ಇಸ್ಲಾಮಿಕ ದೇಶಗಳ ಭಾರತವಿರೋಧಿ ನಡೆಗಳಿಗೆ ಪ್ರತ್ಯುತ್ತರ ನೀಡಲು ಹಿಂದೂ ರಾಷ್ಟ್ರ ಅವಶ್ಯಕ ! – ಸದ್ಗುರು (ಡಾ.) ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದು ಜನಜಾಗೃತಿ ಸಮಿತಿ

ಪಣಜಿಯಲ್ಲಿ ೧೦ ನೇ ಅಖಿಲ ಭಾರತೀಯ ಹಿಂದೂರಾಷ್ಟ್ರ ಅಧಿವೇಶನದ ಪತ್ರಕರ್ತರ ಪರಿಷತ

ಪಣಜಿ, ೧೦ ಜೂನ (ವಾರ್ತೆ.) – ಗೋವಾದಲ್ಲಿ ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿರುವ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಿಂದ ದೇಶದಲ್ಲಿ ಹಿಂದೂ ರಾಷ್ಟ್ರ ದ ಚರ್ಚೆಗೆ ಪ್ರಾರಂಭವಾಗಿದೆ. ಗೋವಾದಲ್ಲಿ ಕಳೆದ ೧೦ ವರ್ಷಗಳಿಂದ ನಡೆಯುತ್ತಿರುವ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಿಂದ ದೇಶದಲ್ಲಿ ಹಿಂದೂ ರಾಷ್ಟ್ರದ ಚರ್ಚೆ ನಡೆಯುತ್ತಿದೆ. ಅದರ ನಂತರ ಹಿಂದೂ ರಾಷ್ಟ್ರದ ಧ್ಯೇಯ ಇಟ್ಟುಕೊಂಡು ವಿವಿಧ ಕ್ಷೇತ್ರದಲ್ಲಿ ಕಾರ್ಯ ಪ್ರಾರಂಭವಾಗಿದೆ. ಭಾಜಪಾದ ವಕ್ತಾರರಾಗಿರುವಾಗ ನೂಪುರ ಶರ್ಮಾ ಇವರು ಇಸ್ಲಾಮ ಸಂದರ್ಭದಲ್ಲಿ ನೀಡಿರುವ ಹೇಳಿಕೆಯಿಂದ ಜಗತ್ತಿನಾದ್ಯಂತ ಅನೇಕ ಇಸ್ಲಾಮಿ ರಾಷ್ಟ್ರಗಳು ಒಗ್ಗೂಡಿ ಭಾರತಕ್ಕೆ ವಿರೋಧಿಸುತ್ತಿದ್ದಾರೆ. ಅಲ್ ಕಾಯದಾ ನೇರವಾಗಿ ಭಾರತದ ಮೇಲೆ ದಾಳಿಯ ಬೆದರಿಕೆ ನೀಡಿದೆ; ಆದರೆ ಶಿವಲಿಂಗವನ್ನು ‘ಕಾರಂಜಿ’ ಎನ್ನುವ ಅಥವಾ ಹಿಂದೂ ಗುಪ್ತಾಂಗದ (ಶಿವಲಿಂಗದ) ಪೂಜೆ ಏಕೆ ಮಾಡುತ್ತಾರೆ ?’ ಹೀಗೆ ರಾಜಾರೋಷವಾಗಿ ಹಿಂದೂ ದ್ವೇಷಿ ಹೇಳಿಕೆ ನೀಡಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿದರು ಅವರ ವಿರುದ್ಧ ಯಾರೇ ವಿರೋಧ ವ್ಯಕ್ತಪಡಿಸಲಿಲ್ಲ. ಇದರಿಂದ ‘ಜಗತ್ತಿನಾದ್ಯಂತ ಒಂದಾದರೂ ಹಿಂದೂ ರಾಷ್ಟ್ರದ ಅವಶ್ಯಕತೆ ಏಕೆ ಇದೆ ?’ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದಕ್ಕಾಗಿ ಈಸಲದ ೧೨ ರಿಂದ ೧೮ ಜೂನ್ ೨೦೨೨ ಈ ಸಮಯದಲ್ಲಿ ನಡೆಯುವ ‘ಶ್ರೀ ರಾಮನಾಥ ದೇವಸ್ಥಾನ’, ಫೊಂಡಾ, ಗೋವಾದಲ್ಲಿ ೧೦ ನೇ ‘ಅಖಿಲ ಭಾರತೀಯ ಹಿಂದೂರಾಷ್ಟ್ರ ಅಧಿವೇಶನ’ ಆಯೋಜಿಸಲಾಗಿದೆ, ಎಂದು ಹಿಂದು ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಇವರು ಇಲ್ಲಿ ಒಂದು ಪತ್ರಿಕಾ ಪರಿಷತ್ತಿನಲ್ಲಿ ಮಾಹಿತಿ ನೀಡಿದರು. ಈ ಸಮಯದಲ್ಲಿ ಗೋವಾದ ‘ಭಾರತ ಮಾತಾ ಕೀ ಜೈ ಸಂಘಟನೆ’ಯ ಗೋವಾ ರಾಜ್ಯ ಸಂಚಾಲಕರಾದ ಪ್ರಾ. ಸುಭಾಷ ವೆಲಿಂಗಕರ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಮತ್ತು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೆತನ ರಾಜಹಂಸ ಉಪಸ್ಥಿತರಿದ್ದರು.

