿಧ ಯಮ-ನಿಯಮಗಳು : ಈ ಕಾಲದಲ್ಲಿ ಉತ್ಕೃಷ್ಟ ಆಚಾರಗಳ ಒಂದು ಭಾಗವೆಂದು ಶ್ಮಶ್ರೂ ಮಾಡದಿರುವುದು (ಗಡ್ಡ ಮೀಸೆಗಳ ಕೂದಲು ಮತ್ತು ತಲೆಯ ಕೂದಲನ್ನು ಕತ್ತರಿಸದಿರುವುದು), ಕಠಿಣ ಬ್ರಹ್ಮಚರ್ಯವನ್ನು ಪಾಲಿಸುವುದು, ಮಂಚದ ಮೇಲೆ ಮತ್ತು ಹಾಸಿಗೆಯ ಮೇಲೆ ಮಲಗಬಾರದು, ಗಡಿಯನ್ನು ಉಲ್ಲಂಘಿಸದಿರುವುದು, ಪಾದರಕ್ಷೆ ಧರಿಸದಿರುವುದು ಈ ರೀತಿ ವಿವಿಧ ನಿಯಮಗಳನ್ನು ಪಾಲಿಸಲಾಗುತ್ತದೆ.

ಆಧ್ಯಾತ್ಮಿಕ ಮಹತ್ವ : ಕರ್ಮಕಾಂಡದ ಅಂತರ್ಗತ ಹಠಯೋಗದಂತೆ ಮಾಡಿರುವ ಯಮ-ನಿಯಮಗಳ ಮೇಲಿನ ಕೃತಿಗಳಿಂದ ಉಪಾಸಕನ ದೇಹಬುದ್ಧಿ ಕಡಿಮೆಯಾಗಲು ಮತ್ತು ಸಾತ್ತ್ವಿಕತೆಯು ಹೆಚ್ಚಾಗಲು ಸಹಾಯವಾಗುತ್ತದೆ. ದೇಹಬುದ್ಧಿಯ ಅಡಚಣೆ ದೂರವಾಗುವುದರಿಂದ ಮತ್ತು ಸಾತ್ತ್ವಿಕತೆ ಹೆಚ್ಚಾಗುವುದರಿಂದ ಉಪಾಸಕನಿಗೆ ದೇವಿಯ ತತ್ತ್ವ ಹೆಚ್ಚೆಚ್ಚು ಪ್ರಮಾಣದಲ್ಲಿ ಗ್ರಹಿಸಲು ಸಾಧ್ಯವಾಗುತ್ತದೆ. ಕರ್ಮಕಾಂಡದ ಅಂತರ್ಗತ ಹಠಯೋಗಾನುಸಾರ ಸಾಧನೆಯ ಕೃತಿ ಮಾಡುವುದರಿಂದ ದೇವಿಯು ಉಪಾಸಕರ ಮೇಲೆ ಪ್ರಸನ್ನಳಾಗಿ ಅವರ ಮೇಲೆ ಕೃಪೆಯಾಗುತ್ತದೆ.

೪ ಐ. ನವರಾತ್ರಿಯನ್ನು ಎಬ್ಬಿಸುವುದು : ನವರಾತ್ರಿಯ ಸಂಖ್ಯೆಗೆ ಒತ್ತು ಕೊಟ್ಟು ಕೆಲವರು ಕೊನೆಯ ದಿನವೂ ದೇವಿಯನ್ನು ಇಡುತ್ತಾರೆ. ಆದರೆ ಶಾಸ್ತ್ರಕ್ಕನುಸಾರ ಕೊನೆಯ ದಿನ ನವರಾತ್ರಿ ವಿಸರ್ಜನೆಯಾಗುವುದು ಆವಶ್ಯಕವಿದೆ. ಆ ದಿನದಂದು ಸಮಾರಾಧನೆ (ಭೋಜನಪ್ರಸಾದ) ಆದ ಬಳಿಕ ಸಮಯವಿದ್ದಲ್ಲಿ ಅದೇ ದಿನದಂದು ಎಲ್ಲ ದೇವತೆಗಳಿಗೆ ಅಭಿಷೇಕ ಮತ್ತು ಶೋಡಶೋಪಚಾರ ಮಾಡಿ ಪೂಜಿಸಬೇಕು. ಸಮಯವಿಲ್ಲದಿದ್ದಲ್ಲಿ ಮರುದಿನ ಎಲ್ಲ ದೇವರಿಗೆ ಪೂಜಾಭಿಷೇಕ ಮಾಡಬೇಕು.

