ಹಿಜಾಬ ನಿಷೇಧದ ವಿರುದ್ಧ ಪ್ರತಿಭಟನೆ ನಡೆಸಿದ ೨೪ ಕಾಲೆಜು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ

ಸಾಂಧರ್ಭಿಕ ಚಿತ್ರ

ಮಂಗಳೂರು – ಹಿಜಾಬ ನಿಷೇಧವನ್ನು ವಿರೋಧಿಸಿದ ಮಂಗಳೂರಿನ ಕಾಲೇಜೊಂದರ ೨೪ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ಅಮಾನತುಗೊಂಡವರೆಲ್ಲರೂ ಉಪ್ಪಿನಂಗಡಿ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು. ಈ ವಿದ್ಯಾರ್ಥಿಗಳು ಕಾಲೇಜಿನ ನಿಯವಲಿಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಕೆಲದಿನಗಳ ಹಿಂದೆ ೭ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿತ್ತು. ಘಟನೆಯನ್ನು ವರದಿ ಮಾಡಲು ಯತ್ನಿಸುತ್ತಿದ್ದ ಪತ್ರಕರ್ತರ ಮೇಲೂ ಹಲ್ಲೆ ನಡೆಸಿದ್ದಾರೆ.

ರಾಜ್ಯ ಸರಕಾರವು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಶಾಲಾ ಕಾಲೇಜುಗಳಲ್ಲಿ ಹಿಜಾಬನ್ನು ನಿಷೇಧಿಸುವ ಕರ್ನಾಟಕ ಸರಕಾರದ ನಿರ್ಧಾರವನ್ನು ಹೈಕೋರ್ಟ ಎತ್ತಿ ಹಿಡಿದಿದೆ.

ಸಂಪಾದಕೀಯ ನಿಲುವು

ಈಗ ಅಂತಹ ವಿದ್ಯಾರ್ಥಿಗಳನ್ನು ಯಾರೂ ಮತಾಂಧರು ಎಂದು ಏಕೆ ಕರೆಯುವದಿಲ್ಲ?