ದಶಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನವು ಉತ್ಸಾಹ ಹಾಗೂ ಭಾವಪೂರ್ಣ ವಾತಾವರಣದಲ್ಲಿ ಆರಂಭ !

`ಜಯತು ಜಯತು ಹಿಂದೂ ರಾಷ್ಟ್ರಮ್’, `ಹರ ಹರ ಮಹಾದೇವ’, ಇಂತಹ ಜಯಘೋಷದೊಂದಿಗೆ ಇಲ್ಲಿಯ ಶ್ರೀ ರಾಮನಾಥ ದೇವಸ್ಥಾನ, ಫೋಂಡಾ, ಗೋವಾದಲ್ಲಿ ದಶಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನವು ಭಾವಪೂರ್ಣ ಮತ್ತು ಉತ್ಸಾಹದ ವಾತಾವರಣದಲ್ಲಿ ಆರಂಭವಾಯಿತು.

ದಂಗೆ ನಡೆಸಿದ ಮುಸಲ್ಮಾನರ ಮೇಲೆ ಯೋಗಿ ಸರಕಾರವು ‘ಗ್ಯಾಂಗಸ್ಟರ್ ಆಕ್ಟ್’ ಜಾರಿ ಮಾಡಲಿದೆ !

ನೂಪುರ ಶರ್ಮಾರವರ ವಿರುದ್ಧ ಜೂನ್ ೧೦ ರಂದು ಶುಕ್ರವಾರದ ನಮಾಜಿನ ನಂತರ ಭಾರತದಾದ್ಯಂತ ೧೪ ರಾಜ್ಯಗಳಲ್ಲಿ ೯೦ ಕ್ಕೂ ಹೆಚ್ಚಿನ ಕಡೆಗಳಲ್ಲಿ ಮುಸಲ್ಮಾನರು ಒಂದೇ ಸಮಯಕ್ಕೆ ಮೆರವಣಿಗೆ ನಡೆಸಿದರು. ನೂಪುರ ಶರ್ಮಾರವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಅನೇಕ ಸ್ಥಳಗಳಲ್ಲಿ ಹಿಂಸಾತ್ಮಕ ಆಂದೋಲನ ನಡೆಸಿದರು

ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನಕ್ಕಾಗಿ ಪರಶುರಾಮ ಭೂಮಿಯು ಸಜ್ಜಾಗಿದೆ !

ಜೂನ ೧೨ ರಿಂದ ೧೮ ರವರೆಗೆ ಇಲ್ಲಿನ ‘ಶ್ರೀ ರಾಮನಾಥ ದೇವಸ್ಥಾನ’, ಫೋಂಡಾ, ಗೋವಾದಲ್ಲಿ ಆಯೋಜಿಸಲಾಗಿರುವ ಹತ್ತನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ಕ್ಕಾಗಿ ಪರಶುರಾಮ ಭೂಮಿಯಾಗಿರುವ ಗೋವಾ ಸಜ್ಜಾಗಿದೆ. ಈ ಅಧಿವೇಶನದ ನಿಮಿತ್ತ ದೇಶಾದ್ಯಂತ ಇರುವ ಗೌರವಾನ್ವಿತರ ಆಗಮನದಿಂದ ಪೋಂಡಾ ನಗರದ ವಾತಾವರಣವು ಕೇಸರಿಮಯವಾಗಿದೆ.

ಪ್ರವಾದಿ ಏನಾದರೂ ಈಗ ಇದ್ದಿದ್ದರೆ, ಕಟ್ಟರ ಮುಸಲ್ಮಾನರ ಮೂರ್ಖತನಕ್ಕೆ ಆಶ್ಚರ್ಯ ಪಡುತ್ತಿದ್ದರು ! – ತಸ್ಲೀಮಾ ನಸ್ರಿನ್

ಒಂದುವೇಳೆ ಪೈಗಂಬರ ಇದ್ದಿದ್ದರೆ ಜಗತ್ತಿನಲ್ಲಿನ ಕಟ್ಟರ ಮುಸಲ್ಮಾನರ ಮೂರ್ಖತನವನ್ನು ನೋಡಿ ಅವರಿಗೆ ಆಶ್ಚರ್ಯವಾಗುತ್ತಿತ್ತು, ಎಂದು ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರಿನ್ ಇವರು ನೂಪೂರ ಶರ್ಮಾ ಪ್ರಕರಣದಲ್ಲಿ ಮುಸಲ್ಮಾನರಿಂದಾಗುತ್ತಿರುವ ವಿರೋಧದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದರು

ಇಸ್ಲಾಮಿಕ ದೇಶಗಳ ಭಾರತವಿರೋಧಿ ನಡೆಗಳಿಗೆ ಪ್ರತ್ಯುತ್ತರ ನೀಡಲು ಹಿಂದೂ ರಾಷ್ಟ್ರ ಅವಶ್ಯಕ ! – ಸದ್ಗುರು (ಡಾ.) ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದು ಜನಜಾಗೃತಿ ಸಮಿತಿ

ಗೋವಾದಲ್ಲಿ ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿರುವ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಿಂದ ದೇಶದಲ್ಲಿ ಹಿಂದೂ ರಾಷ್ಟ್ರ ದ ಚರ್ಚೆಗೆ ಪ್ರಾರಂಭವಾಗಿದೆ. ಗೋವಾದಲ್ಲಿ ಕಳೆದ ೧೦ ವರ್ಷಗಳಿಂದ ನಡೆಯುತ್ತಿರುವ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಿಂದ ದೇಶದಲ್ಲಿ ಹಿಂದೂ ರಾಷ್ಟ್ರದ ಚರ್ಚೆ ನಡೆಯುತ್ತಿದೆ.

