ಹಿಂದೂ ಆಗಿರುವುದಾಗಿ ಹೇಳಿ ಮುಸಲ್ಮಾನ ಯುವಕನಿಂದ ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸೆಳೆದು ಆಕೆಯ ಲೈಂಗಿಕ ಶೋಷಣೆ

ಇಲ್ಲಿ ಮುಸಲ್ಮಾನ ತರುಣನಾದ ಸುಹೇಲ ಶಾಹನು ಸೌರಭನೆಂದು ಹಿಂದೂ ಹೆಸರನ್ನು ಹೇಳಿ ಓರ್ವ ಹಿಂದೂ ತರುಣಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದನು. ಆಕೆಯ ಲೈಂಗಿಕ ಶೋಷಣೆ ಮಾಡಿ ಆಕೆಯ ಅಶ್ಲೀಲ ವಿಡಿಯೋ ಮಾಡಿ ಆಕೆಯ ಮೇಲೆ ಮತಾಂತರವಾಗುವಂತೆ ಒತ್ತಡ ಹೇರಿದನು.

‘ಹದಿಸ’ನಲ್ಲಿ ಏನು ತಪ್ಪಿದೆ, ಅದನ್ನು ತಕ್ಷಣ ಅಳಿಸಿ !

ನೂಪುರ ಶರ್ಮಾ ಮತ್ತು ಭಾಜಪ ವಿರುದ್ಧ ವಾಗ್ದಾಳಿ ನಡೆಸುವ ಬದಲು ‘ಹದಿಸ’ ಅನ್ನು ಏಕೆ ಖಚಿತಪಡಿಸಬಾರದು ? ಇದಕ್ಕೆ ಮುಸ್ಲಿಂ ಮುಖಂಡರು ಮುಂದಾಗಬೇಕು ಮತ್ತು ತಪ್ಪೇನು, ಅದನ್ನು ತಕ್ಷಣವೇ ತೆಗೆದು ಹಾಕಬೇಕು. ಹಾಗಾಗಿ ನಂತರ ಯಾರೂ ಟೀಕೆ ಮಾಡುವುದಿಲ್ಲ ಎಂದು ಪಾಕಿಸ್ತಾನ ಮೂಲದ ಪತ್ರಕರ್ತೆ ತಹಾ ಸಿದ್ಧಿಕಿ ಟ್ವೀಟನಲ್ಲಿ ಹೇಳಿದ್ದಾರೆ.

ಚಿನ್ನದ ಕಳ್ಳ ಸಾಗಾಣಿಕೆಯಲ್ಲಿ ಕೇರಳ ಮುಖ್ಯಮಂತ್ರಿ ವಿಜಯನ ಕೈವಾಡ ! – ಪ್ರಮುಖ ಆರೋಪಿಯ ಹೇಳಿಕೆ

ಕೆರಳದ ಚಿನ್ನದ ಕಳ್ಳಸಾಗಣೆಯ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ ಇವರು ಅಧಿಕಾರಿಗಳ ಮುಂದೆ ನೀಡಿದ ಹೇಳಿಕೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪತ್ನಿ, ಪುತ್ರಿ ಮತ್ತು ಇಬ್ಬರು ಸಹೋದ್ಯೋಗಿಗಳು ಹಾಗೂ ಮಾಜಿ ಸಚಿವರೊಬ್ಬರು ಕಳ್ಳ ಸಾಗಾಣಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾಳೆ.

ಗುಜರಾತಿನಲ್ಲಿ ಪಾಕಿಸ್ತಾನದ ಬೋಟಿನಲ್ಲಿರುವ ೨೫೦ ಕೋಟಿ ರೂಪಾಯಿಗಳ ಹೆರಾಯಿನ (ಅಮಲು ಪದಾರ್ಥ) ಜಪ್ತು !