ಆಧ್ಯಾತ್ಮಿಕ ಮಹತ್ವ : ನವರಾತ್ರಿಯ ಪ್ರಾರಂಭದ ೮ ದಿನಗಳು ದೇವಿತತ್ತ್ವವು ವಾತಾವರಣದಲ್ಲಿ ಏರಿಕೆಯ ಕ್ರಮದಲ್ಲಿ ವೃದ್ಧಿಂಗತಗೊಂಡು ಅಷ್ಟಮಿಯಂದು ಎಲ್ಲಕ್ಕಿಂತ ಅಧಿಕ ಪ್ರಮಾಣದಲ್ಲಿ ಪ್ರಕ್ಷೇಪಿತಗೊಳ್ಳುತ್ತದೆ. ಸಗುಣದಲ್ಲಿ ಮನೆಗೆ ಬಂದ ದೇವಿತತ್ತ್ವವು ನವಮಿಯಂದು ನಿರ್ಗುಣದೆಡೆಗೆ ಪ್ರಯಾಣಿಸಿ ನಿರ್ಗುಣದಲ್ಲಿ ವಿಲೀನಗೊಳ್ಳುತ್ತದೆ. ಆದುದರಿಂದ ಶಾಸ್ತ್ರಕ್ಕನುಸಾರ ನವಮಿಯಂದು ನವರಾತ್ರ (ಘಟ ಅಥವಾ ಪೂಜಿಸಿದ ಮೂರ್ತಿ) ಇಡದೇ ಅದನ್ನು ವಿಸರ್ಜನೆ ಮಾಡುವುದು ಯೋಗ್ಯವಾಗಿದೆ.

೪ ಒ. ದೇವಿಗೆ ಅರ್ಪಿಸಿರುವ ಸಸಿಯನ್ನು ತಲೆಯಲ್ಲಿ ಧರಿಸುವುದು : ದೇವಿಯ ಮೂರ್ತಿಯ ವಿಸರ್ಜನೆಯ ಸಮಯದಲ್ಲಿ ಬಿತ್ತಿರುವ ಧಾನ್ಯಗಳಿಂದ ಬಂದಿರುವ ಸಸಿಗಳನ್ನು ದೇವಿಗೆ ಅರ್ಪಿಸುತ್ತಾರೆ. ‘ಶಾಕಂಭರಿದೇವಿ ಎಂದು ತಿಳಿದು ಸ್ತ್ರೀಯರು ತಲೆಯಲ್ಲಿ ಧರಿಸಿ ವಿಸರ್ಜನೆಗೆ ತೆಗೆದುಕೊಂಡು ಹೋಗುತ್ತಾರೆ.

ಆಧ್ಯಾತ್ಮಿಕ ಮಹತ್ವ : ‘ಶಾಕ ಅಂದರೆ ವನಸ್ಪತಿಯಲ್ಲಿ ಶಾಕಂಭರಿದೇವಿಯ ತತ್ತ್ವ ಕಾರ್ಯನಿರತವಾಗಿರುತ್ತದೆ. ಇದರಿಂದ ಸ್ತ್ರೀಯರು ದೇವಿಗೆ ಅರ್ಪಿಸಿರುವ ಸಸಿಗಳನ್ನು ತಲೆಯಲ್ಲಿ ಧರಿಸಿ ವಿಸರ್ಜನೆಗೆ ತೆಗೆದುಕೊಂಡು ಹೋಗುತ್ತಾರೆ. ಈ ರೀತಿ ಮಾಡುವುದರಿಂದ ಸಸಿಗಳಲ್ಲಿ ಆಕರ್ಷಿತವಾಗಿರುವ ದೇವಿಯ ತತ್ತ್ವಗಳು ಮತ್ತು ಚೈತನ್ಯಗಳು ಸಸಿಗಳ ರೂಪದಿಂದ ಸ್ತ್ರೀಯರ ತಲೆಯನ್ನು ಸ್ಪರ್ಶಿಸಿ ಅದು ಸಹಸ್ರಾರಚಕ್ರ, ಬ್ರಹ್ಮರಂಧ್ರ ಮತ್ತು ಕೂದಲಿನ ಬುಡಗಳಿಂದ ಅವರ ದೇಹವನ್ನು ಪ್ರವೇಶಿಸುತ್ತವೆ. ಈ ರೀತಿ ಸ್ತ್ರೀಯರಿಗೆ ದೇವಿತತ್ತ್ವದ ಲಾಭವಾಗಿ ಅವರಿಗೆ ತಿಳಿಯದಂತೆಯೇ ದೇವಿತತ್ತ್ವದ ಧಾರಣೆಯಾಗುತ್ತದೆ.