‘ನೂಪುರ ಶರ್ಮಾರಂತಹವರ ಶಿರಚ್ಛೇದ ಮಾಡುವೆವು !’ (ಅಂತೆ)

ಬಂಧುಗಳೇ, ಸಮಯವು ನಮಗೆ ಶಿರಚ್ಛೇದವನ್ನು ಮಾಡಲು ಕಲಿಸುತ್ತದೆ. ನಾವು ಸಹಿಸಿಕೊಳ್ಳುವವರೆಗೂ ನಾವು ಮೌನವಾಗಿರಬಹುದು ಎಂಬುದನ್ನು ನೆನಪಿಡಿ. ನಮ್ಮ ಸಹನೆಯು ಮೀರಿ ಹೋದರೆ ನೂಪುರ ಶರ್ಮಾ ಅವರಂತಹ ದೇಹ ಒಂದುಕಡೆ ಮತ್ತು ರುಂಡ ಒಂದು ಕಡೆ ಸಿಗಬಹುದು, ಎಂದು ಡೋಡಾ ಜಿಲ್ಲೆಯ ಭದ್ರವಾಹದ ಮಸೀದಿಯಲ್ಲಿಯ ಒಬ್ಬ ಮೌಲಾನಾ ಬೆದರಿಕೆ ಹಾಕಿದ್ದಾನೆ.

ಕಾನ್ವೆಂಟನಲ್ಲಿನ ಭ್ರಷ್ಟಾಚಾರದ ದೂರು ನೀಡಿದ ನನ್‌ಗೆ ಕಿರುಕುಳ ಮತ್ತು ಲೈಂಗಿಕ ಶೊಷಣೆ !

ರಾಮಪುರ ಪ್ರದೇಶದಲ್ಲಿನ ‘ಡಾಟರ ಆಫ ಲೇಡಿ ಆಫ ಮರ್ಸಿ ಕಾನ್ವೆಂಟ’ನಲ್ಲಿ ಕೆಲಸ ಮಾಡುತ್ತಿರುವ ನನ್ ಎಲ್ಸಿನಾ ಅವರು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ. ಈ ಕುರಿತು ಧ್ವನಿ ಎತ್ತಲು ಯತ್ನಿಸಿದಕ್ಕಾಗಿ ಆಕೆಗೆ ಜೀವ ಬೆದರಿಕೆ ಹಾಕಲಾಗಿದೆ.

ಕಾಶ್ಮೀರಿ ಹಿಂದೂಗಳಿಗೆ ಮಹಾರಾಷ್ಟ್ರದ ಬಾಗಿಲು ಯವಾಗಲೂ ತೆರೆದಿರುತ್ತದೆ ! – ಆದಿತ್ಯ ಠಾಕರೆ

ಕಾಶ್ಮೀರಿ ಹಿಂದೂಗಳಿಗೆ ಮಹಾರಾಷ್ಟ್ರದ ಬಾಗಿಲು ಯವಾಗಲೂ ತೆರೆದಿರುತ್ತದೆ, ಎಂದು ಶಿವಸೇನೆಯ ನಾಯಕ ಹಾಗೂ ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕರೆ ಹೇಳಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಹಿಂದೂಗಳು ಮತ್ತು ಹಿಂದೂಗಳ ‘ಉದ್ದೇಶಿತ ಹತ್ಯೆ’ ಹಿನ್ನೆಲೆಯಲ್ಲಿ ಶಿವಸೇನಾ ನಾಯಕಿ ಮತ್ತು ಸಂಸದೆ ಪ್ರಿಯಾಂಕಾ ಚತುರ್ವೇದಿ ಕಾಶ್ಮೀರ ಕಣಿವೆಗೆ ಹೋಗಿ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿದರು.

ರಾಷ್ಟ್ರಪತಿ ಹುದ್ದೆಗೆ ಜುಲೈ ೧೮ ರಂದು ಮತದಾನ !

೧೫ನೇ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆಯನ್ನು ಕೇಂದ್ರೀಯ ಚುನಾವಣೆ ಆಯೋಗವು ಘೋಷಿಸಿದ್ದೂ ಜುಲೈ ೧೮ರಂದು ನಡೆಯಲಿದೆ ಹಾಗೂ ಜುಲೈ ೨೧ ರಂದು ಏಣಿಕೆಯಾಗಲಿದೆ ಎಂದು ಪ್ರಕಟಿಸಿದೆ. ಜುಲೈ ೨೫ರಂದು ನೂತನ ಅಧ್ಯಕ್ಷರು ಪ್ರಮಾಣ ವಚನ ಸ್ವಿಕರಿಸಲಿದ್ದಾರೆ.

ಭಾಜಪದ ಶಾಸಕನ ಪುತ್ರಿಯಿಂದ ಸಂಚಾರಿ ನಿಯಮದ ಉಲ್ಲಂಘನೆ ಮಾಡಿ ಪೊಲೀಸರೊಂದಿಗೆ ವಾಗ್ವಾದ !

ರಾಜಕಾರಣಿಗಳು ತಮ್ಮ ಮಕ್ಕಳ ಮೇಲೆ ಎಂತಹ ಸಂಸ್ಕಾರ ಕೊಡುತ್ತಾರೆ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! ಇಂತಹವರಿಗೆ ಕೇವಲ ದಂಡ ವಿಧಿಸಿ ಬಿಡುವುದಲ್ಲ, ಸೆರೆಮನೆಗೆ ಅಟ್ಟಬೇಕು !