ಕಾನ್ವೆಂಟನಲ್ಲಿನ ಭ್ರಷ್ಟಾಚಾರದ ದೂರು ನೀಡಿದ ನನ್‌ಗೆ ಕಿರುಕುಳ ಮತ್ತು ಲೈಂಗಿಕ ಶೊಷಣೆ !

ಮೈಸೂರು – ಇಲ್ಲಿನ ರಾಮಪುರ ಪ್ರದೇಶದಲ್ಲಿನ ‘ಡಾಟರ ಆಫ ಲೇಡಿ ಆಫ ಮರ್ಸಿ ಕಾನ್ವೆಂಟ’ನಲ್ಲಿ ಕೆಲಸ ಮಾಡುತ್ತಿರುವ ನನ್ ಎಲ್ಸಿನಾ ಅವರು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ. ಈ ಕುರಿತು ಧ್ವನಿ ಎತ್ತಲು ಯತ್ನಿಸಿದಕ್ಕಾಗಿ ಆಕೆಗೆ ಜೀವ ಬೆದರಿಕೆ ಹಾಕಲಾಗಿದೆ. ಈ ಕುರಿತು ಮಾಹಿತಿ ನೀಡುವ ವಿಡಿಯೋವನ್ನು ಆಕೆ ಪ್ರಸಾರ ಮಾಡಿದ್ದಾಳೆ.

೧. ಎಲ್ಸಿನಾ ಇವರು, ಕಾನ್ವೆಂಟನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಕರ್ನಾಟಕ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ದೂರನ್ನು ಹಿಂಪಡೆಯುವಂತೆ ಕೇಳಿದಾಗ ಆಕೆ ನಿರಾಕರಿಸಿದ್ದಾಳೆ. ನಂತರ ಆಕೆಗೆ ಚಿತ್ರಹಿಂಸೆ ನೀಡಲಾಯಿತು. ಅವಳಿಗೆ ಬಲವಂತವಾಗಿ ಮನೋವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅಕೆಗೆ ಲೈಂಗಿಕ ಕಿರುಕುಳ ನೀಡಲಾಯಿತು. ಸಂಬಂಧಿಕರು ಮತ್ತು ಪೊಲೀಸರ ಹಸ್ತಕ್ಷೇಪದ ನಂತರ ಎಲ್ಸಿನಾ ಅವಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು; ಆದರೆ ಅವಳನ್ನು ಕಾನ್ವೆಂಟನಿಂದ ಹೊರಹಾಕಲಾಯಿತು.

೨. ಎಲ್ಸಿನಾಗೆ ೪೫ ವರ್ಷ. ಅವರು ಕರ್ನಾಟಕದ ಕೊಡಗಿನ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿಯಾಗಿದ್ದರು. ಅದರ ನಂತರ ಅವರು ಮೇಲಿನ ಕಾನ್ವೆಂಟನಲ್ಲಿ ಕಲಿಸಲಾರಂಬಿಸಿದಳು. ೩ ತಿಂಗಳಲ್ಲೇ ಭ್ರಷ್ಟಾಚಾರ ನಡೆದಿರುವುದು ಗೊತ್ತಾದ ಹಿನ್ನೆಲೆಯಲ್ಲಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಳು.

ಸಂಪಾದಕೀಯ ನಿಲುವು

ಕ್ರೈಸ್ತರನ್ನು ಸಭ್ಯತೆ ಮತ್ತು ಸುಸಂಸ್ಕೃತರು ಎಂದು ತಿಳಿದುಕೊಳ್ಳುವವರು ಈ ಬಗ್ಗೆ ಗಮನ ಹರಿಸುತ್ತಾರೆಯೇ ?