ಕಾಶ್ಮೀರದ ವಿಷಯದಲ್ಲಿ ಭಾರತವನ್ನು ವಿರೋಧಿಸುವ ದೇಶಗಳ ಕಡೆಗೆ ಭಾರತವು ಗಮನ ನೀಡಬಾರದು ! – ಕೇರಳದ ರಾಜ್ಯಪಾಲರಾದ ಆರೀಫ ಮಹಮ್ಮದ ಖಾನ

ನವದೆಹಲಿ – ಭಾರತಕ್ಕೆ ಇಸ್ಲಾಮೀ ದೇಶಗಳಿಂದ ಉಂಟಾಗುವ ವಿರೋಧ ಹಾಗೂ ಕ್ಷಮೆ ಕೇಳಬೇಕು ಎಂಬ ಬೇಡಿಕೆಗಳು ಮಹತ್ವದ್ದಲ್ಲ. ಭಾರತವು ಇಂತಹ ಚಿಕ್ಕ ಚಿಕ್ಕ ಪ್ರತಿಕ್ರಿಯೆಗಳಿಂದ ತೊಂದರೆಗೊಳಗಾಗಲು ಸಾಧ್ಯವಿಲ್ಲ, ಎಂಬ ಶಬ್ದಗಳಲ್ಲಿ ಕೇರಳದ ರಾಜ್ಯಪಾಲರಾದ ಆರೀಫ ಮಹಮ್ಮದ ಖಾನರವರು ನೂಪುರ ಶರ್ಮಾರವರ ಪ್ರಕರಣದಲ್ಲಿ ಇಲ್ಲಿನ ಪತ್ರಕರ್ತರೊಂದಿಗೆ ಮಾತನಾಡುತ್ತಿರುವಾಗ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ‘ಯಾವ ದೇಶಗಳು ಅನೇಕ ವರ್ಷಗಳಿಂದ ಕಾಶ್ಮೀರದ ಹಾಗೂ ಇತರ ಪ್ರಕರಣಗಳಲ್ಲಿ ಭಾರತ ವಿರೋಧಿ ಹೇಳಿಕೆಗಳನ್ನು ನೀಡಿವೆಯೋ ಅವುಗಳ ಕಡೆಗೆ ಭಾರತವು ಗಮನ ನೀಡಬಾರದು’ ಎಂದು ಅವರು ಹೇಳಿದರು.