ದಂಗೆ ನಡೆಸಿದ ಮುಸಲ್ಮಾನರ ಮೇಲೆ ಯೋಗಿ ಸರಕಾರವು ‘ಗ್ಯಾಂಗಸ್ಟರ್ ಆಕ್ಟ್’ ಜಾರಿ ಮಾಡಲಿದೆ !

ಮುಸಲ್ಮಾನರು ನೂಪುರ ಶರ್ಮಾರವರ ವಿರುದ್ಧ ನಡೆಸಿರುವ ದಂಗೆಯ ಪ್ರಕರಣ

ಲಕ್ಷ್ಮಣಪುರಿ – ನೂಪುರ ಶರ್ಮಾರವರ ವಿರುದ್ಧ ಜೂನ್ ೧೦ ರಂದು ಶುಕ್ರವಾರದ ನಮಾಜಿನ ನಂತರ ಭಾರತದಾದ್ಯಂತ ೧೪ ರಾಜ್ಯಗಳಲ್ಲಿ ೯೦ ಕ್ಕೂ ಹೆಚ್ಚಿನ ಕಡೆಗಳಲ್ಲಿ ಮುಸಲ್ಮಾನರು ಒಂದೇ ಸಮಯಕ್ಕೆ ಮೆರವಣಿಗೆ ನಡೆಸಿದರು. ನೂಪುರ ಶರ್ಮಾರವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಅನೇಕ ಸ್ಥಳಗಳಲ್ಲಿ ಹಿಂಸಾತ್ಮಕ ಆಂದೋಲನ ನಡೆಸಿದರು. ಉತ್ತರಪ್ರದೇಶದಲ್ಲಿನ ಪ್ರಯಾಗರಾಜ್, ಸಹಾರನಪುರ ಮತ್ತು ಮುರಾದಾಬಾದನಲ್ಲಿ ಕಲ್ಲುತೂರಾಟ ಮತ್ತು ಬೆಂಕಿ ಅನಾಹುತಗಳು ನಡೆದವು. ಸರಕಾರಿ ಸಂಪತ್ತಿನ ಹಾನಿ ಮಾಡಿರುವುದರಿಂದ ದಂಗೆಕೋರ ಮುಸಲ್ಮಾನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಎಲ್ಲರ ವಿರುದ್ಧ ‘ಗ್ಯಾಂಗಸ್ಟರ್ ಆಕ್ಟ್’ನ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂಬ ಮಾಹಿತಿಯನ್ನು ಉತ್ತರಪ್ರದೇಶದ ಸಹಾಯಕ ಪೊಲೀಸ ಮಹಾ ಸಂಚಾಲಕರಾದ ಪ್ರಶಾಂತ ಕುಮಾರ ನೀಡಿದರು.

ಶುಕ್ರವಾರದಂದು ನಡೆದಿರುವ ಹಿಂಸಾಚಾರದ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಅಧ್ಯಕ್ಷತೆಯಲ್ಲಿ ಎಲ್ಲ ಹಿರಿಯ ಪೊಲೀಸ ಅಧಿಕಾರಿಗಳ ಸಭೆ ನಡೆಸಲಾಯಿತು ಮತ್ತು ಅದರಲ್ಲಿ ಕಠೋರ ಕ್ರಮಕ್ಕೆ ಆದೇಶ ನೀಡಲಾಗಿದೆ.

ಉತ್ತರಪ್ರದೇಶದ ಪೊಲೀಸರು ಈ ರೀತಿಯಲ್ಲಿ ಕ್ರಮಕೈಗೊಳ್ಳಲಿದ್ದಾರೆ !

ಉತ್ತರಪ್ರದೇಶದ ಸಹಾಯಕ ಪೊಲೀಸ ಮಹಾಸಂಚಾಲಕರಾದ ಪ್ರಶಾಂತ ಕುಮಾರ ಮಾತನಾಡುತ್ತ, ‘ದಂಗೆ ನಡೆದ ನಂತರ ಸ್ವಲ್ಪ ಸಮಯದಲ್ಲಿಯೇ ೧೦೯ ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಸರಕಾರಿ ಮತ್ತು ಖಾಸಗಿ ಸಂಪತ್ತಿನ ಹಾನಿ ಮಾಡಿರುವವರಿಂದ ಅದರ ವಸೂಲಿ ಮಾಡಲಾಗುವುದು. ಅವರ ಸಂಪತ್ತನ್ನು ಜಪ್ತು ಮಾಡಲಾಗುವುದು. ಶಾಂತಿಭಂಗ ಮಾಡಿರುವವರನ್ನು ಕ್ಷಮಿಸಿಲಾಗುವುದಿಲ್ಲ ಹಾಗೂ ಅವರ ವಿರುದ್ಧ ಕಠೋರ ಕಾರ್ಯಾಚರಣೆ ನಡೆಸಲಾಗುವುದು.

ಸಂಪಾದಕೀಯ ನಿಲುವು

ಜೂನ್ ೧೧ ರಂದು ದೇಶಾದ್ಯಂತ ೧೪ ರಾಜ್ಯಗಳಲ್ಲಿ ಮುಸಲ್ಮಾನರು ದಂಗೆ ಎಬ್ಬಿಸಿದರು. ಈ ಹಿನ್ನೆಲೆಯಲ್ಲಿ ಎಲ್ಲ ಭಾಜಪದ ಆಡಳಿತವಿರುವ ಸರಕಾರಗಳಾದರೂ ಹಿಂಸಾಚಾರದಲ್ಲಿ ತೊಡಗಿದ ಮುಸಲ್ಮಾನರ ಮೇಲೆ ಉತ್ತರಪ್ರದೇಶದಂತೆ ಕಠೋರ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರಪ್ರೇಮಿ ಜನತೆಗೆ ಅನಿಸುತ್ತದೆ !