‘ನೂಪುರ ಶರ್ಮಾರಂತಹವರ ಶಿರಚ್ಛೇದ ಮಾಡುವೆವು !’ (ಅಂತೆ)

ಡೋಡಾ (ಜಮ್ಮು) ದಲ್ಲಿನ ಮೌಲಾನಾನ ಬೆದರಿಕೆ

ಜಮ್ಮು – ಬಂಧುಗಳೇ, ಸಮಯವು ನಮಗೆ ಶಿರಚ್ಛೇದವನ್ನು ಮಾಡಲು ಕಲಿಸುತ್ತದೆ. ನಾವು ಸಹಿಸಿಕೊಳ್ಳುವವರೆಗೂ ನಾವು ಮೌನವಾಗಿರಬಹುದು ಎಂಬುದನ್ನು ನೆನಪಿಡಿ. ನಮ್ಮ ಸಹನೆಯು ಮೀರಿ ಹೋದರೆ ನೂಪುರ ಶರ್ಮಾ ಅವರಂತಹ ದೇಹ ಒಂದುಕಡೆ ಮತ್ತು ರುಂಡ ಒಂದು ಕಡೆ ಸಿಗಬಹುದು, ಎಂದು ಡೋಡಾ ಜಿಲ್ಲೆಯ ಭದ್ರವಾಹದ ಮಸೀದಿಯಲ್ಲಿಯ ಒಬ್ಬ ಮೌಲಾನಾ ಬೆದರಿಕೆ ಹಾಕಿದ್ದಾನೆ. ಈ ವಿಷಯದ ವಿಡಿಯೋ ಪ್ರಸಾರ ವಾದನಂತರ ಇಲ್ಲಿ ಉದ್ವಿಗ್ನತೆ ಉಂಟಾಗಿದೆ. ಮೌಲಾನಾದ ಈ ಹೇಳಿಕೆಯನ್ನು ಧ್ವನಿವರ್ಧಕದಿಂದ ಮಸೀದಿಯ ಹೊರಗೆ ಕೇಳುವ ಜನರು ‘ಅಲ್ಲಾಹು ಅಕ್ಬರ’ (ಅಲ್ಲಾ ಮಹಾನ ಇದ್ದಾನೆ) ಎಂದು ಘೋಷಣೆ ಕೂಗುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. ಪೊಲೀಸರು ಮೌಲಾನಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೌಲಾನಾ ಮಾತನ್ನು ಮುಂದುವರೆಸುತ್ತಾ, ಗೋಮುತ್ರ ಕುಡಿದು ಸಗಣಿ ಸ್ನಾನ ಮಾಡುವವರಿಗೆ ಜಗತ್ತಿನಲ್ಲಿ ಏನು ಬೆಲೆ ಇದೆ ? ಇವರಿಗೆ ಯಾವ ಗಾಳಿ ಸಿಗುವದೋ ಅದು ನಮ್ಮಿಂದ ಸಿಗುತ್ತದೆ, ಇವರಿಗೆ ಸಮುದ್ರದಿಂದ ನೀರು ಸಿಗುವದು, ಅದು ನಮ್ಮಿಂದ ಸಿಗುತ್ತದೆ. ಇಲ್ಲದಿದ್ದರೇ ಅವರ ಅಸ್ತಿತ್ವ ಎನಿದೆ ?

ಸಂಪಾದಕೀಯ ನಿಲುವು

ಇಂತಹ ಹೇಳಿಕೆಗಳನ್ನು ನೀಡುವವರ ವಿರುದ್ಧ ಭಾರತ ಸರಕಾರ ಮತ್ತು ಇಸ್ಲಾಮಿಕ ದೇಶಗಳು ಏಕೆ ಮಾತನಾಡುವುದಿಲ್ಲ ?