ಸದ್ಗುರು (ಡಾ.) ಚಾರುದತ್ತ ಪಿಂಗಳೆ

ಈ ಅಧಿವೇಶನದಲ್ಲಿ ಹಿಂದೂರಾಷ್ಟ್ರದ ಕಾರ್ಯಪದ್ಧತಿ ಅಳವಡಿಸಲು ಮತ್ತು ಹಿಂದೂ ರಾಷ್ಟ್ರದಲ್ಲಿನ ಆದರ್ಶ ರಾಜ್ಯ ವ್ಯವಹಾರ ವಿಷಯವಾಗಿ ಮಾರ್ಗದರ್ಶನ ನೀಡಲು ‘ಹಿಂದೂ ರಾಷ್ಟ್ರ ಸಂಸತ್ತಿನ’ ಆಯೋಜನೆ ಮಾಡಲಾಗಿದೆ.

ಪತ್ರಕರ್ತರ ಸಭೆಯಲ್ಲಿ ಸಂಭೋಧಿಸುತ್ತಾ ಎಡಗಡೆಯಿಂದ ಶ್ರೀ. ರಮೇಶ ಶಿಂದೆ, ಸದ್ಗುರು (ಡಾ.) ಚಾರುದತ್ತ ಪಿಂಗಳೆ, ಪ್ರಾ. ಸುಭಾಷ ವೆಲಿಂಗಕರ ಮತ್ತು ಶ್ರೀ. ಚೇತನ ರಾಜಹಂಸ

ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನಕ್ಕೆ ಸಮಸ್ತ ಗೋಮಂತಕಿಯರ ಬೆಂಬಲ

ಪ್ರಾ. ಸುಭಾಷ ವೆಲಿಂಗಕರ

ಹಿಂದೂ ರಾಷ್ಟ್ರ ಸ್ಥಾಪನೆಗೆ ಪರ್ಯಾಯವಿಲ್ಲ, ಇದು ಗೋಮಾಂತಕಿಯರ ಭಾವನೆ ! – ಪ್ರಾ. ಸುಭಾಷ ವೆಲಿಂಗಕರ, ಭಾರತ ಮಾತಾ ಕಿ ಜೈ ಸಂಘಟನೆ