೪ ಓ. ದೇವರನ್ನು ‘ಉದ್ವಾರ್ಜನೆ (ಶುದ್ಧೀಕರಣ) ಗೊಳಿಸುವುದು : ನವರಾತ್ರಿಯಲ್ಲಿ ದೇವಿಯ ಮೂರ್ತಿ ಕೂರಿಸುವಾಗ ಮತ್ತು ವಿಸರ್ಜನೆ ಮಾಡುವಾಗ ದೇವರ ‘ಉದ್ವಾರ್ಜನೆ (ಶುದ್ಧೀಕರಣ) ಆವಶ್ಯಕವಾಗಿದೆ. ಉದ್ವಾರ್ಜನೆ ಮಾಡಲು ನಿತ್ಯದಂತೆ ಲಿಂಬೆ ರಸ, ಭಸ್ಮ ಇತ್ಯಾದಿ ವಸ್ತು ಉಪಯೋಗಿಸಬೇಕು. ರಂಗೋಲಿ ಅಥವಾ ಪಾತ್ರೆ ತೊಳೆಯುವ ಪುಡಿಯನ್ನು ಉಪಯೋಗಿಸಬಾರದು.

ಆಧ್ಯಾತ್ಮಿಕ ಮಹತ್ವ : ನವರಾತ್ರಿಯನ್ನು ಸ್ಥಾಪಿಸುವಾಗ ಮತ್ತು ವಿಸರ್ಜನೆ ಮಾಡುವಾಗ ಅನುಕ್ರಮವಾಗಿ ಪ್ರಕ್ಷೇಪಿತವಾಗುವ ಸಗುಣ ಮತ್ತು ನಿರ್ಗುಣ ಮಟ್ಟದ ದೇವಿತತ್ತ್ವದಿಂದ ವಾತಾವರಣದಲ್ಲಿ ಕಾರ್ಯನಿರತವಾಗಿರುವ ದೇವಿಯ ಚೈತನ್ಯವನ್ನು ಇತರ ದೇವರ ಮೂರ್ತಿಗಳು ಗ್ರಹಿಸಬೇಕೆಂದು ಅವುಗಳ ಶುದ್ಧೀಕರಣವನ್ನು ನೀರು ಹಚ್ಚಿ, ಲಿಂಬೆರಸ ಹಚ್ಚಿ ಅಥವಾ ಭಸ್ಮದಿಂದ ತಿಕ್ಕಿ ತೊಳೆದು ಶುದ್ಧಿಕರಣ ಮಾಡಲಾಗುತ್ತದೆ. ಲಿಂಬೆ ರಸದಲ್ಲಿ ದೇವಿಯ ಕನಿಷ್ಠ ಮಟ್ಟದ ಶಕ್ತಿ ಕಾರ್ಯನಿರತವಾಗಿರುತ್ತದೆ ಮತ್ತು ಭಸ್ಮದಲ್ಲಿ ಶಿವತತ್ತ್ವ ಪ್ರಬಲವಾಗಿರುತ್ತದೆ. ಲಿಂಬೆರಸ ಅಥವಾ ಭಸ್ಮವನ್ನು ಉಪಯೋಗಿಸುವುದರಿಂದ ದೇವತೆಗಳ ಮೂರ್ತಿಗಳಿಗೆ ಅನುಕ್ರಮವಾಗಿ ದೇವಿ ಅಥವಾ ಶಿವ ತತ್ತ್ವಗಳ ಸ್ಪರ್ಶವಾಗಿ ಅವುಗಳಲ್ಲಿ ಸೂಕ್ಷ್ಮತರ ಸ್ತರದಲ್ಲಿ ಕಾರ್ಯನಿರತವಾಗಿರುವ ಚೈತನ್ಯ ಲಹರಿಗಳನ್ನು ಗ್ರಹಿಸುವ ಕ್ಷಮತೆ ವೃದ್ಧಿಸುತ್ತದೆ. ಲಿಂಬೆ ಅಥವಾ ಭಸ್ಮದ ತುಲನೆಯಲ್ಲಿ ರಂಗೋಲಿ ಅಥವಾ ಪಾತ್ರೆ ತೊಳೆಯುವ ಪುಡಿ ರಜಪ್ರಧಾನವಾಗಿರುವುದರಿಂದ ಅವುಗಳಿಂದ ದೇವತೆಗಳ ಮೂರ್ತಿಗಳನ್ನು ತಿಕ್ಕುವುದರಿಂದ, ಮೂರ್ತಿಯಲ್ಲಿ ರಜೋಗುಣಗಳು ವೃದ್ಧಿಸುತ್ತವೆ, ಇದು ಚೈತನ್ಯವನ್ನು ಗ್ರಹಿಸುವಲ್ಲಿ ಬಾಧಕವಾಗಿರುತ್ತದೆ.