ಭಯೋತ್ಪಾದಕ ನಿಗ್ರಹ ದಳವು (‘ಎಟಿಎಸ್‌’) ರಾಜ್ಯದ ಕಚ್ಛನಿಂದ ಒಂದು ಪಾಕಿಸ್ತಾನಿ ಬೋಟಿನಿಂದ ೫೦ ಕೆಜಿ ಹೆರಾಯಿನ ಜಪ್ತು ಮಾಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹೆರಾಯಿನನ ಬೆಲೆಯು ೨೫೦ ಕೋಟಿ ರೂಪಾಯಿ ಆಗಿದೆ. ಗಡಿ ಭದ್ರತಾ ಪಡೆಯ ಸಹಾಯದಿಂದ ಎಟಿಎಸ್‌ ಈ ಕಾರ್ಯಾಚರಣೆಯನ್ನು ಮಾಡಿದೆ.

ಉತ್ತರಪ್ರದೇಶದಲ್ಲಿನ ರಾ. ಸ್ವ ಸಂಘದ ಕಾರ್ಯಾಲಯವನ್ನು ಬಾಂಬ್‌ನಿಂದ ಹಾರಿಸುವುದಾಗಿ ಬೆದರಿಕೆ ಹಾಕಿದ್ದ ರಾಜ ಮಹಮ್ಮದನ ಬಂಧನ

ಉತ್ತರಪ್ರದೇಶದಲ್ಲಿನ ಲಕ್ಷ್ಮಣಪುರಿ ಹಾಗೂ ಉನ್ನಾವಿನ ನಡುವಿನಲ್ಲಿರುವ ನವಾಬಗಂಜದಲ್ಲಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯವನ್ನು ಬಾಂಬನಿಂದ ಹಾರಿಸುವುದಾಗಿ ಬೆದರಿಸಿದ ಪ್ರಕರಣದಲ್ಲಿ ಪೊಲೀಸರು ತಮಿಳುನಾಡಿನ ಪುದುಕೊಟ್ಟಾಯಿಯಿಂದ ರಾಜ ಮಹಮ್ಮದನನ್ನು ಬಂಧಿಸಿದ್ದಾರೆ.

ಕಾಶ್ಮೀರದ ವಿಷಯದಲ್ಲಿ ಭಾರತವನ್ನು ವಿರೋಧಿಸುವ ದೇಶಗಳ ಕಡೆಗೆ ಭಾರತವು ಗಮನ ನೀಡಬಾರದು ! – ಕೇರಳದ ರಾಜ್ಯಪಾಲರಾದ ಆರೀಫ ಮಹಮ್ಮದ ಖಾನ

ಭಾರತಕ್ಕೆ ಇಸ್ಲಾಮೀ ದೇಶಗಳಿಂದ ಉಂಟಾಗುವ ವಿರೋಧ ಹಾಗೂ ಕ್ಷಮೆ ಕೇಳಬೇಕು ಎಂಬ ಬೇಡಿಕೆಗಳು ಮಹತ್ವದ್ದಲ್ಲ. ಭಾರತವು ಇಂತಹ ಚಿಕ್ಕ ಚಿಕ್ಕ ಪ್ರತಿಕ್ರಿಯೆಗಳಿಂದ ತೊಂದರೆಗೊಳಗಾಗಲು ಸಾಧ್ಯವಿಲ್ಲ, ಎಂಬ ಶಬ್ದಗಳಲ್ಲಿ ಕೇರಳದ ರಾಜ್ಯಪಾಲರಾದ ಆರೀಫ ಮಹಮ್ಮದ ಖಾನರವರು ನೂಪುರ ಶರ್ಮಾರವರ ಪ್ರಕರಣದಲ್ಲಿ ಇಲ್ಲಿನ ಪತ್ರಕರ್ತರೊಂದಿಗೆ ಮಾತನಾಡುತ್ತಿರುವಾಗ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಿವೃತ್ತ ಸೇನಾಧಿಕಾರಿಗಳಿಂದ `ಧಾರ್ಮಿಕ ಸ್ಥಳ ಕಾಯಿದೆ ೧೯೯೧’ ವಿರುದ್ಧ ಸುಪ್ರಿಂ ಕೋರ್ಟನಲ್ಲಿ ಅರ್ಜಿ ಸಲ್ಲಿಕೆ