ಗೋವಾದ ಹಿಂದೂಗಳಲ್ಲಿ ‘ಹಿಂದೂ ರಾಷ್ಟ್ರ ಸ್ಥಾಪನೆಯಾಗಬೇಕು’ ಎಂಬ ಭಾವನೆ ಪ್ರಬಲವಾಗುತ್ತಿದೆ ಎಂಬುದು ನನ್ನ ಅನುಭವವಾಗಿದೆ. ಸಾರ್ವಜನಿಕವಾಗಿ ಈ ಕುರಿತು ಮಾತನಾಡಲು ಯಾರೂ ಧೈರ್ಯ ಮಾಡದಿದ್ದರೂ, ‘ಹಿಂದೂ ರಾಷ್ಟ್ರದ ಸ್ಥಾಪನೆಯಿಲ್ಲದೆ ಪರ್ಯಾಯವಿಲ್ಲ’, ಎಂದು ಹಿಂದೂಗಳಿಗೆ ಅನಿಸುತ್ತಿದೆ. ಹಿಂದೂ ರಾಷ್ಟ್ರ ಸ್ಥಾಪನೆಯಾದ ನಂತರವಷ್ಟೇ ಗೋವಾದಲ್ಲಿ ಹಿಂದೂಗಳು ಇಂದಿನವರೆಗೂ ಎದುರಿಸುತ್ತಿರುವ ದೌರ್ಜನ್ಯಗಳು ಕಡಿಮೆಯಾಗಬಹುದು. ಗೋವಾದ ಹಿಂದೂಗಳಿಗೆ ಚಿಂತೆಗೆಡಿಸುವ ಅನೇಕ ವಿಷಯಗಳು ಇಂದು ಅಜೆಂಡಾದಲ್ಲಿವೆ. ಫೋಂಡಾದ ರಾಮನಾಥಿಯಲ್ಲಿ ನಡೆಯಲಿರುವ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಗೋವಾದ ದೇವಸ್ಥಾನಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು, ಮತಾಂತರ, ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ನುಸುಳುಕೋರರು ಮುಂತಾದ ವಿಷಯಗಳ ಕುರಿತು ಚರ್ಚಿಸಲಾಗುವುದು. ಈ ಅಧಿವೇಶನಕ್ಕೆ ಎಲ್ಲ ಗೋಮಾಂತಕಿಯರ ಬೆಂಬಲವಿದೆ, ಎಂದು ‘ಭಾರತ ಮಾತಾ ಕಿ ಜೈ’ ಸಂಘಟನೆಯ ರಾಜ್ಯ ಸಂಚಾಲಕರಾದ ಪ್ರಾ. ಸುಭಾಷ ವೆಲಿಂಗಕರ ಇವರು ಪ್ರತಿಪಾದಿಸಿದರು.

ಶ್ರೀ. ಚೇತನ ರಾಜಹಂಸ

ಗೋವಾದ ಶಂಖವಾಳನಂತೆಯೇ ದೇಶದ ಅನೇಕ ದೇವಸ್ಥಾನಗಳ ಸ್ಥಿತಿಯಾಗಿದೆ ! – ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರ, ಸನಾತನ ಸಂಸ್ಥೆ

ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಇವರು ಮಾತನಾಡುತ್ತಾ, “ಗೋವಾದ ಶಂಖವಾಳನಲ್ಲಿರುವ ಶ್ರೀ ವಿಜಯದುರ್ಗಾದ ಪುರಾತನ ದೇವಸ್ಥಾನದಂತೆಯೇ ದೇಶದ ಅನೇಕ ದೇವಸ್ಥಾನಗಳ ಸ್ಥಿತಿ ಇದೆ ಎಂದು ಹೇಳಿದರು. ಕೇಂದ್ರದಲ್ಲಿ ಮತ್ತು ಅನೇಕ ರಾಜ್ಯಗಳಲ್ಲಿ ಹಿಂದುತ್ವನಿಷ್ಠ ಪಕ್ಷದ ಸರಕಾರದ ಆಗಮನದಿಂದಾಗಿ, ರಾಮಮಂದಿರ ನಿರ್ಮಾಣ, ಕಲಂ ೩೭೦ ರದ್ದು, ಜೊತೆಗೆ ‘ಲವ್ ಜಿಹಾದ್’ ಮತ್ತು ಮತಾಂತರದ ವಿರುದ್ಧ ಕಾನೂನುಗಳು ಜಾರಿಗೊಳಿಸಿದ್ದರಿಂದ ಸಕಾರಾತ್ಮಕ ಕಾರ್ಯವಾದರೂ ಕಾಶಿ-ಮಥುರಾ ಸೇರಿದಂತೆ ಅನೇಕ ಹಿಂದೂ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳನ್ನು ಇನ್ನೂ ಮುಕ್ತಗೊಳಿಸಲು ಬಾಕಿ ಇದೆ ಎಂದು ಹೇಳಿದರು.