ಆದುದರಿಂದ ಶಾಸ್ತ್ರಕ್ಕನುಸಾರ ದೇವತೆಗಳ ಮೂರ್ತಿಯನ್ನು ಶುದ್ಧೀಕರಣಗೊಳಿಸುವಾಗ ರಂಗೋಲಿ ಅಥವಾ ಪಾತ್ರೆ ತೊಳೆಯುವ ಪುಡಿಯನ್ನು ಉಪಯೋಗಿಸದೇ ಲಿಂಬೆರಸ ಅಥವಾ ಭಸ್ಮವನ್ನು ಉಪಯೋಗಿಸಬೇಕು.

೪ ಕ. ಘಟ ಮತ್ತು ದೇವಿಯ ವಿಸರ್ಜನೆ ಮಾಡುವುದು : ಕೊನೆಯಲ್ಲಿ ಸ್ಥಾಪಿಸಿರುವ ಘಟ ಮತ್ತು ದೇವಿಯ  ಉದ್ಯಾಪನ (ವಿಸರ್ಜನೆ) ಮಾಡಬೇಕು.

ಆಧ್ಯಾತ್ಮಿಕ ಮಹತ್ವ : ಘಟದಲ್ಲಿ ಆಕರ್ಷಿಸಲ್ಪಡುವ ದೇವಿಯ ಉತ್ಪತ್ತಿಗೆ ಸಂಬಂಧಿಸಿರುವ ಶಕ್ತಿ ಮತ್ತು ದೇವಿಯ ಪ್ರತಿಮೆಯಲ್ಲಿ ಆಕರ್ಷಿಸಲ್ಪಟ್ಟಿರುವ ದೇವಿಯ ತೇಜೋಮಯ ಚೈತನ್ಯ ಇವುಗಳ ಕಾರ್ಯ ಸಮಾಪ್ತವಾಗಿರುವುದರಿಂದ ಅವುಗಳನ್ನು ಅನುಕ್ರಮವಾಗಿ ನಿರ್ಗುಣದ ಶಕ್ತಿ ಮತ್ತು ಚೈತನ್ಯಗಳಲ್ಲಿ ವಿಲೀನವಾಗಲು ಹರಿಯುವ ನೀರಿನಲ್ಲಿ ವಿಸರ್ಜಿಸಬೇಕು. ಹರಿಯುವ ನೀರಿನಲ್ಲಿ ಕಾರ್ಯನಿರತವಾಗಿರುವ ಅಪೋಮಯ ಚೈತನ್ಯಲಹರಿಗಳ ಸ್ಪರ್ಶ ಪೃಥ್ವಿತತ್ತ್ವಾತ್ಮಕ ಘಟ ಮತ್ತು ದೇವಿಯ ಮೂರ್ತಿ ಗ್ರಹಿಸಿಕೊಂಡು ಅವುಗಳಲ್ಲಿ ಆಕರ್ಷಿಸಲ್ಪಟ್ಟಿರುವ ಸಗುಣ ಮಟ್ಟದ ಶಕ್ತಿ ಮತ್ತು ಚೈತನ್ಯಗಳು ನಿರ್ಗುಣ ಮಟ್ಟದಲ್ಲಿ ಶಕ್ತಿ ಮತ್ತು ಚೈತನ್ಯಗಳಲ್ಲಿ ರೂಪಾಂತರವಾಗುತ್ತವೆ. ಇದರಿಂದ ‘ಘಟ ಮತ್ತು ದೇವಿಯ ವಿಸರ್ಜನೆ ಹರಿಯುವ ನೀರಿನಲ್ಲಿ ಏಕೆ ಮಾಡಬೇಕಾಗಿರುತ್ತದೆ ? ಎನ್ನುವುದರ ಮಹತ್ವ ತಮ್ಮೆಲ್ಲರ ಗಮನಕ್ಕೆ ಬಂದಿರಬಹುದು.

