ಚಿನ್ನದ ಕಳ್ಳ ಸಾಗಾಣಿಕೆಯಲ್ಲಿ ಕೇರಳ ಮುಖ್ಯಮಂತ್ರಿ ವಿಜಯನ ಕೈವಾಡ ! – ಪ್ರಮುಖ ಆರೋಪಿಯ ಹೇಳಿಕೆ

ವಿಪಕ್ಷಗಳಿಂದ ಮೂಖ್ಯಮಂತ್ರಿ ವಿಜಯನ್ ರಾಜೀನಾಮೆಗೆ ಆಗ್ರಹ

ಕೊಚ್ಚಿ(ಕೇರಳ) – ಕೆರಳದ ಚಿನ್ನದ ಕಳ್ಳಸಾಗಣೆಯ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ ಇವರು ಅಧಿಕಾರಿಗಳ ಮುಂದೆ ನೀಡಿದ ಹೇಳಿಕೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪತ್ನಿ, ಪುತ್ರಿ ಮತ್ತು ಇಬ್ಬರು ಸಹೋದ್ಯೋಗಿಗಳು ಹಾಗೂ ಮಾಜಿ ಸಚಿವರೊಬ್ಬರು ಕಳ್ಳ ಸಾಗಾಣಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾಳೆ. ಬಳಿಕ ವಿಪಕ್ಷಗಳು ಮುಖ್ಯಮಂತ್ರಿ ವಿಜಯನ್ ಇವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿವೆ. ಸ್ವಪ್ನಾ ಸುರೇಶ ಯುನೈಟೆಡ ಅರಬ ಎಮಿರೆಟ್ಸನ ವಾಣಿಜ್ಯ ರಾಯಭಾರ ಕಚೇರಿಯಲ್ಲಿ ನೌಕರಿ ಮಾಡುತ್ತಿದ್ದಳು.

ಸ್ವಪ್ನಾ ಸುರೇಶ ಇವರು ಪತ್ರಕರ್ತರಿಗೆ, ನಾನು ಇಂಡಿಯನ ಪಿನೆಲ ಕೊಡ ಸೆಕ್ಷನ ೧೬೪ರ ಅಡಿಯಲ್ಲಿ ಮ್ಯಾಜಿಸ್ಟ್ರೇಟರ ಮುಂದೆ ಉತ್ತರವನ್ನು ಸಲ್ಲಿಸಿದ್ದೇನೆ. ಮುಖ್ಯಮಂತ್ರಿ ವಿಜಯನ್ ಅವರ ಪತ್ನಿ ಕಮಲಾ, ಪುತ್ರಿ ವೀಣಾ ಮಾಜಿ ಮುಖ್ಯ ಕಾರ್ಯದರ್ಶಿ ನಲಿನಿ ನೆಟ್ಟೊ, ವಿಜಯನ ಅವರ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಸಿ.ಎಂ. ರವಿಂದ್ರನ ಹಾಗೂ ಮಾಜಿ ಶಿಕ್ಷಣ ಸಚಿವ ಶಾಸಕ ಕೆ.ಟಿ. ಜಲಿಲ ಇವರ ಹೆಸರು ನಮೂದಿಸಲಾಗಿದೆ. ಈ ಪ್ರಕರಣ ೨೦೧೬ ರಲ್ಲಿ ವಿಜಯನ್ ಮೊದಲ ಬಾರಿಗೆ ಯುನೈಟೆಡ ಅರಬ ಎಮಿರೆಟ್ಸಗೆ ಭೇಟಿ ನೀಡಿದಾಗ ಪ್ರಾರಂಭವಾಯಿತು. ವಿಜಯನ್ ಅವರ ಅಂದಿನ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ ಅವರ ಭೇಟಿಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು. ಮರುದಿನ ನನಗೆ ಶಿವಶಂಕರ ಅವರಿಂದ ಕರೆ ಬಂದಿತು ಮತ್ತು ಅವರು ‘ವಿಜಯನ್ ಅವರ ಬ್ಯಾಗ ಮರೆತಿದ್ದಾರೆ ಅದು ಕೂಡಲೇ ಕಳುಹಿಸಬೇಕು’, ಎಂದು ಸೂಚನೆ ನೀಡಿದರು. ಅದರಂತೆ ನಾನು ಬ್ಯಾಗನ್ನು ಎಮಿರಾಟ್ಸ ಕಚೇರಿಗೆ ಒಪ್ಪಿಸಿದೆ. ಅಲ್ಲಿ ಬ್ಯಾಗ ಸ್ಕ್ಯಾನ ಮಾಡಿದಾಗ ಅದು ಹಣದಿಂದ ತುಂಬಿರುವುದು ಕಂಡು ಬಂದಿತು. ಅದರ ನಂತರ ಎಮಿರೆಟ್ಸನ ವ್ಯಾಪಾರ ಪ್ರತಿನಿಧಿಗಳ ನಿವಾಸದಿಂದ ವಿಜಯನ್ ಅವರ ನಿವಾಸಕ್ಕೆ ಆಗಾಗ್ಗೆ ಬಿರಿಯಾನಿ ಕಳುಹಿಸಲಾಗುತ್ತಿತ್ತು. ಇದು ಹೆಚ್ಚಾಗಿ ಲೋಹದಂತಹ ವಸ್ತುಗಳನ್ನು ಒಳಗೊಂಡಿತ್ತು. ಶಿವಶಂಕರ ಅವರ ಸೂಚನೆಯಂತೆ ಇದು ನಡೆದಿದೆ ಎಂದು ಕೇಂದ್ರ ತನಿಖಾ ಸಂಸ್ಥೆಗೆ ತಿಳಿಸಿದ್ದೇನೆ ಎಂದು ಹೇಳಿದಳು.
‘ಸ್ವಪ್ನಾ ಸುರೆಶ ಇವಳ ಆರೋಪ ನಿರಾಧಾರ’ ಎಂದು ಶಿವಶಂಕರ ಹೇಳಿದ್ದು, ನಳಿನಿ ನೆಟ್ಟೋ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಸಂಪಾದಕೀಯ ನಿಲುವು

ಕಮ್ಯುನಿಸ್ಟರ ನಿಜವಾದ ಸ್ವರೂಪ ! ‘ಕಮ್ಯುನಿಸ್ಟ ಪಕ್ಷವು ಸಂತ್ರಸ್ತರ ನ್ಯಾಯಕ್ಕಾಗಿ ಶ್ರಮಿಸುತ್ತದೆ’, ಎಂದು ಕೊಚ್ಚಿಕೊಳ್ಳುವವ ಕಮ್ಯುನಿಸ್ಟ ಪಕ್ಷವು ಹಿಂಸಾತ್ಮಕ ಮತ್ತು ಭ್ರಷ್ಟರು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ವಿಜಯನ್ ವಿರುದ್ಧ ಮತ್ತೊಂದು ಆರೋಪ !

ಕೇರಳದಲ್ಲಿ ಮುಖ್ಯಮಂತ್ರಿ ವಿಜಯನ್ ಅವರ ಎಕಸ್ವಾಮ್ಯದಿಂದಾಗಿ ಈ ಬಗ್ಗೆ ಸತ್ಯಾಂಶ ಬೆಳಕಿಗೆ ಬರುವುದಿಲ್ಲ. ಆದ್ದರಿಂದ ಸ್ವತಂತ್ರ ಸಂಸ್ಥೆಯಿಂದ ತನಿಖೆಯಾಗಬೇಕು !