ಶ್ರೀ. ರಮೇಶ ಶಿಂದೆ

ದೇಶ-ವಿದೇಶಗಳಿಂದ ೧ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳಿಗೆ ಆಹ್ವಾನ ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರ, ಹಿಂದೂ ಜನಜಾಗೃತಿ ಸಮಿತಿ

ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಇವರು ಮಾತನಾಡುತ್ತಾ, ಈ ಅಧಿವೇಶನಕ್ಕೆ ಅಮೇರಿಕಾ, ಇಂಗ್ಲೆಂಡ್, ಹಾಂಕಾಂಗ್, ಸಿಂಗಾಪುರ, ಫಿಜಿ ಮತ್ತು ನೇಪಾಳ ದೇಶಗಳ ಸಹಿತ ಭಾರತದ ೨೬ ರಾಜ್ಯಗಳಿಂದ ೩೫೦ ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ೧೦೦೦ ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯು ಮೊದಲು ಪ್ರಸ್ತುತಪಡಿಸಿದ ಹಿಂದೂ ರಾಷ್ಟ್ರದ ಬಗ್ಗೆ ದೇಶದಾದ್ಯಂತ ಚರ್ಚೆಯಾಗುತ್ತಿರುವುದು ಅದರ ಪಾವತಿಯಾಗಿದೆ !

ಪತ್ರಿಕಾಗೋಷ್ಠಿಯಲ್ಲಿ ಬಂದಿದ್ದ ಪತ್ರಕರ್ತರಾದ ಶ್ರೀ. ರಾಮನಾಥ ಪೈ ಇವರು ಈ ಕುರಿತು ಪ್ರತಿಕ್ರಿಯಿಸುತ್ತಾ, “ಮೊದಲ ಹಿಂದೂ ಅಧಿವೇಶನದ ಪತ್ರಿಕಾಗೋಷ್ಠಿಯಲ್ಲಿ ‘ಹಿಂದೂ ರಾಷ್ಟ್ರ’ದ ನಿಲುವಿನ ಬಗ್ಗೆ ಪ್ರಸ್ತಾಪಿಸಲಾಗಿತ್ತು. ೧೦ ವರ್ಷಗಳ ಹಿಂದೆ ‘ಹಿಂದೂ ರಾಷ್ಟ್ರ’ದ ಬಗ್ಗೆ ಚರ್ಚೆಯೇ ಇರಲಿಲ್ಲ. ಇಂದು ೧೦ನೇ ಅಧಿವೇಶನದ ಪತ್ರಿಕಾಗೋಷ್ಠಿಗೆ ಬಂದಿದ್ದೇನೆ. ಇಂದು ದೇಶದೆಲ್ಲೆಡೆ ‘ಹಿಂದೂ ರಾಷ್ಟ್ರ’ದ ಚರ್ಚೆ ನಡೆಯುತ್ತಿದೆ.” ಎಂದು ಹೇಳಿದರು.

ಅಧಿವೇಶನದಲ್ಲಿ ಮುಖ್ಯ ಉಪಸ್ಥಿತಿ

ಈ ಅಧಿವೇಶನಕ್ಕೆ ಇದುವರೆಗೆ ೫೮ ಕ್ಕೂ ಹೆಚ್ಚು ಹಿಂದೂ ಸಂಘಟನೆಗಳು, ಸಂಪ್ರದಾಯಗಳು, ವಿದ್ಯಾಪೀಠಗಳು, ನ್ಯಾಯವಾದಿ ಸಂಘಟನೆಗಳು, ಪತ್ರಕರ್ತರು, ಉದ್ಯಮಿಗಳು ಮುಂತಾದವರು ಪತ್ರಗಳ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹಿಂದುತ್ವನಿಷ್ಠರು ಅಧಿವೇಶನದ ನೇರ ಪ್ರಕ್ಷೇಪಣೆಯನ್ನು ಹಿಂದೂ ಜನಜಾಗೃತಿ ಸಮಿತಿಯ ವೆಬ್‌ಸೈಟ್ HinduJagruti.org ಹಾಗೂ ‘HinduJagruti’ ಯ ‘ಯು-ಟ್ಯೂಬ್’ ಚಾನೆಲ್‌ನಲ್ಲಿಯೂ ವೀಕ್ಷಿಸಬಹುದು.


