ಬೆಂಗಳೂರು – ಇಲ್ಲಿ ಭಾಜಪದ ಶಾಸಕ ಅರವಿಂದ ನಿಂಬಾವಳಿ ಅವರ ಪುತ್ರಿ ಸಂಚಾರಿ ನಿಯಮ ಉಲ್ಲಂಘಿಸಿ ಪೊಲೀಸ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅತ್ಯಂತ ದುಬಾರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಹುಡುಗಿ ‘ಸಿಗ್ನಲ’ ಮುರಿದ ನಂತರ ಪೊಲೀಸರು ನಿಲ್ಲಿಸಿದಾಗ ಅವರೊಂದಿಗೆ ವಾಗ್ವಾದಕ್ಕಿಳಿದಳು. ಈ ವೇಳೆ ಸ್ಥಳಿಯ ಪತ್ರಕರ್ತ ಹಾಗೂ ಛಾಯಾಗ್ರಾಹಕರೊಂದಿಗೂ ವಾಗ್ವಾದ ನಡೆಸಿದ್ದಾಳೆ. ಈ ಸಂದರ್ಭದಲ್ಲಿ ಆಕೆಯು ‘ತಾನು ಯಾರಿದ್ದಾಳೆ ?’ ಎಂದು ಹೇಳುತ್ತ ಪೊಲೀಸರ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದಾಳೆ.
ನಾನು ಯಾರ ಮಗಳು ಗೊತ್ತಾ?: ಟ್ರಾಫಿಕ್ ಪೊಲೀಸರೊಂದಿಗೆ ಅರವಿಂದ ಲಿಂಬಾವಳಿ ಪುತ್ರಿ ಕಿರಿಕ್#ArvindLimbavali #Daughter #Bengaluru #TrafficPolice #KannadaNews https://t.co/TRVW8O19kl
— Asianet Suvarna News (@AsianetNewsSN) June 9, 2022
ಪೊಲೀಸರು ಹುಡುಗಿಗೆ ಒಟ್ಟು ೧೦ ಸಾವಿರ ರೂಪಾಯಿಗಳ ದಂಡ ಪಾವತಿಸಲು ಹೇಳಿದ್ದಾರೆ. ಆ ಸಮಯದಲ್ಲಿ ದಂಡ ಕಟ್ಟಲು ತನ್ನ ಬಳಿ ಹಣವಿಲ್ಲ ಎಂದು ಮನೆಗೆ ಹೋಗುವುದಕ್ಕಾಗಿ ಮನವಿ ಮಾಡಿಕೊಂಡಿದ್ದಾಳೆ. ಆಕೆಯೊಂದಿಗೆ ಇದ್ದ ಸ್ನೇಹಿತ ೧೦೦೦೦ ರೂಪಯಿಗಳ ದಂಡವನ್ನು ಪಾವತಿಸಿದ ನಂತರ ಪೊಲೀಸರು ಅಕೆಯನ್ನು ಹೋಗಲು ಬಿಟ್ಟಿದ್ದಾರೆ.
(ಸೌಜನ್ಯ : NewsFirst Kannada)
ಸಂಪಾದಕೀಯ ನಿಲುವುರಾಜಕಾರಣಿಗಳು ತಮ್ಮ ಮಕ್ಕಳ ಮೇಲೆ ಎಂತಹ ಸಂಸ್ಕಾರ ಕೊಡುತ್ತಾರೆ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! ಇಂತಹವರಿಗೆ ಕೇವಲ ದಂಡ ವಿಧಿಸಿ ಬಿಡುವುದಲ್ಲ, ಸೆರೆಮನೆಗೆ ಅಟ್ಟಬೇಕು ! |