೪ ಅಂ. ದೇವಿಯೆದುರು ಪ್ರಜ್ವಲಿಸುತ್ತಿದ್ದ ದೀಪ ಆರಿದರೆ ಮಾಡಬೇಕಾದ ಯೋಗ್ಯ ಕೃತಿ : ನವರಾತ್ರಿ ಅಥವಾ ಇತರ ಧಾರ್ಮಿಕ ವಿಧಿಗಳಲ್ಲಿ ದೀಪವು ಅಖಂಡವಾಗಿ ಪ್ರಜ್ವಲಿಸುತ್ತಿರುವುದು ಪೂಜಾವಿಧಿಯ ಭಾಗವಾಗಿದೆ. ಹೀಗಿರುವಾಗ ಗಾಳಿ, ಎಣ್ಣೆಯಾಗುವುದು, ಉರಿದು ಕಪ್ಪಾಗುವುದು ಇತ್ಯಾದಿ ಕಾರಣಗಳಿಂದ ದೀಪ ನಂದಿದರೆ ಆ ಕಾರಣಗಳನ್ನು ದೂರಗೊಳಿಸಿ ಪುನಃ ದೀಪವನ್ನು ಉರಿಸಬೇಕು ಮತ್ತು ಪ್ರಾಯಶ್ಚಿತ್ತವೆಂದು ಅಧಿಷ್ಠಾನ ದೇವತೆಯ ೧೦೮ ಅಥವಾ ೧೦೦೮ ನಾಮಜಪ ಮಾಡಬೇಕು.

ಆಧ್ಯಾತ್ಮಿಕ ಮಹತ್ವ : ‘ದೇವಿಯೆದುರು ಪ್ರಜ್ವಲಿಸುತ್ತಿರುವ ದೀಪ ಆರುವುದು ಇದನ್ನು ಅಪಶಕುನವೆಂದು ತಿಳಿಯಲಾಗುತ್ತದೆ. ದೀಪ ಆರಿದ್ದರಿಂದ ದೀಪದ ರೂಪದಲ್ಲಿ ನಿರಂತರವಾಗಿ ಕಾರ್ಯನಿರತವಾಗಿರುವ ತೇಜತತ್ತ್ವದ ಪ್ರವಾಹದಲ್ಲಿ ಅಡಚಣೆಯುಂಟಾಗುವುದರಿಂದ ಉಪಾಸಕನು ದೇವಿಯ ಘಟ ಅಥವಾ ಮೂರ್ತಿಯಿಂದ ಪ್ರಕ್ಷೇಪಿತಗೊಳ್ಳುವ ತೇಜೋಮಯ ಶಕ್ತಿಯ ಲಹರಿಗಳಿಂದ ವಂಚಿತನಾಗುತ್ತಾನೆ. ಇದಕ್ಕಾಗಿ ಉಪಾಸಕನು ದೀಪ ಆರಿದಾಗ ಅದನ್ನು ಪುನಃ ಬೆಳಗಿಸಬೇಕು ಮತ್ತು ಅವನಿಂದ ತಿಳಿಯದೇ ಆಗಿರುವ ಅಪರಾಧದ ಕರ್ಮಫಲ ನ್ಯಾಯಕ್ಕನುಸಾರ ತಗುಲಿರುವ ಪಾಪಕ್ಷಾಲನೆಗಾಗಿ ಪ್ರಾಯಶ್ಚಿತ್ತವೆಂದು ಸ್ಥಾಪಿತ ದೇವತೆಯ ಒಂದು ನೂರಾರ ಎಂಟು ಅಥವಾ ಒಂದುಸಾವಿರದ ಎಂಟು ನಾಮಜಪವನ್ನು ಮಾಡಬೇಕು. ದೇವರ ನಾಮಜಪದಲ್ಲಿ ಸಮಸ್ತ ಪಾಪಗಳನ್ನು ನಾಶಗೊಳಿಸುವ ಸಾಮರ್ಥ್ಯವಿರುವುದರಿಂದ ಉಪಾಸಕನ ಪಾಪಗಳ ಕ್ಷಾಲನೆಯಾಗಲು ಸಹಾಯವಾಗುತ್ತದೆ.