‘೧೦ ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ನ ಕುರಿತು ಪತ್ರಿಕಾಗೋಷ್ಠಿ


ಪತ್ರಕರ್ತ ಪರಿಷತ್ತಿನ ಪ್ರಶ್ನೋತ್ತರಗಳು

೧. ಸಾಫಾ ಮಸೀದಿಯು ಆದಿಲ ಶಾಹನ ಕಾಲದ್ದಾಗಿದೆ ಎಂಬುದು ಕೇವಲ ಚರ್ಚೆ! ಪುರಾತತ್ತ್ವ ಇಲಾಖೆಯ ಮಾಹಿತಿ ಹಕ್ಕು ಅಧಿಕಾರದಲ್ಲಿ ಕೇಳಿದ ಪ್ರಶ್ನೆಯ ಉತ್ತರ

ಪ್ರಶ್ನೆ : ಫೋಂಡಾದಲ್ಲಿ ಅನೇಕ ಮಂದಿರಗಳು ಮತ್ತು ಮಸೀದಿಗಳಿವೆ. ಮಂದಿರಗಳ ಪರಿಸರದಲ್ಲಿ ಒಂದು ಕೆರೆಗಳಿರುತ್ತವೆ. ಮಸೀದಿಗಳಿರುವಲ್ಲಿ ಕೆರೆಗಳಿರುವುದಿಲ್ಲ. ಆದರೆ ಕೇವಲ ಸಾಫಾ ಮಸೀದಿಯ ಪರಿಸರದಲ್ಲಿ ಕೆರೆ ಹೇಗೆ ಬಂತು ? ಎಂದು ಒಬ್ಬ ಪತ್ರಕರ್ತನು ವಿಚಾರಿಸಿದನು

ಉತ್ತರ (ಶ್ರೀ. ಚೇತನ ರಾಜಹಂಸ) : .ಸಾಫಾ ಮಸೀದಿಯ ಪರಿಸರದಲ್ಲಿ ಅದು ಆದಿಲ ಶಾಹನ ಕಾಲದ್ದಾಗಿದೆ ಎಂದು ಬರೆಯಲಾಗಿರುವ ಒಂದು ಫಲಕವಿದೆ. ಮಾಹಿತಿ ಹಕ್ಕು ಅಧಿಕಾರದಡಿಯಲ್ಲಿ ಅದರ ಕಾಗದಪತ್ರಗಳನ್ನು ಕೇಳಿದಾಗ ಪುರಾತತ್ತ್ವ ಇಲಾಖೆಯು ಅಂತಹ ಕಾಗದಪತ್ರಗಳಿಲ್ಲ ಎಂದು ಹೇಳಿದೆ. ಜನರಲ್ಲಿ ಚರ್ಚೆಯಾಗುತ್ತಿರುವುದರಿಂದ ಆ ಫಲಕವನ್ನು ಹಾಕಲಾಗಿದೆ ಎಂದು ಪುರಾತತ್ತ್ವ ಇಲಾಖೆಯು ಹೇಳಿದೆ. ಹಿಂದೂ ಧರ್ಮದಲ್ಲಿ ದೇವತೆಗಳ ಅಸ್ತಿತ್ವವಿದೆ ಎಂದು ಹೇಳಲಾಗುತ್ತದೆ. ಜಲದ ಮೂಲಕ ದೇವತೆಗಳ ತತ್ತ್ವವನ್ನು ಜಾಗೃತಗೊಳಿಸುವ ಪರಂಪರೆಯು ಹಿಂದೂಗಳಲ್ಲಿರುವುದರಿಂದ ಮಂದಿರಗಳ ಪರಿಸರದಲ್ಲಿ ಕೆರೆಗಳಿರುತ್ತವೆ. ಅರಬ್ ದೇಶಗಳು ಮರುಭೂಮಿಗಳಾಗಿರುವುದರಿಂದ ನೀರಿನ ಪ್ರಶ್ನೆಯೇ ಬರುವುದಿಲ್ಲ. ಹಾಗಾಗಿ ಸಾಫಾ ಮಸೀದಿಯ ಜಾಗದಲ್ಲಿ ಫಲಕವನ್ನು ಹಾಕಲು ಪಿ.ಎಫ್.ಐ.ಯು ಪುರಾತತ್ತ್ವ ಇಲಾಖೆಯು ತನಕ ಸುಳ್ಳು ಚರ್ಚೆಯನ್ನು ಹಬ್ಬಿಸಿದೆಯೇನು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.