೧೯೯೧ರ ಪೂಜಾ ಸ್ಥಳಗಳ ಕಾಯ್ದೆ ವಿರುದ್ಧ ನಿವೃತ್ತ ಕರ್ನಲ ಅನಿಲ ಕಬೋತ್ರಾ ವತಿಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಮೊದಲು ಈ ಕಾಯ್ದೆಯ ವಿರುದ್ಧ ಕೆಲವು ಅರ್ಜಿಗಳು ಸಲ್ಲಿಸಲಾಗಿದ್ದವು. ಅನಿಲ ಕಬೋತ್ರಾ ಅವರು ಈ ಅರ್ಜಿಯಲ್ಲಿ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ.

ಹಿಜಾಬ ನಿಷೇಧದ ವಿರುದ್ಧ ಪ್ರತಿಭಟನೆ ನಡೆಸಿದ ೨೪ ಕಾಲೆಜು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ

ಹಿಜಾಬ ನಿಷೇಧವನ್ನು ವಿರೋಧಿಸಿದ ಮಂಗಳೂರಿನ ಕಾಲೇಜೊಂದರ ೨೪ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ಅಮಾನತುಗೊಂಡವರೆಲ್ಲರೂ ಉಪ್ಪಿನಂಗಡಿ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು. ಈ ವಿದ್ಯಾರ್ಥಿಗಳು ಕಾಲೇಜಿನ ನಿಯವಲಿಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಶ್ರೀಕೃಷ್ಣ ಜನ್ಮಭೂಮಿಗಾಗಿ ಅರ್ಜಿ ಸಲ್ಲಿಸಿದ ವಕೀಲರಿಗೆ ಆಗರಾದ ಜಾಮಾಮಸೀದಿಯ ಅಧ್ಯಕ್ಷರಿಂದ ಕೊಲೆ ಬೆದರಿಕೆ

ಮಥುರಾದ ಶ್ರೀಕೃಷ್ಣ ಜನ್ಮಭೂಮಿಯ ಇದಗಾಹ ಮಸೀದಿ ಪ್ರಕರಣದಲ್ಲಿ ಹಿಂದೂ ಪಕ್ಷದ ಪರವಾಗಿ ಅರ್ಜಿ ಸಲ್ಲಿಸಿರುವ ವಕೀಲ ಮಹೇಂದ್ರ ಪ್ರತಾಪಸಿಂಗವರಿಗೆ ವಿಡಿಯೋ ಮೂಲಕ ಜೀವ ಬೆದರಿಕೆ ಹಾಕಿದ್ದು ಎದುರಿಗೆ ಬಂದಿದೆ.

ಆಗರಾದಲ್ಲಿ ಕ್ಷುಲ್ಲಕ ಕಾರಣದಿಂದಾಗಿ ಹಿಂದೂ- ಮುಸ್ಲಿಮ ಘರ್ಷಣೆ !

ರಾಜ್ಯದ ಕಾನಪುರದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಜೂನ ೫ ರಂದು ಆಗರಾದಲ್ಲಿ ಪರಿಸ್ಥಿತಿಯು ಹದಗೆಟ್ಟಿತು. ಆಗರಾದ ತಾಜಗಂಜಿನ ಬಸೀ ಖುರ್ದನಲ್ಲಿ ದ್ವಿಚಕ್ರ ವಾಹನದ ಸಣ್ಣ ಆಫಘಾತದ ನಂತರ ಹಿಂದೂ ಮತ್ತು ಮುಸ್ಲಿಮರ ನಡುವೆ ಹೊಡೆದಾಟ ಹಾಗೂ ಕಲ್ಲು ತೂರಾಟ ನಡೆಯಿತು.