೪ ಅಃ. ದೇವಿಯ ಬಳಿ ಮುಂದಿನಂತೆ ಪ್ರಾರ್ಥಿಸುತ್ತಾರೆ : ‘ಹೇ ದೇವಿ, ನಾವು ದುರ್ಬಲರಾಗಿದ್ದೇವೆ ಮತ್ತು ಅಸಂಖ್ಯಾತ ಭೋಗವನ್ನು ಭೋಗಿಸಿ, ಮಾಯಾಸಕ್ತರಾಗಿದ್ದೇವೆ. ಹೇ ಮಾತೆ, ನೀನು ನಮಗೆ ಬಲವನ್ನು ನೀಡುವವಳಾಗು, ನಿನ್ನ ಶಕ್ತಿಯಿಂದ ನಮ್ಮಲ್ಲಿರುವ ದೋಷಗಳು ನಾಶಗೊಳ್ಳಲಿ ಎಂದು ಪ್ರಾರ್ಥಿಸುತ್ತಾರೆ.

ಆಧ್ಯಾತ್ಮಿಕ ಮಹತ್ವ : ‘ಪ್ರಾರ್ಥನೆಯು ಉಪಾಸನಾಕಾಂಡದ ಅಂತರ್ಗತ ದೇವಿಯ ಚರಣಗಳಲ್ಲಿ ಮನಸ್ಸಿನಲ್ಲಿರುವ ಭಾವ ಮತ್ತು ಭಕ್ತಿಯನ್ನು ಅರ್ಪಿಸುವ ಸರಳ ಮತ್ತು ಎಲ್ಲಕ್ಕಿಂತ ಸುಲಭ ಮಾಧ್ಯಮವಾಗಿದೆ. ಭಕ್ತಿಭಾವದಿಂದ ಮಾಡಿದ ಪ್ರಾರ್ಥನೆ ದೇವಿಯ ಚರಣಗಳಿಗೆ ಅರ್ಪಣೆಯಾಗಿ ಅವಳ ಆಶೀರ್ವಾದದ ರೂಪದಲ್ಲಿ ಫಲಪ್ರದವಾಗುತ್ತದೆ.

೪ ಕ. ಕೊಡ ಊದುವುದು : ಅಷ್ಟಮಿಯಂದು ಸ್ತ್ರೀಯರು ಶ್ರೀ ಮಹಾಲಕ್ಷ್ಮೀದೇವಿಯ ಪೂಜೆ ಮಾಡುತ್ತಾರೆ ಮತ್ತು ಕೊಡವನ್ನು ಊದುತ್ತಾರೆ.

