ನಿವೃತ್ತ ಸೇನಾಧಿಕಾರಿಗಳಿಂದ `ಧಾರ್ಮಿಕ ಸ್ಥಳ ಕಾಯಿದೆ ೧೯೯೧’ ವಿರುದ್ಧ ಸುಪ್ರಿಂ ಕೋರ್ಟನಲ್ಲಿ ಅರ್ಜಿ ಸಲ್ಲಿಕೆ

ನವ ದೆಹಲಿ – ೧೯೯೧ರ ಪೂಜಾ ಸ್ಥಳಗಳ ಕಾಯ್ದೆ ವಿರುದ್ಧ ನಿವೃತ್ತ ಕರ್ನಲ ಅನಿಲ ಕಬೋತ್ರಾ ವತಿಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಮೊದಲು ಈ ಕಾಯ್ದೆಯ ವಿರುದ್ಧ ಕೆಲವು ಅರ್ಜಿಗಳು ಸಲ್ಲಿಸಲಾಗಿದ್ದವು. ಅನಿಲ ಕಬೋತ್ರಾ ಅವರು ಈ ಅರ್ಜಿಯಲ್ಲಿ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ.

ಮುಸ್ಲಿಂ ದಾಳಿಕೊರರು ಕೆಡವಿದ ಪುರಾತನ ಹಿಂದೂ ದೇವಾಲಯಗಳನ್ನು ನಿಯಂತ್ರಿಸುವ ಹಕ್ಕನ್ನು ಈ ಕಾನೂನು ನೀಡುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಈ ಕಾನೂನು ಹಿಂದೂಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಕೂಡ ಅರ್ಜಿಯಲ್ಲಿ ಹೇಳಲಾಗಿದೆ.