ಆಗರಾದಲ್ಲಿ ಕ್ಷುಲ್ಲಕ ಕಾರಣದಿಂದಾಗಿ ಹಿಂದೂ- ಮುಸ್ಲಿಮ ಘರ್ಷಣೆ !

ಆಗರಾ (ಉತ್ತರಪ್ರದೇಶ) – ರಾಜ್ಯದ ಕಾನಪುರದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಜೂನ ೫ ರಂದು ಆಗರಾದಲ್ಲಿ ಪರಿಸ್ಥಿತಿಯು ಹದಗೆಟ್ಟಿತು. ಆಗರಾದ ತಾಜಗಂಜಿನ ಬಸೀ ಖುರ್ದನಲ್ಲಿ ದ್ವಿಚಕ್ರ ವಾಹನದ ಸಣ್ಣ ಆಫಘಾತದ ನಂತರ ಹಿಂದೂ ಮತ್ತು ಮುಸ್ಲಿಮರ ನಡುವೆ ಹೊಡೆದಾಟ ಹಾಗೂ ಕಲ್ಲು ತೂರಾಟ ನಡೆಯಿತು. ಅಲ್ಲಿ ಹಾಸುಗಲ್ಲು ಹಾಸುವ ಕಾಮಗಾರಿ ನಡೆಯುತ್ತಲಿದೆ.

ಸ್ಥಳೀಯ ಸಾದಿಕ ಎಂಬವನು ದ್ವಿಚಕ್ರ ವಾಹನದಲ್ಲಿ ಮನೆಗೆ ಬರುತ್ತಿದ್ದನು. ರಸ್ತೆ ಅಗೆಯುತ್ತಿರುವುದರಿಂದ ಅವನ ದ್ವಿಚಕ್ರ ವಾಹನ ಮುಂದೆ ಬರುತ್ತಿರುವ ರಾಧೆಶ್ಯಾಮ ಹೆಸರಿನ ವ್ಯಕ್ತಿಗೆ ಡಿಕ್ಕಿಹೊಡೆಯಿತು. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಯುವಕರ ಕುಟುಂಬದವರೂ ಅಲ್ಲಿಗೆ ತಲುಪಿದರು. ಅವರು ಹೊಡೆಯಲು ಪ್ರಾರಂಭಿಸಿದರು. ಇದಾದ ಬಳಿಕ ಎರಡು ಕಡೆಯ ಜನರು ಪರಸ್ಪರ ಕಲ್ಲು ತೂರಾಟ ನಡೆಸಿದರು. ಪ್ರಕರಣ ವಿಕೋಪಕ್ಕೆ ಹೋಗದಂತೆ ಪೊಲೀಸರು ಮಧ್ಯ ಪ್ರವೇಶಿಸಿದರು.

ಇದು ಎರಡು ಸಮುದಾಯಗಳ ನಡುವಿನ ಸಂಘರ್ಷವಲ್ಲ ಎಂದು ಹಿರಿಯ ಪೊಲೀಸ ಅಧಿಕಾರಿ ಸುಧೀರ್ ಕುಮಾರ ಹೇಳಿದ್ದಾರೆ. ಈ ಘಟನೆಯಲ್ಲಿ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ. ಸ್ಥಳದಲ್ಲಿ ಶಾಂತಿ ನೆಲೆಸಿದ್ದು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಸಂಪಾದಕೀಯ ನಿಲುವು

ಹಿಂಸಾಚಾರ ಯಾರು ಪ್ರಾರಂಭ ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಸಕಾಲದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಕಾರಣ ಇಂತಹ ಘಟನೆಗಳು ಆಗಾಗ ಮರುಕಳಿಸುತ್ತಿವೆ !