ಆಧ್ಯಾತ್ಮಿಕ ಮಹತ್ವ : ಅಷ್ಟಮಿಯ ತಿಥಿಯಂದು ದೇವಿತತ್ತ್ವವು ಅಧಿಕ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ‘ಕೊಡ ಇದು ಸಮೃದ್ಧಿಯ ಪ್ರತೀಕವಾಗಿದೆ. ಕೊಡದ ಟೊಳ್ಳಿನಲ್ಲಿ ನಿರ್ಗುಣ ಸ್ತರದ ಮಹಾಲಕ್ಷ್ಮಿಯ ತತ್ತ್ವ ಮತ್ತು ಚೈತನ್ಯಲಹರಿ ಆಕರ್ಷಿಸಲ್ಪಟ್ಟಿರುತ್ತದೆ. ಸ್ತ್ರೀಯರು ಕೊಡ ಊದಿದಾಗ ಅದರಿಂದ ಪ್ರವಹಿಸುವ ವೇಗವಾದ ವಾಯುವು ಕೊಡದಲ್ಲಿರುವ ನಿರ್ಗುಣ ಲಕ್ಷ್ಮೀತತ್ತ್ವ ಮತ್ತು ಚೈತನ್ಯ ಲಹರಿಗಳನ್ನು ಸ್ಪರ್ಶಿಸಿದಾಗ ಅವು ಸಗುಣ ಲಕ್ಷ್ಮೀ ತತ್ತ್ವ ಮತ್ತು ಚೈತನ್ಯ ಲಹರಿಗಳಲ್ಲಿ ರೂಪಾಂತರಗೊಂಡು ವಾತಾವರಣದಲ್ಲಿ ಪ್ರಕ್ಷೇಪಿತಗೊಳ್ಳುತ್ತವೆ. ಈ ರೀತಿ ಕೊಡ ಊದುವ ಕೃತಿಯಿಂದ ಸ್ತ್ರೀಯರಿಗೆ ದೇವಿಯ ನಿರ್ಗುಣ ಮತ್ತು ಸಗುಣ ಈ ಎರಡೂ ಸ್ತರದ ತತ್ತ್ವಗಳ ಮತ್ತು ಚೈತನ್ಯದ ಲಾಭವಾಗುತ್ತದೆ.

೪ ಖ. ಪ್ರಾಂತ್ಯಭೇದಕ್ಕನುಸಾರ ಗುಜರಾತಿನಲ್ಲಿ ರಂಧ್ರ ಗಳಿರುವ ಮಣ್ಣಿನ ಮಡಕೆಯಲ್ಲಿ ಇಟ್ಟಿರುವ ದೀಪ ಅಥವಾ ಕೇವಲ ದೀಪವನ್ನು ಪೂಜಿಸುವುದು ಮತ್ತು ಗರಬಾ ಆಡುವುದು : ಗುಜರಾತಿನಲ್ಲಿ ಮಾತೃಶಕ್ತಿಯ ಪ್ರತೀಕವೆಂದು ನವರಾತ್ರಿಯಲ್ಲಿ ಅನೇಕ ರಂಧ್ರಗಳಿರುವ ಮಣ್ಣಿನ ಮಡಕೆಯಲ್ಲಿ ದೀಪ ಇಟ್ಟು ಅಥವಾ ಕೇವಲ ದೀಪವನ್ನು ಪೂಜಿಸಲಾಗುತ್ತದೆ. ಸ್ತ್ರೀಯರ ಸೃಜನಾತ್ಮಕತೆಯ ಪ್ರತೀಕವೆಂದು ನವರಾತ್ರಿಯಲ್ಲಿ ಒಂಭತ್ತು ದಿನ ಪೂಜಿಸಲಾಗುವ ‘ದೀಪಗರ್ಭದಲ್ಲಿ ‘ದೀಪ ಶಬ್ದವು ಲೋಪಗೊಂಡು ‘ಗರ್ಭ-ಗರಭೋ-ಗರಬೊ ಅಥವಾ ‘ಗರಬಾ ಎನ್ನುವ ಶಬ್ದ ಪ್ರಚಲಿತವಾಗಿದೆ. ಇದರಿಂದ ದೇವಿಯ ಎದುರು ಗರಬಾ ಆಡಲಾಗುತ್ತದೆ.

ಆಧ್ಯಾತ್ಮಿಕ ಮಹತ್ವ : ಮಣ್ಣಿನ ಮಡಕೆಯಲ್ಲಿ ಇಟ್ಟಿರುವ ದೀಪ ಅಥವಾ ಕೇವಲ ದೀಪ ಪೂಜಿಸುವುದರಿಂದ ಪೃಥ್ವಿ ಮತ್ತು ತೇಜ ಈ ಎರಡೂ ತತ್ತ್ವಗಳ ಲಾಭವಾಗುತ್ತದೆ ಮತ್ತು ಭೂದೇವಿ ಹಾಗೂ ಅಗ್ನಿದೇವ ಈ ಎರಡೂ ದೇವತೆಗಳ ಉಪಾಸನೆಯಾಗುತ್ತದೆ. ದೇವಿಯೆದುರು ಗರಬಾ ಆಡುವುದರಿಂದ ದೇವಿಯ ಚರಣಗಳಿಗೆ ನೃತ್ಯಕಲೆ ಅರ್ಪಣೆಯಾಗುತ್ತದೆ. ಈ ರೀತಿ ಮೇಲಿನ ಎರಡೂ ಕೃತಿಗಳಿಂದ ದೇವಿಯ ಆಶೀರ್ವಾದ ಲಭಿಸುತ್ತದೆ.