೨. ಹಿಂದೂಗಳೊಂದಿಗೆ ವಿರೋಧಕರಲ್ಲಿಯೂ ‘ಹಿಂದೂ ರಾಷ್ಟ್ರ’ದ ಚರ್ಚೆ !

ಪ್ರಶ್ನೆ : ಭಾರತವನ್ನು ‘ಹಿಂದೂ ರಾಷ್ಟ್ರ’ ಘೋಷಿಸುವ ಪ್ರಕ್ರಿಯೆ ಕೇಂದ್ರ ಸರಕಾರದ ನಿರ್ಧಾರದ ಅಡಿಯಲ್ಲಿ ಬರುತ್ತದೆ. ಅಧಿವೇಶನದಲ್ಲಿನ ಹಿಂದೂ ರಾಷ್ಟ್ರದ ಬೇಡಿಕೆ ಕೇಂದ್ರ ಸರಕಾರದ ಬಳಿ ಮಾಡಲಿದೆಯೇ ?, ಎಂದು ಪತ್ರಕರ್ತರು ಪ್ರಶ್ನೆ ವಿಚಾರಿಸಿದರು.

ಉತ್ತರ (ಸದ್ಗುರು (ಡಾ.) ಚಾರುದತ್ತ ಪಿಂಗಳೆ) : ಹಿಂದೂ ಜನಜಾಗೃತಿ ಸಮಿತಿಯು ಪ್ರತಿಯೊಂದು ಅಧಿವೇಶನದ ನಂತರ ಹಿಂದುತ್ವನಿಷ್ಠರು ಒಪ್ಪಿಗೆ ನೀಡಿದ ಠರಾವನ್ನು ಕೇಂದ್ರ ಸರಕಾರದ ಬಳಿ ತಲುಪಿಸಿ ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಲು ಒತ್ತಾಯಿಸಲಾಗಿದೆ. ಆರಂಭದಲ್ಲಿ ‘ಹಿಂದೂ ರಾಷ್ಟ್ರ’ದ ಕುರಿತು ಅನೇಕ ಪ್ರಶ್ನೆಗಳು ಕೇಳಲಾಗಿತ್ತು; ಆದರೆ ಈಗಿನ ಪ್ರಿಸ್ಥಿತಿಯಲ್ಲಿ ದೇಶಾದ್ಯಂತ ಅನೇಕ ಸ್ಥಳಗಳಲ್ಲಿ ತನ್ನಷ್ಟಕ್ಕೇ ಹಿಂದೂ ರಾಷ್ಟ್ರದ ಬೇಡಿಕೆ ಮಾಡಲಾಗುತ್ತಿದೆ. ಹಿಂದೂಗಳು ಆತ್ಮವಿಶ್ವಾಸದಿಂದ ‘ಹಿಂದೂ ರಾಷ್ಟ್ರ ಬರಲಿದೆ’, ಎಂದು ಹೇಳುತ್ತಿದ್ದರೇ ಅದನ್ನು ವಿರೋಧಿಸುವವರೂ ಕೂಡ ಅದೇ ಹೇಳುತ್ತಿದ್ದಾರೆ.

೩. ಪತ್ರಿಕಾಗೋಷ್ಠಿಯಲ್ಲಿ ಕೆಲವು ಪತ್ರಕರ್ತರು ವಕ್ತಾರರೊಂದಿಗೆ ಚರ್ಚೆ ಮಾಡಿ ಅವರ ಸಂದೇಹಗಳನ್ನು ನಿವಾರಣೆ ಮಾಡಿಕೊಂಡರು.