೪ ಘ. ನವರಾತ್ರಿ ಮತ್ತು ದಸರಾದ ಭಾವಾರ್ಥ: ಇಂದು ಪ್ರತಿಯೊಬ್ಬ ಮನುಷ್ಯನ ಹೃದಯದಲ್ಲಿ ಮಹಿಷಾಸುರನ ವಾಸವಿದ್ದು, ಅವನು ಮನುಷ್ಯನ ಆಂತರಿಕ ದೈವಿ ವೃತ್ತಿಯ ಮೇಲೆ  ಹಿಡಿತವನ್ನು ಸಾಧಿಸಿದ್ದಾನೆ. ಈ ಮಹಿಷಾಸುರನ ಮಾಯೆಯನ್ನು ಗುರುತಿಸಿ ಅವನ ಆಸುರಿ ಸಂಕೋಲೆಯಿಂದ ಮುಕ್ತವಾಗಲು ಶಕ್ತಿಯ ಉಪಾಸನೆಯ ಆವಶ್ಯಕತೆಯಿದೆ. ಇದಕ್ಕಾಗಿ ನವರಾತ್ರಿಯಂದು ಒಂಭತ್ತು ದಿನ ಶಕ್ತಿಯ ಉಪಾಸನೆ ಮಾಡಬೇಕು. ದಶಮಿಯಂದು ವಿಜಯೋತ್ಸವ ಆಚರಿಸಬೇಕು. ಇದನ್ನು ‘ದಸರಾ ಎಂದು ಕರೆಯುತ್ತಾರೆ.

ಆಧ್ಯಾತ್ಮಿಕ ಮಹತ್ವ : ನವರಾತ್ರಿಯ ಪ್ರತಿಯೊಂದು ದಿನವೂ ತನ್ನಲ್ಲಿರುವ ಒಂದೊಂದು ಸ್ವಭಾವದೋಷವನ್ನು ಮತ್ತು ಅಹಂ ನಾಶಗೊಳಿಸಲು ಪ್ರಯತ್ನಿಸಿದಲ್ಲಿ ತನ್ನಲ್ಲಿರುವ ಮಹಿಷಾಸುರರೂಪಿ ಅಸುರಿ ವೃತ್ತಿಯನ್ನು ದಮನಗೊಳಿಸಲು ಪ್ರಯತ್ನಗಳಾಗುತ್ತವೆ. ಆದುದರಿಂದ ತನ್ನಲ್ಲಿರುವ ಸ್ವಭಾವದೋಷ ಮತ್ತು ಅಹಂಗಳ ರೂಪದಲ್ಲಿ ಕಾರ್ಯನಿರತವಾಗಿರುವ ಸೂಕ್ಷ್ಮ ಸ್ತರದ ತಮೋಗುಣ ನಾಶವಾಗಿ ಭಾವರೂಪಿ ದೈವಿ ಶಕ್ತಿ, ಅಲ್ಲದೇ ಸಾತ್ತ್ವಿಕತೆ ವೃದ್ಧಿಗೊಳ್ಳುತ್ತದೆ. ಈ ರೀತಿ ‘ದಸರಾ ಎಂದರೆ ಒಂಬತ್ತು ದಿನ ತನ್ನಲ್ಲಿರುವ ತಮೋಗುಣವು ಲಯಗೊಂಡು ವೃದ್ಧಿಸಿದ ಸತ್ತ್ವಗುಣದಿಂದ ದೊರೆಯುವ ಆನಂದವನ್ನು ಅನುಭವಿಸುವ ದಿನವಾಗಿದೆ.

– ಕು. ಮಧುರಾ ಭೋಸಲೆ (ಇವರಿಗೆ ಸೂಕ್ಷ್ಮದಲ್ಲಿ ಪ್ರಾಪ್ತವಾಗಿರುವ ಜ್ಞಾನ) ಸನಾತನ ಆಶ್ರಮ, ರಾಮನಾಥಿ, ಗೋವಾ (೧೮.೯.೨೦೧೭)